Niveditha Gowda: ಹಸಿರು ಸೀರೆಯುಟ್ಟ ನಿವೇದಿತಾ ಗೌಡ; ಯಾರಿಗಾಗಿ ಕಾಯ್ತಿದೆ ಈ ಗೊಂಬೆ?
Niveditha Gowda: ಹಸಿರು ಸೀರೆಯುಟ್ಟ ನಿವೇದಿತಾ ಗೌಡ; ಯಾರಿಗಾಗಿ ಕಾಯ್ತಿದೆ ಈ ಗೊಂಬೆ?
ಬಿಗ್ ಬಾಸ್ ಸ್ಪರ್ಧೆಯಾಗಿದ್ದ ನಿವೇದಿತಾ ಗೌಡ (Niveditha Gowda) ಇದೀಗ ಫುಲ್ ಬ್ಯುಸಿ ಆಗಿದ್ದಾರೆ. ಟಿವಿ ಶೋಗಳಲ್ಲಿ ಕಾಣಿಸಿಕೊಳ್ತಿರುವ ನಿವೇದಿತಾ ಗೌಡ, ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇದೀಗ ನಿವಿ ಹೊಸ ಫೋಟೋ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಸ್ಪರ್ಧೆಯಾಗಿದ್ದ ನಿವೇದಿತಾ ಗೌಡ (Niveditha Gowda) ಇದೀಗ ಫುಲ್ ಬ್ಯುಸಿ ಆಗಿದ್ದಾರೆ. ಟಿವಿ ಶೋಗಳಲ್ಲಿ ಕಾಣಿಸಿಕೊಳ್ತಿರುವ ನಿವೇದಿತಾ ಗೌಡ, ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇದೀಗ ನಿವಿ ಹೊಸ ಫೋಟೋ ಹಂಚಿಕೊಂಡಿದ್ದಾರೆ.
ಕಲರ್ ಕನ್ನಡ ಚಾನೆಲ್ನಲ್ಲಿ ಪ್ರಸಾರವಾಗುವ ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋನಲ್ಲಿ ನಿವೇದಿತಾ ಕಾಣಿಸಿಕೊಳ್ತಿದ್ದಾರೆ. ತಮ್ಮ ಸ್ಟೈಲ್ ಹಾಗೂ ಕಾಮಿಡಿ ಪಂಚ್ ಮೂಲಕ ಪ್ರೇಕ್ಷಕರಿಗೆ ನಿವೇದಿತಾ ಗೌಡ ಕಿಕ್ ಕೊಡ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ನಿವೇದಿತಾ ಗೌಡ ಇದೀಗ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೀರೆಯುಟ್ಟು ನಿವಿ ಸಖತ್ ಆಗಿಯೇ ಪೋಸ್ ಕೊಟ್ಟಿದ್ದಾರೆ.
ಹಸಿರು ಸೀರೆಯುಟ್ಟು ನಿವೇದಿತಾ ಗೌಡ ಫೋಟೋಗೆ ಪೋಸ್ ಕೊಟ್ಟಿದ್ದು, ಫೋಟೋ ಸಖತ್ ವೈರಲ್ ಆಗಿದೆ. ಅಭಿಮಾನಿಗಳಿ ನಿವಿ ಫೋಟೋಗೆ ಲೈಕ್ಗಳ ಸುರಿಮಳೆಗೈದಿದ್ದಾರೆ. ಜೊತೆಗೆ ಹಸಿರು ಸೀರೆಯುಟ್ಟು ಯಾರಿಗೆ ಕಾದಿರುವ ಎಂದು ನೆಟ್ಟಿಗರು ಕಮೆಂಟ್ ಕೂಡ ಮಾಡ್ತಿದ್ದಾರೆ.
ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ನಿವೇದಿತಾ ಮೊದಲು ಟಿಕ್ ಟಾಕ್ ಮೂಲಕವೇ ಫುಲ್ ಫೇಮಸ್ ಆಗಿದ್ರು. ಹೀಗೆ ಗುರುತಿಸಿಕೊಂಡ ನಿವೇದಿತಾ ಬಿಗ್ ಬಾಸ್ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡು. ಬೇಬಿ ಡಾಲ್ ರೀತಿ ರೆಡಿಯಾಗ್ತಿದ್ದ ನಿವೇದಿತಾ ಗೌಡ ಇದೀಗ ಗೊಂಬೆ ಅಂತಾನೆ ಫೇಮಸ್ ಆಗಿದ್ದಾರೆ.
ನಿವೇದಿತಾ ಗೌಡ ಅವರು ಸದ್ಯ ಇನ್ಸ್ಟಾಗ್ರಾಮ್ನಲ್ಲಿ ಸುಮಾರು 1.6 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ನಿವೇದಿತಾ ಅವರು ಈವರೆಗೂ 1,607 ಪೋಸ್ಟ್ಗಳನ್ನು ಮಾಡಿದ್ದಾರೆ. ನಿವೇದಿತಾ ಗೌಡಗೆ ಅಪಾರ ಅಭಿಮಾನಿ ಬಳಗ ಕೂಡ ಇದೆ.
ಬಹುತೇಕ ಎಲ್ಲ ದಿನಗಳಲ್ಲೂ ನಿವೇದಿತಾ ಒಂದಾಲ್ಲ ಒಂದು ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ತಾರೆ. ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದರಿಂದ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಲೇ ಇದೆ.
ಬಿಗ್ ಮನೆಯಲ್ಲಿ ಸಖತ್ ಮನರಂಜನೆ ಕೊಡ್ತಿದ್ದ ನಿವೇದಿತಾ ಗೌಡ ತಮ್ಮ ಮುಗ್ದ ಮಾತುಗಳಿಂದ ಅನೇಕ ಮನಗೆದ್ದಿದ್ದಾರೆ. ಹಾಗೇ ಅನೇಕ ಬಾರಿ ಟ್ರೋಲ್ಗೂ ಕೂಡ ಒಳಗಾಗಿದ್ದಾರೆ. ಸೋಶಿಯಲ್ ಮೀಡಿಯಾಲ್ಲಿ ಆಗಾಗೇ ವಿಡಿಯೋ, ಫೋಟೋಗಳನ್ನು ಹಂಚಿಕೊಳ್ತಾರೆ.
ಬಿಗ್ ಬಾಸ್ ಕನ್ನಡ ಸೀಸನ್ 5 ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿದ್ದು. ನಂತರ ಇಬ್ಬರ ನಡುವೆ ಪ್ರೀತಿ ಚಿಗುರಿತು. 2020ರ ಫೆಬ್ರವರಿಯಲ್ಲಿ ಹಸೆಮಣೆ ಏರಿದರು.
Published by:ಪಾವನ ಎಚ್ ಎಸ್
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ