• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Puneeth Rajkumar: ರಾಜಕಾರಣಿಗಳೇ ಇದ್ದಾರೆ ಅಪ್ಪು ಫೋಟೋನೇ ಇಲ್ಲ! ಪುನೀತ್​ ರಸ್ತೆ ನಾಮಕರಣ ಕಾರ್ಯಕ್ರಮದ ಫ್ಲೆಕ್ಸ್​ ನೋಡಿ ಅಭಿಮಾನಿಗಳ ಆಕ್ರೋಶ

Puneeth Rajkumar: ರಾಜಕಾರಣಿಗಳೇ ಇದ್ದಾರೆ ಅಪ್ಪು ಫೋಟೋನೇ ಇಲ್ಲ! ಪುನೀತ್​ ರಸ್ತೆ ನಾಮಕರಣ ಕಾರ್ಯಕ್ರಮದ ಫ್ಲೆಕ್ಸ್​ ನೋಡಿ ಅಭಿಮಾನಿಗಳ ಆಕ್ರೋಶ

ಕಾರ್ಯಕ್ರಮದಲ್ಲಿ ಪುನೀತ್ ಫೋಟೋ ಇಲ್ಲ

ಕಾರ್ಯಕ್ರಮದಲ್ಲಿ ಪುನೀತ್ ಫೋಟೋ ಇಲ್ಲ

ಕಾರ್ಯಕ್ರಮಕ್ಕಾಗಿ ದೊಡ್ಡ ಫ್ಲೆಕ್ಸ್​ ಹಾಕಿದ್ದೀರಾ ಆದ್ರೆ, ಯಾರಿಗೋಸ್ಕರ ಕಾರ್ಯಕ್ರಮ ಮಾಡಲಾಗುತ್ತಿದೆಯೋ ಅವರ ಫೋಟೋವನ್ನೇ ಹಾಕಿಲ್ಲ ಎಂದು ಪುನೀತ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

  • News18 Kannada
  • 2-MIN READ
  • Last Updated :
  • Karnataka, India
  • Share this:

ನಟ ಪುನೀತ್ ರಾಜ್​ಕುಮಾರ್ (Puneeth Rajkumar) ನಿಧನರಾಗಿ ವರ್ಷಗಳೇ  ಕಳೆದು ಹೋಗಿದೆ. ಅಪ್ಪುವನ್ನು ಅಭಿಮಾನಿಗಳು (Appu Fans) ಮನದಲ್ಲಿಟ್ಟು ಪೂಜೆ ಮಾಡ್ತಿದ್ದಾರೆ. ಪುನೀತ್ ರಾಜ್​ಕುಮಾರ್​ ಅವರನ್ನು ಹಲವು ರೀತಿಗಳನ್ನು ನೆನಪು ಮಾಡಿಕೊಳ್ತಿದ್ದಾರೆ.  ರಸ್ತೆ, ಸರ್ಕಲ್​ ಹಾಗೂ ಪಾರ್ಕ್​ಗಳಿಗೂ ಪುನೀತ್ ರಾಜ್​ಕುಮಾರ್ ಅವರ ಹೆಸರನ್ನು ಇಡಲಾಗುತ್ತಿದೆ. ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್ ಹೆಸರಿಡಲು (Puneeth Name) ನಿರ್ಧರಿಸಿದ್ದು, ಇಂದು (ಫೆ.07) ಉದ್ಘಾಟನಾ ಕಾರ್ಯಕ್ರಮ ಕೂಡ ನಡೆಯಲಿದೆ. ಆದ್ರೆ  ಕಾರ್ಯಕ್ರಮದ ಫ್ಲೆಕ್ಸ್​ ನಲ್ಲಿ (Flex) ಪುನೀತ್​ ಫೋಟೋನೇ ಇಲ್ಲ. ರಾಜಕಾರಣಿಗಳ ಫೋಟೋಗಳೇ ರಾರಾಜಿಸುತ್ತಿದೆ.


ಎಲ್ಲಿದೆ ಪುನೀತ್ ರಾಜ್​ಕುಮಾರ್​ ಫೋಟೋ!?


ಬೆಂಗಳೂರಿನ ರಿಂಗ್​ ರಸ್ತೆಗೆ ಪುನೀತ್ ಹೆಸರು ನಾಮಕರಣ ಮಾಡಲಾಗ್ತಿದೆ. ಕಾರ್ಯಕ್ರಮಕ್ಕಾಗಿಯೇ ಫ್ಲೆಕ್ಸ್ ಕೂಡ ರೆಡಿಯಾಗಿದೆ. ಆದ್ರೆ ಎಲ್ಲೂ ಪುನೀತ್ ಫೋಟೋನೇ ಕಾಣುತ್ತಿಲ್ಲ. ಬದಲಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಆರ್​ ಆಶೋಕ್​, ಸಂಸದ ತೇಜಸ್ವಿ ಸೂರ್ಯ ಹೆಸರೇ ರಾರಾಜಿಸುತ್ತಿದೆ. ಪುನೀತ್​ ಫೋಟೋ ಎಲ್ಲಿ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕ್ತಿದ್ದಾರೆ.




ಯಾರಿಗೋಸ್ಕರ ಕಾರ್ಯಕ್ರಮ ಮಾಡ್ತಿದ್ದೀರಾ? ಫ್ಯಾನ್ಸ್​ ಪ್ರಶ್ನೆ


ಕಾರ್ಯಕ್ರಮಕ್ಕಾಗಿ ದೊಡ್ಡ ಫ್ಲೆಕ್ಸ್​ ಹಾಕಿದ್ದೀರಾ ಆದ್ರೆ, ಯಾರಿಗೋಸ್ಕರ ಕಾರ್ಯಕ್ರಮ ಮಾಡಲಾಗುತ್ತಿದೆಯೋ ಅವರ ಫೋಟೋವನ್ನೇ ಹಾಕಿಲ್ಲ ಬರೀ ರಾಜಕಾರಣಿಗಳ ಫೋಟೋ ಮಾತ್ರ ಹಾಕಿದ್ದೀರಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಪುನೀತ್ ರಾಜ್​ಕುಮಾರ್ ಅವರ ಫೋಟೋವನ್ನು ಹಾಕಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.


ಸಂಜೆ ಸಿಎಂ ಬೊಮ್ಮಾಯಿ ಅವರಿಂದ ಉದ್ಘಾಟನೆ


ಇಂದು (ಫೆ.07) ಸಂಜೆ 6 ಗಂಟೆಗೆ ಪದ್ಮನಾಭನಗರದಲ್ಲಿ ಪದ್ಮನಾಭ ನಗರದ ವಾಜಪೇಯಿ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಉದ್ಘಾಟನಾ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಸ್ತೆಯನ್ನು ಉದ್ಘಾಟನೆ ಮಾಡಲಿದ್ದಾರೆ.




‘ಬಾನದಾರಿಯಲ್ಲಿ ಪುನೀತ್ ಪಯಣ’


ಈ ಕಾರ್ಯಕ್ರಮಕ್ಕೆ ಬಾನದಾರಿಯಲ್ಲಿ ಪುನೀತ್ ಪಯಣ ಎಂದು ಹೆಸರು ನೀಡಲಾಗಿದೆ. ಪದ್ಮನಾಭ ನಗರದ ವಾಜಪೇಯಿ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಉದ್ಘಾಟನೆ ಬಳಿಕ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ರಾಜೇಶ್ ಕೃಷ್ಣನ್ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ.


ಜಯನಗರ ಉದ್ಯಾನವನಕ್ಕೆ ಗಂಧದಗುಡಿ ಹೆಸರು


ಜಯನಗರದ (Jayanagar) ಈ ಉದ್ಯಾನವನಕ್ಕೆ ಅಪ್ಪು ನೆನಪಿಗಾಗಿ ಗಂಧದಗುಡಿ (Gandhada Gudi ) ಉದ್ಯಾನವನ ಅಂತ ಮರುನಾಮಕರಣ ಮಾಡಲಾಗಿದೆ. ಅಪ್ಪು ಅಭಿನಯದ (Appu) ಕೊನೆಯ ಚಿತ್ರ ಗಂಧದಗುಡಿ 100 ದಿನ ಪೂರೈಸಿದ ಹಿನ್ನೆಲೆ ಗಂಧದಗುಡಿ ಹಬ್ಬ ಆಚರಣೆ ಮಾಡಲಾಯಿತು. ಕನ್ನಡಿಗರ ಹೆಮ್ಮೆಯ ಅರಸು, ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ (Puneeth Rajkumar)​ ನಮ್ಮನ್ನೆಲ್ಲ ಅಗಲಿ ವರ್ಷವೇ ಉರುಳಿದರೂ ಅವರ ನೆನಪುಗಳು ಮಾತ್ರ ಇಂದಿಗೂ ಮಾಸಿಲ್ಲ. ಗಂಧದಗುಡಿ ಚಿತ್ರದ ಮೂಲಕ ಹಸಿರೇ ಉಸಿರು ಅಂತಾ ಸಂದೇಶ ಸಾರಿ ಮರೆಯಾದ ಬೆಟ್ಟದ ಹೂವಿಗೆ ವಿಶೇಷ ನಮನ ಸಂದಿದೆ. ಪರಿಸರ ಪ್ರೀತಿಯ ಸಂದೇಶ ಸಾರಿದ ಅಪ್ಪು ಹೆಸರಲ್ಲಿ ಗಂಧದಗುಡಿ ಹಬ್ಬ ಆಚರಿಸಿ ಪರಿಸರದ ಪಾಠ ಪಸರಿಸಲಾಯ್ತು.



ರೇಸ್​ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರು?


ರೇಸ್​ಕೋರ್ಸ್ ರಸ್ತೆಗೆ ಅಂಬರೀಷ್ ಅವರ ಹೆಸರು ಇಡಬೇಕು ಎಂಬುದು ಅವರ ಅಭಿಮಾನಿಗಳ ಕೋರಿಕೆ. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಮಾತನಾಡಿರುವ ಅಶೋಕ್ ಅವರು, ‘ಅಂಬರೀಷ್ ಅವರಿಗೂ ರೇಸ್​ಕೋರ್ಸ್​ ರಸ್ತೆಗೂ ಅವಿನಾಭಾವ ಸಂಬಂಧ ಇದೆ. ಈ ರಸ್ತೆಗೆ ಅಂಬರೀಷ್ ಹೆಸರು ಇಡಬೇಕು ಎಂಬ ಕೋರಿಕೆ ಬಂದಿದೆ.

Published by:ಪಾವನ ಎಚ್ ಎಸ್
First published: