Kangana Ranaut: ನನ್ನ ಫ್ರೆಂಡ್ಸ್ ಆಗುವ ಯೋಗ್ಯತೆ ಬಾಲಿವುಡ್ಗಿಲ್ಲ! ಹೀಗೆಂದಿದ್ದೇಕೆ ಕ್ವೀನ್ ಕಂಗನಾ?

Bollywood: ಬಾಲಿವುಡ್‌ನಿಂದ ಯಾರೂ ಈ ಸೇವೆಗೆ ಅರ್ಹರಲ್ಲ. ನೀವು ಅವರನ್ನು ಹೊರಗೆ ಭೇಟಿಯಾದರೆ ಒಳ್ಳೆಯದು ಆದರೆ ಅವರನ್ನು ಮನೆಗೆ ಆಹ್ವಾನಿಸಬೇಡಿ

ನಟಿ ಕಂಗನಾ ರಾಣಾವತ್

ನಟಿ ಕಂಗನಾ ರಾಣಾವತ್

  • Share this:
ಕಂಗನಾ ರಣಾವತ್ (Kangana Ranaut) ತಮ್ಮ ಹರಿತವಾದ ಮಾತುಗಳಿಗೆ ಫೇಮಸ್, ಯಾವುದೇ ಕಾರ್ಯಕ್ರಮ ಅಥವಾ ಸಂದರ್ಶನವಿರಲಿ (Interview) ವಿವಾದಾತ್ಮಕ ಹೇಳಿಕೆ ನೀಡದೆ ಇರುವುದಿಲ್ಲ. ವಿಶೇಷವಾಗಿ ಬಾಲಿವುಡ್ (Bollywood) ಸೆಲೆಬ್ರಿಟಿಗಳ ಬಗ್ಗೆ ಮಾತನಾಡುವಾಗ ಕಂಗನಾ ರಣಾವತ್ ತಮ್ಮ ಮಾತುಗಳನ್ನು ಎಂದಿಗೂ ಕಡಿಮೆ ಮಾಡುವುದಿಲ್ಲ ಎನ್ನುವುದು ಸತ್ಯ. ಇದೀಗ ಮತ್ತೊಂದು ಹೇಳಿಕೆ ನೀಡಿದ್ದಾರೆ. ಇಂಡಸ್ಟ್ರಿಯಿಂದ ಯಾರೂ ತನ್ನ ಮನೆಗೆ ಭೇಟಿ ನೀಡಲು ಅರ್ಹರಲ್ಲ ಎಂದು ಹೇಳುವ ಮೂಲಕ ವಿವಾದವನ್ನು ತಲೆಮೇಲೆ ಎಳೆದುಕೊಂಡಿದ್ದಾರೆ.

ಇತ್ತೀಚೆಗೆ ಕರ್ಲಿ ಟೇಲ್ಸ್‌ನೊಂದಿಗಿನ ಚಾಟ್‌ನಲ್ಲಿ, ಆಕೆ ತನ್ನ ಮನೆಗೆ ಆಹ್ವಾನಿಸಲು ಇಷ್ಟಪಡುವ ಚಿತ್ರರಂಗದ ಮೂರು ಜನರನ್ನು ಹೆಸರು ಹೇಳಲು ಕೇಳಲಾಯಿತು. ಆಗ ಅದಕ್ಕೆ ಉತ್ತರವಾಗಿ "ಬಾಲಿವುಡ್ ಸೇ ತೋ ಈಸ್ ಸೇವಾ ಕೇ ಲಾಯಕ್ ಕೋಯಿ ಭೀ ನಹೀ ಹೈ. ಘರ್ ತೋ ಬುಲಾವೋ ಹೈ ನಹೀ ಬಿಲ್ಕುಲ್ ಭಿ. ಬಹರ್ ಕಹೀಂ ಮಿಲ್ಲೋ ತೋ ಥಿಕ್ ಹೈ ಘರ್ ಮತ್ ಬುಲಾವೋ (ಬಾಲಿವುಡ್‌ನಿಂದ ಯಾರೂ ಈ ಸೇವೆಗೆ ಅರ್ಹರಲ್ಲ. ನೀವು ಅವರನ್ನು ಹೊರಗೆ ಭೇಟಿಯಾದರೆ ಒಳ್ಳೆಯದು ಆದರೆ ಅವರನ್ನು ಮನೆಗೆ ಆಹ್ವಾನಿಸಬೇಡಿ) ಎಂದಿದ್ದಾರೆ.
View this post on Instagram


A post shared by Curly Tales (@curly.tales)


ನನ್ನ ಗೆಳೆಯರಾಗಲು ಬಾಲಿವುಡ್ ಮಂದಿಗೆ ಯೋಗ್ಯತೆ ಇಲ್ಲ

ಬಾಲಿವುಡ್‌ನಲ್ಲಿ ನಿಮಗೆ ಒಬ್ಬರೂ ಈ ಗೆಳೆಯರು ಇಲ್ಲವೇ ಎಂಬ ಪ್ರಶ್ನೆಗೆ ಕಂಗನಾ, "ನಹೀ ನಹೀ, ಬಿಲ್ಕುಲ್ ನಹೀ, ಮೇರೆ ದೋಸ್ತ್ ಬನ್ನೆ ಲಾಯಕ್ ಹೈ ನಹಿ ಯೇ ಲೋಗ್. ಕ್ವಾಲಿಫಿಕೇಶನ್ ಚಾಹಿಯೇ ಹೋತಿ ಹೈ ಉಸ್ಕೆ ಲಿಯೇ (ಎಲ್ಲವೂ ಅಲ್ಲ, ಈ ಜನರು ಯೋಗ್ಯರಲ್ಲ.ನನ್ನ ಸ್ನೇಹಿತರಾಗಲು ಅರ್ಹತೆಯ ಅಗತ್ಯವಿದೆ) ಎಂದು ಮತ್ತೆ ಬಾಲಿವುಡ್ ಮಂದಿಯನ್ನು ಕೆಣಕಿದ್ದಾರೆ ಎನ್ನಬಹುದು.

ಇನ್ನು ಇತ್ತೀಚೆಗೆ ಸಲ್ಮಾನ್ ಖಾನ್, ಕಂಗನಾ ಅವರ ಧಾಕಡ್ ಚಿತ್ರಕ್ಕೆ ಬೆಂಬಲ ನೀಡಿ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಮಾಡಿದ್ದು, ಸೂಪರ್‌ಸ್ಟಾರ್‌ನ ಬೆಂಲ ನೋಡಿ ಸಂತೋಷಗೊಂಡಿದ್ದ ಕಂಗನಾ ಈಗ ಇಂಡಸ್ಟ್ರಿಯಲ್ಲಿ ಯಾರೂ ನನ್ನವರಿಲ್ಲ ಇಲ್ಲ ಎಂದು ಹೇಳುವುದಿಲ್ಲ ಎಂದು ಕಂಗನಾ ಸಲ್ಮಾನ್‌ಗೆ ಭರವಸೆ ನೀಡಿದ್ದರು. ಆದರೆ ಇದೀಗ ಈ ರೀತಿ ಹೇಳಿಕೆ ನೀಡಿದ್ದು, ಕಂಗನಾ ರಣಾವತ್ ಅವರ ಈ ನಿಷ್ಠುರ ಹೇಳಿಕೆಯನ್ನು ಸಲ್ಮಾನ್ ಒಪ್ಪುತ್ತಾರಾ, ಯಾವ ರೀತಿ ಪ್ರತಿಕ್ರಿಯೆ ನೀಡಬಹುದು ಎಂದು ಅಂದಾಜಿಸಲಾಗುತ್ತಿದೆಯಂತೆ.

ಇನ್ನು ಈ ಬಾರಿ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಮನೆಯಲ್ಲಿ ನಡೆದ ಈದ್ ಪಾರ್ಟಿಗೆ ಸಹ ಸಲ್ಮಾನ್ ಖಾನ್ ಕಂಗನಾ ಅವರನ್ನು ಆಹ್ವಾನಿಸಿದ್ದರು . ಅಲ್ಲದೇ ನಟಿ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವುದನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ರು.

ಇದನ್ನೂ ಓದಿ: ಬಾಲಿವುಡ್‌ ಶೋ ಮ್ಯಾನ್‌ಗೆ 50 ವರುಷ! ಸದಾ ಇರಲಿ 'ಖುಷಿ with Karan' ಎಂದ ಫ್ಯಾನ್ಸ್

ಪ್ರತಿ ಬಾರಿ ಸ್ಟಾರ್ ಕಿಡ್ಸ್​ಗಳ ಬಗ್ಗೆ ಮಾತನಾಡುವ ಕಂಗನಾ ರಣಾವತ್ ಇತ್ತೀಚೆಗೆ ತಮ್ಮ ಧಾಕಡ್ ಚಿತ್ರದ ಪ್ರಚಾರಕ್ಕೆ ಹೋದಾಗ ಅನನ್ಯಾ ಪಾಂಡೆಯನ್ನು ಬಾಲಿವುಡ್‌ನ ಬಿಂಗೋ ಎಂದು ಕರೆಯುವ ಮೂಲಕ ಲೇವಡಿ ಮಾಡಿದ್ದರು.

ಮಕಾಡೆ ಮಲಗಿದ ಧಾಕಡ್​ 

ಇನ್ನು ಇತ್ತೀಚೆಗೆ ತೆರೆಕಂಡ ಕಂಗನಾ ಅವರ ಧಾಕಡ್ ಚಿತ್ರ ಮಕಾಡೆ ಮಲಗಿದ್ದು, ಒಬ್ಬೇ ಒಬ್ಬರೂ ಪ್ರೇಕ್ಷಕರಿಲ್ಲದ ಕಾರಣ ಕೆಲವೆಡೆ ಬೇರೆ ಚಿತ್ರಗಳನ್ನು ಹಾಕಲಾಗಿದೆ. ಧಾಕಡ್ ಸಿನಿಮಾ ಬಗ್ಗೆ ಕಂಗನಾ ಅಭಿಮಾನಿಗಳು ಸಹ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು, ಪ್ರಚಾರ ಕಾರ್ಯವನ್ನು ಸಹ ಭರದಿಂದ ಮಾಡಲಾಗಿತ್ತು. ಸಾಮಾಜಿಕ ಜಾಲಾತಾಣದಿಂದ ಹಿಡಿದು ರಿಯಾಲಿಟಿ ಶೊಗಳ ಮೂಲಕ ಸಹ ಈ ಚಿತ್ರವನ್ನು ಮಾಡಿದ್ದ ಕಂಗನಾಗೆ ಈ ಕಳಪೆ ಪ್ರದರ್ಶನದ ಸುದ್ದಿ ನಿಜಕ್ಕೂ ಬೇಸರ ಮೂಡಿಸಿದೆ.

ಇದನ್ನೂ ಓದಿ: ಕ್ವೀನ್​' ಕಂಗನಾ ಸಿನಿಮಾಗೆ ಇದೆಂಥಾ ಸೋಲು, ಮಕಾಡೆ ಮಲಗಿದ 'ಧಾಕಡ್'!​

ಈ ಚಿತ್ರದ ಬಗ್ಗೆ ಬಹಳ ಕನಸನ್ನು ಹೊಂದಿದ್ದ ಕಂಗನಾ ಪ್ರಚಾರಕ್ಕಾಗಿಯೇ ಬಹಳಷ್ಟು ಸಮಯವನ್ನು ಮೀಸಲಿಟ್ಟು ಕೆಲಸ ಮಾಡಿದ್ದರು. ಎಷ್ಟು ಸಾಧ್ಯವೋ ಅಷ್ಟು ಈ ಪ್ರಚಾರದ ಬಗ್ಗೆ ಹೆಚ್ಚು ಗಮನ ನೀಡಿದ್ದ ನಟಿ, ಪ್ರಚಾರ ಕಾರ್ಯದ ವೇದಿಕೆಯ ಮೇಲೆ ಸಹ ವಿವಾದಿತ ಹೇಳಿಕೆಗಳನ್ನು ನೀಡಿ, ಸುದ್ದಿಯಲ್ಲಿದ್ದರು. ಚಿತ್ರಕ್ಕೆ ಸಂಬಂಧಪಟ್ಟ ಹೇಳಿಕೆ ಅಲ್ಲದಿದ್ದರೂ ಸಹ ಈ ಎಲ್ಲಾ ಹೇಳಿಕೆಗಳು ಚಿತ್ರವನ್ನು ಗೆಲ್ಲಿಸಲು ಸಹಾಯ ಮಾಡುತ್ತದೆ ಎಂದು ಚಿತ್ರತಂಡ ಅಂದಾಜಿಸಿತ್ತು. ಪ್ರಚಾರ ಕಾರ್ಯಕ್ಕೆ ಯಾವುದೇ ಕಡಿಮೆ ಆಗದಂತೆ ನೋಡಿಕೊಂಡಿದ್ದರೂ ಸಹ ಚಿತ್ರದ ಕಳಪೆ ಪ್ರದರ್ಶನ ಎಲ್ಲಾ ಕೆಲಸದ ಮೇಲೆ ತಣ್ಣೀರು ಎರೆಚಿದಂತೆ ಆಗಿದೆ.
Published by:Sandhya M
First published: