KGF 2: ಟೆನ್ನಿಸ್​ ಅಖಾಡದಲ್ಲೂ ರಾಕಿ ಭಾಯ್​ ಹವಾ, ಇನ್ನೂ ನಿಂತಲ್ಲ ಸುಲ್ತಾನನ ಅಬ್ಬರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಂಬಲ್ಡನ್​ ನಲ್ಲಿಯೂ ಕೆಜಿಎಫ್ 2 ಚಿತ್ರದ ಹವಾ ಜೋರಾಗಿದೆ. ಈ ಬಾರಿ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಕ್ಕಿದ ನೋವಾಕ್ ಜೊಕೊವಿಕ್ ಗೆ ವಿಶ್​ ಮಾಡಲು ವಿಂಬಲ್ಡನ್ ಕೆಜಿಎಫ್ 2 ಚಿತ್ರದ ಡೈಲಾಗ್​ ಬಳಸಿದೆ.

  • Share this:

ಕೆಜಿಎಫ್ ಚಾಪ್ಟರ್ 2 (KGF Chapter 2) ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ಖ್ಯಾತಿ ಕೇವಲ ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಹಬ್ಬಿದೆ. ಕೆಜಿಎಫ್ 2 ಚಿತ್ರ ಬಿಡುಗಡೆಯಾಗಿ ತಿಂಗಳು ಕಳೆದರೂ ಅದರ ಹವಾ ಮಾತ್ರ ಈವರೆಗೂ ಸ್ವಲ್ಪವೂ ಕಡಿಮೆ ಆಗಿಲ್ಲ. ಈಗಲೂ ಸಿನಿಮಾದ ಡೈಲಾಗ್​ ಮತ್ತು ಹಾಡುಗಳು ಸಖತ್​ ವೈರಲ್ ಆಗುತ್ತಿರುತ್ತದೆ.  ಇದೀಗ ವಿಂಬಲ್ಡನ್ (Wimbledon)​ ನಲ್ಲಿಯೂ ಕೆಜಿಎಫ್ 2 ಚಿತ್ರದ ಹವಾ ಜೋರಾಗಿದೆ. ಹೌದು, ಈ ಬಾರಿಯ ವಿಂಬಲ್ಡನ್ ನಲ್ಲಿ ಸತತ 4ನೇ ಬಾರಿಗೆ ಹಾಗೂ ಒಟ್ಟು 7ನೇ ಬಾರಿಗೆ ನೋವಾಕ್ ಜೊಕೊವಿಕ್ (Novak Djokovic) ಜಯ ಗಳಿಸಿದ್ದಾರೆ. ಹೀಗಾಗಿ ಜೊಕೊವಿಕ್ ಗೆ ವಿಶ್​ ಮಾಡಲು ವಿಂಬಲ್ಡನ್ ಕೆಜಿಎಫ್ 2 ಚಿತ್ರದ ಡೈಲಾಗ್​ ಬಳಸಿದೆ.


ವಿಂಬಲ್ಡನ್​ನಲ್ಲಿಯೂ ನಿಲ್ಲದ ರಾಕಿ ಭಾಯ್​ ಹವಾ:


ಹೌದು, ವಿಂಬಲ್ಡನ್ ಫೈನಲ್ ಪಂದ್ಯದಲ್ಲಿ ಸರ್ಬಿಯಾದ ಆಟಗಾರ ನೊವಾಕ್ ಜೊಕೊವಿಕ್ ಸತತ 4ನೇ ಬಾರಿಗೆ ಹಾಗೂ ಒಟ್ಟು 7ನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದರು. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ನಿಕ್ ಕಿರಿಯೋಸ್ ವಿರುದ್ಧ 4-6, 6-3, 6-4, 7-6ರ ಸೆಟ್​ನಲ್ಲಿ ಗೆದ್ದು ಬೀಗಿದರು. ಹೀಗಾಗಿ ವಿಂಬಲ್ಡನ್ ನೊವಾಕ್ ಜೊಕೊವಿಕ್ ಗೆ ವಿಶ್​ ಮಾಡಲು ತನ್ನ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್ 2 ಚಿತ್ರದ ಡೈಲಾಗ್​ ಬಳಸಿದೆ. ಟ್ವಿಟರ್​ ಮತ್ತು ಫೇಸ್​ಬುಕ್​ನಲ್ಲಿ ನೊವಾಕ್ ಜೊಕೊವಿಕ್ ಫೋಟೋ ಹಂಚಿಕೊಂಡಿದ್ದು, ‘ಟ್ರೋಫಿಸ್​, ಟ್ರೋಫಿಸ್​, ಟ್ರೋಫಿಸ್​...ಐ ಲೈಕ್​ ಟ್ರೋಫಿಸ್​... ಟ್ರೋಫಿಸ್​ ಲೈಕ್ಸ್ ಮೀ.. ಐ ಕಾಂಟ್​ ಅವಾಯ್ಡ್​‘ ಎಂದು ಬರೆದುಕೊಂಡಿದ್ದಾರೆ.


ವಿಂಬಲ್ಡನ್​ ಅವರು ಮಾಡಿರುವ ಪೋಸ್ಟ್


ಪುಟ್ಬಾಲ್​ ಲೀಗ್​ ನಲ್ಲಿಯೂ ಕೆಜಿಎಫ್ ಬಳಕೆ:


ಇನ್ನು, ಕೆಲ ತಿಂಗಳುಗಳ ಹಿಂದೆ ಕೆಜಿಎಫ್ 2 ಬಳಕೆ ಮಾಡಿಕೊಂಡು ಪುಟ್ಬಾಲ್​ ಲೀಗ್​ನ ಮ್ಯಾಂಚೆಸ್ಟರ್ ಸಿಟಯು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮೂವರು ಆಟಗಾರರ ಫೋಟೋಗಳನ್ನು ಅವರ ಅಡ್ಡ ಹೆಸರುಗಳೊಂದಿಗೆ (ಕೆವಿನ್, ಗುಂಡೊ, ಫೋಡೆನ್) ಕೆ.ಜಿ.ಎಫ್ ಎಂದು ಬರೆದು ಹಂಚಿಕೊಂಡಿದ್ದರು. ಅಲ್ಲದೇ  "ಕೆಜಿಎಫ್  ನಮ್ಮದು" ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದರು.


ಇದನ್ನೂ ಓದಿ:  Radhika Pandit: ಫ್ಯಾಮಿಲಿ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್​, ಈ ಕಾರಣಕ್ಕಾಗಿ ಫುಲ್ ಖುಷಿಯಲ್ಲಿದ್ದಾರಂತೆ ಸ್ಯಾಂಡಲ್​ವುಡ್​ ಸಿಂಡ್ರೆಲಾ


ಯಶ್​ 19 ಚಿತ್ರದ ಕುರಿತು ಹೆಚ್ಚಿದ ಕುತೂಹಲ: 


ಇಂತಹುದೊಂದು ದೊಡ್ಡ ಪ್ರಶ್ನೆ ಸ್ಯಾಂಡಲ್​ವುಡ್ ಹಾಗೂ ಭಾರತೀಯ ಚಿತ್ರರಂಗದಲ್ಲಿ ಕೆಲ ದಿನಗಳಿಂದ ಪದೇ ಪದೇ ಕೇಳಿ ಬರುತ್ತಿದೆ. ಕೆಜಿಎಫ್ 2 ನಂತರ ಯಶ್ ನ್ಯಾಷನಲ್ ಸ್ಟಾರ್​ ಆಗಿದ್ದಾರೆ. ಅಲ್ಲದೇ ಕೆಜಿಎಫ್ 2 ಚಿತ್ರವು 1500 ಕೋಟಿ ಕಲೆಕ್ಷನ್ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಹೀಗಾಗಿ ಯಶ್ ಅವರು ಜಾಗರೂಕರಾಗಿ ಹೆಜ್ಜೆ ಇಡುತ್ತಿದ್ದಾರೆ. ಇದರ ಭಾಗವಾಗಿ ಅವರ ಮುಂದಿನ ಸಿನಿಮಾದ ಕುರಿತು ಈವರೆಗೂ ಯಾವುದೇ ಅಪ್​ಡೇಟ್​ ಬಿಟ್ಟುಕೊಟ್ಟಿಲ್ಲ. ಇದರ ನಡುವೆ ಯಶ್​ ಅಭಿಮಾನಿಗಳು ಅವರ ಸಿನಿಮಾಗಾಗಿ ಅದರ ಒಂದೇ ಒಂದು ಟೈಟಲ್​ ಗಾಗಿ ಕಾತುರತೆಯಿಂದ ಕಾಯುತ್ತಿದ್ದಾರೆ. ಇದರಿಂದಾಗಿ ಟ್ವಿಟ್ಟರ್‌ನಲ್ಲಿ YASH19 ಎಂಬ ಹ್ಯಾಷ್​ಟ್ಯಾಗ್ ಟ್ರೆಂಡಿಂಗ್ ಲಿಸ್ಟ್ ಸೇರಿದೆ.


ಇದನ್ನೂ ಓದಿ: KGF 3 ಕುರಿತು ಬಿಗ್​ ಅಪ್​ಡೇಟ್​ ನೀಡಿದ ನೀಲ್, ಶೂಟಿಂಗ್ ಆರಂಭ ಯಾವಾಗ?


ಸಲಾರ್​ ಚಿತ್ರದಲ್ಲಿ ಯಶ್​?:


ನಟ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್​ ನಲ್ಲಿ ಬರುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಸಲಾರ್‘ ಚಿತ್ರದಲ್ಲಿ ಯಶ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಸಲಾರ್ ಚಿತ್ರದಲ್ಲಿ ಯಶ್ ಕೇವಲ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿಗಳು ಹರಿದಾಡುತ್ತಿದ್ದು, ಈ ಕುರಿತು ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

First published: