Niveditha Gowda: ಮತ್ತೆ ಟ್ರೋಲ್ ಆದ ನಿವೇದಿತಾ ಗೌಡ, ಯಾಕಮ್ಮ ಸರಿ ಹೇಳೋಕೆ ಏನು ಅಂತಿದ್ದಾರೆ ಫ್ಯಾನ್ಸ್​

Niveditha Gowda Gets Trolled: ಇಷ್ಟಕ್ಕೆ ಮುಗಿದಿಲ್ಲ, ನಟಿ ಶ್ರುತಿ, ನಿವೇದಿತಾ ಬಳಿ ಈ ಪೂಜೆಯ ಆಚರಣೆಯನ್ನ ಮಾಡುವುದು ಹೇಗೆ ಎಂದು ಕೇಳಿದ್ದಾರೆ. ಅದಕ್ಕೆ ನಿವೇದಿತಾ, ತಟ್ಟೆ ಇಟ್ಟು, ತಟ್ಟೆಯ ಮೇಲೆ ಕಾಲಿಟ್ಟು ನೀರು ಹಾಕಿ, ಉಜ್ಜಬೇಕು ಎಂದಿದ್ದಾರೆ.

ನಿವೇದಿತಾ ಗೌಡ

ನಿವೇದಿತಾ ಗೌಡ

  • Share this:
ನಿವೇದಿತಾ ಗೌಡ (Niveditha Gowda) ಕಿರುತೆರೆಯಲ್ಲಿ (Small Screen) ಬಹಳ ಆಕ್ಟೀವ್​ ಇದ್ದಾರೆ. ಒಂದರ ನಂತರ ಒಂದು ರಿಯಾಲಿಟಿ ಶೋಗಳನ್ನು (Reality Show) ಅವರ ಒಪ್ಪಿಕೊಂಡಿದ್ದಾರೆ. ಸದ್ಯ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಬ್ಯುಸಿ ಇದ್ದು, ಸೋಷಿಯಲ್ ಮೀಡಿಯಾದಲ್ಲಿ (Social Media)  ಸಹ ವಿಡಿಯೋ ಹಾಗೂ ಫೋಟೋಗಳನ್ನು (Photo) ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಹಾಗೆಯೇ ನಿವೇದಿತಾ ಗೌಡ ಹಲವಾರಿ ಬಾರಿ ಟ್ರೋಲ್​ (troll) ಆಗಿದ್ದಾರೆ. ಅದರಲ್ಲೂ ಕನ್ನಡ (Kannada)  ಮಾತನಾಡುವ ವಿಚಾರವಾಗಿ ಟೀಕೆಗಳನ್ನು ಎದುರಿಸಿದ್ದಾರೆ. ಈ ಬಾರಿ ಸಹ ಮತ್ತೆ ಅದೇ ವಿಚಾರವಾಗಿ ಅವರು ಟ್ರೋಲ್ ಆಗಿದ್ದಾರೆ.

ಭೀಮನ ಅಮವಾಸ್ಯೆ ಹೇಳಲು ಪರದಾಡಿದ ನಿವೇದಿತಾ

ಹೌದು, ಇತ್ತೀಚೆಗಷ್ಟೇ ಪ್ರಸಾರವಾದ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ನಿವೇದಿತಾ ಮಾತನಾಡಿರುವುದು ಎಲ್ಲೆಡೆ ವೈರಲ್ ಆಗುತ್ತಿದ್ದು, ಕೆಲವರು ಅದನ್ನು ಟೀಕೆ ಮಾಡಿದ್ದಾರೆ. ಈ ಕಾರ್ಯಕ್ರದಲ್ಲಿ ಚಂದನ್​ ಶೆಟ್ಟಿ ಸಹ ಈ ಬಾರಿ ಭಾಗವಹಿಸಿದ್ದರು. ಆ ಸಮಯದಲ್ಲಿ ಕಾರ್ಯಕ್ರಮದ ನಿರೂಪಕ ನಿಮ್ಮ ಪಾದ ಪೂಜೆ ಆಗಿಲ್ವಾ ಎಂದು ಚಂದನ್ ಅವರ ಬಳಿ ಕೇಳಿದ್ದಾರೆ. ಆಗ ಚಂದನ್, ಇಲ್ಲಾ ಇನ್ನೂ ಆಗಿಲ್ಲ ಎಂದಿದ್ದಾರೆ. ತಕ್ಷಣ ನಿವೇದಿತಾ ಸಂಜೆ ಮನೆಗೆ ಹೋದ ನಂತರ ಪೂಜೆ ಮಾಡ್ತೀನಿ ಎಂದಿದ್ದಾರೆ. ಆದರೆ ಈ ಸಮಯದಲ್ಲಿ ಭೀಮನ ಅಮವಾಸ್ಯೆ ಎನ್ನಲು ಹೋಗಿ, ಭೀಮನ ಅಮಮಾಸೆ, ಅವಮಾಸೆ ಮಾಡ್ತಿನಿ ಅಂತಾ ಹೇಳಿದ್ದಾರೆ. ಅದು ಅಲ್ಲಿದ್ದವರನ್ನು ನಗೆಗಡಲಲ್ಲಿ ತೇಲಿಸಿದೆ.

actress Niveditha Gowda home tour video goes viral

ಇಷ್ಟಕ್ಕೆ ಮುಗಿದಿಲ್ಲ, ನಟಿ ಶ್ರುತಿ, ನಿವೇದಿತಾ ಬಳಿ ಈ ಪೂಜೆಯ ಆಚರಣೆಯನ್ನ ಮಾಡುವುದು ಹೇಗೆ ಎಂದು ಕೇಳಿದ್ದಾರೆ. ಅದಕ್ಕೆ ನಿವೇದಿತಾ, ತಟ್ಟೆ ಇಟ್ಟು, ತಟ್ಟೆಯ ಮೇಲೆ ಕಾಲಿಟ್ಟು ನೀರು ಹಾಕಿ, ಉಜ್ಜಬೇಕು ಎಂದಿದ್ದು, ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಕೆಲವರು ಅವರ ಮಾತನ್ನು ತಮಾಷೆಯಾಗಿ ತೆಗೆದುಕೊಂಡಿದ್ದು, ಇನ್ನೂ ಕೆಲವರು ಅವರ ಕನ್ನಡ ಕೇಳಿ ಸೋಷಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.




ಟಾಲಿವುಡ್​ನಲ್ಲಿ ಸಿನಿಮಾ ಒಪ್ಪಿಕೊಂಡಿದ್ದಾರೆ

ಇನ್ನು ಬಿಗ್​ಬಾಸ್​ ಮೂಲಕ ಖ್ಯಾತಿ ಪಡೆದ ನಟಿ ನಂತರ ಬೇರೆ ಬೇರೆ ರಿಯಾಲಿಟಿ ಶೋಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಆದರೆ ಸಿನಿಮಾದಲ್ಲಿ ಮಾತ್ರ ಕಾಣಿಸಿರಲಿಲ್ಲ. ಆದರೆ ಇದೀಗ ಬಂದಿರುವ ಮಾಹಿತಿಯ ಪ್ರಕಾರ ನಿವೇದಿತಾಗೆ ಈಗ ಸಿನಿಮಾಗಳಿಗೆ ಆಫರ್​ ಬರುತ್ತಿದೆಯಂತೆ.  ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಬರುತ್ತಿದ್ದು, ಕನ್ನಡ ಮಾತ್ರವಲ್ಲದೇ ಅವರಿಗೆ ತೆಲುಗು ಮತ್ತು ತಮಿಳಿನಲ್ಲಿ ಸಿನಿಮಾ ಆಫರ್​ ಬಂದಿವೆ. ಈಗಾಗಲೇ ಕಥೆ ಕೇಳಿ, ಥ್ರಿಲ್ ಆಗಿರುವ ನಿವೇದಿತಾ ಒಪ್ಪಿಗೆ ಸೂಚಿಸಿದ್ದಾರೆ ಎನ್ನುವ ಮಾಹಿತಿ ಇದೆ.

Niveditha Gowda getting opportunities to act in films

ಇದನ್ನೂ ಓದಿ: ಥೇಟ್ ಮಹಾಲಕ್ಷ್ಮಿಯಂತೆ ಕಂಗೊಳಿಸಿದ ರಾಧಿಕಾ ಪಂಡಿತ್! ಪೂಜೆ ಮಾಡಲು ಸಹಾಯ ಮಾಡಿದ್ದು ಇವರಂತೆ

ನಿವೇದಿತಾ ದಿನಕ್ಕೆ ಒಂದಾದರೂ ವಿಡಿಯೋ ಹಾಕುತ್ತಾರೆ. ಅವರ ಅಭಿಮಾನಿಗಳು ಮತ್ತು ಜನರೂ ಕೂಡ ಅವರ ಫೋಟೋ ಹಾಗೂ ವಿಡಿಯೋಗಾಗಿ ಕಾಯುತ್ತಿರುತ್ತಾರೆ. ಹಾಗೆಯೇ ಇವರಿಗೆ ಫಾಲೋವರ್ಸ್ಗಳಿಗೇನು ಕಡಿಮೆ ಇಲ್ಲ. ಸಾಮಾಜಿಕ ಜಾಲತಾಣದ ಮೂಲಕ ಫೇಮ್ ಪಡೆದು ನಂತರ ಬಿಗ್ಬಾಸ್ ಸೀಸನ್​ನಲ್ಲಿ ತಮ್ಮ ವಿಶಿಷ್ಟ ರೀತಿಯ ಮಾತು ಹಾಗೂ ಫ್ಯಾಷನ್ ಕಾರಣದಿಂದ ಪ್ರಸಿದ್ದರಾದವರು ಈ ಸುಂದರಿ. ಗೊಂಬೆ ಎಂದೇ ಪ್ರೀತಿಯಿಂದ ಅಭಿಮಾನಿಗಳು ಇವರನ್ನು ಕರೆಯೋದು. ಇನ್ನು ನಿವೇದಿತಾ ಗೌಡ ಏನೇ ಪೋಸ್ಟ್ ಹಾಕಿದ್ರು ಅದು ವೈರಲ್ ಆಗುತ್ತೆ.
Published by:Sandhya M
First published: