Video: ನಿವೇದಿತಾ ಗೌಡ ಹಲ್ಲು ಮುರಿದುಕೊಂಡ್ರಂತೆ! 'ಚಂದನ'ದ 'ಗೊಂಬೆ'ಗೆ ಅದೇನಾಯ್ತು ಅಂತ ನೋಡ್ರಪ್ಪ...

ನಿವೇದಿತಾ ಅಲಿಯಾಸ್ ನಿವಿ ಮನೆಯಲ್ಲೇ ಬಿದ್ದು ಹಲ್ಲು ಮುರಿದು ಕೊಂಡಿದ್ದಾರಂತೆ. ತಮ್ಮ ಮನೆಯಲ್ಲಿರುವ ಸಾಕು ನಾಯಿ ಜೊತೆ ಆಟ ಆಡುವಾಗ ಮೆಟ್ಟಿಲಿನಿಂದ ಮುಗ್ಗರಿಸಿ ಬಿದ್ದು, ಮುಂದಿರುವ ಎರಡು ಹಲ್ಲುಗಳನ್ನು ಮುರಿದುಕೊಂಡಿದ್ದಾರಂತೆ!

ನಿವೇದಿತಾ ಗೌಡ

ನಿವೇದಿತಾ ಗೌಡ

  • Share this:
‘ಬಿಗ್‌ ಬಾಸ್’ (Bigg Boss) ಖ್ಯಾತಿಯ ನಿದೇದಿತಾ ಗೌಡ (Niveditha Gowda) ಬಿದ್ದು ಹಲ್ಲು ಮುರಿದುಕೊಂಡಿದ್ದಾರಂತೆ. ಹಾಗಂತ ಖುದ್ದು ಅವ್ರೇ ವಿಡಿಯೋದಲ್ಲಿ (Video) ಹೇಳಿ ಕೊಂಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ (Social Media) ಸದಾ ಆ್ಯಕ್ಟೀವ್ (Active) ಆಗಿರುವ ನಿವೇದಿತಾ ಗೌಡ, ತಮ್ಮ ಕಷ್ಟ ಸುಖಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ (Netizens) ಜೊತೆ ಹಂಚಿಕೊಳ್ಳುತ್ತಾರೆ. ಪ್ರತಿದಿನ ಫೋಟೋ (Photo), ವಿಡಿಯೋ ಅಪ್ಲೋಡ್ (Upload) ಮಾಡುವ ಮೂಲಕ ತಮ್ಮ ಫ್ಯಾನ್ಸ್‌ (Fans) ಜೊತೆ, ಫಾಲೋವರ್ಸ್‌ (Followers) ಜೊತೆ ಕಾಂಟ್ಯಾಕ್ಟ್‌ನಲ್ಲೇ (Contact) ಇರ್ತಾರೆ. ಇದೀಗ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ (YouTube Channel) ಒಂದು ವಿಡಿಯೋ ಅಪ್ಲೋಡ್ ಮಾಡಿದ್ದು, ಅದು ಸಾಕಷ್ಟು ವೈರಲ್ (Viral) ಆಗಿದೆ.

ಬಿದ್ದು ಹಲ್ಲು ಮುರಿದುಕೊಂಡರಾ ನಿವೇದಿತಾ ಗೌಡ?

ನಿವೇದಿತಾ ಅಲಿಯಾಸ್ ನಿವಿ ಮನೆಯಲ್ಲೇ ಬಿದ್ದು ಹಲ್ಲು ಮುರಿದು ಕೊಂಡಿದ್ದಾರಂತೆ. ತಮ್ಮ ಮನೆಯಲ್ಲಿರುವ ಸಾಕು ನಾಯಿ ಜೊತೆ ಆಟ ಆಡುವಾಗ ಮೆಟ್ಟಿಲಿನಿಂದ ಮುಗ್ಗರಿಸಿ ಬಿದ್ದು, ಮುಂದಿರುವ ಎರಡು ಹಲ್ಲುಗಳನ್ನು ಮುರಿದುಕೊಂಡಿದ್ದಾರಂತೆ! ಹಾಗಂತ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಒಂದು ವಿಡಿಯೋ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಹೇಳಿ ಕೊಂಡಿದ್ದಾರೆ.

ನಿವೇದಿತಾ ಮಾತುಕೇಳಿ ಚಂದನ್‌ ಶೆಟ್ಟಿಗೆ ಶಾಕ್

ನಿವೇದಿತಾ ಮೊದಲು ಚಂದನ್ ಶೆಟ್ಟಿಗೆ ಕರೆ ಮಾಡುತ್ತಾರೆ. ಮ್ಯೂಸಿಕ್ ಸ್ಟುಡಿಯೋದಲ್ಲಿ ಬ್ಯುಸಿಯಾಗಿದ್ದ ಚಂದನ್, ಪತ್ನಿ‌ ಕರೆ ಸ್ವೀಕರಿಸುತ್ತಾರೆ. ನಿವಿ ಮಾತುಗಳನ್ನು ಕೇಳಿ ಅರ್ಧಕ್ಕೆ ಕರೆ ಕಟ್ ಮಾಡಿ ಮನೆಗೆ ಓಡಿ ಬರುತ್ತಾರೆ.

ಇದನ್ನೂ ಓದಿ: Samantha ಡಿವೋರ್ಸ್ ಬಗ್ಗೆ ಹೇಳಿದ್ದ ಜ್ಯೋತಿಷಿ ಈಗ ಪ್ರಭಾಸ್ ಭವಿಷ್ಯ ಹೇಳಿದ್ದಾರೆ! 'ಬಾಹುಬಲಿ' ಬಾಳಲ್ಲಿ ಹೀಗೆಲ್ಲಾ ಆಗುತ್ತಾ?

 ಮೈಸೂರಿನಲ್ಲಿದ್ದ ತಾಯಿಗೂ ಶಾಕ್

ಆನಂತರ ನಿವೇದಿತಾ ಮೈಸೂರಿನಲ್ಲಿರುವ ತಮ್ಮ ತಾಯಿಗೆ ಕರೆ ಮಾಡುತ್ತಾರೆ. ಆರೋಗ್ಯ ಸಮಸ್ಯೆಯಿಂದ ನಿವಿ ತಾಯಿ ರೆಸ್ಟ್‌ ಮಾಡುತ್ತಿರುತ್ತಾರೆ ಗಾಬರಿಗೊಂಡ ತಾಯಿ ವಿಡಿಯೋ ಕಾಲ್ ಮಾಡಲು ಮನವಿ ಮಾಡುತ್ತಾರೆ. ನಿವೇದಿತಾ ತಾಯಿ ತೀರಾ ಭಯಪಟ್ಟುಕೊಳ್ಳುತ್ತಾರೆ.

ಎಲ್ಲರನ್ನೂ ಫೂಲ್ ಮಾಡಿದ ನಿವೇದಿತಾ ಗೌಡ

ಅಸಲಿಗೆ ನಿವೇದಿತಾ ಗೌಡಗೆ ಏನೂ ಆಗಿರಲಿಲ್ಲ. ಏಪ್ರಿಲ್ ಫೂಲ್ ದಿನ ಎಲ್ಲರನ್ನೂ ಫೂಲ್ ಮಾಡಲು ಈ ರೀತಿ ಮಾಡಿದ್ದರು. ಪತ್ನಿ ಕಾಲ್ ನೋಡಿ ಓಡಿ ಬಂದ ಚಂದನ್ ಶೆಟ್ಟಿ, ನಿವಿ ಪಕ್ಕ ಇರುವ ಯೂಟ್ಯೂಬ್‌ ಟೀಂನ ನೋಡಿ ಓ ಇದು prank ಹಾ ಏಪ್ರಿಲ್ ಫೂಲ್ ಹಾ ಎಂದು ಕೇಳಿ ನಗುತ್ತಲೇ ವಾಪಸ್ ಸ್ಟುಡಿಯೋಗೆ ಹೋಗುತ್ತಾರೆ.



ಈ ರೀತಿ ಮಾಡಬೇಡ ಅಂತ ಮನವಿ ಮಾಡಿದ ತಾಯಿ

ಅತ್ತ ಅಮ್ಮ ಇದು ಫ್ರಾಂಕ್ ಅಂತ ಗೊತ್ತಾದ ತಕ್ಷಣ, 'ಈ ರೀತಿ ಮತ್ತೆ ಹೇಳಬೇಡಪ್ಪ ನನಗೆ ಭಯ ಆಯ್ತು ನಿಜ ಸುಸ್ತು ಆಯ್ತು ನಾನು ಸತ್ತು ಹೋಗ್ತೀನಿ. ಪ್ಲೀಸ್ ಬಿಡ್ತು ಬಿಡ್ತು ಅಂತ ಮೂರು ಸಲ ಹೇಳಪ್ಪ' ಎಂದು ನಿವೇದಿತಾ ತಾಯಿ ಹೇಳುತ್ತಾರೆ.

ಇದನ್ನೂ ಓದಿ: Poonam Pandey: ಫ್ಯಾನ್ಸ್ ಎದುರೇ ಬಟ್ಟೆ ಬಿಚ್ಚುತ್ತಾಳಂತೆ ಈ 'ಬಿಚ್ಚೋಲೆ ಗೌರಮ್ಮ'! ಆದರೆೆ Conditions Apply!

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಈ ರೀತಿ ಗಂಡ ಚಂದನ್ ಶೆಟ್ಟಿ, ತಾಯಿ ಹಾಗೂ ಕುಟುಂಬಸ್ಥರಿಗೆ ನಿವೇದಿತಾ ಗೌಡ ಫೂಲ್ ಮಾಡಿದ್ದಾರೆ. ಅವರೆಲ್ಲರೂ ಗಾಬರಿ ಆಗಿದ್ದು ನೋಡಿ ತಮಾಷೆ ಮಾಡಿದ್ದಾರೆ. ಇದನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪೋಡ್ ಮಾಡಿದ್ದಾರೆ. ಇದೀಗ ಈ ಫ್ರಾಂಕ್ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇದನ್ನು ನೋಡಿದ ಫ್ಯಾನ್ಸ್ ಸಂತಸಪಟ್ರೆ, ಕೆಲವರು ಇವೆಲ್ಲಾ ಬೇಕಿತ್ತಾ ಅಂತ ಕಾಮೆಂಟ್ ಮಾಡಿದ್ದಾರೆ.
Published by:Annappa Achari
First published: