ಬಾಲಿವುಡ್ನಲ್ಲಿ ನೊರಾ ಫತೇಹಿ(Nora fatehi) ತಮ್ಮದೇ ಆದ ಹವಾ ಸೃಷ್ಟಿಸಿದ್ದಾರೆ. ಯಾವುದೇ ಸಿನಿಮಾ ಇರಲಿ, ಅಲ್ಲಿ ನೋರಾ ಫತೇಹಿ ಅವರ ಐಟಂ ಸಾಂಗ್(Item Song) ಇರಲೇಬೇಕು. ಅವರ ಮಾದಕ ನೃತ್ಯಕ್ಕೆ ಮರುಳಾಗದವರೇ ಇಲ್ಲ. ಯಾವುದೇ ಡ್ಯಾನ್ಸ್ ರಿಯಾಲಿಟಿ ಶೋ(Dance Reality Show) ಇದ್ದರೂ ಅಲ್ಲಿ ನೋರಾ ಫತೇಹಿ ಅಲ್ಲಿರುತ್ತಾರೆ. ಆದರೆ, ಇವರನ್ನು ಸ್ಟ್ರೆಚರ್(Stretcher) ಮೇಲೆ ಎತ್ತುಕೊಂಡು ಹೋಗುತ್ತಿರುವ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಈ ದೃಶ್ಯ ಕಂಡು ಅವರ ಅಭಿಮಾನಿಗಳು ಗಾಬರಿಯಾಗಿದ್ದಾರೆ. ಇದ್ದಕ್ಕಿದ್ದ ಹಾಗೇ ಏನಾಯ್ತು ಇವರಿಗೆ ಅಂತ ಟೆನ್ಶನ್(Tension) ಆಗಿದ್ದಾರೆ. ಆದರೆ ಇದು ಗಾಬರಿ ಮಾಡಿಕೊಳ್ಳುವ ವಿಚಾರವಲ್ಲ. ಇದು ಅವರ ಕೆಲಸ(Work)ದ ಮೇಲೆ ಅವರಿಗೆ ಇರುವ ನಿಷ್ಠೆಯನ್ನು ತೋರುವ ವಿಡಿಯೋ. ಹೌದು, ಒಬ್ಬ ಕಲಾವಿದ ತಾನೂ ಸಂಪೂರ್ಣವಾಗಿ ಪಾತ್ರದಲ್ಲಿ ತೊಡಗಿಸಿಕೊಂಡಾಗ ಮಾತ್ರ ಎಲ್ಲರಿಗೂ ಇಷ್ಟವಾಗುತ್ತಾನೆ. ಹೀಗಾಗಿ ಮತ್ಸ್ಯಕನ್ಯೆ(Mermaid)ಯಾಗಿ ಮುಂದಿನ ಹಾಡಿನಲ್ಲಿ ನೋರಾ ಫತೇಹಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರೀಕರಣ(Shooting)ದ ವೇಳೆ ನಡೆದುಕೊಂಡು ಹೋಗಲಾಗದೇ ಇದ್ದಾಗ, ಸಿಬ್ಬಂದಿ ಇವರನ್ನು ಸ್ಟ್ರೆಚ್ಚರ್ ಮೇಲೆ ಎತ್ತುಕೊಂಡು ಹೋಗಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.
ಶೂಟಿಂಗ್ ವಿಡಿಯೋ ಕಂಡು ಫ್ಯಾನ್ಸ್ ಟೆನ್ಶನ್!
ಕಳೆದ ವರ್ಷ ಅವರ ಸಖತ್ ಹಿಟ್ ಆದ 'ನಾಚ್ ಮೇರಿ ರಾಣಿ' ಯಶಸ್ಸಿನ ನಂತರ, ನೋರಾ ಫತೇಹಿ(Nora Fatehi) ಮತ್ತೊಂದು ಸಖತ್ ಸಾಂಗ್ ತಯಾರಿಸಲು ಮರಳಿದ್ದಾರೆ. ಸ್ಟೈಲಿಷ್ ನಟಿ ಈಗ ಗುರು ರಾಂಧವಾ ಅವರೊಂದಿಗೆ ಮುಂಬರುವ ಸಾಂಗ್ 'ಡ್ಯಾನ್ಸ್ ಮೇರಿ ರಾಣಿ' ಮೂಲಕ ತನ್ನ ಅಭಿಮಾನಿಗಳು ಮತ್ತು ಫಾಲೋವರ್ಸ್ಗೆ ಸಖತ್ ಟ್ರೀಟ್ ನೀಡಲು ಸಿದ್ಧರಾಗಿದ್ದಾರೆ. ಇತ್ತೀಚೆಗಷ್ಟೇ ನೋರಾ ಮತ್ಸ್ಯಕನ್ಯೆಯಾಗಿ ತನ್ನ ಲುಕ್ ಅನ್ನು ಶೇರ್ ಮಾಡಿದ್ದು, ಆಕೆಯ ಲುಕ್‌ಗೆ ಅಭಿಮಾನಿಗಳು ಮನಸೋತಿದ್ದಾರೆ. ಈ ಹಾಡಿಗಾಗಿ ಚಿತ್ರೀಕರಣಕ್ಕೆ ತೆರಳುವ ಸಮಯ ತೆಗೆದ ವಿಡಿಯೋ ಇದೀಗ ವೈರಲ್ ಆಗಿದೆ.
ಇದನ್ನು ಓದಿ : ಅಮ್ಮಮ್ಮಾ... ಇವ್ನ ನೋಡೋಕೆ ಜೈಲಿಗೇ ಬರ್ತಿದ್ರಂತೆ 12 ಖ್ಯಾತ ನಟಿಯರು: ಒಳಗೆ ಏನೇನ್ ಆಗ್ತಿತ್ತೋ..!
ಮತ್ಸ್ಯಕನ್ಯೆಯಾದ ನೋರಾ ಫತೇಹಿ!
ಮತ್ಸ್ಯಕನ್ಯೆಯಾಗಿ ಮರ್ಮೈಡ್ ಸೂಟ್‌ನಲ್ಲಿ ನೋರಾ ಫತೇಹಿ ಸಖತ್ ಸ್ಟೈಲಿಷ್ ಅಗಿ ಕಾಣುತ್ತಿದ್ದಾರೆ. ಮುಂಬರುವ ಹಾಡಿನ ಚಿತ್ರೀಕರಣದ ಸಮಯದಲ್ಲಿ, ನೋರಾ ತನ್ನ ವಿಶೇಷ ವೇಷಭೂಷಣದಲ್ಲಿ ನಡೆಯುವಂತೆಯೂ, ಓಡುವಂತೆಯೂ ಇರಲಿಲ್ಲ. ಹೌದು. ನಟಿಯನ್ನು ಆಕೆಯ ತಂಡವು ಸ್ಟ್ರೆಚರ್‌ನಲ್ಲಿ ಮಲಗಿಸಿ ಸುತ್ತಲೂ ಸಾಗಿಸಬೇಕಾಯಿತು.ನೋರಾ ಫತೇಹಿ ಮತ್ತು ಗುರು ರಾಂಧವಾ ಅವರು ಸೋಷಿಯಲ್ ಮೀಡಿಯಾದಲ್ಲಿ ಥ್ರಿಲ್ ಮೂಡಿಸಿದ್ದಾರೆ. ಇಬ್ಬರೂ ಒಟ್ಟಿಗೆ ಕೆಲವು ಬೀಚ್ ಸಮಯವನ್ನು ಆನಂದಿಸುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇದನ್ನು ಓದಿ: ಇದ್ಯಾವ ಸೀಮೆ ಬಟ್ಟೆ ಗುರೂ.. ಅನನ್ಯಾ ಪಾಂಡೆ ನ್ಯೂ ಲುಕ್, ಸಿಕ್ಕಾಪಟ್ಟೆ ಟ್ರೋಲ್!
ವಂಚಕನ ಜೊತೆ ನೋರಾ ಫತೇಹಿಗೆ ಲಿಂಕ್!
ಹೌದು, ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ನೋರಾ ಫತೇಹಿಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲಾಗಿತ್ತು. ಪ್ರಕರಣದ ಕಿಂಗ್ಪಿನ್ ಸುಕೇಶ್ ಚಂದ್ರಶೇಖರ್ ಜತೆ ಅವರು ಲಿಂಕ್ ಹೊಂದಿದ್ದರು ಎನ್ನಲಾಗಿದೆ. ಜಾಕ್ವಲಿನ್ ಜೊತೆ ಸುಕೇಶ್ ಕಿಸ್ ಮಾಡುತ್ತಿದ್ದ ಫೋಟೋಗಳು ಸಖತ್ ವೈರಲ್ ಆಗಿತ್ತು. ಇದಾದ ಮೇಲೆ ನೋರಾ ಫತೇಹಿ ಜೊತೆಯೂ ಲಿಂಕ್ ಇದೆ ಎಂಬುದು ತಿಳಿದುಬಂದಿತ್ತು. ಈ ಬಗ್ಗೆ ನೋರಾ ಫತೇಹಿ ಎಲ್ಲಿಯೂ ಮಾಹಿತಿ ಹಂಚಿಕೊಂಡಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ