• Home
  • »
  • News
  • »
  • entertainment
  • »
  • Niveditha Gowda: ನಿವೇದಿತಾ ಹೊಸ ಲುಕ್! ಹೈಹೀಲ್ಸ್ ಶಕುಂತಲೆ ಎಂದ ನೆಟ್ಟಿಗರು

Niveditha Gowda: ನಿವೇದಿತಾ ಹೊಸ ಲುಕ್! ಹೈಹೀಲ್ಸ್ ಶಕುಂತಲೆ ಎಂದ ನೆಟ್ಟಿಗರು

ನಿವೇದಿತಾ ಗೌಡ

ನಿವೇದಿತಾ ಗೌಡ

ನಟಿ ನಿವೇದಿತಾ ಗೌಡ ಡಿಫರೆಂಟ್ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಶಕುಂತಲೆಯಾದ ನಿವೇದಿತಾ ಅವರ ವಿಡಿಯೋದಲ್ಲಿ ನೆಟ್ಟಿಗರು ನೋಡಿದ್ದು ಮಾತ್ರ ನಟಿಯ ಕಾಲನ್ನು.

  • News18 Kannada
  • Last Updated :
  • Bangalore, India
  • Share this:

ನಟಿ ನಿವೇದಿತಾ ಗೌಡ ವಿಡಿಯೋ ಹಾಗೂ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಅಪಾರ ಅಭಿಮಾನಿಗಳನ್ನು (Fans) ಗಳಿಸಿಕೊಂಡಿರುವ ಬಿಗ್ ಬಾಸ್  (Bigg Boss) ಖ್ಯಾತಿಯ ನಿವೇದಿತಾ ಗೌಡ (Niveditha Gowda) ಈಗ ದಾಂಪತ್ಯ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಮದುವೆಯಾದ (Marriage) ಮೇಲೆ ನಿವೇದಿತಾ ಸಖತ್ ಆ್ಯಕ್ಟಿವ್ ಆಗಿದ್ದು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ರಿಯಾಲಿಟಿ  ಶೋಗಳಲ್ಲಿ (Reality Show) ಅವಕಾಶಗಳನ್ನು ಪಡೆಯುತ್ತಿದ್ದಾರೆ. ಇದಲ್ಲದೆ ನಟಿ ತಮ್ಮ ಯೂಟ್ಯೂಬ್ ಚಾನೆಲ್, ಸೋಷಿಯಲ್ ಮೀಡಿಯಾ ಪೇಜ್ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸುತ್ತಿದ್ದಾರೆ. ನಟಿ ಈಗ ಶಕುಂತಲೆಯಾಗಿ (Shakunthala) ಕಾಣಿಸಿಕೊಂಡಿದ್ದಾರೆ. ಬಿಳಿ ಬಣ್ಣದ ಉಡುಗೆಯಲ್ಲಿ ನಿವೇದಿತಾ ಗೌಡ ಶಕುಂತಲೆಯಂತೆ ಡ್ರೆಸ್ ಮಾಡಿದ್ದು ವಿಡಿಯೋವನ್ನು ಇನ್​​ಸ್ಟಾಗ್ರಾಮ್​ನಲ್ಲಿ (Instagram) ಶೇರ್ ಮಾಡಿದ್ದಾರೆ.


ಶಕುಂತಲೆಯಾದ ನಿವೇದಿತಾ


ನಿವೇದಿತಾ ಪ್ರತಿದಿನ ಕ್ರಿಯೇಟಿವ್ ಆಗಿ ಏನಾದರೂ ಮಾಡುತ್ತಲೇ ಇರುತ್ತಾರೆ. ಈಗ ನಟಿ ಸುಂದರವಾಗಿ  ಬಿಳಿ ಬಣ್ಣದ ಬಟ್ಟೆ ಧರಿಸಿದ್ದು ಇದಕ್ಕೆ ತಕ್ಕುದಾಗಿ ಹೂವಿನ ಆಭರಣಗಳನ್ನು ಧರಿಸಿದ್ದಾರೆ. ನಟಿಯ ಈ ಲುಕ್ ಈಗ ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ವೈರಲ್ ಆದ ಶಕುಂತಲೆ


ನಿವೇದಿತಾ ಅವರ ಈ ವಿಡಿಯೋಗೆ 1700ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅದೇ ರೀತಿ ಅಭಿಮಾನಿಗಳು ಇದನ್ನು ನೋಡಿ ಕಮೆಂಟ್ ಮಾಡಿದ್ದಾರೆ. ಕ್ಯೂಟ್ ಆಗಿ ಕಾಣುತ್ತಿರಿ, ಸೂಪರ್, ಕ್ಯೂಟ್ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.


ಹೈಹೀಲ್ಸ್ ಶಕುಂತಲೆ


ನಿವೇದಿತಾ ವಿಡಿಯೋದಲ್ಲಿ ಅಭಿಮಾನಿಯೊಬ್ಬರು ನಟಿಯ ಹೈ ಹೀಲ್ಸ್ ಅನ್ನು ಗಮನಿಸಿದ್ದಾರೆ. ಹಳೆಯ ಕಾಲದ ಶಕುಂತಲೆ ವೇಷ ಧರಿಸಿ ನಿವೇದಿತಾ ಹೈಹೀಲ್ಸ್ ಧರಿಸಿ ಫನ್ನಿಯಾಗಿ ಕಂಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು ಶಕುಂತಲೆ ಹೈಹೀಲ್ಸ್​ನಲ್ಲಿ ಎಂದು ಕಮೆಂಟ್ ಮಾಡಿದ್ದಾರೆ.


ಇದನ್ನೂ ಓದಿ: Niveditha Gowda: ಬ್ಯಾಕ್ ಟು ಬ್ಯಾಕ್ ಲಿಪ್ ಕಿಸ್! ಚಂದನ್ ನಿವೇದಿತಾ ರೊಮ್ಯಾನ್ಸ್


ವಿಡಿಯೋ ಪೋಸ್ಟ್ ಮಾಡಿದ ನಿವೇದಿತಾ ಶಾಕುಂತ್ಲೆ ಸಿಕ್ಕಳು, ಸುಮ್ ಸುಮ್ನೆ ನಕ್ಕಳು ಶಾಕ್ ಆಯ್ತು ನರ ನಾಡಿಯೊಳಗೆ ಹಾಡನ್ನು ಬಳಸಿದ್ದಾರೆ. ಸರಿಯಾಗಿ ಶಕುಂತಲೆ ಎನ್ನುವ ಬಳಕೆ ಇರುವ ಹಾಡನ್ನು ಚೂಸ್ ಮಾಡಿರುವ ನಿವೇದಿತಾ ಇದಕ್ಕೆ ಸರಿಯಾಗಿ ವಿಡಿಯೋ ಮಾಡಿದ್ದಾರೆ.




ಲಿಪ್ ಲಾಕ್ ವಿಡಿಯೋ ವೈರಲ್


ಇತ್ತೀಚೆಗೆ ನಿವೇದಿತಾ ಲಿಪ್ ಲಾಕ್ ವಿಡಿಯೋವನ್ನು ಮಾಡಿದ್ದರು. ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಪತಿಯ ಜೊತೆ ಲಿಪ್ ಲಾಕ್ ಮಾಡುವ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದರಲ್ಲಿ ನಿವೇದಿತಾ ಚಂದನ್ ಶೆಟ್ಟಿ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: Niveditha Gowda - Chandan Shetty: ಪತ್ನಿ ನಿವೇದಿತಾ ಜೊತೆ ಚಂದನ್ ಶೆಟ್ಟಿ ಕೊಕ್ಕರೆ ಡ್ಯಾನ್ಸ್! ನೀವೂ ಮಾಡಬೇಕಂತೆ


ನಿವೇದಿತಾ ಈಗ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಿನ ಫಾಲೋವರ್ಸ್​ಗಳನ್ನು ಗಳಿಸಿದ್ದಾರೆ. ಸದ್ಯ ನಟಿಗೆ 1.5 ಮಿಲಿಯನ್ ಫಾಲೋವರ್ಸ್​ಗಳಿದ್ದು ಪ್ರತಿದಿನ ಹೊಸ ಫಾಲೋವರ್ಸ್ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಚಂದನ್ ಶೆಟ್ಟಿ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು ವಿಡಿಯೋಸ್ ಶೇರ್ ಮಾಡುತ್ತಾರೆ. ರೀಲ್ಸ್ ಕೂಡಾ ಮಾಡುತ್ತಿರುತ್ತಾರೆ.

Published by:Divya D
First published: