ನನ್ನ ಇಬ್ಬರು ಮಕ್ಕಳು ಬಾಲಿವುಡ್​​ಗೆ ಬರೋದು ನಂಗೆ ಇಷ್ಟ ಇಲ್ಲ.. ಕರೀನಾ ಮಾತಿನ ಹಿಂದಿರುವ ಕಾರಣವೇನು?

Kareena Kapoor: ನಾನು ಹೆಲಿಕಾಪ್ಟರ್ ಅಮ್ಮನಂತೆ ಇರಲು ಬಯಸುವುದಿಲ್ಲ. ಸ್ವಲ್ಪ ತೊಂದರೆ ಆದ ಕೂಡಲೇ ನಾನು ಬಂದು ಅವರನ್ನು ಮೇಲಕ್ಕೆ ಎತ್ತಲ್ಲ. ಅವರೇ ಬಿದ್ದು ಏಳುವುದನ್ನು ಕಲಿಯಬೇಕೆಂದು ನಾನು ಬಯಸುತ್ತೇನೆ.

ಇಬ್ಬರು ಮಕ್ಕಳೊಂದಿಗೆ ಕರೀನಾ

ಇಬ್ಬರು ಮಕ್ಕಳೊಂದಿಗೆ ಕರೀನಾ

 • Share this:
  ಬಾಲಿವುಡ್​​ ನಟಿ ಕರೀನಾ ಕಪೂರ್​ ಖಾನ್ ಯಾರಿಗೆ ಗೊತ್ತಿಲ್ಲ. ಹಿಂದಿ ಚಿತ್ರರಂಗದಲ್ಲಿ ದೊಡ್ಮನೆ ಅಂದರೆ ಕಪೂರ್​ ಖಾನ್​​ದಾನ್​​. ರಾಜ್​​ ಕಪೂರ್​ರಿಂದ ಹಿಡಿದು ಅವರ ಮೊಮ್ಮಗ ಕಣಬೀರ್​​​ ಕಪೂರ್​ ವರೆಗೆ ಎಲ್ಲರೂ ಬಾಲಿವುಡ್​ನಲ್ಲಿ ಮಿಂಚಿದವರೆ. ಅಕ್ಕ ಕರಿಷ್ಮಾ ನಂತರ ಬೆಳ್ಳಿತೆರೆಗೆ ಬಂದ ಕರೀನ್​​ ಕೂಡ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ನಟ ಸೈಫ್​​ ಅಲಿ ಖಾನ್​ನ ಮದುವೆಯಾಗಿರುವ ಕರೀನಾ ಸದ್ಯ ಎರಡು ಮಕ್ಕಳ ತಾಯಿ. ಪುತ್ರರಾದ ತೈಮೂರ್, ಜೇಹ್​​ ಸದ್ಯ ಕರೀನಾರ ಪ್ರಪಂಚ. ಆದರೆ ತಮ್ಮ ಮಕ್ಕಳ ಬಗ್ಗೆ ಕರೀನಾ ನೀಡಿರುವ ಹೇಳಿಕೆ ಈಗ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ನಮ್ಮಂತೆ ನನ್ನಿಬ್ಬರ ಮಕ್ಕಳು ಬಾಲಿವುಡ್​ಗೆ ಬರುವುದು, ನಟರಾಗೋದು ನನಗೆ ಇಷ್ಟವಿಲ್ಲ ಎಂದಿದ್ದಾರೆ.

  ಸಿನಿಮಾ ಸ್ಟಾರ್ಸ್​​​ ಕುಟುಂಬದಿಂದ ಬಂದ ಮಕ್ಕಳು ಸಹಜವಾಗೇ ಸಿನಿ ಜಗತ್ತಿಗೆ ಬರುತ್ತಾರೆ ಎಂದು ಭಾವಿಸುತ್ತಾರೆ. ಆದರೆ ಕರೀನಾಗೆ ಅದು ಇಷ್ಟವಿಲ್ಲಂತೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕರೀನಾ, ತಮ್ಮಂತೆ ಮಕ್ಕಳು ಬಾಲಿವುಡ್​ನೇ ಆಯ್ಕೆ ಮಾಡಬೇಕೆಂದು ಇಲ್ಲ. ಸಿನಿಮಾ ನಟರಾಗಿ ಎಂದು ನಾನು ಅವರಿಗೆ ಹೇಳುವುದೂ ಇಲ್ಲ. ನಾನು, ಸೈಫ್​ ಸ್ಟಾರ್ಸ್​ ಆದ ಮಾತ್ರಕ್ಕೆ ಅವರು ಬಾಲಿವುಡ್​ನಲ್ಲೇ ತಮ್ಮ ಕೆರಿಯರ್​ ಕಂಡುಕೊಳ್ಳಬೇಕಿಲ್ಲ. ಅವರಿಗೆ ತುಂಬಾ ಆಯ್ಕೆಗಳಿವೆ. ಬೇರೆ ಏನನ್ನಾದರೂ ಆಯ್ಕೆ ಮಾಡಬಹುದು. ನಾನು ನನ್ನ ಇಬ್ಬರು ಗಂಡು ಮಕ್ಕಳನ್ನು ಚನ್ನಾಗಿ ಬೆಳೆಸಿದ್ದೀನಿ. ಅವರಿಬ್ಬರು ಜೆಂಟಲ್​ಮ್ಯಾನ್ಸ್​ ಅಂತ ಕೇಳಲು ಇಷ್ಟಪಡ್ತಿನಿ.

  ಇದನ್ನೂ ಓದಿ: Director Mansore Marriage: ಸ್ವಾತಂತ್ರ್ಯ ದಿನದಂದೇ ಹೊಸ ಬಾಳಿಗೆ ಕಾಲಿಟ್ಟ ಕನ್ನಡದ ನಿರ್ದೇಶಕ ಮಂಸೋರೆ

  ನನ್ನ ಮಗ ಟಿಮ್ ಬಂದು ಬೇರೆ ಏನಾದರೂ ಮಾಡಬೇಕೆಂದು ಹೇಳಿದರೆ ನನಗೆ ಸಂತೋಷವಾಗುತ್ತದೆ. ಅವನು ಮೌಂಟ್ ಎವರೆಸ್ಟ್ ಏರಬಹುದು, ಅದು ಅವನ ಆಯ್ಕೆ. ಏನೇ ಆಗಲು ಬಯಸಿದರೂ ನಾನು ನನ್ನ ಹುಡುಗರನ್ನು ಬೆಂಬಲಿಸ್ತೇನೆ ಎಂದಿದ್ದಾರೆ. ನಾನು ಹೆಲಿಕಾಪ್ಟರ್ ಅಮ್ಮನಂತೆ ಇರಲು ಬಯಸುವುದಿಲ್ಲ. ಸ್ವಲ್ಪ ತೊಂದರೆ ಆದ  ಕೂಡಲೇ ನಾನು ಬಂದು ಅವರನ್ನು ಮೇಲಕ್ಕೆ ಎತ್ತಲ್ಲ. ಅವರೇ ಬಿದ್ದು ಏಳುವುದನ್ನು ಕಲಿಯಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ ಅದು ನನ್ನ ತಾಯಿ ನನಗೆ ಕಲಿಸಿದ ಪಾಠ. ನಿಮಗೆ ಬೇಕಾದುದನ್ನು ಮಾಡಿ,ತಪ್ಪುಗಳನ್ನು ಮಾಡಿ ನಂತರ ಅವುಗಳನ್ನು ಸರಿಪಡಿಸಲು ಕಲಿಯಿರಿ ಎಂದು ನನ್ನ ತಾಯಿ ನನಗೆ ಹೇಳಿಕೊಟ್ಟಿದ್ದರು.

  ತೈಮೂರ್​ ಹುಟ್ಟಿದ್ದಾಗ ಅವನ ಫೋಟೋ ತೆಗೆಯಲು ಅನುಮತಿ ನೀಡಿದ್ದೆವು. ಆದರೆ 2ನೇ ಮಗನೊಂದಿಗೆ ಆ ರೀತಿ ನಡೆಯಬಾರದು. ತೈಮೂರ್​​ ಹಿಂದೆ ಪ್ಯಾಪರಾಜಿಗಳು ಬಿದ್ದಿದ್ದನ್ನು, ಅವನು ಎಲ್ಲಿ ಹೋದರೂ ಏನೇ ಮಾಡಿದರೂ ಫೋಟೋ ತೆಗೆಯುವುದು. ಸುದ್ದಿ ಮಾಡುವುದನ್ನು ನೋಡಿ ಬೇಸತ್ತಿದ್ದೇನೆ. ಅದಕ್ಕಾಗಿ 2ನೇ ಮಗ ಜಹಂಗೀರ್​ ಜೊತೆ ಅವೆಲ್ಲಾ ಆಗಬಾರದು ಅಂತ ನಾನು ಸೈಫ್​ ಅವನನ್ನು ಕ್ಯಾಮರಾಗಳಿಂದ ದೂರ ಇಟ್ಟಿದ್ದೇವೆ ಎಂದು ಕರೀನಾ ಹೇಳಿದ್ದಾರೆ.

  ಸದ್ಯ ಕರೀನಾ ಕಪೂರ್​​, ಅಮೀರ್ ಖಾನ್ ಜೊತೆಗೆ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಟಿಸಲಿದ್ದಾರೆ. ಕ್ರಿಸ್‌ಮಸ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಜೊತೆಗೆ ಭೂತ್ ಪೊಲೀಸ್, ಆದಿಪುರುಷ ಮತ್ತು 'ವಿಕ್ರಂ ವೇದ' ಚಿತ್ರಗಳಲ್ಲಿ ಕರೀನಾ ಕಾಣಿಸಿಕೊಳ್ಳಲಿದ್ದಾರೆ.

  ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Kavya V
  First published: