• Home
  • »
  • News
  • »
  • entertainment
  • »
  • Niveditha Gowda: ಬ್ಯಾಕ್ ಟು ಬ್ಯಾಕ್ ಲಿಪ್ ಕಿಸ್! ಚಂದನ್ ನಿವೇದಿತಾ ರೊಮ್ಯಾನ್ಸ್

Niveditha Gowda: ಬ್ಯಾಕ್ ಟು ಬ್ಯಾಕ್ ಲಿಪ್ ಕಿಸ್! ಚಂದನ್ ನಿವೇದಿತಾ ರೊಮ್ಯಾನ್ಸ್

ನಿವೇದಿತಾ ಗೌಡ

ನಿವೇದಿತಾ ಗೌಡ

ನಿವೇದಿತಾ ಗೌಡ ಪತಿಯ ಜೊತೆ ರೊಮ್ಯಾಂಟಿಕ್ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಲಿಪ್ ಕಿಸ್ ಮಾಡಿರೋ ವಿಡಿಯೋ ಈಗ ವೈರಲ್ ಆಗಿದೆ.

  • News18 Kannada
  • Last Updated :
  • Bangalore, India
  • Share this:

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Niveditha Gowda) ಈಗ ಕಿರುತೆರೆಯ ಸ್ಟಾರ್ ಜೋಡಿಗಳು. ಸೋಷಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟಿವ್ ಆಗಿರುವ ಈ ಜೋಡಿ ಅಭಿಮಾನಿಗಳೊಂದಿಗೆ ತಮ್ಮ ಅಪ್ಡೇಟ್​​ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಈ ಹಿಂದೆ ಲಿಪ್​ ಕಿಸ್ ಮಾಡಿದ ವಿಡಿಯೋ (Video) ಶೇರ್ ಮಾಡಿದ್ದ ಜೋಡಿ ಈಗ ಮತ್ತೊಂದು ವಿಡಿಯೋ ಅಪ್​​ಲೋಡ್ ಮಾಡಿದ್ದಾರೆ. ಇದರಲ್ಲಿ ನಿವೇದಿತಾ ಗೌಡ ಹಾಗು ಚಂದನ್ ಲಿಪ್ ಕಿಸ್ ಮಾಡುವುದನ್ನು ಕಾಣಬಹುದು. ನಿವೇದಿತಾ ಗೌಡ ಅವರು ತಮ್ಮ ಇನ್​​ಸ್ಟಾಗ್ರಾಮ್ (Instagram) ಖಾತೆಯಲ್ಲಿ ವಿಡಿಯೋ ಶೇರ್ ಮಾಡಿದ್ದು ಇದೀಗ ವೈರಲ್ (Viral) ಆಗಿದೆ. ಬಿಗ್​ಬಾಸ್ ಮೂಲಕ ಪ್ರೀತಿಯಲ್ಲಿ ಬಿದ್ದ ಇಬ್ಬರೂ ನಂತರ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.


ನಿವೇದಿತಾ ಶೇರ್ ಮಾಡಿದ ವಿಡಿಯೋ


ಪತಿಯನ್ನು ಹಗ್ ಮಾಡಿ ನಿವೇದಿತಾ ಲಿಪ್ ಕಿಸ್ ಮಾಡುವ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮನೆಯೊಳಗಿನ ದೃಶ್ಯ, ಕಾರ್ ಪ್ರಯಾಣ, ಏರ್ಪೋರ್ಟ್ ಲುಕ್ ಎಲ್ಲವೂ ಕಾಣಸಿಗುತ್ತದೆ. ವಿಡಿಯೋ ಶೇರ್ ಮಾಡುವಾಗ ನಿವೇದಿತಾ ಅವರು ನಾನ ಈಗಲೇ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.




ನಿವೇದಿತಾ ಗೌಡ ನೀಲಿ ಶಾರ್ಟ್ಸ್ ಹಾಗೂ ವೈಟ್ ಟೀ ಟಾಪ್ ಧರಿಸಿದ್ದರೆ ಚಂದನ್ ಬ್ಲಾಕ್ ಪ್ಯಾಂಟ್ ಮೇಲೆ ಗಾಢ ಹಳದಿ ಬಣ್ಣದ ಟೀಶರ್ಟ್ ಧರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.


ವೈರಲ್ ಆಯ್ತು ವಿಡಿಯೋ


ನಿವೇದಿತಾ ಗೌಡ ಪೋಸ್ಟ್ ಮಾಡಿರುವ ಈ ವಿಡಿಯೋಗೆ ಇಲ್ಲಿವರೆಗೂ ಸುಮಾರು 96 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ. ಅಂದರೆ 1 ಲಕ್ಷ ಲೈಕ್ಸ್ ಹತ್ತಿರ ತಲುಪಿದೆ ಈ ವಿಡಿಯೋ. 1000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿ ಕಮೆಂಟ್ ಮಾಡಿದ್ದಾರೆ.


ಇದನ್ನೂ ಓದಿ: Niveditha Gowda: ಡ್ಯಾನ್ಸ್ ಮಾಡ್ತಾ ಲಿಪ್​ಲಾಕ್ ಮಾಡಿದ ಜೋಡಿ


ಏನಂದಿದ್ದಾರೆ ನೆಟ್ಟಿಗರು?


ಬೆಡ್​ರೂಂಗೆ ಹೋಗಿ, ಪಬ್ಲಿಕ್​​ನಲ್ಲಿ ಯಾಕೆ ಎಂದು ಕಾಲೆಳೆದಿದ್ದಾರೆ ಕೆಲವರು. ಇನ್ನು ಕೆಲವರು ನೀವಿಬ್ಬರೂ ಗಂಡ ಹೆಂಡತಿ ಅನ್ನೋದು ಇಡೀ ಭಾರತಕ್ಕೇ ಗೊತ್ತು ಬಿಡಿ ಎಂದಿದ್ದಾರೆ. ಅಂತೂ ಇಂತೂ ಅಭಿಮಾನಿಗಳು ಕಿರುತೆರೆ ಜೋಡಿಯ ವಿಡಿಯೋ ನೋಡಿ ಖುಷಿಪಟ್ಟಿದ್ದಾರೆ.


ಇದನ್ನೂ ಓದಿ: Niveditha Gowda: ನಿವೇದಿತಾಗೆ ಒಲಿದ ಅನುಬಂಧ ಜನ ಮೆಚ್ಚಿದ​ ಎಂಟರ್​ಟೈನರ್ ಅವಾರ್ಡ್!


ನೆಟ್ಟಿಗರ ಪ್ರೀತಿಯ ನಿವಿ


ಟಿಕ್​ ಟಾಕ್ ಸ್ಟಾರ್ ಆಗಿದ್ದ ನಿವೇದಿತಾ ಗೌಡ ಈಗ ಕನ್ನಡಿಗರು ಮಾತ್ರವಲ್ಲದೆ ಎಲ್ಲೆಡೆಯಿಂದ ವಿಶೇಷ ಅಭಿಮಾನಿಗಳನ್ನು ಹೊಂದಿದ್ದಾರೆ. ದಿನನಿತ್ಯ ಚಂದದ ರೀಲ್ಸ್ ವಿಡಿಯೋ ಮಾಡುವ ನಟಿ ಅವುಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಾರೆ. ಅಭಿಮಾನಿಗಳು ಸಹ ನಿವಿ ಅವರ ಸೂಪರ್ ಕ್ಯೂಟ್ ವಿಡಿಯೋಗಳನ್ನು ಎಂಜಾಯ್ ಮಾಡುತ್ತಾರೆ.


ಎಲ್ಲಿ ಹೋದ್ರೂ ರೀಲ್ಸ್


ಅವರು ಎಲ್ಲಿಗೆ ಹೋದರೂ, ಬಂದರೂ ಸಹ ರೀಲ್ಸ್ ಮಾಡುತ್ತಾರೆ. ಅವರು ಒಂದು ಯೂಟ್ಯೂಬ್ ಚಾನೆಲ್ ಕೂಡ ಮಾಡಿಕೊಂಡಿದ್ದು, ಅದರಲ್ಲಿ ತಮ್ಮ ಎಲ್ಲಾ ವಿಡಿಯೋಗಳನ್ನು ಮಾಡಿ ಹಾಕುತ್ತಾರೆ. ಒಟ್ಟಾರೆಯಾಗಿ ಅವರು ಎಲ್ಲಾ ಕಡೆ ಫೇಮಸ್​. ನಿವೇದಿತಾ ಕಿರುತೆರೆಯಲ್ಲಿ ಕೂಡಾ ಬ್ಯುಸಿ ಇರುವ ನಟಿ. ಬಿಗ್​ಬಾಸ್​ ನಂತರ ಫೇಮಸ್​ ಆದ ನಿವೇದಿತಾ, ರಾಜಾ-ರಾಣಿ ಶೋನಲ್ಲಿ ಜನರಿಗೆ ಮನರಂಜನೆ ನೀಡಿದ್ದರು. ಈಗ ಗಿಚ್ಚಗಿಲಿ ಗಿಲಿ ಶೋ ಮೂಲಕ ಕಾಮಿಡಿ ಮಾಡುತ್ತಿದ್ದು, ಅಲ್ಲೂ ಸಹ ಅವರದ್ದೇ ಹವಾ ಎನ್ನಬಹುದು.

Published by:Divya D
First published: