ಬಿಗ್‌ಬಾಸ್ ಜೋಡಿಗೆ ಮದುವೆ: ಹೊಸ ಜಾಗ್ವಾರ್ ಕಾರು ಗಿಫ್ಟ್, ಹನಿಮೂನ್‌ಗೆ ಫಾರಿನ್‌ಗೆ ಶಿಫ್ಟ್

ನವ ದಂಪತಿಗಳಿಗೆ ಹೊಸ ಜಾಗ್ವಾರ್ ಕಾರ್‌ವೊಂದನ್ನ ಉಡುಗೊರೆಯಾಗಿ ನೀಡಿರುವ  ಚಂದನ್ ಹಾಗೂ ನಿವೇದಿತಾ ಕುಟುಂಬಸ್ಥರು  ಕಾರು ಗಿಫ್ಟ್  ನೀಡುವ ಮೂಲಕ ಮದುವೆ ಸಂಭ್ರಮ ಹೆಚ್ಚಿಸಿಕೊಂಡಿದ್ದಾರೆ

ಇಂದು ಮದುವೆಯಾದ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ

ಇಂದು ಮದುವೆಯಾದ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ

  • Share this:
ಮೈಸೂರು: ಬಿಗ್ ಬಾಸ್ ಜೋಡಿಯಾದ ಗಾಯಕ ಚಂದನ್‌ಶೆಟ್ಟಿ ನಿವೇದಿತಾಗೌಡ ಮದುವೆ ಸಾಂಸ್ಕೃತಿಕ ಮೈಸೂರಿನಲ್ಲಿ ಭರ್ಜರಿಯಾಗಿ ನೆರವೇರಿದೆ. ಮೈಸೂರಿನ ಸ್ಪೇಕ್ಟ್ರಾ ಹಾಲ್‌ನಲ್ಲಿ ಇಂದು ನಡೆದ ವಿವಾಹ ಕಾರ್ಯಕ್ರಮ ಕ್ಯೂಟ್ ಜೋಡಿಯ ಹೊಸ ಬಾಳಿಗೆ ನಾಂದಿಯಾಗಿತ್ತು. ಹೂವಿನ ಮಂಟಪದಲ್ಲಿ ನಿವೇದಿತಾ ವರಿಸಿದ ಚಂದ‌ನ್‌ಗೆ, ಕುಟುಂಬಸ್ಥರು ಜಾಗ್ವಾರ್ ಕಾರ್ ನೀಡಿ ಸರ್‌ಪ್ರೈಸ್ ನೀಡಿದ್ದಾರೆ.

ರ್ಯಾಪರ್ ಚಂದನ್ ಶೆಟ್ಟಿ ಹಾಗೂ ಬೇಬಿ ಡಾಲ್ ಎಂದೇ ಖ್ಯಾತಿ ಪಡೆದಿದ್ದ ಬಿಗ್‌ಬಾಸ್ ಜೋಡಿ ಅಧಿಕೃತವಾಗಿ ಹಸೆಮಣೆ ಏರಿ ದಂಪತಿಗಳಾಗಿದ್ದಾರೆ. ಇಂದು ಮೈಸೂರಿನ ಇನ್‌ಕಲ್ ಸಮೀಪ ಇರುವ ಸ್ಪೇಕ್ಟ್ರಾ ಹಾಲ್‌ನಲ್ಲಿ ವಿನೂತನ ಹೂವಿನ ಮಂಟಪದ ಕೇಳಗೆ ನೆರವೇರಿದ ಚಂದನ್ ಹಾಗೂ ನಿವೇದಿತಾ ವಿವಾಹ ಕಾರ್ಯಕ್ರಮ ಶಾಸ್ತ್ರ ಸಂಪ್ರದಾಯದ ಮೂಲಕ ಮುಕ್ತಾಯವಾಯಿತು. ಮುಂಜಾನೆ 8.15ರಿಂದ 9 ಗಂಟೆಯವರೆಗಿನ ಮೀನ ಲಗ್ನದಲ್ಲಿ ವರ ಚಂದನ್ ವಧು ನಿವೇದಿತಾ ಕುತ್ತಿಗೆಗೆ ತಾಳಿ ಕಟ್ಟಿ ಸತಿಪತಿಗಳಾದರು. ಇದಕ್ಕು ಮುನ್ನ ವರಪೂಜೆ ಹಾಗೂ ಗೌರಿಪೂಜೆ ಕಾರ್ಯಕ್ರಮಗಳು ಎರಡು ಕುಟುಂಬದ ಸಂಪ್ರದಾಯದಲ್ಲಿ ನೆರವೇರಿತು.

ನಿನ್ನೆ ಇಡೀ ದಿನ ಟ್ರೆಂಡಿ ಲುಕ್‌ನಲ್ಲಿ ಹಾಗೂ ಬೇಬಿ ಡಾಲ್ ಲುಕ್‌ನಲ್ಲಿದ್ದ ಚಂದನ್ ನಿವೇದಿತಾ ಜೋಡಿ ಇಂದು ಸಂಪೂರ್ಣ ಕರ್ನಾಟಕ ಸಂಪ್ರದಾಯಿಕ ಉಡುಗೆಯಲ್ಲಿದ್ದರು. ಕ್ರೀಮ್‌ಕಲರ್ ಪಂಚೆ ಶಲ್ಯದಲ್ಲಿದ್ದ ಚಂದನ್ ಶಟ್ಟಿ ವರನ ಲುಕ್‌ಗೆ ಹೇಳಿಮಾಡಿಸಿದಂತಿದ್ದರು. ಅದೆ ರೀತಿ ಕೆಂಪು ಹಸಿರು ಸೀರೆಯುಟ್ಟು ಆಭರಣಕಚಿತಳಾಗಿ ಕಂಗೋಳಿಸುತ್ತಿದ್ದ ನಿವೇದಿತಾ ಗೌಡ ಸಹ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ರು. ಕಲ್ಯಾಣ ಮಂಟಪದ ಹೊರ ಆವರಣದಲ್ಲಿ ನಿರ್ಮಾಣವಾಗಿದ್ದ ಕೃತಕ ಹೂವಿನ ಮಂಟಪದ ಕೇಳಗೆ ಹೊಸ ಬಾಳಿಗೆ ಕಾಲಿಟ್ಟ ಈ ಜೋಡಿ ಕುಟುಂಬಸ್ಥರು ಸಮ್ಮುಖದಲ್ಲಿ ಹೊಸ ಬಾಳಿಗೆ ಕಾಲಿಟ್ಟರು.

ಮಗಳನ್ನ ಧಾರೆ ಎರೆದುಕೊಟ್ಟ ನಿವೇದಿತಾ ಪೋಷಕರು ಚಂದನ್‌‌ರನ್ನ ಅಳಿಯನ್ನನಾಗಿ ಒಪ್ಪಿಕೊಂಡರು. ಚಂದನ್ ಪೋಷಕರು ನಿವೇದಿತಾರನ್ನ ಮನಸಾರೆ ಒಪ್ಪಿ ಮನೆಯ ಸೋಸೆ ಮಾಡಿಕೊಂಡರು. ಎಲ್ಲ ಶಾಸ್ತ್ರ ಮುಗಿಸಿದ ನವ ಜೋಡಿ ಹಿರಿಯರ ಆರ್ಶಿವಾದ ಪಡೆದು ಮದುವೆ ಬಂದ ಗಣ್ಯರು ಹಾಗೂ ಅತಿಥಿಗಳಿಗೆ ಧನ್ಯವಾದ ಹೇಳಿದ್ರು. ಅಲ್ಲದೇ ಹೊಸ ಜೀವನದ ದಾರಿ ಇಂದಿನಿಂದ ಆರಂಭವಾಗಿದೆ ನಾಳೆಯಿಂದ ಇಬ್ಬರು ಒಟ್ಟಾಗಿ ಕನಸುಗಳೊಂದಿಗೆ ಜೀವನ ಮಾಡ್ತಿವಿ ಅಂತ ತಮ್ಮ ಮದುವೆಯ ಖುಷಿ ಹಂಚಿಕೊಂಡರು.

ಇದನ್ನೂ ಓದಿ: ಚಂದನ್​-ಗೊಂಬೆ ವಿವಾಹದ ಕ್ಯೂಟ್​ ಫೋಟೋಸ್​..!

ಇನ್ನು ನಿವೇದಿತಾ ಚಂದನ್ ಪೋಷಕರು ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಚಂದನ್ ಸೋದರ ಗೆಳೆಯರೊಂದಿಗೆ ಕಲ್ಯಾಣಮಂಟದಲ್ಲೆ ಕುಣಿದುಕುಪ್ಪಳಿಸಿದರು. ಡೋಲು ನಗಾರಿಯೊಂದಿಗೆ ಕಲ್ಯಾಣ ಮಂಟಪದ ಆವರಣದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲೆ ಎಲ್ಲರು ಹಾಡು ಕುಣಿತದಲ್ಲಿ ಭಾಗಿಯಾಗಿದ್ದರು. ಬಂದ ಅತಿಥಿಗಳಿಗೆ ಬೂರಿಭೋಜನ ವ್ಯವಸ್ಥೆ ಮಾಡಿದ್ದ ಕುಟುಂಬಸ್ಥರು 20 ರೀತಿಯ ವಿವಿಧ ಖಾಧ್ಯಗಳನ್ನ ಮೂಲಕ ಅತಿಥಿಗಳಿಗೆ ಸತ್ಕಾರ ಮಾಡಿದ್ರು.

ಇದನ್ನೂ ಓದಿ: ನವಜೀವನಕ್ಕೆ ಕಾಲಿರಿಸಿದ ಚಂದನ್ ಶೆಟ್ಟಿ​-ಗೊಂಬೆ ನಿವೇದಿತಾ ಗೌಡ..!

ನವ ದಂಪತಿಗಳಿಗೆ ಹೊಸ ಜಾಗ್ವಾರ್ ಕಾರ್‌ವೊಂದನ್ನ ಉಡುಗೊರೆಯಾಗಿ ನೀಡಿರುವ  ಚಂದನ್ ಹಾಗೂ ನಿವೇದಿತಾ ಕುಟುಂಬಸ್ಥರು  ಕಾರು ಗಿಫ್ಟ್  ನೀಡುವ ಮೂಲಕ ಮದುವೆ ಸಂಭ್ರಮ ಹೆಚ್ಚಿಸಿಕೊಂಡಿದ್ದಾರೆ.‌ ಮರೂನ್ ಕಲರ್ ನ ಹೊಸ ಜಾಗ್ವಾರ್ ಸೀರಿಸ್ ಕಾರನ್ನು ಕುಟುಂಬಸ್ಥರು ಕಲ್ಯಾಣ ಮಂಟಪದ‌ ಎದುರು ಕಾರು ನಿಲ್ಲಿಸಿ ಚಂದನ್ ಮತ್ತು ನಿವೇದಿತಾಗೆ ಸರ್ಪೈಸ್ ನೀಡಿದ್ದಾರೆ. ಮದುವೆ ಮುಗಿಸಿ ಇದೆ ಕಾರಿನಲ್ಲಿ ಚಂದನ್ ಹಾಗೂ ನಿವೇದಿತಾ ತಮ್ಮ ಹೊಸ ಜೀವನದ ಪ್ರಯಾಣ ಆರಂಭಿಸಿದ್ದಾರೆ.

ಇದನ್ನೂಓದಿ: ಉಟ್ಟ ಸೀರೆ ಎಲ್ಲಿ ಜಾರಿ ಹೋಗುತ್ತೋ ಎಂದು ಭಯಪಡುತ್ತಿದ್ದರಂತೆ ಕರಾವಳಿ ಸುಂದರಿ ಪೂಜಾ ಹೆಗ್ಡೆ

ಇನ್ನು ಹೊಸ ಜೋಡಿ ಹನಿಮೂನ್ ಸಹ ಪ್ಲಾನ್ ಮಾಡಿಕೊಂಡಿದ್ದು ಚಂದ‌ನ್ ಇಂಗ್ಲೆಂಡ್​ಗೆ ಪತ್ನಿ ಕರೆದೊಯ್ಯೋ ಐಡಿಯಾ ಮಾಡಿದ್ರೆ, ನಿವೇದಿತಾ ಪ್ಯಾರಿಸ್‌ಗೆ ಪತಿಯನ್ನ ಕರೆದೊಯ್ಯೋ ಪ್ಲಾನ್ ಮಾಡಿಕೊಂಡಿದ್ದಾರೆ‌. ಶೀಘ್ರದಲ್ಲೇ ನಾವು ಫಾರಿನ್ ಹೋಗ್ತಿವಿ ಅಂದಿರೋ ಚಂದನ್ - ನಿವೇದಿತಾ ಯಾವಾಗ ಹೋಗ್ತಾರೆ, ಎಷ್ಟು ದಿನ ಟ್ರಿಪ್ ಮಾಡ್ತಾರೆ ಅನ್ನೋದನ್ನ ಗೌಪ್ಯವಾಗಿಯೇ ಇಟ್ಟಿದ್ದಾರೆ.

ಇದನ್ನೂ ಓದಿ: ಆರತಕ್ಷತೆಯಲ್ಲಿ ಬಾರ್ಬಿ ಡಾಲ್​ನಂತೆ ಮಿಂಚಿದ ನಿವೇದಿತಾ ಗೌಡ..!

ಒಟ್ಟಾರೆ ಬಿಗ್‌ಬಾಸ್ ಮನೆಯಲ್ಲಿ ಪರಿಚಯವಾಗಿ, ಸ್ನೇಹ ಪ್ರೀತಿಯಾಗಿ, ಪ್ರೀತಿ ದಾಂಪತ್ಯವಾಗಿದ್ದು ನವ ಜೋಡಿಗೆ ಶುಭಾಶಯ ಹೂಮಳೆ ಸಿಕ್ಕಿದೆ. ಚಂದನ್ ನಿವೇದಿತಾ ಹೊಸ ಬದುಕಿಗೆ ನಾವು ಶುಭ ಹಾರೈಸಿ ನೂರಾರು ವರ್ಷ ಸುಖವಾಗಿರಲಿ ಅನ್ನೋದೆ ನಮ್ಮ ಆಶಯ.
First published: