ಅಯೋಧ್ಯೆ ತೀರ್ಪು ಹಿನ್ನೆಲೆ: ಬೆಂಗಳೂರು ನಗರದಲ್ಲಿ ಮುಂದುವರೆಯಲಿದೆ ಸಿನಿಮಾ ಪ್ರದರ್ಶನ ..!

Ayodhya Verdict: ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು 144 ಸೆಕ್ಷನ್​ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

Anitha E | news18-kannada
Updated:November 9, 2019, 9:56 AM IST
ಅಯೋಧ್ಯೆ ತೀರ್ಪು ಹಿನ್ನೆಲೆ: ಬೆಂಗಳೂರು ನಗರದಲ್ಲಿ ಮುಂದುವರೆಯಲಿದೆ ಸಿನಿಮಾ ಪ್ರದರ್ಶನ ..!
ಸಾಂದರ್ಭಿಕ ಚಿತ್ರ
  • Share this:
ಇಂದು ಅಯೋಧ್ಯೆ ತೀರ್ಪು ಪ್ರಕಟವಾಗಲಿದೆ. ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಿರಲೆಂದು ಮುನ್ನೆಚ್ಚರಿಕೆ ಕ್ರಮವಾಗಿ ಸಾಕಷ್ಟು ಕಡೆ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಹಾಗೆಯೇ ಬೆಂಗಳೂರು ನಗರದಾದ್ಯಂತ 144 ಸೆಕ್ಷನ್​ ಜಾರಿಗೊಳಿಸಲಾಗಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು 144 ಸೆಕ್ಷನ್​ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

Ayodhya Verdict: ರಾಮಜನ್ಮ ಭೂಮಿ ವಿವಾದದ ಹಿಂದಿದೆ ಇಷ್ಟೆಲ್ಲಾ ಇತಿಹಾಸ
ಅಯೋಧ್ಯ


ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಎಂದಿನಂತೆ ಮುಂದುವರೆಯಲಿದೆ. ಸದ್ಯಕ್ಕೆ ಚಿತ್ರ ಪ್ರದರ್ಶನ ನಿಲ್ಲಿಸೋ ಬಗ್ಗೆ ಫಿಲಂ ಚೇಂಬರ್ ಯಾವುದೇ ಪ್ರಕಟಣೆ ಹೊರಡಿಸಿಲ್ಲ.

ಇದನ್ನೂ ಓದಿ: Kichcha Sudeep: ವೈರಲ್​ ಆಗುತ್ತಿದೆ ದಬಾಂಗ್​ 3 ಮೇಕಿಂಗ್ ವಿಡಿಯೋ: ದಬಾಂಗ್ 3 ಬಗ್ಗೆ ಕಿಚ್ಚ ಸುದೀಪ್​ ಹೇಳಿದ್ದೇನು..?

ಹಾಗೆಯೇ ಜಿಲ್ಲಾಧಿಕಾರಿಗಳಿಂದಾಗಲಿ, ಪೊಲೀಸ್ ಇಲಾಖೆಯಿಂದಾಗಲಿ ಯಾವುದೇ ‌ನಿರ್ದೇಶನ ಥಿಯೇಟರ್ ಮಾಲೀಕರಿಗೆ ತಲುಪಿಲ್ಲವಂತೆ. ಹೀಗಾಗಿ ಎಂದಿನಂತೆ ಚಿತ್ರ ಪ್ರದರ್ಶನ ನಡೆಯಲಿದೆ. ಆದರೆ ಪರಿಸ್ಥಿತಿಗೆ ಅನುಗುಣವಾಗಿ ಚಿತ್ರಪ್ರದರ್ಶನ ಮಾಡಬೇಕೋ ಬೇಡವೋ ಎಂಬುದು ಚಿತ್ರಮಂದಿರಗಳವರು ಕೊನೆಯ ಕ್ಷಣದಲ್ಲಿ ನಿರ್ಧಾರ ಮಾಡಬಹುದಾಗಿದೆ.

 

ಹುಟ್ಟುಹಬ್ಬದ ಆಚರಣೆಗೆಂದು ವಿದೇಶಕ್ಕೆ ಹೋಗಿ ಬೆತ್ತಲಾದ ಹೆಬ್ಬುಲಿ​ ನಟಿ..!


 

First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading