• Home
  • »
  • News
  • »
  • entertainment
  • »
  • Niveditha Gowda: ಮಿಸೆಸ್​ ಇಂಡಿಯಾ ಆಗೋಕೆ ನಿವೇದಿತಾ ಗೌಡ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಾ? ಡಯೆಟ್​ ರಹಸ್ಯ ಬಿಚ್ಚಿಟ್ಟ ಗೊಂಬೆ

Niveditha Gowda: ಮಿಸೆಸ್​ ಇಂಡಿಯಾ ಆಗೋಕೆ ನಿವೇದಿತಾ ಗೌಡ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಾ? ಡಯೆಟ್​ ರಹಸ್ಯ ಬಿಚ್ಚಿಟ್ಟ ಗೊಂಬೆ

ನಿವೇದಿತಾ ಗೌಡ

ನಿವೇದಿತಾ ಗೌಡ

Niveditha Gowda Diet Plan: ಈ ವಿಡಿಯೋದಲ್ಲಿ ಅವರು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಏನು ಮಾಡುತ್ತಾರೆ ಎಂಬುದನ್ನ ಸಹ ತೋರಿಸಿದ್ದಾರೆ. ಹೇಗೆ ನೈಸರ್ಗಿಕವಾಗಿ ಮುಖದ ಅಂದವನ್ನು ಹೆಚ್ಚು ಮಾಡಿಕೊಳ್ಳಬಹುದು ಎಂಬುದನ್ನ ಹೇಳಿಕೊಟ್ಟಿದ್ದಾರೆ.

  • Share this:

ಕನ್ನಡ ಕಿರುತೆರೆ ಗೊಂಬೆ, ಚಂದನ್ ಶೆಟ್ಟಿ (Chandan Shetty) ಮನಸ್ಸು ಕದ್ದ ಸುಂದರಿ ನಿವೇದಿತಾ ಗೌಡ ಬಿಗ್ ಬಾಸ್ (Big Boss) ನಂತರ ಸೆಲೆಬ್ರಿಟಿಯಾದ ಸಾಮಾನ್ಯ ಹುಡುಗಿ ಎನ್ನಬಹುದು. ಅದರಲ್ಲೂ ರ್ಯಾಪರ್​  ಚಂದನ್ ಶೆಟ್ಟಿ ಅವರನ್ನು ಮದುವೆಯಾದ ನಂತರ ಇನ್ನೂ ಹೆಚ್ಚು ಸುದ್ದಿ ಮಾಡಿದ್ದರು.  ಇದೀಗ (Niveditha Gowda) ಇದೀಗ ಮಿಸಸ್‌ ಇಂಡಿಯಾ (Mrs India) ಆಗಲು ತಯಾರಿ ಮಾಡಿಕೊಳ್ಳುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಅವರು ಆಗಾಗ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಅವರು ಯಾವ ರೀತಿ ಡಯೆಟ್​ ಮಾಡುತ್ತಿದ್ದಾರೆ ಎಂಬ ವಿಡಿಯೋ ಸಹ ಮಾಡಿದ್ದು, ಏನೆಲ್ಲಾ ಮಾಡುತ್ತಾರೆ ಎಂಬುದನ್ನ ಹಂಚಿಕೊಂಡಿದ್ದಾರೆ.


ಡಯೆಟ್​ ಬಗ್ಗೆ ಮಾಹಿತಿ ಹಂಚಿಕೊಂಡ ನಟಿ


ಎಲ್ಲರಿಗೂ ಗೊತ್ತಿರುವಂತೆ ನಿವೇದಿತಾ ಗೌಡ ಒಂದು ಯೂಟ್ಯೂಬ್​ ಚಾನೆಲ್​ ಕೂಡ ಹೊಂದಿದ್ದಾರೆ. ಅದರಲ್ಲಿ ಅವರು ಹೋಮ್​ ಟೂರ್, ಬಟ್ಟೆ ಕಲೆಕ್ಷನ್ ಹಾಗೂ ಬ್ಯಾಗ್​ ಕಲೆಕ್ಷನ್​ ಸೇರಿದಂತೆ ಹಲವಾರು ರೀತಿಯ ವಿಡಿಯೋಗಳನ್ನು ಮಾಡಿ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಬಾರಿ ಮಿಸೆಸ್​ ಇಂಡಿಯಾಗೆ ಅವರು ಹೇಗೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ, ಅವರ ಡಯೆಟ್​ ಏನು ಎಂಬ ಬಗ್ಗೆ ಹೇಳಿಕೊಂಡಿದ್ದಾರೆ.


ಅಲ್ಲದೇ, ಈ ವಿಡಿಯೋದಲ್ಲಿ ಅವರು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಏನು ಮಾಡುತ್ತಾರೆ ಎಂಬುದನ್ನ ಸಹ ತೋರಿಸಿದ್ದಾರೆ. ಹೇಗೆ ನೈಸರ್ಗಿಕವಾಗಿ ಮುಖದ ಅಂದವನ್ನು ಹೆಚ್ಚು ಮಾಡಿಕೊಳ್ಳಬಹುದು ಎಂಬುದನ್ನ ತೋರಿಸಿದ್ದಾರೆ. ಫೇಸ್​ ಮಸಾಜ್​ಗಳನ್ನು ಹೇಳಿಕೊಟ್ಟಿದ್ದು, ಯಾವುದರಿಂದ ಏನು ಲಾಭ ಎಂಬುದನ್ನ ಸಹ ತಿಳಿಸಿದ್ದಾರೆ.



ಇನ್ನು ಅವರು ವಿಡಿಯೋದಲ್ಲಿ ಬೆಳಗ್ಗೆ ತಿಂಡಿಗೆ ಎರಡು ಬ್ರೌನ್ ಬ್ರೆಡ್, ಡ್ರೈ ಫ್ರೂಟ್ಸ್, ಹಣ್ಣು, ಪೀನಟ್ ಬಟರ್ ತಿನ್ನುತ್ತೀನಿ ಎಂಬುದನ್ನ ಹೇಳಿದ್ದಾರೆ. ಬ್ರೆಡ್​ ಅನ್ನು ರೋಸ್ಟ್​ ಮಾಡಿಕೊಂಡು ಅದಕ್ಕೆ ಪೀನಟ್​ ಬಟರ್ ಹಾಕಿ ತಿನ್ನುತ್ತಾರಂತೆ. ಅಲ್ಲದೇ, ತಿಂಡಿಯ ನಂತರ ಬಿಸಿ ನೀರಿಗೆ ನಿಂಬೆ ಹಣ್ಣಿನ ರಸ ಮತ್ತು ಹಸಿ ಶುಠಿ ಹಾಕಿ ಮಿಶ್ರಣ ಮಾಡಿ ಅದರ ಜ್ಯೂಸ್ ಕುಡಿಯುತ್ತಾರಂತೆ.




ಇದನ್ನೂ ಓದಿ: ಹೊಸ ಫೋಟೋ ಶೇರ್ ಮಾಡಿಕೊಂಡ ರಚಿತಾ ರಾಮ್, ಎಲ್ಲಿದ್ದೀರಿ ಡಿಂಪಲ್ ಕ್ವೀನ್ ಎಂದ ಫ್ಯಾನ್ಸ್


ಇನ್ನು  ನಿವೇದಿತಾ ಹೊಸ ಜವಾಬ್ದಾರಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ. ಮಿಸೆಸ್ ಇಂಡಿಯಾ ಆಗಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಇದೀಗ ಅಂಥದ್ದೇ ಕನಸು ಕಾಣುತ್ತಿದ್ದಾರಂತೆ ನಿವೇದಿತಾ ಗೌಡ. ಅದಕ್ಕಾಗಿ ಅವರು ತರಬೇತಿಯನ್ನು ಪಡೆಯುತ್ತಿದ್ದಾರಂತೆ.  ಸ್ಪರ್ಧೆಗೆ ನಾನ್ ಸ್ಟಾಪ್ ತಯಾರಿ ಮಾಡಿಕೊಳ್ಳುತ್ತಿರುವ ನಿವೇದಿತಾ ಗೌಡಗೆ ರೋಲ್ ಮಾಡಲ್‌ ಬಾಲಿವುಡ್ ನಟಿ ಐಶ್ವರ್ಯ ರೈ ಎಂದು ಹೇಳಿಕೊಂಡಿದ್ದಾರೆ.




ಫುಲ್ ಬ್ಯುಸಿ ಇದ್ದಾರೆ ನಿವೇದಿತಾ


ನಾನು ಈ ಫೀಲ್ಡ್‌ಗೆ ತುಂಬಾನೇ ಚಿಕ್ಕವಳು. ಬೇಗ ಬರಬೇಕಿತ್ತು ಆದರೆ ಸಮಯ ತೆಗೆದುಕೊಂಡು ಬಂದಿದ್ದೀನಿ ಎಂದು ಹೇಳಿದ ನಿವೇದಿತಾ ಫ್ಯಾಷನ್ ಜಗತ್ತಿನ ಬಗ್ಗೆ ಹೇಳಿದ್ದಾರೆ. ಕನ್ನಡ ಕಿರುತೆರೆ ಗೊಂಬೆ, ಚಂದನ್ ಶೆಟ್ಟಿ ಮನಸ್ಸು ಕದ್ದ ಸುಂದರಿ ನಿವೇದಿತಾ ಗೌಡ ಇದೀಗ ಮಿಸ್‌ ಇಂಡಿಯಾ ಆಗಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಟ್ರೈನಿಂಗ್ ಆರಂಭಿಸಿರುವ ನಿವಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಕ್ಯಾಟ್ ವಾಕ್‌ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಕಿರೀಟ ಗೆದ್ದು ಬಾ ಗೊಂಬೆ ಎಂದು ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.




ಇದನ್ನೂ ಓದಿ: 20 ವರ್ಷಗಳ ನಂತರ ಅವನನ್ನೇ ಮದುವೆಯಾದ ಪಾಪ್ ತಾರೆ, ಜೆನಿಫರ್-ಬೆನ್ ಅಫ್ಲೆಕ್ ಪ್ರೇಮ್ ಕಹಾನಿ


ಕಳೆದ ಬಾರಿ ಸಹ ನಿವೇದಿತಾ ಕ್ಯಾಟ್ ವಾಕ್ ಹೇಗೆ ಮಾಡುವುದು ಎನ್ನುವುದರ ಕುರಿತು ಟ್ರೈನಿಂಗ್ ಪಡೆಯುತ್ತಿರುವ, ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಮಿಸೆಸ್ ಇಂಡಿಯಾ ಆಗಲು ಏನೆಲ್ಲ ತಯಾರಿ ಬೇಕು, ಹೇಗಿರಬೇಕು? ಯಾವೆಲ್ಲ ತರಬೇತಿ ಪಡೆಯಬೇಕು ಎನ್ನುವುದರ ಕುರಿತು ನುರಿತ ತರಬೇತಿದಾರರಿಂದ ಅವರು ಟ್ರೈನಿಂಗ್ ಪಡೆಯುತ್ತಿದ್ದಾರಂತೆ ಗೊಂಬೆ.

Published by:Sandhya M
First published: