Niveditha Gowda: 'ಚಂದನ'ದ 'ಗೊಂಬೆ' ನಿವೇದಿತಾ ಕ್ಯಾಟ್‌ವಾಕ್‌ ವಿಡಿಯೋ ನೀವೂ ನೋಡಿ!

Niveditha Gowda: ಹೌದು, ನಿಮಗೆಲ್ಲರಿಗೂ ಗೊತ್ತಿರುವಂತೆ ನಿವೇದಿತಾ, ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲು ತಯಾರಿ ನಡೆಸುತ್ತಿದ್ದು , ಆಗಾಗಾ ಅಲ್ಲಿನ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ.

ನಿವೇದಿತಾ ಗೌಡ

ನಿವೇದಿತಾ ಗೌಡ

  • Share this:
ನಿವೇದಿತಾ ಗೌಡ (Niveditha Gowda) , ಸಾಮಾಜಿಕ ಜಾಲಾತಾಣದಲ್ಲಿ (Social Media)  ಯಾವಾಗಲೂ ಆಕ್ಟೀವ್ ಇರುವ ಸೆಲೆಬ್ರಿಟಿಗಳಲ್ಲಿ ಒಬ್ಬರು. ದಿನಕ್ಕೆ ಕೊನೆಪಕ್ಷ 2 ರಿಂದ 3 ವಿಡಿಯೋ (Video) ಹಾಕದೆ ಇರುವ ದಿನಗಳಿಲ್ಲ. ಹಾಗೆಯೇ ಇವರಿಗೆ ಫಾಲೋವರ್ಸ್ಗಳಿಗೇನು ಕಡಿಮೆ ಇಲ್ಲ. ಸಾಮಾಜಿಕ ಜಾಲಾತಾಣದ ಮೂಲಕ ಫೇಮ್ ಪಡೆದು ನಂತರ ಬಿಗ್​ಬಾಸ್​ ಸೀಸನ್​ನಲ್ಲಿ ತಮ್ಮ ವಿಶಿಷ್ಟ ರೀತಿಯ ಮಾತು ಹಾಗೂ ಫ್ಯಾಷನ್ ಕಾರಣದಿಂದ ಪ್ರಸಿದ್ದರಾದವರು ಈ ಸುಂದರಿ. ಗೊಂಬೆ ಎಂದೇ ಪ್ರೀತಿಯಿಂದ ಅಭಿಮಾನಿಗಳು ಇವರನ್ನು ಕರೆಯೋದು. ಇನ್ನು ನಿವೇದಿತಾ ಗೌಡ ಏನೇ ಪೋಸ್ಟ್ ಹಾಕಿದ್ರು ಅದು ವೈರಲ್ ಆಗುತ್ತೆ. ಹಾಗೆಯೇ ಇದೀಗ ಅವರು ಕ್ಯಾಟ್ ವಾಕ್ ಮಾಡುತ್ತಿರುವ ವಿಡಿಯೋವೊಂದನ್ನು ಹಾಕಿ ಅದು ಫುಲ್ ವೈರಲ್ ಆಗುತ್ತಿದೆ.

ಹೌದು, ನಿಮಗೆಲ್ಲರಿಗೂ ಗೊತ್ತಿರುವಂತೆ ನಿವೇದಿತಾ, ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲು ತಯಾರಿ ನಡೆಸುತ್ತಿದ್ದು , ಆಗಾಗಾ ಅಲ್ಲಿನ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಈಗ ಸಹ ಅಲ್ಲಿ ಹೇಗೆ ಕ್ಯಾಟ್ ವಾಕ್ ಪ್ರಾಕ್ಟೀಸ್ ಮಾಡಲಾಗುತ್ತದೆ ಎಂಬುದನ್ನ ಶೇರ್ ಮಾಡಿದ್ದು, ನಿವೇದಿತಾ ಹಾಟ್ ಲುಕ್ ನೋಡಿ ಅಭಿಮಾನಿಗಳು ವಾವ್ ಎಂದಿದ್ದಾರೆ.
ಈ ವಿಡಿಯೋದಲ್ಲಿ ನಿವೇದಿತಾ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಮಿಸೆಸ್ ಇಂಡಿಯಾ ಸ್ಪೆರ್ಧೆಗೆ ಈಗ ತಮ್ಮ ತಯಾರಿ ಹೇಗಿದೆ ಎನ್ನುವ ಸಂಪೂರ್ಣ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ಸ್ಪರ್ಧೆಗಾಗಿ ಜಿಮ್, ಡಯಟ್, ವರ್ಕೌಟ್ ಕೂಡ ಮಾಡುತ್ತಿದ್ದಾರೆ. ಅಲ್ಲಿ ನೀಡುವ ಕೆಲವೊಂದಿಷ್ಟು ಚಾಲೆಂಜಿಂಗ್ ವಿಚಾರ ತುಂಬಾ ಕುತೂಹಲಕಾರಿಯಾಗಿವೆ. ಹೇಗೆ ಡ್ರೆಸ್ ಮಾಡಿಕೊಳ್ಳಬೇಕು, ಯಾವ ರೀತಿ ಇರಬೇಕು ಎಂಬುದನ್ನ ಕಲಿಯುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ನಿವೇದಿತಾ ಗೌಡ ಕಿರುತೆರೆಯಲ್ಲಿ ಸಹ ಬ್ಯುಸಿ ಇದ್ದಾರೆ. ಕಲರ್ಸ್ ಕನ್ನಡದ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಸಂಸಾರ, ಶೂಟಿಂಗ್ ಹಾಗೂ ತರಬೇತಿಯನ್ನು ನಿಭಾಯಿಸುವುದು ಸವಾಲಾಗಿದ್ದು, ಆದರೂ ಚೆನ್ನಾಗಿ ಮೇಂಟೈನ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹೊಸ ಕಾರು ಖರೀದಿಸಿದ ಕಂಗನಾ - ಈ ಐಷಾರಾಮಿ ವಾಹನದ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!

ಇನ್ನು ಈ ಮೊದಲು ಸಹ ಸ್ಪರ್ಧೆಯ ಬಗ್ಗೆ ವಿಡಿಯೋ ಹಂಚಿಕೊಂಡಿದ್ದ ನಿವೇದಿತಾ, ತಮ್ಮ ಮನದ ಬಯಕೆಯನ್ನು ಹೇಳಿಕೊಂಡಿದ್ದರು. ಮಿಸೆಸ್ ಇಂಡಿಯಾ ಆಗಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಇದೀಗ ಅಂಥದ್ದೇ ಕನಸು ಕಾಣುತ್ತಿದ್ದಾರಂತೆ ನಿವೇದಿತಾ ಗೌಡ. ಅದಕ್ಕಾಗಿ ಅವರು ತರಬೇತಿಯನ್ನು ಪಡೆಯುತ್ತಿದ್ದಾರಂತೆ. ಸ್ಪರ್ಧೆಗೆ ನಾನ್ ಸ್ಟಾಪ್ ತಯಾರಿ ಮಾಡಿಕೊಳ್ಳುತ್ತಿರುವ ನಿವೇದಿತಾ ಗೌಡಗೆ ರೋಲ್ ಮಾಡಲ್‌ ಬಾಲಿವುಡ್ ನಟಿ ಐಶ್ವರ್ಯ ರೈ ಎಂದು ಹೇಳಿಕೊಂಡಿದ್ದಾರೆ. ನಾನು ಈ ಫೀಲ್ಡ್‌ಗೆ ತುಂಬಾನೇ ಚಿಕ್ಕವಳು. ಬೇಗ ಬರಬೇಕಿತ್ತು ಆದರೆ ಸಮಯ ತೆಗೆದುಕೊಂಡು ಬಂದಿದ್ದೀನಿ ಎಂದು ಹೇಳಿದ ನಿವೇದಿತಾ ಫ್ಯಾಷನ್ ಜಗತ್ತಿನ ಬಗ್ಗೆ ಹೇಳಿದ್ದರು. .

ಸದ್ಯ ಕ್ಯಾಟ್ ವಾಕ್ ಹೇಗೆ ಮಾಡುವುದು ಎನ್ನುವುದರ ಕುರಿತು ಟ್ರೈನಿಂಗ್ ಪಡೆಯುತ್ತಿದ್ದು, ಆ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಿಸೆಸ್ ಇಂಡಿಯಾ ಆಗಲು ಏನೆಲ್ಲ ತಯಾರಿ ಬೇಕು, ಹೇಗಿರಬೇಕು? ಯಾವೆಲ್ಲ ತರಬೇತಿ ಪಡೆಯಬೇಕು ಎನ್ನುವುದರ ಕುರಿತು ನುರಿತ ತರಬೇತಿದಾರರಿಂದ ಅವರು ಟ್ರೈನಿಂಗ್ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ವೈಟ್​ ಫ್ಲೋರಲ್​ ಗೌನ್​ನಲ್ಲಿ ಮಿಂಚಿದ ರಶ್ಮಿಕಾ, "ನೋಟ ಬಂಗಾರವಾಯಿತೆ ಶ್ರೀವಲ್ಲಿ" ಅಂತ ಫಿದಾ ಆದ ಫ್ಯಾನ್ಸ್!

ತಮ್ಮ ವಿಭಿನ್ನವಾದ ಮಾತಿನ ಶೈಲಿ, ಬಾರ್ಬಿ ಡಾಲ್ನಂತ ಸ್ಟೈಲ್ ಹಾಗೂ ಉದ್ದವಾದ ಕೇಶರಾಶಿಯಿಂದಲೇ ಖ್ಯಾತರಾಗಿದ್ದವರು. ಬಿಗ್ ಬಾಸ್ ಮನೆಯಲ್ಲಿ ಚಂದನ ಶೆಟ್ಟಿಯನ್ನು ಭೇಟಿಯಾಗಿ, ನಂತರ ವಿವಾಹ ಬಂಧನಕ್ಕೊಳಾದ ಈ ಜೋಡಿ ತಮ್ಮ ರೀಲ್ಸ್ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿರುತ್ತಾರೆ.
Published by:Sandhya M
First published: