ಮದುವೆಯಾಗಿದ್ದೇ ತಪ್ಪಾ?; ಆಫರ್​ಗಳು ಕಡಿಮೆ ಆಗಿದ್ದಕ್ಕೆ ಬೇಸರಗೊಂಡ ಸ್ಟಾರ್ ನಟಿ!

ಸಮಂತಾ ಸದ್ಯ ಸಾಲು ಸಾಲು ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಆದಾಗ್ಯೂ ಅವರಿಗೆ ಆಫರ್​ಗಳು ಕಡಿಮೆ ಆಗಿದೆ ಎನ್ನುವ ಮಾತು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಸಮಂತಾ ಅಭಿನಯದ ‘ಓಹ್​ ಬೇಬಿ’ ಚಿತ್ರ ಜುಲೈನಲ್ಲಿ ತೆರೆಗೆ ಬರುತ್ತಿದ್ದು, ಸಿನಿಮಾದ ಟ್ರೈಲರ್​ ಸದ್ದು ಮಾಡಿದೆ.

Rajesh Duggumane | news18
Updated:June 21, 2019, 4:11 PM IST
ಮದುವೆಯಾಗಿದ್ದೇ ತಪ್ಪಾ?; ಆಫರ್​ಗಳು ಕಡಿಮೆ ಆಗಿದ್ದಕ್ಕೆ ಬೇಸರಗೊಂಡ ಸ್ಟಾರ್ ನಟಿ!
ಸಮಂತಾ-ಪತಿ ನಾಗಚೈತನ್ಯ
  • News18
  • Last Updated: June 21, 2019, 4:11 PM IST
  • Share this:
ಮದುವೆಯಾದ ನಂತರ ನಟಿಯರು ಮಾರುಕಟ್ಟೆ ಕಳೆದುಕೊಳ್ಳುತ್ತಾರೆ ಎನ್ನುವ ಮಾತಿತ್ತು. ಆದರೆ, ಇಂದು ಟ್ರೆಂಡ್​ ಸ್ವಲ್ಪ ಬದಲಾಗಿದೆ. ಮದುವೆಯಾದ ನಂತರವೂ ನಟಿಯರು ತೆರೆಮೇಲೆ ಮಿಂಚುತ್ತಿದ್ದಾರೆ. ಆದರೆ, ಇದು ಸುಳ್ಳು ಎನ್ನುತ್ತಿದ್ದಾರೆ ಟಾಲಿವುಡ್​ನ ಸ್ಟಾರ್​ ನಟಿ ಸಮಂತಾ! “ನಾನು ಮದುವೆಯಾಗಿದ್ದಕ್ಕೆ ಸಾಕಷ್ಟು ಆಫರ್​ಗಳನ್ನು ಕಳೆದುಕೊಂಡೆ,” ಎಂದು ಬಹಿರಂಗವಾಗಿಯೇ ಬೇಸರವ್ಯಕ್ತಪಡಿಸಿದ್ದಾರೆ.

ಐಶ್ವರ್ಯಾ ರೈ, ಕರೀನಾ ಕಪೂರ್​ ಸೇರಿ ಸಾಕಷ್ಟು ಹೀರೋಯಿನ್​ಗಳು ಮದುವೆಯಾದ ನಂತರ ಬಣ್ಣ ಹಚ್ಚುತ್ತಿದ್ದಾರೆ. ಆದರೆ, ವಿವಾಹವಾದ ನಂತರ ಅವರು ತೆರೆಮೇಲೆ ಕಾಣಿಸಿಕೊಳ್ಳುವುದು ಕಡಿಮೆ ಆಗಿದೆ. ಆದರೆ, ನಟಿ ಸಮಂತಾ ಮದುವೆಯಾದ ನಂತರವೂ ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಹೀಗಿದ್ದರೂ ಅವರಿಗೆ ಇತ್ತೀಚೆಗೆ ಸಿನಿಮಾಗಳು ಬರುವುದು​ ಕಡಿಮೆ ಆಗಿದೆಯಂತೆ.

“ನಾನು 2017ರಲ್ಲಿ ನಾಗಚೈತನ್ಯ ಅವರನ್ನು ವಿವಾಹವಾಗಿದ್ದೆ. ಅದಕ್ಕೂ ಮೊದಲು ನನಗೆ ಸಾಕಷ್ಟು ಆಫರ್​ಗಳು ಬರುತ್ತಿದ್ದವು. ಅದಕ್ಕೆ ಹೋಲಿಕೆ ಮಾಡಿದರೆ ಈಗ ಬೆರಳೆಣಿಕೆ ಸಿನಿಮಾಗಳು ಮಾತ್ರ ಬರುತ್ತವೆ. ನಮ್ಮನ್ನು ಸಿನಿಮಾಗಳಿಗೆ ಹಾಕಿಕೊಂಡು ಮಾಡುವುದೇನಿದೆ ಎನ್ನುವುದು ಅವರ ಭಾವನೆ ಇರಬಹುದು,”  ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಟಿ ಸಮಂತಾಗೆ 25 ವರ್ಷ!; ಬಯಲಾಯ್ತು ಟಾಲಿವುಡ್ ನಟಿಯ ಅಸಲಿ ವಯಸ್ಸು

ಸಮಂತಾ ಸದ್ಯ ಸಾಲು ಸಾಲು ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಆದಾಗ್ಯೂ ಅವರಿಗೆ ಆಫರ್​ಗಳು ಕಡಿಮೆ ಆಗಿದೆ ಎನ್ನುವ ಮಾತು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಸಮಂತಾ ಅಭಿನಯದ ‘ಓಹ್​ ಬೇಬಿ’ ಚಿತ್ರ ಜುಲೈನಲ್ಲಿ ತೆರೆಗೆ ಬರುತ್ತಿದ್ದು, ಸಿನಿಮಾದ ಟ್ರೈಲರ್​ ಸದ್ದು ಮಾಡಿದೆ.

First published: June 21, 2019, 12:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading