Karnam Malleswari Biopic: ವೈಟ್ ಲಿಫ್ಟರ್ ಕರ್ಣಂ ಮಲ್ಲೇಶ್ವರಿ ಬಯೋಪಿಕ್​​ನಲ್ಲಿ ನಟಿಸಲು ನೋ ಎಂದ ನಿತ್ಯಾ ಮೆನನ್​​!

Karnam Malleswari Biopic: ತೆಲುಗು ಇಂಡಸ್ಟ್ರಿ ಮೂಲಗಳ ಪ್ರಕಾರ ನಿತ್ಯಾಮೆನನ್ ಈ ಪಾತ್ರ ಮಾಡಿದರೆ ಚೆನ್ನಾಗಿರುತ್ತೆ ಅಂತ ಚಿತ್ರತಂಡಕ್ಕೆ ಅನಿಸಿದೆ. ಸೌತ್ ನಲ್ಲಿ ಸಾಕಷ್ಟು ಹೆಸರು ಮಾಡಿರೋ ನಿತ್ಯಾ ಮಿಷನ್ ಮಂಗಲ್ ಸಿನಿಮಾದ ಮೂಲಕ ಬಾಲಿವುಡ್ ನಲ್ಲೂ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಮಲ್ಲೇಶ್ವರಿ ಪಾತ್ರಕ್ಕೆ ಅವರೇ ಸೂಕ್ತ ಅಂತ ಭಾವಿಸಿ ಚಿತ್ರತಂಡ ಅಪ್ರೋಚ್ ಮಾಡಿದ್ದರು.

ನಿತ್ಯಾ ಮೆನನ್-ಕರ್ಣಂ ಮಲ್ಲೇಶ್ವರಿ

ನಿತ್ಯಾ ಮೆನನ್-ಕರ್ಣಂ ಮಲ್ಲೇಶ್ವರಿ

  • Share this:
ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದವರ ಜೀವನ ಚರಿತ್ರೆ ಸಿನಿಮಾ ರೂಪ ಪಡೆದುಕೊಳ್ಳೋದು ಈಗೀಗ ಹೆಚ್ಚಾಗಿದೆ. ಅದಕ್ಕೆ ಹೊಸ ಸೇರ್ಪಡೆ ವೈಟ್ ಲಿಫ್ಟರ್ ಕರ್ಣಂ ಮಲ್ಲೇಶ್ವರಿ ಬಯೋಪಿಕ್. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗಲಿರೋ ಈ ಚಿತ್ರದ ಫಸ್ಟ್ ಲುಕ್, ಕರ್ಣಂ‌ ಮಲ್ಲೇಶ್ವರಿ ಅವರ ಹುಟ್ಟುಹಬ್ಬದ ದಿನ ಜೂನ್ 1 ರಂದು ಬಿಡುಗಡೆಯಾಗಿದೆ‌.

ಆದರೆ ಚಿತ್ರದ ಪೋಸ್ಟರ್ ನಲ್ಲಿ ಕರ್ಣಂ ಮಲ್ಲೇಶ್ವರಿ ಪಾತ್ರ ಯಾರು ಮಾಡುತ್ತಾರೆ ಎಂಬುದು ರಿವೀಲ್ ಆಗಿಲ್ಲ. ಅಷ್ಟಕ್ಕೂ ಕರ್ಣಂ ಮಲ್ಲೇಶ್ವರಿ ಪಾತ್ರಕ್ಕೆ ಇನ್ನೂ ಯಾರೂ ಸಿಕ್ಕೇ ಇಲ್ಲವಂತೆ. ತೆಲುಗು ಇಂಡಸ್ಟ್ರಿ ಮೂಲಗಳ ಪ್ರಕಾರ ನಿತ್ಯಾಮೆನನ್ ಈ ಪಾತ್ರ ಮಾಡಿದರೆ ಚೆನ್ನಾಗಿರುತ್ತೆ ಅಂತ ಚಿತ್ರತಂಡಕ್ಕೆ ಅನಿಸಿದೆ. ಸೌತ್ ನಲ್ಲಿ ಸಾಕಷ್ಟು ಹೆಸರು ಮಾಡಿರೋ ನಿತ್ಯಾ ಮಿಷನ್ ಮಂಗಲ್ ಸಿನಿಮಾದ ಮೂಲಕ ಬಾಲಿವುಡ್ ನಲ್ಲೂ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಮಲ್ಲೇಶ್ವರಿ ಪಾತ್ರಕ್ಕೆ ಅವರೇ ಸೂಕ್ತ ಅಂತ ಭಾವಿಸಿ ಚಿತ್ರತಂಡ ಅಪ್ರೋಚ್ ಮಾಡಿದ್ದರು.

ಆದರೆ ನಿತ್ಯಾಮೆನನ್ ಈ ಪ್ರಾಜೆಕ್ಟ್ ತಿರಸ್ಕರಿಸಿದ್ದಾರಂತೆ. ಕಾರಣ ಏನೂ ಅಂತಲೂ ಸಹ ತಿಳಿಸಿಲ್ಲ. ನಿತ್ಯಾ ರಿಜೆಕ್ಟ್ ಮಾಡಿದ ಪರಿಣಾಮ ಹೊಸ ನಾಯಕಿಯನ್ನ ಚಿತ್ರತಂಡ ಹುಡುಕಾಡುತ್ತಿದೆ. ಈ ಸಿನಿಮಾಗೆ ಕೋನಾ ವೆಂಕಟ್ ಹಾಗೂ ಸತ್ಯನಾರಾಯಣ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ಸಂಜಯ್ ರೆಡ್ಡಿ ಆಕ್ಷನ್ ಕಟ್ ನಲ್ಲಿ ಈ ಸಿನಿಮಾ ಮೂಡಿಬರಲಿದೆ.

Mitron App: ಗೂಗಲ್​ ಪ್ಲೇ ಸ್ಟೋರ್​​ನಿಂದ ಮಾಯವಾದ ‘ಮಿತ್ರೋ‘ ಆ್ಯಪ್​!
First published: