ಕನ್ನಡ ಟಿವಿ (TV) ಮಾಧ್ಯಮಗಳನ್ನು (Media) ಆಳುತ್ತಿರುವ ಧಾರಾವಾಹಿಗಳ (Serial) ಈ ವಾರದ (Week) ಟಿಆರ್ಪಿ ಲಿಸ್ಟ್ (TRP List) ಹೊರ ಬಿದ್ದಿದೆ. ಎಂದಿನಂತೆ ಜೀ ಕನ್ನಡ (Zee Kannada) ಹಾಗೂ ಕಲರ್ಸ್ ಕನ್ನಡ (Colors Kannada) ವಾಹಿನಿಗಳ ನಡುವೆ ಭಾರೀ ಪೈಪೋಟಿ ಇದೆ. ಈ ಹಿಂದಿನಂತೆ ಈ ಬಾರಿಯೂ ಈ ಎರಡೂ ವಾಹಿನಿಗಳ ನಡುವಿನ ಧಾರಾವಾಹಿಗಳ ಮಧ್ಯೆ ಭಾರೀ ರೇಸ್ ಇದೆ. ಇನ್ನು ವಿವಿಧ ಚಾನೆಲ್ಗಳ (Channel) ಸುಮಾರು 30ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ‘ಪುಟ್ಟಕ್ಕನ ಮಕ್ಕಳು’ (Puttakkana Makkalu) ನಂಬರ್ ಒನ್ ಸ್ಥಾನ (Number 1) ಕಾಯ್ದುಕೊಂಡಿದೆ. ಆದರೆ ತೀವ್ರ ಪೈಪೋಟಿ ಕೊಟ್ಟಿದ್ದ ‘ರಾಮಾಚಾರಿ’ (Ramachari) ಈ ವಾರ ಟಾಪ್ 5 ರೇಸ್ನಿಂದಲೇ ಹೊರಬಿದ್ದಿದೆ. ಹಾಗಿದ್ರೆ ಉಳಿದ 4 ಸ್ಥಾನಗಳು ಯಾರಿಗೆ? ರಾಮಾಚಾರಿ ಈ ವಾರ ಯಾವ ಸ್ಥಾನದಲ್ಲಿ ಇದ್ದಾನೆ ಎನ್ನುವುದನ್ನು ತಿಳಿಯಲು ಮುಂದೆ ಓದಿ…
ನಂ. 1 ಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’
ಜೀ ಕನ್ನಡದಲ್ಲಿ ಪ್ರತಿ ದಿನ ರಾತ್ರಿ 7.30ಕ್ಕೆ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಂಬರ್ 1 ಸ್ಥಾನದಲ್ಲಿದೆ. ಭಾರೀ ಪೈಪೋಟಿಯ ನಡುವೆಯೂ ಕನ್ನಡಿಗರ ಪ್ರೀತಿ ಪಡೆದು, ಪುಟ್ಟಕ್ಕನ ಮಕ್ಕಳು ಟಿಆರ್ಪಿ ರೇಸ್ನಲ್ಲಿ ಮೊದಲಿಗರಾಗಿದ್ದಾರೆ.
ಆರೂರು ಜಗದೀಶ್ ನಿರ್ದೇಶನದ ಈ ಧಾರಾವಾಹಿಯಲ್ಲಿ ಹಿರಿಟ ನಟಿ ಉಮಾಶ್ರೀ ಮುಖ್ಯ ಪಾತ್ರದಲ್ಲಿದ್ದಾರೆ. ಇನ್ನುಳಿದಂತೆ ಈ ಧಾರಾವಾಹಿಯಲ್ಲಿ ಹಿರಿ ಕಿರಿಯ ಅನೇಕ ಕಲಾವಿದರು ನಟಿಸಿದ್ದಾರೆ.
‘ಸತ್ಯ’ನ ಜೊತೆ 6ನೇ ಸ್ಥಾನ ಹಂಚಿಕೊಂಡ ‘ರಾಮಾಚಾರಿ’
ಇನ್ನು ಆರಂಭದಿಂದಲೂ ವೀಕ್ಷಕರ ಮೆಚ್ಚುಗೆ ಪಡೆದು, ಟಿಆರ್ಪಿ ಗಿಟ್ಟಿಸಿಕೊಂಡಿದ್ದ ಕಲರ್ಸ್ ಕನ್ನಡದ ರಾಮಾಚಾರಿ, ಈ ಬಾರಿ 6ನೇ ಸ್ಥಾನದಲ್ಲಿ ಇದ್ದಾನೆ. ಇದರ ಜೊತೆಗೆ ಜೀ ಕನ್ನಡ ಸತ್ಯ ಕೂಡ ಇದೇ ಸ್ಥಾನದಲ್ಲಿ ಇದೆ.
ಇದನ್ನೂ ಓದಿ: Upendra: ಏಪ್ರಿಲ್ 1ಕ್ಕೆ ಬರ್ತಿದ್ದಾರೆ `ಹೋಮ್ ಮಿನಿಸ್ಟರ್’, ರಿಯಲ್ ಸ್ಟಾರ್ ಇನ್ಮುಂದೆ ಅಭಿಮಾನಿಗಳ ಚಕ್ರವರ್ತಿ!
ಎರಡನೇ ಸ್ಥಾನದಲ್ಲಿ ‘ಗಟ್ಟಿಮೇಳ’
ರಕ್ಷ್ ನಾಯಕನಾಗಿ ಅಭಿನಯಿಸಿ, ನಿರ್ಮಿಸಿರುವ ‘ಗಟ್ಟಿಮೇಳ’ ಧಾರಾವಾಹಿ ಈ ವಾರ ಎರಡನೇ ಸ್ಥಾನದಲ್ಲಿದೆ. ಸದ್ಯದಲ್ಲೇ ‘ಗಟ್ಟಿಮೇಳ’ ಧಾರಾವಾಹಿಗೆ ಹೊಸ ತಿರುವು ಸಿಗಲಿದೆ. ವೇದಾಂತ್ ಮತ್ತು ವಿಕ್ರಾಂತ್ ನಡುವೆ ಭಿನ್ನಾಭಿಪ್ರಾಯ ಮೂಡಿವಂತೆ ಮಾಡುವಲ್ಲಿ ಸುಹಾಸಿನಿ ಯಶಸ್ವಿಯಾಗಿದ್ದಾಳೆ. ಮುಂದೇನಾಗುತ್ತೆ ಎಂಬ ಕುತೂಹಲ ವೀಕ್ಷಕರಿಗೆ ಕಾಡುತ್ತಿದೆ.
‘ಹಿಟ್ಲರ್ ಕಲ್ಯಾಣ’ವನ್ನು ಮೆಚ್ಚಿಕೊಂಡ ವೀಕ್ಷಕರು
ಜೀ ಕನ್ನಡದ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಟಿಆರ್ಪಿ ಪಟ್ಟಿಯಲ್ಲಿ ನಂಬರ್ 3ನೇ ಸ್ಥಾನದಲ್ಲಿದೆ. ದಿಲೀಪ್ ರಾಜ್ ಮತ್ತು ಮಲೈಕಾ ವಸುಪಾಲ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ‘ಹಿಟ್ಲರ್ ಕಲ್ಯಾಣ’ ಸೀರಿಯಲ್ ಕೂಡ ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅತ್ತ ಎಜೆ ಮನೆಯ ಅಧಿಕಾರ ಸದ್ಯ ಲೀಲಾ ಕೈಗೆ ಸಿಕ್ಕಿದ್ದರೆ, ಇತ್ತ ಪವಿತ್ರ ಹಾಸಿಗೆ ಹಿಡಿದಿದ್ದಾರೆ. ಪವಿತ್ರ ಸ್ಥಿತಿಗೆ ದೇವ್ ಕಾರಣ ಅನ್ನೋದು ಎಜೆಗೆ ಗೊತ್ತಾಗುತ್ತಾ ಎಂಬುದನ್ನು ಕಾದು ನೋಡಬೇಕು.
‘ಜೊತೆ ಜೊತೆಯಲಿ‘ 4ನೇ ಸ್ಥಾನ
ಈ ಹಿಂದೆ ದಾಖಲೆಗಳ ಮೇಲೆ ದಾಖಲೆ ಮಾಡಿದ್ದ ಜೊತೆ ಜೊತೆಯಲಿ ಧಾರಾವಾಹಿ ಈ ಬಾರಿ 5ನೇ ಸ್ಥಾನದಲ್ಲಿದೆ. ‘ಜೊತೆ ಜೊತೆಯಲಿ’ ಧಾರಾವಾಹಿ ಸದ್ಯ ಕುತೂಹಲಕಾರಿ ಘಟ್ಟ ತಲುಪಿದೆ. ಆರ್ಯವರ್ಧನ್ ನಿಜನಾಮ ಸುಭಾಷ್ ಪಾಟೀಲ್ ಎಂಬುದು ಅನುಗೆ ಗೊತ್ತಾಗಿದೆ. ಹೀಗಾಗಿ, ಆರ್ಯವರ್ಧನ್ ಹಿನ್ನೆಲೆ ತಿಳಿದುಕೊಳ್ಳಲು ಅನು ಮುಂದಾಗಿದ್ದಾರೆ. ಆರ್ಯವರ್ಧನ್ ಮುಂದಾಗಿದ್ದಾರೆ.
‘ಪಾರು‘ಗೆ ಟಿಆರ್ಪಿಯಲ್ಲಿ 5ನೇ ಸ್ಥಾನ
ಇನ್ನು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿ ಐದನೇ ಸ್ಥಾನದಲ್ಲಿ ಇದೆ. ‘ಪಾರು’ ಸೀರಿಯಲ್ಗೆ ಮೇಜರ್ ಟ್ವಿಸ್ಟ್ ಸಿಕ್ಕಿ ಅಖಿಲಾಂಡೇಶ್ವರಿಯ ಪುತ್ರ ಆದಿತ್ಯ ವಿವಾಹ ಪಾರು ಜೊತೆ ಜರುಗಿದೆ.
ಇದನ್ನೂ ಓದಿ: Shane Warne: ಕಮರಿಹೋಯ್ತು ಶೇನ್ ವಾರ್ನ್ರ ಆ ಕನಸು.. ಬಣ್ಣ ಹಚ್ಚಬೇಕು ಅನ್ನುವಷ್ಟರಲ್ಲೇ ಕಥೆ ಮುಗಿಯಿತು!
ಟಾಪ್ 20ಯಲ್ಲಿ ಸ್ಥಾನ ಪಡೆದಿರುವ ಧಾರಾವಾಹಿಗಳು
ಇನ್ನುಳಿದಂತೆ ಕ್ರಮವಾಗಿ ನಾಗಿಣಿ. ಗಿಣಿರಾಮ, ಗೀತಾ, ಲಕ್ಷಣ, ಮಂಗಳಗೌರಿ ಮದುವೆ. ಕನ್ನಡತಿ, ಕಮಲಿ, ಅಣ್ಣತಂಗಿ, ನನ್ನರಸಿ ರಾಧೆ ಸೇರಿದಂತೆ ಕೆಲ ಧಾರಾವಾಹಿಗಳು ಟಾಪ್ 20ಯಲ್ಲಿ ಸ್ಥಾನ ಪಡೆದಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ