news18-kannada Updated:June 15, 2020, 10:04 AM IST
ಸಪ್ನಾ ಜೋತೆ ಧೋನಿ, ಸುಶಾಂತ್
ಸುಶಾಂತ್ ಸಿಂಗ್ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ಭಾರೀ ಚರ್ಚೆ ಆಗುತ್ತಿದೆ. ಅವರು ಖಿನ್ನತೆಗೆ ಒಳಗಾಗಿದ್ದು ಸತ್ಯ ಎಂಬುದು ಬಾಲಿವುಡ್ ಮಂದಿ ಮಾಡಿದ ಟ್ವೀಟ್ನಿಂದ ಖಚಿತವಾಗಿದೆ. ಆದರೆ, ಅವರು ಯಾವ ವಿಚಾರಕ್ಕೆ ಖಿನ್ನತೆಗೆ ಒಳಗಾಗಿದ್ದರು ಎನ್ನುವುದು ಇನ್ನೂ ಹೊರ ಬಿದ್ದಿಲ್ಲ. ಈ ಮಧ್ಯೆ, ಸುಶಾಂತ್ ಎದುರಿಸುತ್ತಿದ್ದ ಕಷ್ಟದ ದಿನಗಳಲ್ಲಿ ಯಾರೂ ಅವರ ಸಹಾಯಕ್ಕೆ ನಿಂತಿರಲಿಲ್ಲ ಎನ್ನುವ ವಿಚಾರ ಬಹಿರಂಗಗೊಂಡಿದೆ.
ಸುಶಾಂತ್ ತುಂಬಾನೇ ಕಷ್ಟಪಟ್ಟು ಬಣ್ಣದ ಲೋಕಕ್ಕೆ ಕಾಲಿಟ್ಟವರು. ಅವರು ಈ ಮಟ್ಟಕ್ಕೆ ಬರಲು ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದಾರೆ. ನಂತರ ಸೀರಿಯಲ್ ಹಾಗೂ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದರು. ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಂತರವಂತೂ ಅವರ ಖ್ಯಾತಿ ಮತ್ತಷ್ಟು ಹೆಚ್ಚಿತ್ತು.
ಆದರೆ, ಇತ್ತೀಚಿನ ವರ್ಷಗಳಲ್ಲಿ ಸುಶಾಂತ್ ತುಂಬಾನೇ ನೋವು ಅನುಭವಿಸಿದ್ದರು ಎನ್ನಲಾಗಿದೆ. ಅದು ಯಾವ ವಿಚಾರಕ್ಕೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ, ಅವರು ತುಂಬಾನೇ ಖಿನ್ನತೆಗೆ ಒಳಗಾಗಿದ್ದರು ಎಂಬುದಂತೂ ಸತ್ಯ. ಯಾರ ಜೊತೆಯೂ ಅವರು ಸರಿಯಾಗಿ ಮಾತನ್ನೂ ಕೂಡ ಆಡುತ್ತಿರಲಿಲ್ಲವಂತೆ. ಅವರು ಮೃತಪಟ್ಟ ನಂತರ ಬಾಲಿವುಡ್ ಮಂದಿ ಬೇಸರ ಹೊರ ಹಾಕಿದ್ದರು. ಬಹಳ ಚಿಕ್ಕ ವಯಸ್ಸಿಗೆ ನೀವು ನಮ್ಮನ್ನು ಬಿಟ್ಟು ಹೋದಿರಿ ಎಂದಿದ್ದಾರೆ.
ಇದನ್ನೂ ಓದಿ: ಸುಶಾಂತ್ ಸಾವಿಗೂ 6 ದಿನ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದರು ಅವರ ಮಾಜಿ ಮ್ಯಾನೇಜರ್ ದಿಶಾ
ಸೆಲೆಬ್ರಿಟಿಗಳು ಟ್ವೀಟ್ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಕೇಶ ವಿನ್ಯಾಸಕಿ ಸಪ್ನಾ ಭವಾನಿ ಕಿಡಿಕಾರಿದ್ದಾರೆ. ಅವರು ಕಷ್ಟವಿದ್ದಾಗ ಯಾರೂ ಸಹಾಯಕ್ಕೆ ಬಂದಿರಲಿಲ್ಲ. ಈಗ ಕಣ್ಣೀರು ಹಾಕುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಸುಶಾಂತ್ ಕಷ್ಟದ ದಿನಗಳನ್ನು ಎದುರಿಸುತ್ತಿದ್ದರು ಎಂಬುದು ಗೊತ್ತಿಲ್ಲದ ವಿಚಾರ ಏನಲ್ಲ. ಆದರೆ, ಸಿನಿಮಾ ಇಂಡಸ್ಟ್ರಿಯ ಯಾರೊಬ್ಬರೂ ಅವರ ಸಹಾಯಕ್ಕೆ ನಿಂತಿರಲಿಲ್ಲ. ಆದರೆ, ಇಂದು ಅವರೆಲ್ಲರೂ ಟ್ವೀಟ್ ಮಾಡುತ್ತಿದ್ದಾರೆ. ಸುಶಾಂತ್ ಇಲ್ಲಿ ನಿನ್ನ ಗೆಳೆಯರಾಗಿ ಯಾರೊಬ್ಬರೂ ಇರಲಿಲ್ಲ ಎಂದು ಸಪ್ನಾ ಬರೆದುಕೊಂಡಿದ್ದಾರೆ. ಈ ಮೂಲಕ ಅವರು ಏಕಾಂಗಿ ಆಗಿದ್ದರು ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.
Published by:
Rajesh Duggumane
First published:
June 15, 2020, 10:04 AM IST