Shah Rukh Khan ಪುತ್ರನ ವಿರುದ್ಧ NCBಗೆ ಸಾಕ್ಷ್ಯವೇ ಸಿಕ್ಕಿಲ್ವಂತೆ! ತಪ್ಪೇ ಮಾಡಿಲ್ವ ಆರ್ಯನ್ ಖಾನ್?

ಬಾಲಿವುಡ್ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್ ಖಾನ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ಆರ್ಯನ್ ಬಳಿ ಯಾವುದೇ ಮಾದಕ ದ್ರವ್ಯ ಇರಲಿಲ್ಲ ಅಂತ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ತಿಳಿಸಿದೆ. ಹಾಗಿದ್ದರೆ ಆರ್ಯನ್ ತಪ್ಪೇ ಮಾಡಿರಲಿಲ್ವಾ? ಈ ಕೇಸ್‌ನಲ್ಲಿ ಪಾರಾಗ್ತಾರಾ ಶಾರುಖ್ ಪುತ್ರ?

ಆರ್ಯನ್ ಖಾನ್

ಆರ್ಯನ್ ಖಾನ್

  • Share this:
ಮುಂಬೈ: ಬಾಲಿವುಡ್ ಬಾದ್‌ ಶಾ (Bollywood Bad Shah), ಕಿಂಗ್ ಖಾನ್ (King Khan), ಖ್ಯಾತ ನಟ ಶಾರುಖ್ ಖಾನ್ (Shahrukh Khan) ಪುತ್ರ ಆರ್ಯನ್ ಖಾನ್‌ಗೆ (Aryan Khan) ಇಂದು ಬಿಗ್ ರಿಲೀಫ್ (Relief) ಸಿಕ್ಕಿದೆ. ಡ್ರಗ್ಸ್​ (Drugs) ಪ್ರಕರಣದಲ್ಲಿ ಬಂಧಿತನಾಗಿ ಬಿಡುಗಡೆಯಾಗಿರುವ ಆರ್ಯನ್​ ಖಾನ್, ಇದೀಗ ಇದೇ​ ಪ್ರಕರಣದಿಂದಲೇ ಖುಲಾಸೆಯಾಗುವ ಸಾಧ್ಯತೆ ಇದೆ. ಪ್ರಕರಣದ ತನಿಖೆ ನಡೆಸಿದ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳ (Narcotics Control Bureau) ಅಥವಾ ಎನ್​ಸಿಬಿ (NCB) ತಂಡ ವರದಿ ಪ್ರಕಟಿಸಲಿದ್ದು, ಅದರಲ್ಲಿ ಶಾರುಖ್​ ಪುತ್ರ ಆರ್ಯನ್​ ಖಾನ್​ಗೆ ಕ್ಲೀನ್​ಚಿಟ್ (Clean Chit)​ ನೀಡಿದೆ ಎನ್ನಲಾಗ್ತಿದೆ.

 ಆರ್ಯನ್ ಡ್ರಗ್ಸ್ ಕೇಸ್ ಕುರಿತಂತೆ ಎನ್‌ಸಿಬಿ ವರದಿ

ಆರ್ಯನ್ ಖಾನ್ ಡ್ರಗ್ಸ್ ಕೇಸ್ ಸಂಬಂಧ ಎನ್‌ಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು. ಇದೀಗ ಎನ್‌ಸಿಬಿ ಅಧಿಕಾರಿಗಳು ಆರ್ಯನ್‌ಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ದಾಳಿ ವೇಳೆ ಆರ್ಯನ್​ ಖಾನ್​ ಬಳಿ ಡ್ರಗ್ಸ್​ ಪತ್ತೆಯಾಗಿಲ್ಲ. ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಸಿಂಡಿಕೇಟ್​ನ ಭಾಗವಾಗಿದ್ದರು ಎಂಬ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಎಸಿಬಿ ವರದಿಯಲ್ಲಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.  ಹೀಗಾಗಿ ಆರ್ಯನ್​ ಖಾನ್​ ಈ ಪ್ರಕರಣದಲ್ಲಿ ನಿರ್ದೋಷಿಯಾಗಿ ಹೊರಬರುವುದು ಬಹುತೇಕ ಪಕ್ಕಾ ಆಗಿದೆ.

ಎನ್‌ಸಿಬಿ ಅಧಿಕಾರಿಗಳ ತನಿಖಾ ವರದಿಯಲ್ಲಿ ಏನಿದೆ?

ಆರ್ಯನ್ ಖಾನ್ ಎಂದಿಗೂ ಡ್ರಗ್ಸ್ ಜೊತೆ ಸಂಬಂಧ ಹೊಂದಿರಲಿಲ್ಲ. ಆದ್ದರಿಂದ ಅವರ ಫೋನ್ ತೆಗೆದುಕೊಂಡು ಅವರ ಚಾಟ್‌ಗಳನ್ನು ಪರಿಶೀಲಿಸುವ ಅಗತ್ಯವಿಲ್ಲ. ಚಾಟ್‌ಗಳು ಆರ್ಯನ್ ಖಾನ್ ಯಾವುದೇ ಅಂತರಾಷ್ಟ್ರೀಯ ಸಿಂಡಿಕೇಟ್‌ನ ಭಾಗವಾಗಿದ್ದರು ಎಂದು ಸೂಚಿಸುವುದಿಲ್ಲ ಅಂತ ರಿಪೋರ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: IPL 2022: KKR ಪರ ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಂಡ ಶಾರುಖ್, ಜೂಹಿ ಚಾವ್ಲಾ ಮಕ್ಕಳು

ಎನ್‌ಸಿಬಿ ಕೈಪಿಡಿಯಿಂದ ಕಡ್ಡಾಯವಾಗಿ ದಾಳಿಯನ್ನು ವೀಡಿಯೊ-ರೆಕಾರ್ಡ್ ಮಾಡಲಾಗಿಲ್ಲ; ಮತ್ತು ಪ್ರಕರಣದಲ್ಲಿ ಬಂಧಿತರಾದ ಬಹು ಆರೋಪಿಗಳಿಂದ ವಶಪಡಿಸಿಕೊಂಡ ಡ್ರಗ್ಸ್ ಒಂದೇ ವಸೂಲಿ ಎಂದು ತೋರಿಸಲಾಗಿದೆ ಅಂತ ವರದಿಯಲ್ಲಿ ಇದೆ. ಈ ರೀತಿಯ ವರದಿಯನ್ನು ಮುಂಬೈ ಎಸ್‌ಐಟಿಗೆ ಎನ್‌ಸಿಬಿ ನೀಡಿದೆ ಎನ್ನಲಾಗುತ್ತಿದೆ.

ಇನ್ನೂ ಪೂರ್ಣಗೊಳ್ಳದ ಎಸ್ಐಟಿ ತನಿಖೆ

ಆರ್ಯನ್ ಖಾನ್ ಡ್ರಗ್ಸ್ ಕೇಸ್‌ಗೆ ಸಂಬಂಧಿಸಿದಂತೆ ನಿಯೋಜನೆಗೊಂಡಿದ್ದ ಎಸ್ಐಟಿ ಅಧಿಕಾರಿಗಳ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಅದು ತನ್ನ ಅಂತಿಮ ವರದಿಯನ್ನು ಎನ್‌ಸಿಬಿ ಡೈರೆಕ್ಟರ್ ಜನರಲ್ ಎಸ್‌ಎನ್ ಪ್ರಧಾನ್ ಅವರಿಗೆ ಸಲ್ಲಿಸುವಷ್ಟರಲ್ಲಿ ಇನ್ನೂ ಒಂದೆರಡು ತಿಂಗಳಾಗಬಹುದು. ಅಂತಿಮ ನಿರ್ಧಾರದ ಮೊದಲು ಕಾನೂನು ಅಭಿಪ್ರಾಯವನ್ನು ತೆಗೆದುಕೊಳ್ಳಲಾಗುವುದು ಅಂತ ಅಧಿಕಾರಿಗಳು ತಿಳಿಸಿದ್ದಾರೆ ಅಂತ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಕಳೆದ ಅಕ್ಟೋಬರ್‌ನಲ್ಲಿ ಆರ್ಯನ್ ಖಾನ್ ಬಂಧನ

ಕಳೆದ ವರ್ಷ ಅಕ್ಟೋಬರ್ 2ರಂದು ಡ್ರಗ್ಸ್ ಪಾರ್ಟಿ ಮೇಲೆ ಎನ್‌ಸಿಬಿ ದಾಳಿ ಮಾಡಿತ್ತು. ಮುಂಬೈನ ಗ್ರೀನ್ ಗೇಟ್‌ನಲ್ಲಿರುವ ಅಂತರಾಷ್ಟ್ರೀಯ ಕ್ರೂಸ್ ಟರ್ಮಿನಲ್‌ನಲ್ಲಿ ಕ್ರೂಸ್ ಹಡಗಿನ ಕಾರ್ಡೆಲಿಯಾ ಮೇಲೆ ದಾಳಿ ನಡೆಸಲಾಗಿತ್ತು. ಡ್ರಗ್ಸ್ ಪಾರ್ಟಿಯ ಖಚಿತ ಆಧಾರದ ಮೇಲೆ ಕಳೆದ ವರ್ಷ ಅಕ್ಟೋಬರ್ 2 ರ ರಾತ್ರಿ ಅಧಿಕಾರಿಗಳು ಮತ್ತು ಕೆಲವು ಸಾಕ್ಷಿಗಳ ತಂಡ ರೇಡ್ ಮಾಡಿತ್ತು.

ಆ ವೇಳೆ ಕ್ರೂಸ್ ಹಡಗಿನಿಂದ 13 ಗ್ರಾಂ ಕೊಕೇನ್, ಐದು ಗ್ರಾಂ ಮೆಫೆಡ್ರೋನ್, 21 ಗ್ರಾಂ ಗಾಂಜಾ, 22 ಎಂಡಿಎಂಎ (ಎಕ್ಸ್ಟಸಿ) ಮಾತ್ರೆಗಳು ಮತ್ತು ₹ 1.33 ಲಕ್ಷ ನಗದನ್ನು ಎನ್‌ಸಿಬಿ ವಶಪಡಿಸಿಕೊಂಡಿತ್ತು. ಈ ಪಾರ್ಟಿಯಲ್ಲಿ ಸ್ನೇಹಿತರ ಜೊತೆಗೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಹ ಇದ್ದ.

ಇದನ್ನೂ ಓದಿ: Kajal Aggarwal ಪ್ರೆಗ್ನೆನ್ಸಿ ವರ್ಕೌಟ್‌ ವಿಡಿಯೋ ನೋಡಿ! ಅಮ್ಮನಾಗುವ ಬಗ್ಗೆ ಆಕೆ ಹೇಳಿದ್ದೇನು?

ಪ್ರಕರಣದ ವಿಚಾರಣೆ ಬಾಂಬೆ ಹೈಕೋರ್ಟ್‌ನಲ್ಲಿ ನಡೆದಿತ್ತು. ಜೈಲಿನಲ್ಲಿದ್ದ ಶಾರುಖ್ ಖಾನ್ ಪುತ್ರನಿಗೆ 2021ರ ಅಕ್ಟೋಬರ್ 28 ರಂದು ಜಾಮೀನು ನೀಡಲಾಗಿತ್ತು. ಇದೀಗ ಆರ್ಯನ್ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ ಎನ್ನಲಾಗುತ್ತಿದ್ದು, ಪ್ರಕರಣ ತೀವ್ರ ಕುತೂಹಲ ಕೆರಳಿಸಿದೆ.
Published by:Annappa Achari
First published: