• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Niveditha Gowda: ಪೇಪರ್ ಡ್ರೆಸ್​ ಧರಿಸಿ ಬಂದ ನಿವೇದಿತಾ ಗೌಡ! ಜೂನಿಯರ್ ಉರ್ಫಿ ಎಂದ ನೆಟ್ಟಿಗರು

Niveditha Gowda: ಪೇಪರ್ ಡ್ರೆಸ್​ ಧರಿಸಿ ಬಂದ ನಿವೇದಿತಾ ಗೌಡ! ಜೂನಿಯರ್ ಉರ್ಫಿ ಎಂದ ನೆಟ್ಟಿಗರು

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ನಿವೇದಿತಾ ಗೌಡ, ಇದೀಗ ಪೇಪರ್​ನಲ್ಲಿ​ ಡಿಸೈನ್ ಮಾಡಿದ ಡ್ರೆಸ್ (Paper Dress) ಧರಿಸಿ ರೀಲ್ಸ್ ಮಾಡಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ನಿವೇದಿತಾ ಗೌಡ, ಇದೀಗ ಪೇಪರ್​ನಲ್ಲಿ​ ಡಿಸೈನ್ ಮಾಡಿದ ಡ್ರೆಸ್ (Paper Dress) ಧರಿಸಿ ರೀಲ್ಸ್ ಮಾಡಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ನಿವೇದಿತಾ ಗೌಡ, ಇದೀಗ ಪೇಪರ್​ನಲ್ಲಿ​ ಡಿಸೈನ್ ಮಾಡಿದ ಡ್ರೆಸ್ (Paper Dress) ಧರಿಸಿ ರೀಲ್ಸ್ ಮಾಡಿದ್ದಾರೆ. 

  • News18 Kannada
  • 2-MIN READ
  • Last Updated :
  • Karnataka, India
  • Share this:

ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ (Niveditha Gowda) ಹಾಗೂ ಗಾಯಕ ಚಂದನ್​ ಶೆಟ್ಟಿ (Chandan Shetty) ಕಿರುತೆರೆಯ ಸ್ಟಾರ್​ ಜೋಡಿಯಾಗಿದ್ದಾರೆ. ಇತ್ತೀಚಿಗೆ ಪ್ರೆಗ್ನೆಂಟ್​ ವಿಚಾರಕ್ಕೆ ದಂಪತಿ ಸಖತ್ ಸುದ್ದಿಯಾಗಿದ್ರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ನಿವೇದಿತಾ ಗೌಡ, ಆಗಾಗ ವಿಡಿಯೋಗಳನ್ನು ಅಪ್ಲೋಡ್​ ಮಾಡುತ್ತಿರುತ್ತಾರೆ. ಇದೀಗ ಪೇಪರ್​ನಲ್ಲಿ​ ಡಿಸೈನ್ ಮಾಡಿದ ಡ್ರೆಸ್ (Paper Dress) ಧರಿಸಿ ನಿವೇದಿತಾ ಗೌಡ ರೀಲ್ಸ್ ಮಾಡಿದ್ದಾರೆ. 


ಪೇಪರ್​ ಡ್ರೆಸ್ ಧರಿಸಿ ಬಂದ ನಿವೇದಿತಾ ಗೌಡ


ನಿವೇದಿತಾ ಗೌಡ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ರೀಲ್ಸ್ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತಾರೆ. ಲಾಗ್​ ಗೌನ್​ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನಿವೇದಿತಾ ಗೊಂಬೆಯಂತೆ ರೆಡಿಯಾಗಿ ಬರ್ತಾರೆ. ಇದೀಗ ಪೇಪರ್ ಡ್ರೆಸ್ (Paper Dress) ತೊಟ್ಟು ನೆಟ್ಟಿಗರ  ಗಮನ ಸೆಳೆದಿದ್ದಾರೆ. 




ನಿವೇದಿತಾ ರೀಲ್ಸ್​ಗೆ ಬಗೆ ಬಗೆಯ ಕಮೆಂಟ್​


ನಿವೇದಿತಾ ಗೌಡ ಕಪ್ಪು ಬಣ್ಣದ ಟೀ ಶರ್ಟ್ ಮೇಲೆ ಪೇಪರ್ ಡ್ರೆಸ್ ಧರಿಸಿದ್ದು ಮ್ಯೂಸಿಕ್​ಗೆ ಡ್ಯಾನ್ಸ್ ಮಾಡಿದ್ದಾರೆ. ಈ ವೀಡಿಯೋವನ್ನು ನಿವೇದಿತಾ ಇನ್ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ, ಇದೀಗ ಸೋಶಿಯಲ್ ಮೀಡಿಯಾದಲ್ಲೂ ಸಖತ್ ವೈರಲ್ ಆಗುತ್ತಿದ್ದು, ವೀಡಿಯೋ ನೋಡ್ತಿದ್ದಂತೆ ನೆಟ್ಟಿಗರು ನಿವೇದಿತಾ ಗೌಡ ಅವರನ್ನು ಜ್ಯೂನಿಯರ್ ಉರ್ಫಿ ಜಾವೇದ್ ಎಂದು ಕರೆಯುತ್ತಿದ್ದಾರೆ. ನಿವೇದಿಗೌಡ ಉರ್ಫಿ ಜಾವೇದ್ (Urfi Javed) ಅವರಂತೆ ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ.


ಲಿಪ್ ಕಿಸ್ ವಿಡಿಯೋ ಶೇರ್​


ಇತ್ತೀಚಿಗಷ್ಟೇ ನಿವೇದಿತಾ ಪತಿಯನ್ನು ಹಗ್ ಮಾಡಿ ಲಿಪ್ ಕಿಸ್ ಮಾಡುವ ವಿಡಿಯೋ ಶೇರ್ ಮಾಡಿದ್ದರು. ಈ ವಿಡಿಯೋದಲ್ಲಿ ಮನೆಯೊಳಗಿನ ದೃಶ್ಯ, ಕಾರ್ ಪ್ರಯಾಣ, ಏರ್ಪೋರ್ಟ್ ಲುಕ್ ಎಲ್ಲವೂ ಕಾಣಸಿಗುತ್ತದೆ. ವಿಡಿಯೋ ಶೇರ್ ಮಾಡುವಾಗ ನಿವೇದಿತಾ ಅವರು ನಾನು ಈಗಲೇ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ನಿವೇದಿತಾ ಗೌಡ ನೀಲಿ ಶಾರ್ಟ್ಸ್ ಹಾಗೂ ವೈಟ್ ಟೀ ಟಾಪ್ ಧರಿಸಿದ್ದರೆ ಚಂದನ್ ಬ್ಲಾಕ್ ಪ್ಯಾಂಟ್ ಮೇಲೆ ಗಾಢ ಹಳದಿ ಬಣ್ಣದ ಟೀಶರ್ಟ್ ಧರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.




ನೆಟ್ಟಿಗರ ಪ್ರೀತಿಯ ನಿವಿ


ಟಿಕ್​ ಟಾಕ್ ಸ್ಟಾರ್ ಆಗಿದ್ದ ನಿವೇದಿತಾ ಗೌಡ ಈಗ ಕನ್ನಡಿಗರು ಮಾತ್ರವಲ್ಲದೆ ಎಲ್ಲೆಡೆಯಿಂದ ವಿಶೇಷ ಅಭಿಮಾನಿಗಳನ್ನು ಹೊಂದಿದ್ದಾರೆ. ದಿನನಿತ್ಯ ಚಂದದ ರೀಲ್ಸ್ ವಿಡಿಯೋ ಮಾಡುವ ನಟಿ ಅವುಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಾರೆ. ಅಭಿಮಾನಿಗಳು ಸಹ ನಿವಿ ಅವರ ಸೂಪರ್ ಕ್ಯೂಟ್ ವಿಡಿಯೋಗಳನ್ನು ಎಂಜಾಯ್ ಮಾಡುತ್ತಾರೆ.




ಎಲ್ಲಿ ಹೋದ್ರೂ ರೀಲ್ಸ್


ಅವರು ಎಲ್ಲಿಗೆ ಹೋದರೂ, ಬಂದರೂ ಸಹ ರೀಲ್ಸ್ ಮಾಡುತ್ತಾರೆ. ಅವರು ಒಂದು ಯೂಟ್ಯೂಬ್ ಚಾನೆಲ್ ಕೂಡ ಮಾಡಿಕೊಂಡಿದ್ದು, ಅದರಲ್ಲಿ ತಮ್ಮ ಎಲ್ಲಾ ವಿಡಿಯೋಗಳನ್ನು ಮಾಡಿ ಹಾಕುತ್ತಾರೆ. ಒಟ್ಟಾರೆಯಾಗಿ ಅವರು ಎಲ್ಲಾ ಕಡೆ ಫೇಮಸ್​. ನಿವೇದಿತಾ ಕಿರುತೆರೆಯಲ್ಲಿ ಕೂಡಾ ಬ್ಯುಸಿ ಇರುವ ನಟಿ. ಬಿಗ್​ಬಾಸ್​ ನಂತರ ಫೇಮಸ್​ ಆದ ನಿವೇದಿತಾ, ರಾಜಾ-ರಾಣಿ ಶೋನಲ್ಲಿ ಜನರಿಗೆ ಮನರಂಜನೆ ನೀಡಿದ್ದರು. ಈಗ ಗಿಚ್ಚಿಗಿಲಿ ಗಿಲಿ ಶೋ ಮೂಲಕ ಕಾಮಿಡಿ ಮಾಡುತ್ತಿದ್ದು, ಅಲ್ಲೂ ಸಹ ಅವರದ್ದೇ ಹವಾ ಎನ್ನಬಹುದು.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು