Niveditha Gowda: ಟಾಲಿವುಡ್​ಗೆ ಎಂಟ್ರಿ ಕೊಡ್ತಾರಾ ನಿವೇದಿತಾ ಗೌಡ? ತೆರೆ ಮೇಲೆ ಗೊಂಬೆ ನೋಡಲು ಕಾಯ್ತಿದ್ದಾರೆ ಫ್ಯಾನ್ಸ್

Niveditha Gowda: ನಿವೇದಿತಾ ದಿನಕ್ಕೆ ಒಂದಾದರೂ ವಿಡಿಯೋ ಹಾಕುತ್ತಾರೆ. ಅವರ ಅಭಿಮಾನಿಗಳು ಹಾಗೂ ಜನರೂ ಕೂಡ ಅವರ ಫೋಟೋ ಹಾಗೂ ವಿಡಿಯೋಗಾಗಿ ಕಾಯುತ್ತಿರುತ್ತಾರೆ. ಹಾಗೆಯೇ ಇವರಿಗೆ ಫಾಲೋವರ್ಸ್ಗಳಿಗೇನು ಕಡಿಮೆ ಇಲ್ಲ.

ನಿವೇದಿತಾ ಗೌಡ

ನಿವೇದಿತಾ ಗೌಡ

  • Share this:
ನಿವೇದಿತಾ ಗೌಡ (Niveditha Gowda), ಸಾಮಾಜಿಕ ಜಾಲಾತಾಣದಲ್ಲಿ (Social Media) ಹೆಚ್ಚು ಪ್ರಸಿದ್ಧ ಹಾಗೂ ಹೆಚ್ಚು ಟ್ರೋಲ್​ ಆಗುವ ಸೆಲೆಬ್ರಿಟಿಗಳಲ್ಲಿ (Celebrity)  ಒಬ್ಬರು ಎಂದರೆ ತಪ್ಪಾಗಲ್ಲ. ಯಾವಾಗಲೂ ಒಂದೆಲ್ಲ ಒಂದು ವಿಚಾರವಾಗಿ ಅವರು ಟ್ರೆಂಡ್​ನಲ್ಲಿರುತ್ತಾರೆ. ರಿಯಾಲಿಟಿ ಶೋ (Reality Show) ಇರಲಿ ಅಥವಾ ರೀಲ್ಸ್ ಇರಲಿ ನಿವೇದಿತಾ ಮಾಡದ ಅವತಾರಗಳಿಲ್ಲ. ಹಾಗೆಯೇ ನಿವೇದಿತಾ ಅವರ ರೀಲ್ಸ್ ಟ್ರೋಲ್ ಆಗುವುದರ ಜೊತೆಗೆ ಜನರಿಗೆ ಇಷ್ಟವಾಗುತ್ತದೆ ಕೂಡ. ಈಗಾಗಲೇ ಅವರು ಮಿಸೆಸ್ ಇಂಡಿಯಾ ಇಂಕ್‍ನ ಪೀಪಲ್ಸ್ ಚಾಯ್ಸ್ 2022 ಎನ್ನುವ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂಬುದು ಎಲ್ಲರಿಗೂ, ಆದರೆ ನಿವೇದಿತಾ ಸಿನಿಮಾಗಳಲ್ಲಿ ಯಾಕೆ ಕಾಣಿಸಿಕೊಂಡಿಲ್ಲ ಇದುವರೆಗೂ ಎನ್ನುವ ಪ್ರಶ್ನೆ ಎದ್ದಿದ್ದು, ಅದಕ್ಕೆ ಅವರೇ ಉತ್ತರ ನೀಡಿದ್ದಾರೆ.   

ಸಿನಿಮಾ ಆಫರ್ ಬರುತ್ತಿದೆಯಂತೆ

ಬಿಗ್​ಬಾಸ್​ ಮೂಲಕ ಖ್ಯಾತಿ ಪಡೆದ ನಟಿ ನಂತರ ಬೇರೆ ಬೇರೆ ರಿಯಾಲಿಟಿ ಶೋಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಸದ್ಯ ಕಲರ್ಸ್​ ವಾಹಿನಿಯಲ್ಲಿ ಕಿಚ್ಚ ಗಿಲಿ ಗಿಲಿ ಎನ್ನುವ ಶೋನಲ್ಲಿ ಸಹ ಭಾಗವಹಿಸಿದ್ದಾರೆ. ಆದರೆ ಸಿನಿಮಾದಲ್ಲಿ ಮಾತ್ರ ಕಾಣಿಸಿರಲಿಲ್ಲ. ಆದರೆ ಇದೀಗ ಬಂದಿರುವ ಮಾಹಿತಿಯ ಪ್ರಕಾರ ನಿವೇದಿತಾಗೆ ಈಗ ಸಿನಿಮಾಗಳಿಗೆ ಆಫರ್​ ಬರುತ್ತಿದೆಯಂತೆ.  ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಬರುತ್ತಿದ್ದು, ಕನ್ನಡ ಮಾತ್ರವಲ್ಲದೇ ಅವರಿಗೆ ತೆಲುಗು ಮತ್ತು ತಮಿಳಿನಲ್ಲಿ ಸಿನಿಮಾ ಆಫರ್​ ಬಂದಿವೆ. ಈಗಾಗಲೇ ಕಥೆ ಕೇಳಿ, ಥ್ರಿಲ್ ಆಗಿರುವ ನಿವೇದಿತಾ ಒಪ್ಪಿಗೆ ಸೂಚಿಸಿದ್ದಾರೆ ಎನ್ನುವ ಮಾಹಿತಿ ಇದೆ.

ಮುಖ್ಯವಾಗಿ ಮೊದಲು ಟಾಲಿವುಡ್ ಸಿನಿಮಾ ಸೆಟ್ಟೇರುತ್ತಿದ್ದು, ನಿವೇದಿತಾ ಫುಲ್ ರೆಡಿಯಾಗಿದ್ದಾರಂತೆ. ಅಲ್ಲದೇ, ತಮ್ಮ ಮೊದಲ ಸಿನಿಮಾದಲ್ಲಿಯೇ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಹೊಸ ಸಿನಿಮಾದ ಬಗ್ಗೆ ಅವರೇ ಅಧಿಕೃತವಾಗಿ ತಿಳಿಸಲಿದ್ದಾರಂತೆ.  ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ್ದ ನಟಿ, ನಾನು ಸಿನಿಮಾದಲ್ಲಿ ನಟಿಸಲ್ಲ ಎಂದಿಲ್ಲ. ನಾನು ಟಿವಿ ಶೋಗಳಲ್ಲಿ ಬ್ಯುಸಿ ಇದ್ದೆ. ಅಲ್ಲದೇ ನನಗೆ ಯಾವುದೇ ಸಿನಿಮಾ ಆಫರ್​ಗಳು ಬಂದಿರಲಿಲ್ಲ. ಇದೀಗ ಕೆಲ ಆಫರ್​ಗಳು ಬಂದಿದೆ. ತೆಲುಗು ಸಿನಿಮಾ ಬಗ್ಗೆ ನಾನು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೀನಿ ಎಂದಿದ್ದಾರೆ.
ಇದನ್ನೂ ಓದಿ: ಮನೆಯಲ್ಲಿ ಕುಳಿತು ನೋಡಿ ದಿ ಕಾಶ್ಮೀರ್ ಫೈಲ್ಸ್​ - ಎಲ್ಲಿ, ಯಾವಾಗ? ಇಲ್ಲಿದೆ ಫುಲ್​ ಡೀಟೈಲ್ಸ್​

ವೈರಲ್ ಆಗುತ್ತೆ ನಿವೇದಿತಾ ವಿಡಿಯೋಗಳು

ನಿವೇದಿತಾ ದಿನಕ್ಕೆ ಒಂದಾದರೂ ವಿಡಿಯೋ ಹಾಕುತ್ತಾರೆ. ಅವರ ಅಭಿಮಾನಿಗಳು ಹಾಗೂ ಜನರೂ ಕೂಡ ಅವರ ಫೋಟೋ ಹಾಗೂ ವಿಡಿಯೋಗಾಗಿ ಕಾಯುತ್ತಿರುತ್ತಾರೆ. ಹಾಗೆಯೇ ಇವರಿಗೆ ಫಾಲೋವರ್ಸ್ಗಳಿಗೇನು ಕಡಿಮೆ ಇಲ್ಲ. ಸಾಮಾಜಿಕ ಜಾಲಾತಾಣದ (Social Media) ಮೂಲಕ ಫೇಮ್ ಪಡೆದು ನಂತರ ಬಿಗ್ಬಾಸ್ ಸೀಸನ್ನಲ್ಲಿ ತಮ್ಮ ವಿಶಿಷ್ಟ ರೀತಿಯ ಮಾತು ಹಾಗೂ ಫ್ಯಾಷನ್ ಕಾರಣದಿಂದ ಪ್ರಸಿದ್ದರಾದವರು ಈ ಸುಂದರಿ. ಗೊಂಬೆ ಎಂದೇ ಪ್ರೀತಿಯಿಂದ ಅಭಿಮಾನಿಗಳು ಇವರನ್ನು ಕರೆಯೋದು. ಇನ್ನು ನಿವೇದಿತಾ ಗೌಡ ಏನೇ ಪೋಸ್ಟ್ ಹಾಕಿದ್ರು ಅದು ವೈರಲ್ ಆಗುತ್ತೆ.
ಇದನ್ನೂ ಓದಿ: ಒಟ್ಟಿಗೆ ಕಾಣಿಸಿಕೊಂಡ ರಿತೇಶ್​ ಹಾಗೂ ಶಾಹಿದ್​ ದಂಪತಿಗಳು, ಪಾಪರಾಜಿಗಳ ಫೋಟೋಗೆ ಪೋಸ್​ ಕೊಟ್ಟ ಸ್ಟಾರ್ಸ್

ಇನ್ನು ಕೇವಲ ಒಂದು ಅಂತಲ್ಲ ಅವರ ಬಹುತೇಕ ವಿಡಿಯೋಗಳು ವೈರಲ್ ಎನ್ನಬಹುದು. ಅವರು ಎಲ್ಲಿಗೆ ಹೋದರೂ, ಬಂದರೂ ಸಹ ರೀಲ್ಸ್ ಮಾಡುತ್ತಾರೆ. ಅವರು ಒಂದು ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದು, ಅದರಲ್ಲಿ ತಮ್ಮ ಎಲ್ಲಾ ವಿಡಿಯೋಗಳನ್ನು ಮಾಡಿ ಹಾಕುತ್ತಾರೆ. ಒಟ್ಟಾರೆಯಾಗಿ ಅವರು ಎಲ್ಲಾ ಕಡೆ ಫೇಮಸ್​.  ನಿವೇದಿತಾ ಕಿರುತೆರೆಯಲ್ಲಿ ಸಹ ಬ್ಯುಸಿ ಇರುವ ನಟಿ. ಬಿಗ್​ಬಾಸ್​ ನಂತರ ಫೇಮಸ್​ ಆದ ನಿವೇದಿತಾ, ರಾಜಾ-ರಾಣಿ ಶೋನಲ್ಲಿ ಜನರಿಗೆ ಮನರಂಜನೆ ನೀಡಿದ್ದರು. ಈಗ ಗಿಚ್ಚಗಿಲಿ ಗಿಲಿ ಶೋ ಮೂಲಕ ಕಾಮಿಡಿ ಮಾಡುತ್ತಿದ್ದು, ಅಲ್ಲೂ ಸಹ ಅವರದ್ದೇ ಹವಾ ಎನ್ನಬಹುದು.
Published by:Sandhya M
First published: