ಮನಿ ಲಾಂಡರಿಂಗ್ ಪ್ರಕರಣದಲ್ಲಿ (Money Laundering Case) ಬಂಧಿತನಾಗಿರುವ ಸುಕೇಶ್ (
ತನಗೆ ಆಮಿಷವೊಡ್ಡಿದ್ದ ಎಂದು ಬಾಲಿವುಡ್ ನಟಿ ನೋರಾ ಫತೇಹಿ (Nora Fatehi) ಹೇಳಿಕೆ ನೀಡಿದ ಬೆನ್ನಲ್ಲೇ ಸುಕೇಶ್ ನೋರಾ ವಿರುದ್ಧ ಮತ್ತೊಂದು ಹೇಳಿಕೆ ನೀಡಿದ್ದಾರೆ. ಆರೋಪಿ ಸುಕೇಶ್ ಚಂದ್ರಶೇಖರ್ ಹಾಗೂ ಸುಕೇಶ್ ಜೊತೆ ಸಂಪರ್ಕದಲ್ಲಿದ್ದರು ಎನ್ನಲಾದ ನಟಿ ನೋರಾ ಫತೇಹಿ ಮತ್ತು ಜಾಕ್ಲಿನ್ ಫರ್ನಾಂಡಿಸ್ (Jacqueline Fernandez) ದಿನಕ್ಕೊಂದು ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ.
200 ಕೋಟಿ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ಪೂರಕ ಆರೋಪಪಟ್ಟಿ ಸಲ್ಲಿಸಿರುವ ಬೆಳವಣಿಗೆ ಮಧ್ಯೆಯೇ ಜಾಕ್ವೆಲಿನ್ ಬಗ್ಗೆ ನೋರಾ ಯಾವಾಗಲೂ ಅಸೂಯೆ ಹೊಂದಿದ್ದರು ಎಂದು ಆರೋಪಿ ಸುಕೇಶ್ ಚಂದ್ರಶೇಖರ್ ಹೇಳಿಕೆ ನೀಡಿದ್ದಾನೆ.
“ತನ್ನ ಜೊತೆ ಡೇಟಿಂಗ್ ಮಾಡಲು ಬಯಸಿದ್ದ ನೋರಾ”
ತಮ್ಮ ವಕೀಲರಾದ ಅನಂತ್ ಮಲಿಕ್ ಮತ್ತು ಎಕೆ ಸಿಂಗ್ ಮೂಲಕ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸುಕೇಶ್, ನಾನು ಜಾಕ್ವೆಲಿನ್ ಜೊತೆ ಸಂಬಂಧ ಕಡಿದುಕೊಳ್ಳಬೇಕೆಂದು ನೋರಾ ಬಯಸಿದ್ದರು.
ಇದಕ್ಕಾಗಿ ನನ್ನ ಬ್ರೈನ್ವಾಶ್ ಮಾಡುತ್ತಿದ್ದರು. ತಾನು ಆಕೆಯ ಜೊತೆಗೇ ಡೇಟಿಂಗ್ ಮಾಡಬೇಕೆಂದು ನೋರಾ ಬಯಸಿದ್ದರು ಎಂಬುದಾಗಿ ಸುಕೇಶ್ ಹೇಳಿದ್ದಾನೆ.
ದಿನಕ್ಕೆ ಕನಿಷ್ಠ 10 ಬಾರಿ ಕರೆ ಮಾಡುತ್ತಿದ್ದರಂತೆ ನೋರಾ !
'ನಾನು ಮತ್ತು ಜಾಕ್ವೆಲಿನ್ ಗಂಭೀರ ಸಂಬಂಧದಲ್ಲಿದ್ದಾಗ ನಾನು ನೋರಾಳನ್ನು ದೂರಮಾಡಲು ಪ್ರಾರಂಭಿಸಿದೆ. ಆದರೆ ಆಕೆ ಕರೆ ಮಾಡುವ ಮೂಲಕ ನನ್ನನ್ನು ಕೆರಳಿಸುತ್ತಿದ್ದಳು.
ಅಲ್ದೇ ದಿನಕ್ಕೆ ಕನಿಷ್ಠ 10 ಬಾರಿ ತನಗೆ ಕರೆ ಮಾಡುತ್ತಿದ್ದಳು ಮತ್ತು ನಾನು ಕರೆಗೆ ಉತ್ತರಿಸದಿದ್ದರೆ ಅವಳು ನನಗೆ ಕರೆ ಮಾಡುತ್ತಲೇ ಇದ್ದಳು" ಎಂಬುದಾಗಿ ಸುಕೇಶ್ ಹೇಳಿದ್ದಾರೆ.
ಅಲ್ಲದೇ ಆಕೆ ತನಗೆ ಬೇಕಾದ ಬೆಲೆಬಾಳುವ ಬ್ಯಾಗ್ಗಳು ಮತ್ತು ಆಭರಣಗಳ ಫೋಟೋಗಳನ್ನು ಸುಕೇಶ್ಗೆ ಕಳುಹಿಸುತ್ತಿದ್ದರು ಎಂಬುದಾಗಿ ಸುಕೇಶ್ ಹೇಳಿಕೊಂಡಿದ್ದಾರೆ.
"ಅವಳ ಬಳಿ ಇರುವ ಹರ್ಮ್ಸ್ ಬ್ಯಾಗ್ಗಳ ಒಂದು ಬಿಲ್ ತಯಾರಿಸಲು ಹೇಳಿ, ಆ ಬ್ಯಾಗ್ಗಳು ₹ 2 ಕೋಟಿಗಿಂತ ಹೆಚ್ಚು ಮೌಲ್ಯದ್ದಾಗಿದೆ" ಎಂದು ಹೇಳಿಕೆ ನೀಡಿದ್ದಾರೆ.
ಅಲ್ಲದೇ, ತನ್ನ ಸಂಬಂಧಿಯೊಬ್ಬರಿಗೆ ಸಂಗೀತ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಲು ಸಹಾಯ ಮಾಡುವಂತೆ ನೋರಾ ಸುಕೇಶ್ ಸಹಾಯ ಕೇಳಿದ್ದರಂತೆ.
“ಹಿಂದಿನ ಹೇಳಿಕೆಗೂ ಈಗಿನ ಹೇಳಿಕೆಗೂ ವ್ಯತ್ಯಾಸವಿದೆ”
"ಒಂಭತ್ತು ತಿಂಗಳ ಹಿಂದೆ ಜಾರಿ ನಿರ್ದೇಶನಾಲಯದ ಮುಂದೆ ಅವರು ನೀಡಿದ ಹೇಳಿಕೆ ಸಂಪೂರ್ಣವಾಗಿ ವಿಭಿನ್ನವಾಗಿದ್ದು, ಆದರೆ 9 ತಿಂಗಳ ನಂತರ ಈ ಹೊಸ ಕಥೆಯು ತುಂಬಾ ತಮಾಷೆಯಾಗಿದೆ.
ನಾನು ಸುಳ್ಳು ಹೇಳುತ್ತಿದ್ದೇನೆಯೇ ಎಂದು ಖಚಿತಪಡಿಸಿಕೊಳ್ಳಲು ಮಾಧ್ಯಮಗಳು ಇದನ್ನು ಪರಿಶೀಲಿಸಬಹುದು. ಅವರು ಆರೋಪಿಸಿದಂತೆ ನನಗೆ ಯಾವುದೇ ಪ್ರಣಯ ಸಂಬಂಧವಿಲ್ಲ.
ಸತ್ಯವನ್ನು ಒಪ್ಪಿಕೊಳ್ಳಲು ನನಗೆ ಯಾವುದೇ ಭಯವಿಲ್ಲ. ನಾನು ED ಚಾರ್ಜ್ ಶೀಟ್ ಹೇಳಿಕೆಯನ್ನು ಪರಿಶೀಲಿಸಲು ಮಾಧ್ಯಮಗಳಿಗೆ ಮನವಿ ಮಾಡುತ್ತೇನೆ" ಎಂಬುದಾಗಿ ಸುಕೇಶ್ ಹೇಳಿದ್ದಾರೆ.
ಸುಕೇಶ್ ಅವರು "ನಾನು ಈ ಮಹಿಳೆಯರ ಬಗ್ಗೆ ಬಹಳ ಕಡಿಮೆ ಘನತೆ ಮತ್ತು ಗೌರವವನ್ನು ಹೊಂದಿದ್ದೇನೆ ಮತ್ತು ಎಲ್ಲಾ ಚಾಟ್ಗಳು ಮತ್ತು ಸ್ಕ್ರೀನ್ಶಾಟ್ಗಳನ್ನು ಬಹಿರಂಗಪಡಿಸುವಂಥ ಕೆಳಮಟ್ಟಕ್ಕೆ ನಾನು ಹೋಗುವುದಿಲ್ಲ" ಎಂಬುದಾಗಿಯೂ ಅವರು ಹೇಳಿದ್ದಾರೆ.
ಸುಕೇಶ್ ವಿರುದ್ಧ ಹೇಳಿಕೆ ನೀಡಿದ್ದ ಜಾಕ್ವೆಲಿನ್, ನೋರಾ
ನೋರಾ ಫತೇಹಿ ತನ್ನ ಇತ್ತೀಚಿಗಿನ ಹೇಳಿಕೆಯಲ್ಲಿ ಸುಕೇಶ್ ಗೆಳತಿಯಾಗಲು ಒಪ್ಪಿಕೊಂಡರೆ ದೊಡ್ಡ ಮನೆ ಮತ್ತು ಐಷಾರಾಮಿ ಜೀವನದ ಭರವಸೆ ನೀಡಿದ್ದಾಗಿ ಹೇಳಿಕೊಂಡಿದ್ದರು.
ಇನ್ನು ಜಾಕ್ಲಿನ್ ಫರ್ನಾಂಡೀಸ್ ಕೂಡಾ ಸುಕೇಶ್ ವಿರುದ್ದ ಆರೋಪಿಸಿದ್ದರು. ತಮ್ಮ ಭಾವನೆಗಳೊಂದಿಗೆ ಆಟವಾಡಿದ ಸುಕೇಶ್ ತನ್ನನ್ನು ದಾರಿ ತಪ್ಪಿಸಿ ತನ್ನ ವೃತ್ತಿಜೀವನವನ್ನು ಹಾಳುಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ