ಅಂದು ನೋ ಸ್ಮೋಕಿಂಗ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಬಾಲನಟಿ ಇಂದು ಬರ್ಕ್ಲಿ ಚಿತ್ರದ ನಾಯಕಿ..!

ನೋ ಸ್ಮೋಕಿಂಗ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಬಾಲನಟಿ ಸಿಮ್ರನ್ ನಾಟೇಕರ್ ಸಂತೋಷ್‍ಗೆ ನಾಯಕಿ. ಮೂಲತಃ ಮುಂಬೈನವರಾದ ಸಿಮ್ರನ್ ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಈಗ ಬರ್ಕ್ಲಿ ಮೂಲಕ ಸಿನಿಜರ್ನಿ ಪ್ರಾರಂಭಿಸಿದ್ದಾರೆ. 

ನಟಿ ಸಿಮ್ರನ್ ನಾಟೇಕರ್

ನಟಿ ಸಿಮ್ರನ್ ನಾಟೇಕರ್

  • Share this:
ಧೂಮಪಾನ ಆರೋಗ್ಯಕ್ಕೆ ಮಾರಕ, ಧೂಮಪಾನದಿಂದ ದೂರವಿರಿ ಎಂದು ಥಿಯೇಟರ್​​ಗಳಲ್ಲಿ ಸಿನಿಮಾ ಪ್ರದರ್ಶನಕ್ಕೂ ಮುನ್ನ ಸರ್ಕಾರದ ಜಾಹೀರಾತಿನಲ್ಲಿ ಹುಡುಗಿಯೊಬ್ಬಳು ತನ್ನ ತಂದೆಗೆ ತಿಳಿಸುವುದನ್ನು ನೋಡಿರುತ್ತೀರಿ. ಕಳೆದ ಹಲವು ವರ್ಷಗಳಿಂದ ಕನ್ನಡ ಮಾತ್ರವಲ್ಲ, ಬಹುತೇಕ ಭಾರತದ ಎಲ್ಲ ಭಾಷೆಯ ಸಿನಿಮಾಗಳ ಪ್ರದರ್ಶನದ ವೇಳೆಯೂ ಈ ಜಾಹೀರಾತು ದೇಶಾದ್ಯಂತ ಎಲ್ಲ ಥಿಯೇಟರ್​ಗಳಲ್ಲೂ ಪ್ರದರ್ಶನವಾಗುತ್ತಾ ಬಂದಿದೆ. ಈಗ ಅಪ್ಪನಿಗೆ ಬುದ್ಧಿ ಹೇಳಿದ ಆ ಬಾಲನಟಿಯೇ ಕನ್ನಡದ ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ವಿಶೇಷ ಅಂದರೆ ಆ ಚಿತ್ರದ ಹೆಸರೇ ಬರ್ಕ್ಲಿ.

ಹೌದು,ಬರ್ಕ್ಲಿ ಸಿಗರೇಟ್ ಬ್ರ್ಯಾಂಡ್ ಅಲ್ವಾ ಅಂತ ನೀವೂ ಪ್ರಶ್ನಿಸಬಹುದು. ಆದರೆ ಇದು ಸಿನಿಮಾ ಟೈಟಲ್ ಅಷ್ಟೇ. ಇದಕ್ಕೆ ದಿ ರಿಂಗ್ ಮಾಸ್ಟರ್ ಎಂಬ ಟ್ಯಾಗ್‍ಲೈನ್ ಕೂಡ ಇದೆ. ಕೆಂಪ, ಗಣಪ, ಕರಿಯ 2 ಚಿತ್ರಗಳ ಖ್ಯಾತಿಯ ಸಂತೋಷ್ ಬಾಲರಾಜ್ ಈ ಚಿತ್ರದ ನಾಯಕ. 2017ರಲ್ಲಿ ಕರಿಯ 2 ಚಿತ್ರದ ಬಳಿಕ ನಾಲ್ಕು ವರ್ಷಗಳ ಗ್ಯಾಪ್‍ನ ನಂತರ ಸಂತೋಷ್ ಬಾಲರಾಜ್ ಹೊಚ್ಚ ಹೊಸ ಆಕ್ಷನ್ ಎಂಟರ್‍ಟೈನರ್ ಮೂಲಕ ಮತ್ತೆ ವಾಪಸಾಗಿದ್ದಾರೆ. ನೋ ಸ್ಮೋಕಿಂಗ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಬಾಲನಟಿ ಸಿಮ್ರನ್ ನಾಟೇಕರ್ ಸಂತೋಷ್‍ಗೆ ನಾಯಕಿ. ಮೂಲತಃ ಮುಂಬೈನವರಾದ ಸಿಮ್ರನ್ ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಈಗ ಬರ್ಕ್ಲಿ ಮೂಲಕ ಸಿನಿಜರ್ನಿ ಪ್ರಾರಂಭಿಸಿದ್ದಾರೆ.

Karnataka Politics: ರಾಜ್ಯ ಬಿಜೆಪಿಯಲ್ಲಿ ಅನುದಾನಕ್ಕಾಗಿ ಹಿರಿಯ ನಾಯಕರ ನಡುವೆ ಕಿತ್ತಾಟ

ಈ ಚಿತ್ರಕ್ಕೆ ವಸಿಷ್ಠ ಸಿಂಹ ನಾಯಕನಾಗಿದ್ದ ಕಾಲಚಕ್ರ ಚಿತ್ರದ ಖ್ಯಾತಿಯ ಸುಮಂತ್ ಕ್ರಾಂತಿ ಆಕ್ಷನ್ ಕಟ್ ಹೇಳಿದ್ದಾರೆ. ಆಕ್ಷನ್ ಎಂಟರ್‍ಟೈನರ್ ಆಗಿರುವ ಬರ್ಕ್ಲಿ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ಸುಮಂತ್ ಕ್ರಾಂತಿಯವರೇ ನಿಭಾಯಿಸಿದ್ದಾರೆ. ಸಂತೋಷ್ ಎಂಟರ್‍ಪ್ರೈಸಸ್ ಬ್ಯಾನರ್​ನಲ್ಲಿ ಆನೇಕಲ್ ಬಾಲರಾಜ್ ನಿರ್ಮಿಸುತ್ತಿರುವ ಬರ್ಕ್ಲಿ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಈ ಹಿಂದೆ ಕರಿಯ, ಕರಿಯ 2, ಗಣಪ ಸಿನಿಮಾಗಳನ್ನು ನಿರ್ಮಿಸಿದ್ದ ಅವರು ಈಗ ಬರ್ಕ್ಲಿ ಚಿತ್ರಕ್ಕೆ ಹಣ ಹಾಕಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದ್ದು ಕೆಲವೇ ದಿನಗಳಲ್ಲಿ ಚಿತ್ರದ ಮೊದಲ ಪ್ರತಿ ಸಿದ್ಧವಾಗಲಿದೆ.

ಸಂತೋಷ್ ಬಾಲರಾಜ್ ಹಾಗೂ ಸಿಮ್ರನ್ ನಾಟೇಕರ್ ಜೊತೆಗೆ ಬಹುಭಾಷಾ ನಟ ಚರಣ್ ರಾಜ್, ಖ್ಯಾತ ನಟಿ ಶ್ರುತಿ, ಬಲ ರಾಜವಾಡಿ, ಬುಲೆಟ್ ಪ್ರಕಾಶ್ ಕೂಡ ಬರ್ಕ್ಲಿ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಬಹದ್ದೂರ್ ಚೇತನ್ ಕುಮಾರ್, ಅಭಿ ಕನಸಿನ ಕವನ ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನದಲ್ಲಿ ಬರ್ಕ್ಲಿ ಮೂಡಿಬರಲಿದೆ. ಕೃಷ್ಣ ಕುಮಾರ್ ಹಾಗೂ ಎನ್ ಎಂ ಸೂರಿ ಛಾಯಾಗ್ರಹಣ, ಅಮಿತ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಮಾಸ್ಟರ್ ಅವರ ನೃತ್ಯ ನಿರ್ದೇಶನ ಬರ್ಕ್ಲಿ ಚಿತ್ರಕ್ಕಿದೆ.
Published by:Latha CG
First published: