Nitya Menen: ಮತ್ತೊಮ್ಮೆ ಕನ್ನಡದ ಹಾಡು ಹಾಡಿದ ನಟಿ ನಿತ್ಯಾ ಮೆನನ್: ಹಾಡಿನ ವಿಡಿಯೋ ವೈರಲ್​​..!

Nitya Menen: ನಟಿ ನಿತ್ಯಾ ಮೆನನ್​ ಮಲಯಾಳಂನ ಕಾರ್ಯಕ್ರಮದಲ್ಲಿ ಕನ್ನಡದ ಹಾಡನ್ನು ಹಾಡುವ ಮೂಲಕ ಸದ್ದು ಮಾಡಿದ್ದರು. ಅವರ ಸಿಹಿಯಾದ ದನಿಯಲ್ಲಿ ಕನ್ನಡ ಚಿತ್ರದ ಹಾಡನ್ನು ಕೇಳಿದ್ದ ಸಿನಿ ಪ್ರಿಯರು ಸಖತ್ ಖುಷಿಯಾಗಿದ್ದರು. ಇದೇ ನಟಿ ಈಗ ಕನ್ನಡದ ಮತ್ತೊಂದು ಹಾಡನ್ನು ಇಂಪಾಗಿ ಹಾಡುವ ಮೂಲಕ ಕಿವಿಗಳಿಗೆ ತಂಪು ನೀಡಿದ್ದಾರೆ.

Anitha E | news18-kannada
Updated:December 3, 2019, 6:15 PM IST
Nitya Menen: ಮತ್ತೊಮ್ಮೆ ಕನ್ನಡದ ಹಾಡು ಹಾಡಿದ ನಟಿ ನಿತ್ಯಾ ಮೆನನ್: ಹಾಡಿನ ವಿಡಿಯೋ ವೈರಲ್​​..!
ನಿತ್ಯಾ ಮೆನನ್​
  • Share this:
ಕನ್ನಡದ ನೆಲದಲ್ಲೇ ಹುಟ್ಟಿ ಕನ್ನಡದವನ್ನೇ ಕಲಿಯದ ನಟಿಯರನ್ನು ನೋಡಿದ್ದೇವೆ. ಕನ್ನಡದಲ್ಲೇ ಭವಿಷ್ಯ ಕಂಡುಕೊಂಡು ಬೇರೆ ಭಾಷೆಗೆ ಹೋಗಿ, ಅಲ್ಲಿನ ಭಾಷೆಯನ್ನು ನೀರು ಕುಡಿದಷ್ಟು ಸರಳವಾಗಿ ಮಾತನಾಡುವ ನಟ-ನಟಿಯರನ್ನೂ ನೋಡುತ್ತಲೇ ಇರುತ್ತೇವೆ. ಅಂತಹರ ನಡುವೆ ನಿತ್ಯಾ ಮೆನನ್​ ಅಪರೂಪದ ವ್ಯಕ್ತಿ ಎನಿಸುತ್ತಾರೆ.

ಈ ಹಿಂದೆಯೂ ಅವರು ಮಲಯಾಳಂನ ಕಾರ್ಯಕ್ರಮದಲ್ಲಿ ಕನ್ನಡದ ಹಾಡನ್ನು ಹಾಡುವ ಮೂಲಕ ಸದ್ದು ಮಾಡಿದ್ದರು. ಅವರ ಸಿಹಿಯಾದ ದನಿಯಲ್ಲಿ ಕನ್ನಡ ಚಿತ್ರದ ಹಾಡನ್ನು ಕೇಳಿದ್ದ ಸಿನಿ ಪ್ರಿಯರು ಸಖತ್ ಖುಷಿಯಾಗಿದ್ದರು. ಇದೇ ನಟಿ ಈಗ ಕನ್ನಡದ ಮತ್ತೊಂದು ಹಾಡನ್ನು ಇಂಪಾಗಿ ಹಾಡುವ ಮೂಲಕ ಕಿವಿಗಳಿಗೆ ತಂಪು ನೀಡಿದ್ದಾರೆ.



ನಟ ಉಪೇಂದ್ರ ಅವರ 'A' ಸಿನಿಮಾದಲ್ಲಿನ ಸುಮ್​ಸುಮ್ನೆ ನಗ್ತಾಳೆ.... ಹಾಡನ್ನು ನಿತ್ಯಾ ಹಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದು ನಿರೂಪಕಿ ಅನುಶ್ರೀ ಅವರು ತಮ್ಮ ಯೂಟ್ಯೂಬ್​ ಚಾನಲ್​ನಲ್ಲಿ ನಡೆಸಿಕೊಡುವ ಕಾರ್ಯಕ್ರಮದಲ್ಲಿ ನಡೆಸಿರುವ ಸಂದರ್ಶನದ ವಿಡಿಯೋ ತುಣುಕು.

ಈ ಹಿಂದೆ ನಿತ್ಯಾ ಮೆನನ್​ ಮಲಯಾಳಂ ಕಾರ್ಯಕ್ರಮವೊಂದರಲ್ಲಿ ಕನ್ನಡ ಸೇರಿದಂತೆ ನಾನಾ ಭಾಷೆಗಳಲ್ಲಿ ಹಾಡಿರುವ ಹಾಡಿನ ವಿಡಿಯೋ.



ಬೆಂಗಳೂರಿನವರೇ ಆದ ನಿತ್ಯಾ ಮೆನನ್​ ಈ ಹಿಂದೆ ಸಂದರ್ಶನವೊಂದರಲ್ಲಿ 'ನಾನು ಕನ್ನಡದವಳು. ನನಗೆ ಕನ್ನಡ ಸೇರಿದಂತೆ ಆರು ಭಾಷೆಗಳು ಬರುತ್ತವೆ. ನಾನು ಕನ್ನಡವನ್ನೇ ಪ್ರತಿನಿಧಿಸುತ್ತೇನೆ' ಎಂದು ಹೇಳಿದ್ದರು. ಅವರ ಈ ಮಾತು ಕನ್ನಡಿಗರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು.
Loading...

Nitya Menen: ಸಿನಿಮಾಗಿಂತ ಹೆಚ್ಚಾಗಿ ಫೋಟೋಶೂಟ್​ಗಳಲ್ಲಿ ಮಿಂಚುತ್ತಿರುವ ನಿತ್ಯಾ ಮೆನನ್..!


First published:December 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...