Divorce:12 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್‌ ಬೈ ಹೇಳಿದ್ದಾರಂತೆ ಮಹಾಭಾರತ ಖ್ಯಾತಿಯ Nitish Bharadwaj..!

ನಿತೀಶ್ ಭಾರದ್ವಾಜ್ ಅವರು ಐಎಎಸ್ ಅಧಿಕಾರಿಯಾಗಿರುವ ತಮ್ಮ ಪತ್ನಿ ಸ್ಮಿತಾ ಘಾಟೆ ಅವರೊಂದಿಗಿನ 12 ವರ್ಷಗಳ ದಾಂಪತ್ಯ ಜೀವನದಿಂದ ಹೊರ ಬಂದಿದ್ದು, ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದಾರೆ.

ನಿತೀಶ್‌ ಭಾರದ್ವಾಜ್‌

ನಿತೀಶ್‌ ಭಾರದ್ವಾಜ್‌

  • Share this:
ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಮಹಾಭಾರತದಲ್ಲಿ(Mahabharata) ಕೃಷ್ಣನ ಪಾತ್ರ ನಿರ್ವಹಿಸಿ ಅಪಾರ ಜನಮನ್ನಣೆಗೆ ಪಾತ್ರವಾಗಿದ್ದ ನಿತೀಶ್ ಭಾರದ್ವಾಜ್ (Nitish Bharadwaj), 12 ವರ್ಷಗಳ ದಾಂಪತ್ಯ ಜೀವನದ ಬಳಿಕ ತಮ್ಮ ಪತ್ನಿಗೆ ವಿಚ್ಛೇದನ (Divorced) ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, “ಸಾವಿಗಿಂತ ವಿಚ್ಛೇದನ ಹೆಚ್ಚು ನೋವಿನ ಸಂಗತಿ(Painful than Death) ” ಎಂದು ಹೇಳಿಕೊಂಡಿದ್ದಾರೆ.

ಭಿನ್ನಾಭಿಪ್ರಾಯದ ಕಾರಣಕ್ಕೆ
ನಿತೀಶ್ ಭಾರದ್ವಾಜ್ ಅವರು ಐಎಎಸ್ ಅಧಿಕಾರಿಯಾಗಿರುವ ತಮ್ಮ ಪತ್ನಿ ಸ್ಮಿತಾ ಘಾಟೆ ಅವರೊಂದಿಗಿನ 12 ವರ್ಷಗಳ ದಾಂಪತ್ಯ ಜೀವನದಿಂದ ಹೊರ ಬಂದಿದ್ದು, ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಅವರಿಬ್ಬರೂ ಭಿನ್ನಾಭಿಪ್ರಾಯದ ಕಾರಣಕ್ಕೆ 2019ರಲ್ಲಿ ಬೇರ್ಪಟ್ಟಿದ್ದರು. ಅವರಿಬ್ಬರಿಗೆ ಇಬ್ಬರು ಅವಳಿ ಪುತ್ರಿಯರಿದ್ದು, ಅವರಿಬ್ಬರೂ ತಮ್ಮ ತಾಯಿಯೊಂದಿಗೆ ಇಂದೋರ್‌ನಲ್ಲಿ ವಾಸಿಸುತ್ತಿದ್ದಾರೆ.

ಈ ಕುರಿತು ಸುದ್ದಿ ಸಂಸ್ಥೆಯೊಂದರೊಂದಿಗೆ ಮಾತನಾಡಿರುವ ಅವರು, “ಹೌದು, ನಾನು 2019ರಲ್ಲಿ ಮುಂಬೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದೆ. ನಾವಿಬ್ಬರು ಯಾಕಾಗಿ ಬೇರ್ಪಟ್ಟೆವು ಎಂಬ ಕಾರಣದ ಕುರಿತು ನಾನು ಚರ್ಚಿಸಲು ಬಯಸುವುದಿಲ್ಲ. ಈ ವಿಚಾರವು ಸದ್ಯ ನ್ಯಾಯಾಲಯದಲ್ಲಿದೆ. ನಾನು ಹೇಳಲು ಸಾಧ್ಯವಿರುವುದೇನೆಂದರೆ, ನೀವು ಅಂಗವಿಕಲಗೊಂಡ ಸ್ಥಿತಿಯಲ್ಲಿ ಜೀವಿಸುವಂತಾಗುವುದರಿಂದ ಕೆಲವೊಮ್ಮೆ ಸಾವಿಗಿಂತ ವಿಚ್ಛೇದನೆವೇ ಹೆಚ್ಚು ನೋವು ನೀಡುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Dhanush ಮತ್ತು ಐಶ್ವರ್ಯಾ ವಿಚ್ಛೇದನದ ಬಗ್ಗೆ ಆಪ್ತ ಗೆಳೆಯ ಹೇಳಿದ ಶಾಕಿಂಗ್ ಸುದ್ದಿ!

ಸಂತ್ರಸ್ತರಾಗುವವರು ಮಕ್ಕಳು
ವಿವಾಹ ಎಂಬ ಸಾಂಸ್ಥಿಕತೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ನಾನು ಈ ಸಾಂಸ್ಥಿಕ ವ್ಯವಸ್ಥೆಯ ಬಲವಾದ ವಿಶ್ವಾಸಿಯಾಗಿದ್ದೇನೆ. ಆದರೆ, ನಾನು ದುರದೃಷ್ಟವಂತನಾಗಿದ್ದೆ. ಸಾಮಾನ್ಯವಾಗಿ ವಿವಾಹಗಳು ಮುರಿದು ಬೀಳಲು ಅಗಣಿತ ಕಾರಣಗಳಿರುತ್ತವೆ. ಕೆಲವೊಮ್ಮೆ ಅದು ರಾಜಿರಹಿತ ಧೋರಣೆ ಅಥವಾ ಹೊಂದಾಣಿಕೆ ಇಲ್ಲದಿರುವುದು ಅಥವಾ ಅಹಂ ಮತ್ತು ಸ್ವಕೇಂದ್ರಿತ ಆಲೋಚನೆಗಳ ಕಾರಣಕ್ಕೂ ಆಗಿರುತ್ತವೆ.

ಆದರೆ, ಕುಟುಂಬಗಳು ಮುರಿದು ಬಿದ್ದಾಗ ಅದರಿಂದ ಮೊದಲು ಸಂತ್ರಸ್ತರಾಗುವವರು ಮಕ್ಕಳಾಗಿರುತ್ತಾರೆ. ಹೀಗಾಗಿ ಪೋಷಕರು ತಮ್ಮ ಮಕ್ಕಳು ತಮ್ಮ ಇಂತಹ ಸಹಭಾಗಿತ್ವದಿಂದ ಅತಿ ಕಡಿಮೆ ಹಾನಿಗೊಳಗಾಗುವಂತೆ ಎಚ್ಚರಿಕೆ ವಹಿಸಬೇಕಾದ ಹೊಣೆಗಾರಿಕೆಯನ್ನು ಖಾತ್ರಿಗೊಳಿಸಬೇಕಿದೆ” ಎಂದು ಸಲಹೆ ನೀಡಿದ್ದಾರೆ.

ಕೇದಾರ್‌ನಾಥ್‌ ಧಾರವಾಹಿ
ಹಾಗಾದರೆ, ನೀವು ನಿಮ್ಮ ಪುತ್ರಿಯೊಂದಿರೊಂದಿಗೆ ನಿಯಮಿತ ಸಂಪರ್ಕದಲ್ಲಿದ್ದೀರಾ ಎಂಬ ಪ್ರಶ್ನೆಗೆ, “ನಾನು ಅವರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿದೆಯಾ ಅಥವಾ ಇಲ್ಲವೆ ಎಂಬ ಬಗ್ಗೆ ನನ್ನ ಪ್ರತಿಕ್ರಿಯೆಯನ್ನು ಮೀಸಲಿರಿಸಲು ಬಯಸುತ್ತೇನೆ” ಎಂದು ಉತ್ತರಿಸಿದ್ದಾರೆ. ನಿತೀಶ್ ಭಾರದ್ವಾಜ್ ಈ ಮುನ್ನ ಮೋನಿಶಾ ಪಾಟೀಲ್ ಅವರನ್ನು 1991ರಲ್ಲಿ ವಿವಾಹವಾಗಿ ಅವರೊಂದಿಗೆ 2005ರವರೆಗೆ ಸಂಸಾರ ನಡೆಸಿದ್ದರು. ಈ ದಂಪತಿಗಳಿಗೆ ಓರ್ವ ಪುತ್ರಿ ಹಾಗೂ ಪುತ್ರ ಇದ್ದಾರೆ. ಇದಾದ ನಂತರ 2009ರಲ್ಲಿ ಸ್ಮಿತಾ ಘಾಟೆ ಅವರನ್ನು ನಿತೀಶ್ ಭಾರದ್ವಾಜ್ ವಿವಾಹವಾಗಿದ್ದರು. ನಿತೀಶ್ ಭಾರದ್ವಾಜ್ ಅವರು ಕಾಣಿಸಿಕೊಂಡ ಕಟ್ಟ ಕಡೆಯ ಧಾರಾವಾಹಿ ಅಭಿಷೇಕ್ ಕಪೂರ್ ಅವರ ‘ಕೇದಾರ್‌ನಾಥ್‌’ ಆಗಿದೆ.

ವಿವಾಹ ವಿಚ್ಛೇದನ ಪ್ರಕರಣ ಹೆಚ್ಚಳ
ಈ ವಿಚ್ಛೇದನ ಸುದ್ದಿಯು ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ಆರ್ ಹಾಗೂ ಧನುಶ್ ತಾವು ಬೇರೆಯಾಗುತ್ತಿರುವುದನ್ನು ಘೋಷಿಸಿದ ಬೆನ್ನಿಗೇ ಬಂದಿದೆ. ಈ ದಂಪತಿ 18 ವರ್ಷಗಳ ಕಾಲ ಒಟ್ಟಾಗಿ ಜೀವಿಸಿದ್ದರು. ಧನುಶ್ ಹಾಗೂ ಐಶ್ವರ್ಯ ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಮ್ಮ ವಿಚ್ಛೇದನ ಕುರಿತು ಒಂದೇ ರೀತಿಯಿರುವ ಹೇಳಿಕೆಗಳನ್ನು ಪ್ರಕಟಿಸಿದ್ದರು. ಈ ದಂಪತಿಗಳಿಗೆ ಯಾತ್ರ ಹಾಗೂ ಲಿಂಗಾ ಎಂಬ ಇಬ್ಬರು ಪುತ್ರರಿದ್ದಾರೆ.

ಇದನ್ನೂ ಓದಿ: Star Divorces: ಧನುಷ್, ಐಶ್ವರ್ಯಾ ವಿಚ್ಛೇದನದ ಬಳಿಕ ಯುವಜನತೆಗೆ Warning ಕೊಟ್ಟ RGV...!

ಇದೇ ಹೊತ್ತಿನಲ್ಲಿ ಚಿರಂಜೀವಿಯವರ ಕಿರಿಯ ಪುತ್ರಿ ಶ್ರೀಜಾ ಕೂಡಾ ತಮ್ಮ ಪತಿ ಕಲ್ಯಾಣ್ ದೇವ್ ಅವರಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ಇಬ್ಬರು 2016ರಲ್ಲಿ ವಿವಾಹ ಬಂಧನಕ್ಕೊಳಗಾಗಿದ್ದರು. ಈ ವದಂತಿಗಳ ಕುರಿತು ಕುಟುಂಬದ ಸದಸ್ಯರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದ್ದರೂ, ಶ್ರೀಜಾ ತಮ್ಮ ಇನ್ಸ್ಟಾಗ್ರಾಂ ಖಾತೆಯ ಹೆಸರಿನಿಂದ ತಮ್ಮ ಪತಿಯ ಹೆಸರನ್ನು ಕೈಬಿಟ್ಟಿರುವುದು ಮೇಲಿನ ವದಂತಿಗಳಿಗೆ ತುಪ್ಪ ಸುರಿದಿದೆ. ಈಗ್ಗೆ ಕೆಲವು ತಿಂಗಳ ಹಿಂದೆ ಸಮಂತಾ ರುಥ್‌ ಪ್ರಭು ಹಾಗೂ ನಾಗ ಚೈತನ್ಯ ಕೂಡಾ ವಿವಾಹ ವಿಚ್ಛೇದನವನ್ನು ಪ್ರಕಟಿಸಿದ್ದರು.
Published by:vanithasanjevani vanithasanjevani
First published: