HOME » NEWS » Entertainment » NIRUP BHANDARI IS ACTING IN SHEETAL SHETTYS DEBUT DIRECTORIAL MOVIE WINDOW SEAT AE

Window Seat: ರಾಜರಥವೇರಿದ್ದ ನಿರೂಪ್​ ಭಂಡಾರಿ ಈಗ ವಿಂಡೋಸೀಟ್​ ಬೇಕೆನ್ನುತ್ತಿದ್ದಾರೆ..!

Window Seat: ಹೊಸ ಸಸ್ಪೆನ್ಸ್​ ಥ್ರಿಲ್ಲರ್​ ವಿಂಡೋಸೀಟ್ ಚಿತ್ರದಲ್ಲಿ ನಿರೂಪ್​ ಈಗ ನಾಯಕರಾಗಿದ್ದಾರೆ. ಈ ಸಿನಿಮಾ ನಿರೂಪ್​ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈಗ ಅದು ಅಧಿಕೃತವಾಗಿದೆ. ಈ ಸಿನಿಮಾದ ಟೈಟಲ್​ ಪೋಸ್ಟರ್​ ಬಿಡುಗಡೆಯಾಗಿದೆ.

Anitha E | news18-kannada
Updated:June 22, 2020, 12:04 PM IST
Window Seat: ರಾಜರಥವೇರಿದ್ದ ನಿರೂಪ್​ ಭಂಡಾರಿ ಈಗ ವಿಂಡೋಸೀಟ್​ ಬೇಕೆನ್ನುತ್ತಿದ್ದಾರೆ..!
ವಿಂಡೋಶೀಟ್​ ಚಿತ್ರದಲ್ಲಿ ನಿರೂಪ್​ ಭಂಡಾರಿ
  • Share this:
ರಂಗಿತರಂಗ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟ ನಟ ನಿರೂಪ್​ ಭಂಡಾರಿ. ಮೊದಲ ಸಿನಿಮಾದಲ್ಲೇ ತಮ್ಮ ಅಭಿನಯದ ಮೂಲಕ ಕನ್ನಡಿಗರ ಮನಸ್ಸು ಕದ್ದ ಚೋರ. ನಂತರ ರಾಜರಥವೇರಿದ್ದ ನಿರೂಪ್​ ಈಗ ವಿಂಡೋಸೀಟ್​ ಬೇಕೆನ್ನುತ್ತಿದ್ದಾರೆ.

ಹೊಸ ಸಸ್ಪೆನ್ಸ್​ ಥ್ರಿಲ್ಲರ್​ ವಿಂಡೋಸೀಟ್ ಚಿತ್ರದಲ್ಲಿ ನಿರೂಪ್​ ಈಗ ನಾಯಕರಾಗಿದ್ದಾರೆ. ಈ ಸಿನಿಮಾ ನಿರೂಪ್​ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈಗ ಅದು ಅಧಿಕೃತವಾಗಿದೆ. ಈ ಸಿನಿಮಾದ ಟೈಟಲ್​ ಪೋಸ್ಟರ್​ ಬಿಡುಗಡೆಯಾಗಿದೆ.

Nirup Bhandari is acting in Sheetal Shettys debut directorial movie Window Seat 
ವಿಂಡೋ ಸೀಟ್​ ಟೈಟಲ್​ ಪೋಸ್ಟರ್​


ಶೀತಲ್​ ಶೆಟ್ಟಿ ನಿರ್ದೇಶನದ ಜೊತೆಗೆ ಈ ಚಿತ್ರಕ್ಕೆ ಕತೆಯನ್ನೂ ಬರೆದಿದ್ದಾರಂತೆ. ಮಂಜುನಾಥ ಗೌಡ ಅವರ ನಿರ್ಮಾಣದ ಈ ಸಿನಿಮಾ ಫಸ್ಟ್​ ಲುಕ್​ ಪೋಸ್ಟರ್ ಸದ್ಯದಲ್ಲೇ ಬಿಡುಗಡೆಯಾಗಲಿದೆಯಂತೆ. ನಿರೂಪ್​ ಭಂಡಾರಿ ಟ್ವೀಟ್​ ಮೂಲಕ ಈ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.
ವಿಂಡೋಸೀಟ್​ ಪೋಸ್ಟರ್​ ನೋಡಿದರೆ ಇದೊಂದು ರಕ್ತಸಿಕ್ತ ಪತ್ತೆದಾರಿ ಕತೆ ಇರಬೇಕೆನಿಸುತ್ತದೆ. ಈ ಸಿನಿಮಾದಲ್ಲಿ ನಿರೂಪ್​ ಭಂಡಾರಿ ಗಿಟಾರ್​ ವಾದಕನಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಪಾತ್ರಕ್ಕಾಗಿ ಅವರು ಗಿಟಾರ್​ ಸಹ ಕಲಿತಿದ್ದಾರಂತೆ. ಚಿಕ್ಕಂದಿನಿಂದಲೂ ನಿರೂಪ್ ಅವರಿಗೆ ಸಂಗೀತ ಕಲಿಯುವ ಆಸೆ ಇತ್ತಂತೆ. ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲವಂತೆ.

ಇದನ್ನೂಓದಿ: Sonam Kapoor: ಸ್ಟಾರ್ ಕಿಡ್​ ಎನಿಸಿಕೊಳ್ಳುವುದು ಅವಮಾನ ಅಲ್ಲ ಎಂದ ಸೋನಮ್ ಕಪೂರ್​: ಮತ್ತೆ ಟ್ರೋಲ್​ ಮಾಡಿದ ನೆಟ್ಟಿಗರು..!

 

Sushant Singh Rajput: ಸೆಲೆಬ್ರಿಟಿ ಫೋಟೋಗ್ರಾಫರ್​ ಡಬೂ ರತ್ನಾನಿ ಕ್ಯಾಮೆರಾದಲ್ಲಿ ಸೆರೆಯಾದ ಸುಶಾಂತ್: ಇಲ್ಲಿವೆ​ ಫೋಟೋಗಳು..!



 

ಇದನ್ನೂ ಓದಿ: Rishab Shetty: ಹರಿಕಥೆ ಅಲ್ಲಾ ಗಿರಿಕಥೆ ಬಗ್ಗೆ ರಿಷಭ್​ ಹೇಳಿದ್ದೇನು: ಇಲ್ಲಿದೆ ವಿಡಿಯೋ..!
First published: June 22, 2020, 12:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories