ಇವ್ರ ಮದ್ವೆಗೆ ಫೋನ್​ ತರಂಗಿಲ್ಲ..ಕೋಡ್​ ಕೊಟ್ರೆ ಮಾತ್ರ ಎಂಟ್ರಿ: ಕತ್ರಿನಾ-ವಿಕ್ಕಿ ವಿವಾಹಕ್ಕೆ ಹೈ ಸೆಕ್ಯೂರಿಟಿ!

Katrina Kaif-Vicky Kaushal : ಈ ಮದುವೆಗೆ ಬರುವವರಿಗೆ ಸೀಕ್ರೆಟ್ ಕೋಡ್ (Secret Code) ಕೊಟ್ಟಿದ್ದಾರೆ ಎನ್ನಲಾಗಿದೆ. ಮದುವೆಗೆ ಆಗಮಿಸುವ ಅತಿಥಿಗಳಿಗೆ ಮೊಬೈಲ್ ತರುವುದನ್ನು ಬ್ಯಾನ್ ಮಾಡಲಾಗಿದೆ. ರಾಜಸ್ಥಾನದಲ್ಲಿರುವ Sawai ಮೋಧ್‌ಪುರ್ ಹೊಟೇಲ್‌ನಲ್ಲಿ ಮದುವೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕತ್ರಿನಾ ಕೈಫ್​, ವಿಕ್ಕಿ ಕೌಶಲ್​

ಕತ್ರಿನಾ ಕೈಫ್​, ವಿಕ್ಕಿ ಕೌಶಲ್​

  • Share this:
ಬಾಲಿವುಡ್ ಅಂಗಳದಲ್ಲಿ ಈಗ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಮದುವೆಯದ್ದೇ ಸೌಂಡ್​. ಬಾಲಿವುಡ್ (Bollywood) ಸಿನಿರಂಗದಲ್ಲಿ ಗಣ್ಯರು ಮತ್ತು ಜನರ ಗಮನ ಸೆಳೆಯುತ್ತಿರುವುದು ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಅದ್ಧೂರಿ ಮದುವೆ. ಈ ಮದುವೆ ಕಾರ್ಯಕ್ರಮಕ್ಕೆ ಬರುತ್ತಿರುವ ಜನರಿಗೆ ಹಲವಾರು ಕಂಡಿಷನ್‌ಗಳಿದ್ದು.ಇದನ್ನು ಕೇಳಿ ಎಲ್ಲರಿಗೂ ಒಂಥರಾ ಶಾಕ್​ ಆಗಿರುವುದಂತೂ ನಿಜ. ಈ ಮದುವೆಗೆ ಬರುವವರಿಗೆ ಸೀಕ್ರೆಟ್ ಕೋಡ್ (Secret Code) ಕೊಟ್ಟಿದ್ದಾರೆ ಎನ್ನಲಾಗಿದೆ. ಮದುವೆಗೆ ಆಗಮಿಸುವ ಅತಿಥಿಗಳಿಗೆ ಮೊಬೈಲ್ ತರುವುದನ್ನು ಬ್ಯಾನ್ ಮಾಡಲಾಗಿದೆ. ರಾಜಸ್ಥಾನದಲ್ಲಿರುವ Sawai ಮೋಧ್‌ಪುರ್ ಹೊಟೇಲ್‌ನಲ್ಲಿ ಮದುವೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಮದುವೆ (Katrina Kaif Vicky Kaushal Wedding) ಬಗ್ಗೆಯೂ ಜನರಿಗೆ ಈ ರೀತಿಯ ಕೌತುಕ ಇದೆ. ಆದರೆ ಯಾವುದೇ ಗುಟ್ಟು ಬಿಟ್ಟುಕೊಡದೇ ಮದುವೆ ನಡೆಸಲು ನಿರ್ಧರಿಸಲಾಗಿದೆ. ಆದರೆ ಈ ರೀತಿಯ ಕಂಡಿಷನ್​ಗಳನ್ನು ಕಂಡು ಯಾರು ಗುರೂ ಈ ಮದುವೆಗೆ ಹೋಗುತ್ತಾರೆ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. 

ಕೋಡ್​ ಇದ್ರೆ ಮಾತ್ರ ಒಳಗೆ ಎಂಟ್ರಿ!

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಬರೆದು ನೀಡುವುದನ್ನು ನೋಡಿದ್ದೇವೆ. ಆದರೆ ಕೋಡ್​ ಕೊಟ್ಟಿರುವುದನ್ನು ಕೇಳಿದ್ದೀರ. ಚಾನ್ಸ್​ ಇಲ್ಲ, ಕೇವಲ ಬಾಂಡ್ ಸಿನಿಮಾಗಳು ಈ ರೀತಿಯ ಕೋಡ್​ಗಳನ್ನು ನೋಡಿದ್ದೀರ. ಆದರೆ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಕೋಡ್ ನೀಡಲಾಗಿದೆಯಂತೆ. ಕತ್ರಿನಾ ಮತ್ತು ವಿಕ್ಕಿ ಮದುವೆ ಬಗ್ಗೆ ದಿನಕ್ಕೊಂದು ಹೊಸ ಸುದ್ದಿಗಳು ಹೊರ ಬರುತ್ತಿದೆ. ಈ ಕೋಡ್​ ತೋರಿಸಿದರೆ ಮಾತ್ರ ಅವರ ಮದುವೆಗೆ ಎಂಟ್ರಿ ನೀಡಲಾಗುತ್ತಂತೆ.

ಇದನ್ನು ಓದಿ : ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್​ ಹೊಂದಿರುವ ಟಾಪ್​ 10 ಸೌತ್ ಹೀರೋಗಳು ಇವ್ರೆ...

ಸುತ್ತಮುತ್ತ ಡ್ರೋನ್​ ಹಾರಂಗಿಲ್ಲ!

ತಮ್ಮ ಮದುವೆಗೆ ಬರುವ ಅತಿಥಿಗಳು ಮೊಬೈಲ್​ ಫೋನ್​ ತರುವಂತಿಲ್ಲ ಎಂದು ಈಗಾಗಲೇ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಯಾವುದೇ ಫೋಟೋಗಳು ಲೀಕ್​ ಆಗಬಾರದು ಎಂಬುದು ಈ ಜೋಡಿಯ ಉದ್ದೇಶ. ಅದೇ ರೀತಿ, ಮದುವೆ ನಡೆಯುವ ಹೋಟೆಲ್​ ಸುತ್ತಮುತ್ತ ಯಾವುದೇ ಡ್ರೋನ್​ಗಳು ಹಾರಾಟ ನಡೆಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಒಂದು ವೇಳೆ ಡ್ರೋನ್​ ಕಂಡುಬಂದರೆ ಅದನ್ನು ಶೂಟ್​ ಮಾಡಿ ಹೊಡೆದುರುಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ. ಡಿಸೆಂಬರ್​ 9ರಂದು ಈ ಜೋಡಿ ಹಸೆಮಣೆ ಏರಲಿದ್ದಾರೆ. ಮದುವೆಯ ಪೋಟೋ, ವಿಡಿಯೋಗಳು ಲೀಕ್​ ಆಗದಂತೆ ಎಚ್ಚರಿಕೆ ವಹಿಸಲಾಗಿದೆ.

ಇದನ್ನು ಓದಿ : ಹೊಸ ಅವತಾರದಲ್ಲಿ ಡಿಂಪಲ್​ ಕ್ವೀನ್​ ರಚ್ಚು: 'ಲಕ ಲಕ ಲ್ಯಾಂಬೋರ್ಗಿನಿ’ಯಲ್ಲಿ ಮಸ್ತ್​ ಡ್ಯಾನ್ಸ್​​!

ಸಲ್ಮಾನ್​ ಖಾನ್​ಗೆ ಮದುವೆ ಆಮಂತ್ರಣ ನೀಡದ ಕತ್ರಿನಾ


ಸಲ್ಮಾನ್ ಖಾನ್​ ಹಾಗೂ ಕತ್ರಿನಾ ಒಂದು ಕಾಲದಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಅನೇಕ ಕಡೆಗಳಲ್ಲಿ ಅವರು ಸುತ್ತಾಟ ನಡೆಸಿದ್ದಿದೆ. ಆದರೆ, ಇದನ್ನು ಗುಟ್ಟಾಗಿಯೇ ಇಟ್ಟಿದ್ದರು. ಇವರ ಸಂಬಂಧ ಹೆಚ್ಚು ಕಾಲ ಬಾಳಲಿಲ್ಲ. ಬ್ರೇಕ್​​ಅಪ್​ ಆದ ನಂತರವೂ ಈ ಜೊಡಿ ಗೆಳೆತನವನ್ನು ಮುಂದುವರಿಸಿತ್ತು. ಸಿನಿಮಾಗಳಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದಾರೆ. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಈಗಲೂ ಮುಂದುವರಿದಿದೆ. ‘ಟೈಗರ್​ 3’ ಚಿತ್ರದಲ್ಲಿ ಇಬ್ಬರೂ ಒಟ್ಟಾಗಿ ನಟಿಸುತ್ತಿದ್ದಾರೆ. ಹೀಗಾಗಿ, ಸಲ್ಲುಗೆ ಆಮಂತ್ರಣ ಹೋಗಲಿದೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ, ಅಸಲಿ ವಿಚಾರ ಸಲ್ಮಾನ್​ ಖಾನ್​ಗೆ ಕತ್ರೀನಾ ಆಮಂತ್ರಣ ನೀಡಿಲ್ಲ. ಈ ವಿಚಾರ ತಿಳಿದು  ಫ್ಯಾನ್ಸ್​ ಬೇಸರಗೊಂಡಿದ್ದಾರೆ

Published by:Vasudeva M
First published: