Niveditha Gowda: ಗಣೇಶ ಹಬ್ಬಕ್ಕೆ ಕ್ಯೂಟ್ ಆಗಿ ರೆಡಿಯಾದ ನಿವೇದಿತಾ ಗೌಡ, ವಿಡಿಯೋ ವೈರಲ್

ನಿವೇದಿತಾ ಗೌಡ ಮನೆಯಲ್ಲಿಯೇ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಅವರ ಹಬ್ಬದ ಸೆಲೆಬ್ರೇಷನ್ ಹೇಗಿತ್ತು?

ನಿವೇದಿತಾ ಗೌಡ

ನಿವೇದಿತಾ ಗೌಡ

  • Share this:
ಎಲ್ಲೆಡೆ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬಿಗ್​ಬಾಸ್ ಖ್ಯಾತಿಯ ನಿವೇದಿತಾ ಗೌಡ ಕೂಡಾ ಹಬ್ಬವನ್ನು ಆಚರಿಸಿದ್ದು ಹಬ್ಬದ ಕೆಲವು ವಿಡಿಯೋಗಳನ್ನು ಸೋಷಿಯಲ್ ಮೀಡಿಯಾ (Social Media) ಮೂಲಕ ತಮ್ಮ ಅಭಿಮಾನಿಗಳೊಂದಿಗೆ (Fans) ಹಂಚಿಕೊಂಡಿದ್ದಾರೆ. ಸುಂದರವಾಗಿ ಅಲಂಕರಿಸಿಕೊಂಡು ತಮ್ಮ ಪತಿ ಚಂದನ್ ಶೆಟ್ಟಿ (Chandan Shetty) ಜೊತೆಗೆ ಹಬ್ಬವನ್ನು (Festival) ಆಚರಿಸಿದ್ದಾರೆ. ನಟಿ ಕೆಲವು ವಿಡಿಯೋಗಳನ್ನು (Video) ಇನ್​ಸ್ಟಾಗ್ರಾಮ್​​ನಲ್ಲಿ (Instagram) ಹರಿಯಬಿಟ್ಟಿದ್ದು ಈ ಮೂಲಕ ತಾವು ಹೇಗೆ ಹಬ್ಬ ಆಚರಿಸಿದ್ದೇವೆ ಎನ್ನುವುದನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಿವಿ ಹಬ್ಬದ ವಿಡಿಯೋ ವೈರಲ್ ಆಗುತ್ತಿದ್ದು ಅವರ ಅಭಿಮಾನಿಗಳು ವಿಡಿಯೋ ನೋಡಿ ಖುಷಿಯಾಗಿದ್ದಾರೆ. 

ಗೌರಿ ಗಣೇಶ ಹಬ್ಬದ ಶುಭಾಶಯಗಳು. ದೇವರು ಎಲ್ಲರಿಗೂ ಆಶೀರ್ವಾದ ಮಾಡಲಿ ಎಂದು ನಿವೇದಿತಾ ಗೌಡ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಅಪ್​ಲೋಡ್ ಮಾಡಿದ್ದು ಇದರಲ್ಲಿ ನಿವಿ ಸುಂದರವಾಗಿ ಅಲಂಕರಿಸಿಕೊಂಡಿರುವುದನ್ನು ಕಾಣಬಹುದು.

ಗುಲಾಬಿ ಬಣ್ಣದ ಹಾಫ್ ಸಾರಿ

ನಿವೇದಿತಾ ಗೌಡ ಗುಲಾಬಿ ಬಣ್ಣಕ್ಕೆ ನೀಲಿ ಝರಿಯಂಚಿನ ಹಾಫ್ ಸಾರಿ ಧರಿಸಿದ್ದು ಟ್ರೆಡೀಷನಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಕೂದಲನ್ನೂ ನೀಟಾಗಿ ಬಾಚಿ ಜೆಡೆ ಹೆಣೆದು ಅಪ್ಪಟ ಕನ್ನಡತಿಯ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಪಿಂಕ್ ಹಾಗೂ ಬ್ಲೂ ಕಲರ್ ಬಳೆಗಳನ್ನು ಕೈತುಂಬಾ ಹಾಕಿಕೊಂಡಿದ್ದ ನಟಿ ಸಿಲ್ವರ್ ಕಲರ್ ಜ್ಯುವೆಲ್ಸ್ ಧರಿಸಿದ್ದರು.

ನೀನು ಬಗೆಹರಿಯದ ಹಾಡು

ನೀನು ಬಗೆಹರಿಯದ ಹಾಡು ಎನ್ನುವ ಕನ್ನಡ ಸಾಂಗ್ ಹಿನ್ನೆಲೆಯಲ್ಲಿ ನಟಿ ರೀಲ್ಸ್ ಮಾಡಿದ್ದು ಇದರಲ್ಲಿ ನಟಿಯ ಫೆಸ್ಟಿವ್ ಔಟ್​ಲುಕ್ ನೀಟಾಗಿ ಕಾಣಬಹುದು. ಈ ವಿಡಿಯೋ ಕೂಡಾ ಅವರ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದೆ.






ವಿಡಿಯೋಗೆ 40 ಸಾವಿರಕ್ಕೂ ಹೆಚ್ಚು ಲೈಕ್ಸ್ ಲಭಿಸಿದ್ದು 100ಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿ ನಿವೇದಿತಾಗೆ ಗಣೇಶ ಹಬ್ಬದ ಶುಭಾಶಯಗಳನ್ನು ಹೇಳಿದ್ದಾರೆ.

ಹೂವಿನ ಗಣಪ

ನಿವೇದಿತಾ ಟೇಬಲ್ ಮೇಲೆಯೇ ಪುಟ್ಟದಾದ ಹೂವಿನ ಗಣಪನನ್ನು ಬಿಡಿಸಿದ್ದಾರೆ. ಸೇವಂತಿಗೆ, ಗುಲಾಬಿ ದಳಗಳನ್ನು ಬಳಸಿಕೊಂಡು ನಟಿ ಸುಂದರವಾದ ಗಣಪನನ್ನು ಬಿಡಿಸಿದ್ದು ಇದರ ವಿಡಿಯೋವನ್ನು ಕೂಡಾ ಹಂಚಿಕೊಂಡಿದ್ದಾರೆ. ಈ ವೀಡಿಯೋ 39 ಸಾವಿರ ಲೈಕ್ಸ್ ಪಡೆದಿದ್ದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.






ಇದನ್ನೂ ಓದಿ: ಹಿಮಾಲಯ ಅಂಜೂರದಲ್ಲಿದೆ ಹಲವು ಪೋಷಕಾಂಶ! ಆರೋಗ್ಯಕ್ಕೆ ಬೆಸ್ಟ್

ರೀಲ್ಸ್ ಮಾಡೋದ್ರಲ್ಲಿ ಬ್ಯುಸಿ ನಿವೇದಿತಾ

ನಿವೇದಿತಾ ಗೌಡ ಇನ್​ಸ್ಟಾಗ್ರಾಮ್​ನಲ್ಲಿ ಬರುವ ಯಾವುದೇ ಟ್ರೆಂಡ್​ಗಳನ್ನು ಕೂಡಾ ಮಿಸ್ ಮಾಡುವುದಿಲ್ಲ. ಪ್ರತಿಬಾರಿ ನಿವೇದಿತಾ ಟ್ರೆಂಡಿಂಗ್ ರೀಲ್ಸ್​ಗೆ ಹೆಜ್ಜೆ ಹಾಕುತ್ತಿದ್ದು ಯಾವುದೇ ಭಾಷೆಯ ಹಾಡು, ಆಡಿಯೋ ಕ್ಲಿಪ್ ವೈರಲ್ ಆದಾಗಲೂ ಅವರು ತಪ್ಪದೆ ರೀಲ್ಸ್ ಮಾಡಿ ಶೇರ್ ಮಾಡುತ್ತಾರೆ.

1.5 ಮಿಲಿಯನ್ ಫಾಲೋವರ್ಸ್

ಸದ್ಯ ನಿವೇದಿತಾ ಗೌಡ ಅವರು ಸದ್ಯ ಇನ್ಸ್ಟಾಗ್ರಾಮ್​ನಲ್ಲಿ ಸುಮಾರು 1.5 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ನಿವೇದಿತಾ ಅವರು ಈವರೆಗೂ 1428 ಪೋಸ್ಟ್​​ಗಳನ್ನು ಮಾಡಿದ್ದಾರೆ. ಬಹುತೇಕ ಎಲ್ಲ ದಿನವೂ ನಿವೇದಿತಾ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದರಿಂದ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಲೇ ಇದೆ.

ಇದನ್ನೂ ಓದಿ: Niveditha Gowda: ನಟ ಧನುಷ್ ಹಾಡಿಗೆ ನಿವೇದಿತಾ ಗೌಡ ಡ್ಯಾನ್ಸ್! ವಿಡಿಯೋ ವೈರಲ್

ನೆಟ್ಟಿಗರ ಪ್ರೀತಿಯ ನಿವಿ

ನಿವೇದಿತಾ ಗೌಡ ಈಗ ಕನ್ನಡಿಗರು ಮಾತ್ರವಲ್ಲದೆ ಎಲ್ಲೆಡೆಯಿಂದ ವಿಶೇಷ ಅಭಿಮಾನಿಗಳನ್ನು ಹೊಂದಿದ್ದಾರೆ. ದಿನನಿತ್ಯ ಚಂದದ ರೀಲ್ಸ್ ವಿಡಿಯೋಗಳನ್ನು ಮಾಡುವ ನಟಿ ಅವುಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಾರೆ. ಅಭಿಮಾನಿಗಳು ಸಹ ನಿವಿ ಅವರ ಸೂಪರ್ ಕ್ಯೂಟ್ ವಿಡಿಯೋಗಳನ್ನು ಎಂಜಾಯ್ ಮಾಡುತ್ತಾರೆ.
Published by:Divya D
First published: