• Home
  • »
  • News
  • »
  • entertainment
  • »
  • Malavika Avinash: ಅವಿನಾಶ್ ಬಗ್ಗೆ ಹೀಗ್ಯಾಕೆ ಅಂದ್ರು ಮಾಳವಿಕಾ? ಮನೆಯವರ ಬಗ್ಗೆ ಮಾತಾಡೋದಿಕ್ಕೆ ಮುಜುಗರವೇ?

Malavika Avinash: ಅವಿನಾಶ್ ಬಗ್ಗೆ ಹೀಗ್ಯಾಕೆ ಅಂದ್ರು ಮಾಳವಿಕಾ? ಮನೆಯವರ ಬಗ್ಗೆ ಮಾತಾಡೋದಿಕ್ಕೆ ಮುಜುಗರವೇ?

ಮಾಳವಿಕಾ-ಅವಿನಾಶ್

ಮಾಳವಿಕಾ-ಅವಿನಾಶ್

67ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅವಿನಾಶ್ ಆಯ್ಕೆಯಾಗಿದ್ದಾರೆ. ಮಾಳವಿಕಾ ಅವಿನಾಶ್ ಅವರು ಪತಿ ಬಗ್ಗೆ ಈ ರೀತಿ ಮಾತನಾಡಿದ್ದಾರೆ.

  • News18 Kannada
  • Last Updated :
  • Karnataka, India
  • Share this:

    ನವೆಂಬರ್ 1 (November 1) ಬಂತು ಅಂದ್ರೆ ಕನ್ನಡಿಗರಿಗೆ ಸಂಭ್ರಮ. ನಾಡಿನೆಲ್ಲೆಡೆ ರಾಜ್ಯೋತ್ಸವ ಆಚರಣೆ ಸಂಭ್ರಮದಿಂದ ನಡೆಯುತ್ತೆ. ಕಳೆದ ಬಾರಿ ಪುನೀತ್ ರಾಜ್‍ಕುಮಾರ್ (Puneeth) ನಿಧನರಾದ ಕಾರಣ, ಅದ್ಧೂರಿಯಾಗಿ ಆಚರಣೆ ನಡದಿರಲಿಲ್ಲ. ಆದ್ರೆ ಈ ಬಾರಿ ಕನ್ನಡ ರಾಜ್ಯೋತ್ಸವದ ದಿನವೇ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತೆ. ಅದಕ್ಕೆ ಕರುನಾಡ ಜನ ಖುಷಿಯಲ್ಲಿದ್ದಾರೆ. ಅಲ್ಲದೇ 2022ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದೆ. ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೂ ಪ್ರಶಸ್ತಿ ಲಭಿಸಲಿದೆ. ದತ್ತಣ್ಣ, ಅವಿನಾಶ್ (Avinash) ಹಾಗೂ ಕಿರುತೆರೆ ವಿಭಾಗದಲ್ಲಿ ಸಿಹಿ ಕಹಿ ಚಂದ್ರು ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 67ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅವಿನಾಶ್ ಆಯ್ಕೆ ಆದ ಕಾರಣ, ಮಾಳವಿಕಾ (Malavika) ಅವರು ಈ ರೀತಿ ಹೇಳಿದ್ದಾರೆ. ಏನದು ನೋಡಿ.


    ಮಾಳವಿಕಾ ಅವಿನಾಶ್ ಹೇಳಿದ್ದೇನು?
    67ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅವಿನಾಶ್ ಆಯ್ಕೆಯಾಗಿದ್ದಾರೆ. ಮಾಳವಿಕಾ ಅವಿನಾಶ್ ಅವರು ಪತಿ ಬಗ್ಗೆ ಈ ರೀತಿ ಮಾತನಾಡಿದ್ದಾರೆ.


    'ನಮ್ಮನೆಯವರ ಬಗ್ಗೆ ನಾವೇ ಮಾತಾಡೋದಿಕ್ಕೆ ಮುಜುಗರವೇ ಆದರೂ, ಅವಿನಾಶ್ ಅವರ ಬಗ್ಗೆ ನನಗೆ ಹೆಮ್ಮೆ ಇದೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನಲ್ಲಿ ಜನನ. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂಎಎಂಫಿಲ್ ಮುಗಿಸಿದವರು. ಹಿರಿಯ ಪ್ರಾಧ್ಯಾಪಕರಾದ ದಿವಂಗತ ಸಿಡಿಎನ್ ಅವರ ಆರಾಧ್ಯ ದೈವ. ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲವು ವರ್ಷಗಳು ಕೆಲಸ ಮಾಡಿದ್ದಾರೆ. ಲಂಡನ್‍ನ ಮೆರ್ಮೇಡ್ ಥಿಯೇಟರ್, ಬಿ ಜಯಶ್ರೀ, ಶಂಕರ್ ನಾಗರೊಂದಿಗೆ ರಂಗಭೂಮಿಯಲ್ಲಿ ತೊಡಗಿಗ್ದವರು.


    ಜಿವಿ ಐಯ್ಯರವರ ಮಧ್ವಾಚಾರ್ಯದಿಂದ ಇಂದಿನವರೆಗೆ ಕನ್ನಡ, ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್‍ನಲ್ಲಿ ಸುಮಾರು 700ಸಿನಿಮಾಗಳಲ್ಲಿ ಅಭಿನಯ. ಕನ್ನಡದಲ್ಲಿಯೇ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕರ್ನಾಟಕ ತಮಿಳುನಾಡು ರಾಜ್ಯ ಪ್ರಶಸ್ತಿ ಫಿಲ್ಮ್ ಫೇರ್ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.


    kannada rajyotsava award, kannada rajyotsava award winner, Malavika facebook post, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಮಾಳವಿಕಾ ಫೇಸ್ ಬುಕ್ ಪೋಸ್ಟ್, Kannada news, karnataka news,
    ಮಾಳವಿಕಾ ಪೋಸ್ಟ್


    ಡಾ.ರಾಜರಿಂದ ಯಶ್‍ವರೆಗೆ, ಚಿರಂಜೀವಿ, ರಜನಿಕಾಂತ್, ಮಮ್ಮುಟ್ಟಿಯವರೆಗೆ, ಗಿರೀಶ್ ಕಾಸರವಳ್ಳಿ, ಟಿ ಎನ್ ಸೀತಾರಾಂ, ಟಿ ಎಸ್ ನಾಗಾಭರಣ, ಕೆ ಬಾಲಚಂದರ್, ಕೆ ವಿಶ್ವನಾಥ್, ವೆಟ್ರಿಮಾರನ್ ಗೌತಮ್ ಮೆನನ್‍ರಂತಹ ಹಲವಾರು ಮೇರು ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಅನುಭವಸ್ಥ, 'ಅಪ್ಪು'ವಿನಲ್ಲಿ, ಅಣ್ಣಾವರ ಆಜ್ಞೆಯ ಮೇರೆಗೆ ಅಭಿನಯಿಸಿದ ಅವರು, ಅಪ್ಪುವಿನ ಜೇಮ್ಸ್‍ವರೆಗೆ ಅಭಿನಯಿಸದ ಚಿತ್ರವೇ ಇಲ್ಲ. ಇದ್ದರೆ ಒಂದಿರಬಹುದು.


    ಇದನ್ನೂ ಓದಿ: Puneeth Rajkumar: ಗಂಧದಗುಡಿ ನೋಡಿ ಭಾವುಕಳಾದ ಪುನೀತ್ ಪುತ್ರಿ, ಅಪ್ಪನನ್ನು ನೆನೆದು ಧೃತಿ ಮಾಡಿದ್ದೇನು? 


    ಅವರ ಸರ್ದಾರ್ ಸೂಪರ್ ಹಿಟ್. ಶಿವಣ್ಣನ 'ಸಂಯುಕ್ತ'ದಲ್ಲಾರಂಭಿಸಿ ಈಗಲೂ ಹಲವಾರು ಚಿತ್ರಗಳಲ್ಲಿ ಬಿಡುವಿಲ್ಲದೆ ಶೂಟಿಂಗ್ ಮಾಡುತ್ತಿರುವ ಕಲಾವಿದ. ಸಿನಿಮಾ ಕನ್ನಡ ಮತ್ತು ರಾಷ್ಟ್ರವನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿ.'


    kannada rajyotsava award, kannada rajyotsava award winner, Malavika facebook post, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಮಾಳವಿಕಾ ಫೇಸ್ ಬುಕ್ ಪೋಸ್ಟ್, Kannada news, karnataka news,
    ಮಾಳವಿಕಾ ಪೋಸ್ಟ್


    ಇದನ್ನೂ ಓದಿ: BBK Season 09: ಅವರು ನನಗೆ ಪ್ರತಿಸ್ಪರ್ಧಿಯೇ ಅಲ್ಲ, ಪ್ರಶಾಂತ್-ರಾಜಣ್ಣ ಜಗಳ ಮುಗಿಯೋದೇ ಇಲ್ಲ! 


    ಕನ್ನಡ ರಾಜ್ಯೋತ್ಸವ ಪ್ರಶಸ್ತಿ
    2022ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದೆ. ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೂ ಪ್ರಶಸ್ತಿ ಲಭಿಸಲಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿಯು ಈ ಬಾರಿ 67 ಜನರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ರಾಜ್ಯೋತ್ಸವ ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು ಹಾಗೂ 25 ಗ್ರಾಂ ಚಿನ್ನ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರಲಿದೆ. ನವೆಂಬರ್ 1ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.

    Published by:Savitha Savitha
    First published: