ಯೊಹಾನಿ ಹಾಡಲಿರುವ Manike Mage Hithe ಹಾಡಿಗೆ ಹೆಜ್ಜೆ ಹಾಕಲಿರುವ ನೋರಾ ಫತೇಹಿ-ಸಿದ್ಧಾರ್ಥ್​ ಮಲ್ಹೋತ್ರಾ

ಗಾಯಕಿ ಯೊಹಾನಿ ಈಗ ಬಾಲಿವುಡ್​ ಎಂಟ್ರಿ ಕೊಟ್ಟಿದ್ದಾರೆ. ಹೌದು, ಇವರು 'ಥ್ಯಾಂಕ್‌ ಗಾಡ್' ಎಂಬ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಡಲು ಸಜ್ಜಾಗಿದ್ದಾರೆ.  ಬಾಲಿವುಡ್ ನಟ ಅಜಯ್ ದೇವ್‌ಗನ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ರಾಕುಲ್ ಪ್ರೀತ್ ಸಿಂಗ್ ನಟಿಸಲಿರುವ ಸಿನಿಮಾದಲ್ಲಿ ಹಿಂದಿ ವರ್ಷನ್ ಹಾಡನ್ನು ಯೊಹಾನಿ ಹಾಡಲಿದ್ದಾರೆ.

ಗಾಯಕಿ ಯೊಹಾನಿ ಹಾಗೂ ನಟಿ ನೋರಾ ಫತೇಹಿ

ಗಾಯಕಿ ಯೊಹಾನಿ ಹಾಗೂ ನಟಿ ನೋರಾ ಫತೇಹಿ

  • Share this:
ಶ್ರೀಲಂಕಾದ ಗಾಯಕಿ ಯೊಹಾನಿ (Yohani) ಈಗ ಯಾರಿಗೆ ಗೊತ್ತಿಲ್ಲ ಹೇಳಿ. ‘ಮನಿಕೆ ಮಗೆ ಹಿತೆ' (Manike Mage Hithe) ಹಾಡು ಹಾಡಿ ಶಾರ್ಟ್​ ವಿಡಿಯೋ ಆ್ಯಪ್​ ಹಾಗೂ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆದ ಗಾಯಕಿ. ಈ ಹಾಡು ಸಂಗೀತ ಪ್ರಿಯರಲ್ಲಿ ಯಾವ ಮಟ್ಟದಲ್ಲಿ ಕ್ರೇಜ್​ ಹುಟ್ಟುಹಾಕಿತ್ತು ಎಂದರೆ, ಬಾಲಿವುಡ್  ಸೇರಿದಂತೆ ಇತರೆ ಸಿನಿರಂಗದ ಸೆಲೆಬ್ರಿಟಿಗಳು ಈ ಹಾಡಿಗೆ ಹೆಜ್ಜೆ ಹಾಕಿ ವಿಡಿಯೋ ಹಂಚಿಕೊಳ್ಳಲಾರಂಭಿಸಿದ್ದರು. ಅಲ್ಲದೆ, ಈ ಹಾಡಿನ ಕ್ರೇಜ್​ ಇನ್ನೂ ಸಹ ಕಡಿಮೆಯಾಗಿಲ್ಲ ಎಂದರೆ ತಪ್ಪಾಗದು. ಇಂತಹ ಯಶಸ್ಸು ಕಂಡ ಗಾಯಕಿ ಯೊಹಾನಿ ನಂತರದಲ್ಲಿ ಹೈದರಾಬಾದಿಗೆ ಬಂದು ಕನ್ಸರ್ಟ್​ ಮಾಡಿದರು. ಕನ್ಸರ್ಟ್​ ವೇಳೆ ಸ್ಟೇಜ್​ ಮೇಲೆ ಗಾಯಗೊಂಡು ಸುದ್ದಿಯಾಗಿದ್ದರು. ಈ ಶ್ರೀಲಂಕನ್ ಪ್ರತಿಭೆ ಈಗ ಬಾಲಿವುಡ್​ನಲ್ಲೂ ಹಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 

ಗಾಯಕಿ ಯೊಹಾನಿ ಈಗ ಬಾಲಿವುಡ್​ ಎಂಟ್ರಿ ಕೊಟ್ಟಿದ್ದಾರೆ. ಹೌದು, ಇವರು 'ಥ್ಯಾಂಕ್‌ ಗಾಡ್' ಎಂಬ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಡಲು ಸಜ್ಜಾಗಿದ್ದಾರೆ.  ಬಾಲಿವುಡ್ ನಟ ಅಜಯ್ ದೇವ್‌ಗನ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ರಾಕುಲ್ ಪ್ರೀತ್ ಸಿಂಗ್ ನಟಿಸಲಿರುವ ಸಿನಿಮಾದಲ್ಲಿ ಹಿಂದಿ ವರ್ಷನ್ ಹಾಡನ್ನು ಯೊಹಾನಿ ಹಾಡಲಿದ್ದಾರೆ. ಈ ವಿಷಯ ಈಗ ಅಧಿಕೃತವಾಗಿದೆ.










View this post on Instagram






A post shared by Nora Fatehi (@norafatehi)






‘ಥ್ಯಾಂಕ್ ಗಾಡ್’ ಚಿತ್ರದಲ್ಲಿ ಶ್ರೀಲಂಕನ್ ಗೀತೆಯನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ಹಿಂದಿ ವರ್ಷನ್ ಹಾಡನ್ನು ಯೊಹಾನಿ ಹಾಡಲಿದ್ದು, ಖ್ಯಾತ ನಟಿ ನೋರಾ ಫತೇಹಿ ಹಾಗೂ ಸಿದ್ಧಾರ್ಥ್​ ಮಲ್ಹೋತ್ರಾ ಅವರು ಈ ಹಾಡಿನಲ್ಲಿ ಹೆಜ್ಜೆ ಹಾಕಲಿದ್ದಾರಂತೆ.








View this post on Instagram






A post shared by Yohani (@yohanimusic)






"ಯೊಹಾನಿ ಹಾಡು ತುಂಬಾನೇ ಜನಪ್ರಿಯವಾಗಿದ್ದು ಮತ್ತು ‘ಥ್ಯಾಂಕ್ ಗಾಡ್’ ಚಿತ್ರದ ಭಾಗವಾಗಲು ಈ ಜನಪ್ರಿಯ ಹಾಡನ್ನು ನನಗೆ ನೀಡಿದ್ದಕ್ಕಾಗಿ ಭೂಷಣ್ ಅವರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಆವೃತ್ತಿಗಾಗಿ ನಾವೆಲ್ಲರೂ ತುಂಬಾ ಉತ್ಸುಕರಾಗಿದ್ದೇವೆ ಮತ್ತು ಈ ಹಾಡಿಗೆ ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭಿಸುತ್ತೇವೆ. 'ಥ್ಯಾಂಕ್ ಗಾಡ್' ಚಿತ್ರವು ಹಾಸ್ಯಭರಿತ ಕಥೆ ಹೊಂದಿದ್ದು, ನಾನು ಮತ್ತು ನನ್ನ ಇಡೀ ತಂಡವು ಮುಂದಿನ ವರ್ಷ ಅದನ್ನು ಪ್ರೇಕ್ಷಕರಿಗೆ ಪ್ರಸ್ತುತಪಡಿಸಲು ಎದುರು ನೋಡುತ್ತಿದ್ದೇವೆ" ಎಂದು ‘ಥ್ಯಾಂಕ್ ಗಾಡ್’ ಚಿತ್ರದ ನಿರ್ದೇಶಕರಾದ ಇಂದ್ರ ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ:  Sri Lankan Beauties: ಕ್ಯಾಮೆರಾಗೆ ಪೋಸ್ ಕೊಟ್ಟ ಮನಿಕೆ ಮಗೆ ಹಿತೆ ಖ್ಯಾತಿಯ Yohani-Jacqueline Fernandez

ಇತ್ತೀಚೆಗೆ 'ಬಿಗ್‌ಬಾಸ್ 15' ಮತ್ತು 'ದಿ ಬಿಗ್ ಪಿಕ್ಚರ್'ನಲ್ಲಿ ಕಾಣಿಸಿಕೊಂಡಿದ್ದ ಯೊಹಾನಿ, ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿರುವುದರ ಬಗ್ಗೆ ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ವಿಷಯವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.








View this post on Instagram






A post shared by Yohani (@yohanimusic)






"ನನಗೆ ಭಾರತದಿಂದ ಅಪಾರ ಪ್ರೀತಿ ಮತ್ತು ಬೆಂಬಲ ದೊರೆತಿದೆ ಮತ್ತು ಚಿತ್ರದಲ್ಲಿ ನನ್ನ ಹಾಡನ್ನು ಹಿಂದಿ ಆವೃತ್ತಿಯಲ್ಲಿ ಪ್ರಸ್ತುತ ಪಡಿಸಿದ್ದಕ್ಕಾಗಿ ಭೂಷಣ್ ಕುಮಾರ್, ಇಂದ್ರ ಕುಮಾರ್ ಮತ್ತು ಇಡೀ ಚಿತ್ರ ತಂಡಕ್ಕೆ ನಾನು ತುಂಬಾ ಆಭಾರಿಯಾಗಿದ್ದೇನೆ. ನಾನು ಶೀಘ್ರದಲ್ಲಿಯೇ ಭಾರತಕ್ಕೆ ಭೇಟಿ ನೀಡಲು ಎದುರು ನೋಡುತ್ತಿದ್ದೇನೆ" ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಟೌಟ್​ ಡ್ರೆಸ್ ಧರಿಸಿ ಮುಜುಗರಕ್ಕೆ ಒಳಗಾದ ನಟಿ Nora Fatehi

'ಥ್ಯಾಂಕ್‌ ಗಾಡ್' ಚಿತ್ರವನ್ನು ಭೂಷಣ್ ಕುಮಾರ್, ಕ್ರಿಷನ್ ಕುಮಾರ್, ಅಶೋಕ್ ಥಾಕೆರಿಯಾ, ಸುನೀರ್ ಖೇತರ್‌ಪಾಲ್, ದೀಪಕ್ ಮುಕುಟ್, ಆನಂದ್ ಪಂಡಿತ್ ಮತ್ತು ಮಾರ್ಕಂಡ್ ಅಧಿಕಾರಿ ನಿರ್ಮಿಸಿದ್ದಾರೆ ಮತ್ತು ಯಶ್ ಶಾ ಸಹ-ನಿರ್ಮಾಣ ಮಾಡಿದ್ದಾರೆ. ಬಾಲಿವುಡ್​ನ ಬಿಗ್​ ಬಿ ಅಮಿತಾಭ್​ ಬಚ್ಚನ್ ಅವರು ಈಗಾಗಲೇ ತಮ್ಮ ಸಿನಿಮಾದ ವಿಡಿಯೋ ತುಣುಕಿಗೆ ಈ ಹಾಡನ್ನು ಸೇರಿಸಿ ಪೋಸ್ಟ್​ ಮಾಡಿದ್ದು ಸುದ್ದಿಯಾಗಿತ್ತು. ಇಷ್ಟರ ಮಟ್ಟಿಗೆ ಈ ಹಾಡು ವೈರಲ್ ಆಗಿತ್ತು.
Published by:Anitha E
First published: