ಬಿಗ್ ಬಾಸ್ ಸ್ಪರ್ಧೆಗಳಿದ್ದ ನಿವೇದಿತಾ ಗೌಡ (Niveditha Gowda) ಹಾಗೂ ಚಂದನ್ ಶೆಟ್ಟಿ (Chandan Shetty) ಪ್ರೀತಿಸಿ ಮದುವೆಯಾದ್ರು. ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಇಬ್ಬರು ಸೇರಿಕೊಂಡು ರೀಲ್ಸ್ ಮಾಡುತ್ತಾರೆ, ಈ ರೀಲ್ಸ್ ಮೂಲಕವೇ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ವಿಡಿಯೋ ಮೂಲಕ ಹೇಳಿದ್ದಾರೆ.
ಅಪ್ಪ ಆಗ್ತಿದ್ದಾರೆ ಗಾಯಕ ಚಂದನ್ ಶೆಟ್ಟಿ
ರೀಲ್ಸ್ನಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾರನ್ನು ನಾನು ಹೇಳುವುದನ್ನು ಕೂಡಿಸಿ ಹೇಳು ಎಂದು ಹೇಳ್ತಾರೆ. Fat + Her ಅಂದರೆ ಏನು ಎಂದು ನಿವೇದಿತಾ ಗೌಡಗೆ ಚಂದನ್ ಶೆಟ್ಟಿ (Chandan Shetty) ಕೇಳಿದ್ದಾರೆ. Fat her ಅಂತಾರೆ ಬಳಿಕ ಸರಿಯಾಗಿ ಕೂಡಿಸು ಎಂದು ಹೇಳಿದಾಗ ನಿವೇದಿತಾ ಗೌಡ ‘ಫಾದರ್’ ಎಂದು ನಾಚಿಕೊಳ್ತಾರೆ. ಹಾಗಾಗಿ ಚಂದನ್ ಶೆಟ್ಟಿ ತಂದೆ ಆಗುತ್ತಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದಾರೆ.
ಅಭಿಮಾನಿಗಳಿಂದ ಶುಭಾಷಯಗಳ ಸುರಿಮಳೆ
ನಿವೇದಿತಾ, ಚಂದನ್ಗೆ ಇನ್ಟಾ ಗ್ರಾಮ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಇದ್ದು, ಅಭಿಮಾನಿಗಳು ಕೂಡ ಇವರ ಫೋಟೋ ಹಾಗೂ ವಿಡಿಯೋಗಳನ್ನು ನೋಡೋಕೆ ಇಷ್ಟ ಪಡುತ್ತಾರೆ. ಈಗ ಚಂದನ್ ಶೆಟ್ಟಿ ಹಂಚಿಕೊಂಡಿರುವ ಈ ವಿಡಿಯೋ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ವಿಡಿಯೋ ನೋಡಿದ ಫ್ಯಾನ್ಸ್ , ನಿವೇದಿತಾ-ಚಂದನ್ ಕೊಟ್ಟ ಟ್ವಿಸ್ಟ್ ಕಂಡು ಹಿಡಿದು ವಿಶ್ ಮಾಡ್ತಿದ್ದಾರೆ.
View this post on Instagram
ಬಿಗ್ ಬಾಸ್ ಕನ್ನಡ ಸೀಸನ್ 5’ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿದ್ದು. ನಂತರ ಇಬ್ಬರ ನಡುವೆ ಪ್ರೀತಿ ಚಿಗುರಿತು. 2020ರ ಫೆಬ್ರವರಿಯಲ್ಲಿ ಹಸೆಮಣೆ ಏರಿದರು. ಮೂರು ವರ್ಷಗಳ ಬಳಿಕ ಈ ಜೋಡಿ ಗುಡ್ ನ್ಯೂಸ್ ನೀಡಿದೆ.
ಚಂದನ್-ನಿವೇದಿತಾ ಹಳೇ ರೀಲ್ಸ್
ಚಂದನ್ ಶೆಟ್ಟಿ ಕೊಕ್ಕರೆ ಡ್ಯಾನ್ಸ್ ಎಂದು ಶುರುವಾಗುವ ವಿಡಿಯೋದಲ್ಲಿ ಚಂದನ್ ಹಾಗೂ ನಿವೇದಿತಾ ಜಾಲಿಯಾಗಿ ಸ್ಟೆಪ್ಸ್ ಹಾಕುತ್ತಾರೆ. ಚಂದನ್ ಬ್ಲಾಕ್ ಶೂಸ್, ಬ್ಲಾಕ್ ಗಾಗಲ್ಸ್ ಧರಿಸಿದ್ದು ವೈಟ್ ಟೀಶರ್ಟ್ ಮಾಲೆ ಜಾಕೆಟ್ ಧರಿಸಿದ್ದಾರೆ. ನಿವೇದಿತಾ ಗೌಡ ಕೂಡಾ ಮಿನಿ ಡ್ರೆಸ್ ಧರಿಸಿಕೊಂಡು ಗಂಡನ ಡ್ಯಾನ್ಸ್ಗೆ ಸಾಥ್ ಕೊಟ್ಟಿದ್ದಾರೆ. ಸ್ಟೈಲಿಷ್ ಲುಕ್ನಲ್ಲಿ ಇಬ್ಬರೂ ಸಖತ್ ಸ್ಟೆಪ್ ಹಾಕಿದ್ದು ನಿವೇದಿತಾ ಹೀಲ್ಸ್ ಹಾಕಿ ಡ್ಯಾನ್ಸ್ ಮಾಡುವುದನ್ನು ಕಾಣಬಹುದು.
View this post on Instagram
1.5 ಮಿಲಿಯನ್ ಫಾಲೋವರ್ಸ್
ಸದ್ಯ ನಿವೇದಿತಾ ಗೌಡ ಅವರು ಸದ್ಯ ಇನ್ಸ್ಟಾಗ್ರಾಮ್ನಲ್ಲಿ ಸುಮಾರು 1.5 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ನಿವೇದಿತಾ ಅವರು ಈವರೆಗೂ 1428 ಪೋಸ್ಟ್ಗಳನ್ನು ಮಾಡಿದ್ದಾರೆ. ಬಹುತೇಕ ಎಲ್ಲ ದಿನವೂ ನಿವೇದಿತಾ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದರಿಂದ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಲೇ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ