No time to Die: ನೋ ಟೈಮ್​ ಟು ಡೈ..!; ನವೆಂಬರ್​ನಲ್ಲಿ ತೆರೆಕಾಣಲು ಸಜ್ಜಾಗುತ್ತಿದೆ ಬಾಂಡ್​ ಸರಣಿಯ 25ನೇ ಸಿನಿಮಾ

No time to Die Trailer: 'ನೋ ಟೈಮ್ ಟು ಡೈ' ಸಿನಿಮಾ ಇಂಗ್ಲಿಷ್​ ಸೇರಿದಂತೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ರಿಲೀಸ್​ ಆಗಲಿದೆ. ಈಗಾಗಲೇ ಡಬ್ಬಿಂಗ್​ ಸಹ ಮುಗಿದಿದೆಯಂತೆ. ವಿಶೇಷ ಅಂದ್ರೆ ಈ ಚಿತ್ರಕ್ಕಾಗಿ 51 ವರ್ಷವಾಗಿದ್ದರೂ ಡೇನಿಯಲ್ ಕ್ರೇಗ್ ಸಾಕಷ್ಟು ರಿಸ್ಕ್ ತೆಗೆದುಕೊಂಡು ಆ್ಯಕ್ಷನ್​ ಸೀಕ್ವೆನ್ಸ್​ಗಳಲ್ಲಿ ನಟಿಸಿದ್ದಾರಂತೆ.

'ನೋ ಟೈಮ್​ ಟು ಡೈ' ಸಿನಿಮಾದ ಪೋಸ್ಟರ್

'ನೋ ಟೈಮ್​ ಟು ಡೈ' ಸಿನಿಮಾದ ಪೋಸ್ಟರ್

  • Share this:
No time to Die:ಜೇಮ್ಸ್ ಬಾಂಡ್ ಸರಣಿಯ 25ನೇ ಸಿನಿಮಾ ನೋ ಟೈಮ್ ಟು ಡೈ. ಐದನೇ ಬಾರಿಗೆ ಡೇನಿಯಲ್ ಕ್ರೇಗ್ ಬಾಂಡ್ ಆಗಿ ವಾಪಸ್ಸಾಗಿದ್ದಾರೆ. ಇದು ಡೇನಿಯಲ್​ ಅವರ ಕೊನೆಯ ಬಾಂಡ್​ ಚಿತ್ರವಾಗಿದೆ. ವಿಶೇಷ ಅಂದ್ರೆ ಕ್ಯಾರಿ ಫುಕುನಗ ಆ್ಯಕ್ಷನ್ ಕಟ್ ಹೇಳಿರುವ ಈ ಸ್ಪೈ ಸಿನಿಮಾ ಈ ಸಲ ಕನ್ನಡದಲ್ಲೂ ಡಬ್ ಆಗಿ ತೆರೆಗೆ ಅಪ್ಪಳಿಸಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಇದೇ ನವೆಂಬರ್ ಎರಡನೇ ವಾರ ನೋ ಟೈಮ್ ಟು ಡೈ ರಿಲೀಸ್ ಆಗಲಿದೆ. ಹಾಲಿವುಡ್​ನ ಖ್ಯಾತ  ಸರಣಿ​ ಸಿನಿಮಾಗಳಲ್ಲಿ ಒಂದಾಗಿರುವ ಜೇಮ್ಸ್ ಬಾಂಡ್  ಚಿತ್ರಗಳಲ್ಲಿ  ಕಾಸ್ಲಿ ಸೂಟು, ಬೂಟು, ಹೈಫೈ ವೆಪನ್​.... ಸೂಪರ್​ ಕಾರುಗಳು ಬಾಂಡ್ ಚಿತ್ರಗಳ ಅಭಿಮಾನಿಗಳಿಗೆ ಹುಚ್ಚಿಡಿಸುತ್ತವೆ. ವಿಶ್ವದ ಒಳಿತಾಗಿ ದುಡಿಯುವ ಸೂಪರ್ ಸ್ಪೈಗಳೇ ಈ ಬಾಂಡ್​ಗಳು. ಈಗ ಈ ಬಾಂಡ್​ ಸರಣಿಯ 25ನೇ ಸಿನಿಮಾ ಕುರಿತಾದ ಅಪ್ಡೇಟ್​ ಸಿಕ್ಕಿದೆ. 

ಗೂಢಾಚಾರಿ ಅಂದರೆ ಹೀಗೇ ಇರಬೇಕು ಅನ್ನೋ ಭಾವನೆ ಮೂಡಿಸಿದ್ದೇ ಈ ಜೇಮ್ಸ್ ಬಾಂಡ್ ಸಿನಿಮಾಗಳು. ಫ್ಯಾಂಟಸಿ, ಆ್ಯಕ್ಷನ್ ಸಿನಿಮಾಗಳ ನಡುವೆ ಸ್ಪೈ ಥ್ರಿಲ್ಲರ್ ಕಥೆ ಹೇಳಿ ಸಿನಿಪ್ರಿಯರನ್ನು ರಂಜಿಸಿದ್ದು ಇದೇ ಏಜೆಂಟ್ 007. ಈಗ ಹಲವು ಅಡೆತಡೆಗಳ ನಡುವೆ 25ನೇ ಬಾರಿಗೆ ತೆರೆಯ ಮೇಲೆ ವಿಶ್ವವನ್ನುಳಿಸಲು, ಸಿನಿಪ್ರಿಯರನ್ನು ರಂಜಿಸಲು ರೆಡಿಯಾಗಿದ್ದಾನೆ ಈ ಏಜೆಂಟ್​. ಇತ್ತೀಚೆಗಷ್ಟೆ ನೋ ಟೈಮ್​ ಟು ಡೈ ಚಿತ್ರದ ಎರಡನೇ ಟ್ರೇಲರ್​ ರಿಲೀಸ್​ ಆಗಿದೆ.ಎರಡನೇ ಟ್ರೇಲರ್​ ಸಹ ಸಖತ್ ಆ್ಯಕ್ಷನ್​ ಸೀಕ್ವೆನ್ಸ್​ಗಳಿಂದ ಕೂಡಿದ್ದು, 'ಬಾಂಡ್, ಜೇಮ್ಸ್ ಬಾಂಡ್...'  ಎನ್ನುತ್ತಾ ಐದನೇ ಬಾರಿಗೆ ಏಜೆಂಟ್ 007 ಆಗಿ ತೆರೆ ಮೇಲೆ ಮಿಂಚಲಿದ್ದಾರೆ ನಟ ಡೇನಿಯಲ್ ಕ್ರೇಗ್. ಕಳೆದ 57 ವರ್ಷಗಳಲ್ಲಿ ಇದು 25ನೇ ಬಾಂಡ್ ಸಿನಿಮಾ.


'ನೋ ಟೈಮ್ ಟು ಡೈ', ನಟ ಡೇನಿಯಲ್ ಕ್ರೇಗ್ ಬಾಂಡ್‍ ಆಗಿ ನಟಿಸುತ್ತಿರುವ ಐದನೇ ಹಾಗೂ ಕೊನೆಯ ಚಿತ್ರ. ಹೀಗಾಗಿಯೇ ಹಿಂದಿನ ಎಲ್ಲ ಬಾಂಡ್ ಸಿನಿಮಾಗಳಿಗೆ ಹೋಲಿಸಿದರೆ, ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಎಲ್ಲಿಲ್ಲದ ಕುತೂಹಲ ಇದೆ. 2006ರ ಕ್ಯಾಸಿನೋ ರಾಯಲ್ ಮೂಲಕ ಪಿಯರ್ಸ್ ಬ್ರಾಸ್ನನ್ ನಂತರ ಬಾಂಡ್ ಆಗಿ ಎಂಟ್ರಿ ಕೊಟ್ಟಿದ್ದ ಡೇನಿಯಲ್, ನಂತರ 2008ರಲ್ಲಿ 'ಕ್ವಾಂಟಮ್ ಆಫ್ ಸೊಲೇಸ್', 2012ರಲ್ಲಿ 'ಸ್ಕೈ ಫಾಲ್' ಹಾಗೂ 2015ರಲ್ಲಿ 'ಸ್ಪೆಕ್ಟರ್ ಸೂಪರ್ ಸ್ಪೈ' ಪಾತ್ರದಲ್ಲಿ ಮಿಂಚಿದ್ದರು.

no time to die,no time to die trailer,Daniel craig, No time to Die, No time to Die release date, No time to Die news,no time to die trailer reaction,james bond no time to die,no time to die trailer review
'ನೋ ಟೈಮ್​ ಟು ಡೈ' ಸಿನಿಮಾದ ಪೋಸ್ಟರ್


ಈ ಹಿಂದೆ ಈ ಸಿನಿಮಾ ಏಪ್ರಿಲ್‍ 3ಕ್ಕೆ ತೆರೆ ಕಾಣಲಿದೆ ಎಂದು ಹೇಳಲಾಗಿತ್ತು. ಆದರೆ ಲಾಕ್​ಡೌನ್​ನಿಂದಾಗಿ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಇನ್ನೇನು ಭಾರತದಲ್ಲಿ ನವೆಂಬರ್ ಹೊತ್ತಿಗೆ ಚಿತ್ರಮಂದಿರಗಳು ಬಾಗಿಲು ತೆರೆದರೆ, ಸಿನಿಮಾವನ್ನು ರಿಲೀಸ್​ ಮಾಡುವ ಪ್ಲಾನ್​ನಲ್ಲಿದೆ ಚಿತ್ರತಂಡ.

ಇದನ್ನೂ ಓದಿ: Radhika Kumaraswamy: ಸಿನಿಮಾ ವಿಷಯವಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ರಾಧಿಕಾ ಕುಮಾರಸ್ವಾಮಿ...!

'ನೋ ಟೈಮ್ ಟು ಡೈ' ಸಿನಿಮಾ ಇಂಗ್ಲಿಷ್​ ಸೇರಿದಂತೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ರಿಲೀಸ್​ ಆಗಲಿದೆ. ಈಗಾಗಲೇ ಡಬ್ಬಿಂಗ್​ ಸಹ ಮುಗಿದಿದೆಯಂತೆ. ವಿಶೇಷ ಅಂದ್ರೆ ಈ ಚಿತ್ರಕ್ಕಾಗಿ 51 ವರ್ಷವಾಗಿದ್ದರೂ ಡೇನಿಯಲ್ ಕ್ರೇಗ್ ಸಾಕಷ್ಟು ರಿಸ್ಕ್ ತೆಗೆದುಕೊಂಡು ಆ್ಯಕ್ಷನ್​ ಸೀಕ್ವೆನ್ಸ್​ಗಳಲ್ಲಿ ನಟಿಸಿದ್ದಾರಂತೆ.

'ಸ್ಪೆಕ್ಟರ್' ತೆರೆಗೆ ಬಂದ ಒಂದು ವರ್ಷದಲ್ಲೇ ಅರ್ಥಾತ್ 2016ರಲ್ಲೇ ಜೇಮ್ಸ್ ಬಾಂಡ್ ಸೀರೀಸ್​ನ 25ನೇ ಚಿತ್ರದ ಸಿದ್ಧತೆಗಳು ಪ್ರಾರಂಭವಾಗಿದ್ದವು. 'ಸ್ಲಂ ಡಾಗ್ ಮಿಲಿಯನೇರ್' ಖ್ಯಾತಿಯ ನಿರ್ದೇಶಕ ಡ್ಯಾನಿ ಬಾಯ್ಲ್ ಮೊದಲು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಆಯ್ಕೆಯಾಗಿದ್ದರು. ಅದರಂತೆ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡು ಇನ್ನೇನು ಶೂಟಿಂಗ್ ಪ್ರಾರಂಭವಾಗಬೇಕು ಅನ್ನುವಷ್ಟರಲ್ಲಿ, ಕಥೆ ವಿಷಯದಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕರ ನಡುವೆ ಗೊಂದಲವುಂಟಾಯ್ತು. ಇದರಿಂದಾಗಿ ಡ್ಯಾನಿ ಬಾಯ್ಲ್ ಚಿತ್ರತಂಡದಿಂದ ಹೊರ ಬರಬೇಕಾಯ್ತು. ಇದೇ ಕಾರಣದಿಂದಾಗಿ ಸಿನಿಮಾ ಶೂಟಿಂಗ್ ಕೂಡ ತಡವಾಯ್ತು.

ಇದನ್ನೂ ಓದಿ: Roberrt Asha Bhat: ರಾಬರ್ಟ್​ ಚಿತ್ರತಂಡದಿಂದ ಹೊರ ಬಿತ್ತು ಹೊಸ ಅಪ್ಡೇಟ್​: ಟ್ವೀಟ್ ಮಾಡಿದ ತರುಣ್​ ಸುಧೀರ್​..!

ಇನ್ನು 25ನೇ ಸಿನಿಮಾ ಆಗಿರುವ ಕಾರಣ 'ನೋ ಟೈಮ್ ಟು ಡೈ' ಚಿತ್ರ ಹಿಂದೆಂದಿಗಿಂತಲೂ ಅದ್ಧೂರಿ ಬಜೆಟ್‍ನಲ್ಲಿ ಮೂಡಿಬರಲಿದೆ. ಇಟಲಿ, ಜಮೈಕಾ, ನಾರ್ವೆ, ಲಂಡನ್, ಸ್ಕಾಟ್‍ಲೆಂಡ್ ಹೀಗೆ ಹಲವು ದೇಶಗಳಲ್ಲಿ ಇದರ ಚಿತ್ರೀಕರಣ ಮಾಡಲಾಗಿದೆ. ಇದರಲ್ಲಿ ರಾಮಿ ಮಲೆಕ್ ಮೈನ್ ಖಳನಾಗಿ ನಟಿಸುತ್ತಿದ್ದಾರೆ. ಇದು ಅವರ ಮೊದಲ ಬಾಂಡ್ ಸಿನಿಮಾ.

ಉಳಿದಂತೆ ರಾಲ್ಫ್ ಫಿಯೆನ್ಸ್, ನವೋಮಿ ಹ್ಯಾರಿಸ್, ರೋರಿ ಕಿನ್ನೆಯರ್, ಲಶಾನಾ ಲಿಂಚ್, ಜೆಫ್ರಿ ರೈಟ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹಾಗೇ 24ನೇ ಬಾಂಡ್ ಚಿತ್ರ 'ಸ್ಪೆಕ್ಟರ್​'ನಲ್ಲಿ ಜೇಮ್ಸ್ ಬಾಂಡ್ ಗರ್ಲ್‍ಫ್ರೆಂಡ್ ಡಾಕ್ಟರ್ ಮ್ಯಾಡಲೀನ್ ಸ್ವಾನ್ ಪಾತ್ರದಲ್ಲಿ ಮಿಂಚಿದ್ದ, ಲಿಯಾ ಸೆಡಾಕ್ಸ್ ಈಗ 'ನೋ ಟೈಮ್ ಟು ಡೈ'ನಲ್ಲೂ ಮುಂದುವರೆದಿದ್ದಾರೆ.
Published by:Anitha E
First published: