• Home
  • »
  • News
  • »
  • entertainment
  • »
  • Wonder Women: ನಿತ್ಯಾ ಮೆನನ್-ಪಾರ್ವತಿ ಕೊಟ್ರು ಗುಡ್​ನ್ಯೂಸ್! ಟ್ರೈಲರ್ ರಿಲೀಸ್

Wonder Women: ನಿತ್ಯಾ ಮೆನನ್-ಪಾರ್ವತಿ ಕೊಟ್ರು ಗುಡ್​ನ್ಯೂಸ್! ಟ್ರೈಲರ್ ರಿಲೀಸ್

ನಿತ್ಯಾ ಮೆನನ್-ಪಾರ್ವತಿ ತಿರುವೊತ್ತು

ನಿತ್ಯಾ ಮೆನನ್-ಪಾರ್ವತಿ ತಿರುವೊತ್ತು

ಇತ್ತೀಚೆಗಷ್ಟೇ ಪ್ರೆಗ್ನೆನ್ಸಿಗೆ ಸಂಬಂಧಿಸಿ ಶಾಕಿಂಗ್ ಪೋಸ್ಟ್ ಹಾಕಿದ್ದ ನಿತ್ಯಾ ಮೆನನ್ ಹಾಗೂ ಪಾರ್ವತಿ ತಿರುವೊತ್ತು ಅವರ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಇಬ್ಬರೂ ವಂಡರ್ ವುಮೆನ್ ಎಂಬ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಇತ್ತೀಚೆಗೆ ಬಹುಭಾಷಾ ನಟಿ ಪಾರ್ವತಿ ತಿರುವೊತ್ತು (Parvathy Thiruvothu) ತಮ್ಮ ಸೋಷಿಯಲ್ ಮೀಡಿಯಾ (Social Media) ಪೋಸ್ಟ್ ಮೂಲಕ ಶಾಕ್ ಕೊಟ್ಟಿದ್ದರು. ಅರೆ ಮದುವೆಯಾಗದೆ ಪಾರ್ವತಿ ತಾಯಿಯಾದರಾ ಎಂದು ನೆಟ್ಟಿಗರು ಕಣ್ಕಣ್ ಬಿಟ್ಟಿದ್ದರು. ಸ್ವಲ್ಪ ಹೊತ್ತಿನಲ್ಲಿಯೇ ನಟಿ ನಿತ್ಯಾ ಮೆನನ್ (Nithya Menen) ಅವರದ್ದೂ ಇದೇ ವರಸೆ. ಇಬ್ಬರೂ ನಟಿಯರು (Actress) ಏಕಕಾಲಕ್ಕೆ ಹೇಗೆ ಪ್ರೆಗ್ನೆನ್ಸಿ ಸುದ್ದಿ ಕೊಡೋಕೆ ಸಾಧ್ಯ ಎಂದು ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದರು. ಆಗಲೇ ಒಂದಷ್ಟು ಜನ ಇದು ಮೂವಿ ಪ್ರಮೋಷನ್ (Promotion) ಎಂದು ಗೆಸ್ ಮಾಡಿದ್ದರು ಕೂಡಾ. ಈಗ ಈ ವಿಚಾರಕ್ಕೆ ಸಂಬಂಧಿಸಿ ಇನ್ನಷ್ಟು ಕ್ಲಾರಿಟಿ ಸಿಕ್ಕಿದೆ. ಹೌದು ಇದು ಒಂದು ಸಿನಿಮಾ. ಅದೇ ರೀತಿ ಈ ಸಿನಿಮಾಗೆ ಸಂಬಂಧಿಸಿ ಟ್ರೈಲರ್ ಕೂಡಾ ರಿಲೀಸ್ ಆಗಿದೆ. ಇದನ್ನು ನಟಿ ಪಾರ್ವತಿ ಇನ್​​ಸ್ಟಾಗ್ರಾಮ್​ನಲ್ಲಿ (Instagram) ಶೇರ್ ಮಾಡಿದ್ದಾರೆ.


ವಂಡರ್ ವುಮೆನ್


ಅಂಜಲಿ ಮೆನನ್ ನಿರ್ದೇಶನ ಮಾಡಿರುವ ವಂಡರ್ ವುಮೆನ್ ಸಿನಿಮಾ ಟ್ರೈಲರ್​ ರಿಲೀಸ್ ಆಗಿದೆ. ಇದರಲ್ಲಿ ನಿತ್ಯಾ ಮೆನನ್, ಪಾರ್ವತಿ ತಿರುವೊತ್ತು, ಮಾಲಿವುಡ್ ನಟಿ ಪದ್ಮಪ್ರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


SonyLIV ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಿಂದ ನಿರ್ದೇಶಕಿ ಅಂಜಲಿ ಅವರ  ಒಂದು ವಿಡಿಯೋ ಕ್ಲಿಪ್ ರಿಲೀಸ್ ಮಾಡಲಾಗಿದೆ. ಇದರಲ್ಲಿ ನಿರ್ದೇಶಕಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.




ಇನ್ನು ಗರ್ಭಧಾರಣೆಯ ಕುರಿತು ಸುದ್ದಿ ಇಲ್ಲ. ತಮ್ಮ ಪಾತ್ರಗಳನ್ನು ಮಾಡಲಿರುವ ಮತ್ತು ಅವರ ಗುಡ್ ನ್ಯೂಸ್ ಪ್ರಕಟಿಸಿರುವ ನಮ್ಮ ನಟಿಯರಿಂದ ನೀವು ಪ್ರೆಗ್ನೆನ್ಸಿ ಸುದ್ದಿ ಪಡೆದಿದ್ದೀರಿ, ಹೌದು, ಪ್ರೋಮೋಗಳು ಗರ್ಭಧಾರಣೆಯ ಸುದ್ದಿಗೆ ಪ್ರತಿಯೊಬ್ಬರೂ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಒಂದು ಟ್ರೈಯಲ್ ಕೂಡಾ ಆಗಿತ್ತು. ನೀವು ತೋರಿಸಿದ ಪ್ರೀತಿಗಾಗಿ ತುಂಬಾ ಧನ್ಯವಾದಗಳು ಎಂದಿದ್ದಾರೆ.




ಇದನ್ನೂ ಓದಿ: Parvathi Thiruvothu: ತಾಯಿಯಾಗ್ತಿದ್ದಾರಾ ಮಿಲನ ನಟಿ ಪಾರ್ವತಿ? ಇನ್​ಸ್ಟಾಗ್ರಾಮ್​ನಲ್ಲಿ ಗುಡ್​ ನ್ಯೂಸ್


ವಂಡರ್ ವುಮೆನ್ ಚಿತ್ರದಲ್ಲಿ ನದಿಯಾ ಮೊಯ್ದು, ನಿತ್ಯಾ ಮೆನನ್, ಪಾರ್ವತಿ ಮತ್ತು ಪದ್ಮಪ್ರಿಯಾ ನಟಿಸಿದ್ದಾರೆ. ನಟರು ಹಂಚಿಕೊಂಡ ಪ್ರೋಮೋದಲ್ಲಿ ನಿತ್ಯಾ ನೋರಾ ಪಾತ್ರದಲ್ಲಿ ನಟಿಸುತ್ತಿದ್ದು ಅವರು ಗರ್ಭಿಣಿಯಾಗಿರುವುದಕ್ಕೆ ಫುಲ್ ಖುಷಿಯಾಗಿ ಕಂಡುಬರುತ್ತಾರೆ. ಪದ್ಮಪ್ರಿಯಾ ಸಂಪ್ರದಾಯಸ್ಥ ಮನೆತನದ ಪಪ್ಪು ಎಂಬ ಗರ್ಭಿಣಿ ಮಹಿಳೆಯಾಗಿ ನಟಿಸುತ್ತಿದ್ದಾರೆ. ಪಾರ್ವತಿ ಮಿನಿ ಪಾತ್ರದಲ್ಲಿ ನಟಿಸುತ್ತಿದ್ದು, ಮಗುವನ್ನು ಒಬ್ಬಂಟಿಯಾಗಿ ಬೆಳೆಸಬೇಕಾಗಿರುವುದರಿಂದ ಗರ್ಭಿಣಿಯಾಗಿರುವ ಬಗ್ಗೆ ಅಷ್ಟೊಂದು ಖುಷಿಯಾಗಿಲ್ಲ ಎಂದು ಕಂಡುಬರುತ್ತದೆ. ಗರ್ಭಿಣಿಯರ ಕಾರ್ಯಾಗಾರದಲ್ಲಿ ಎಲ್ಲಾ ಮಹಿಳೆಯರು ಭೇಟಿಯಾಗುತ್ತಾರೆ ಎಂಬ ಹಿಂಟ್ ಸಿಗುತ್ತದೆ.


ಇದನ್ನೂ ಓದಿ: Sandalwood Queen Ramya: ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಹಿಂದೆ ಬಿದ್ದ ಹಾಸ್ಟೆಲ್ ಹುಡುಗರು! ಯಾಕೆ? ಏನಾಯ್ತು?


ವಂಡರ್ ವುಮೆನ್ - ಪ್ರಸವಪೂರ್ವ ತರಗತಿಯಲ್ಲಿ ಭೇಟಿಯಾಗುವ ಗರ್ಭಿಣಿಯರ ಕಥೆ . ಲೇಖಕಿ-ನಿರ್ದೇಶಕಿ ಅಂಜಲಿ ಮೆನನ್ ಅವರು ನವೆಂಬರ್ 18 ರಿಂದ ಸೋನಿ LIV ನಲ್ಲಿ ಸ್ಟ್ರೀಮಿಂಗ್ ಆಗುವ 'ವಂಡರ್ ವುಮೆನ್' ಗಾಗಿ ಅದ್ಭುತವಾದ ಪಾತ್ರವನ್ನು ಒಟ್ಟುಗೂಡಿಸಿದ್ದಾರೆ ಎಂದಿದ್ದಾರೆ.


ಮದುವೆಯಾಗದ ನಟಿಯರ ಗುಡ್​ನ್ಯೂಸ್ ಕೇಳಿ ಶಾಕ್ ಆಗಿದ್ದರು ಜನ


ಟಾಪ್ ನಟಿಯರಿಬ್ಬರು ಏಕಾ ಏಕಿ ಪ್ರೆಗ್ನೆಂಟ್ ಎಂದು ಸುದ್ದಿ ಕೊಟ್ಟಾಗ ಅಕ್ಷರಶಃ ನೆಟ್ಟಿಗರು ಶಾಕ್ ಆಗಿದ್ದರು. ಸ್ವಲ್ಪ ಬೋಲ್ಡ್ ಆಗಿರುವ ಪಾರ್ವತಿ ಬಗ್ಗೆ ಈ ಸುದ್ದಿ ನಿಜ ಇರಬಹುದು ಎಂದೇ ಅಂದುಕೊಂಡಿದ್ದರು. ಆದರೆ ವಿಭಿನ್ನವಾಗಿ ಸಿನಿಮಾ ಪ್ರಮೋಷನ್ ಮಾಡುವ ಮೂಲಕ ಹೊಸತನಕ್ಕೆ ಆರಂಭವಿಟ್ಟಿದೆ ಚಿತ್ರತಂಡ.

Published by:Divya D
First published: