• Home
  • »
  • News
  • »
  • entertainment
  • »
  • Super Star: 'ಸೂಪರ್ ಸ್ಟಾರ್'​ಗೆ ಸಂಕಷ್ಟ; 1 ಕೋಟಿಗೂ ಹೆಚ್ಚು ಹಣ ವಂಚನೆ ಆರೋಪದಡಿ ಪೊಲೀಸ್​ ದೂರು

Super Star: 'ಸೂಪರ್ ಸ್ಟಾರ್'​ಗೆ ಸಂಕಷ್ಟ; 1 ಕೋಟಿಗೂ ಹೆಚ್ಚು ಹಣ ವಂಚನೆ ಆರೋಪದಡಿ ಪೊಲೀಸ್​ ದೂರು

ಚಿತ್ರದ ಪೋಸ್ಟರ್

ಚಿತ್ರದ ಪೋಸ್ಟರ್

ಸೂಪರ್ ಸ್ಟಾರ್ ಸಿನಿಮಾ ಸೂಪರ್ ಹಿಟ್ ಆಗುತ್ತೆ, ತುಂಬಾ ಹಣ ಬರುತ್ತೆ ಎಂದು ನಿರ್ಮಾಪಕ ಮೈಲಾರಿ ಎಂಬುವವರಿಗೆ ನಿರ್ದೇಶಕ ವೆಂಕಟೇಶ್ ಬಾಬು ಪ್ರಚೋದನೆ ನೀಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.

  • News18 Kannada
  • Last Updated :
  • Bangalore [Bangalore], India
  • Share this:

ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಸಹೋದರನ ಮಗ ನಾಯಕನಾಗಿ ನಟಿಸಿರೋ ಚಿತ್ರ 'ಸೂಪರ್ ಸ್ಟಾರ್​ಗೆ (Super Star Film) ಸಂಕಷ್ಟ ಎದುರಾಗಿದೆ. ನಟ ಉಪೇಂದ್ರ ಅವರ ಸಹೋದನ ಮಗ ನಿರಂಜನ್ ಸುಧೀಂದ್ರ ನಟಿಸಿರುವ, ಆರ್ ವೆಂಕಟೇಶ್ ಬಾಬು ನಿರ್ದೇಶನದ ಸೂಪರ್ ಸ್ಟಾರ್ ಎಂಬ ಸಿನಿಮಾ ತಂಡದಲ್ಲಿ ಬಿರುಕು ಮೂಡಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದ್ಧೂರಿಯಾಗಿ ಮುಹೂರ್ತ ನಡೆಸಿದ್ದ ಸೂಪರ್ ಸ್ಟಾರ್ ಚಿತ್ರ ನಿರ್ಮಾಪಕರು ನಿರ್ದೇಶಕರ ಮೇಲೆ ದೂರು (Police Complaint) ದಾಖಲಿಸಲಾಗಿದೆ. 1 ಕೋಟಿ 10 ಲಕ್ಷ ವಂಚನೆ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.


ಸೂಪರ್ ಸ್ಟಾರ್ ಸಿನಿಮಾ ಸೂಪರ್ ಹಿಟ್ ಆಗುತ್ತೆ, ತುಂಬಾ ಹಣ ಬರುತ್ತೆ ಎಂದು ನಿರ್ಮಾಪಕ ಮೈಲಾರಿ ಎಂಬುವವರಿಗೆ ನಿರ್ದೇಶಕ ವೆಂಕಟೇಶ್ ಬಾಬು ಪ್ರಚೋದನೆ ನೀಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಅಲ್ಲದೇ ಸೂಪರ್ ಸ್ಟಾರ್ ಸಿನಿಮಾದ ಈ ಪ್ರಕರಣದ ಕುರಿತು ಬೆಂಗಳೂರಿನಲ್ಲಿ ಪೊಲೀಸ್ ಕೇಸ್ ದಾಖಲಾಗಿದೆ.


ಕೋವಿಡ್​ನಿಂದ ನಿಂತಿದ್ದ ಚಿತ್ರೀಕರಣ
ಮಾತೃಶ್ರಿ ಎಂಟರ್ ಪ್ರೈಸಸ್ ಬ್ಯಾನರ್​ನಡಿ ಮೈಲಾರಿ ಸೂಪರ್ ಸ್ಟಾರ್ ಚಿತ್ರ ಮಾಡುತ್ತಿದ್ದರು. ಕೋವಿಡ್ ಹಿನ್ನಲೆ ಚಿತ್ರೀಕರಣ ಸ್ವಲ್ಪ ದಿನ ಸ್ಥಗಿತಗೊಂಡಿತ್ತು. ನಂತರ ಸತ್ಯನಾರಾಯಣ ಎಂಬುವವರ ಜೊತೆ ಸೇರಿ ಚಿತ್ರದ ಮಾಲೀಕತ್ವವನ್ನೇ ಬದಲಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. 


ಇದನ್ನೂ ಓದಿ: Daali Dhananjaya Lucky Month: ಡಾಲಿ ಧನಂಜಯ್​ಗೆ ಡಿಸೆಂಬರ್ ತಿಂಗಳು ಲಕ್ಕಿನಾ? ಅನ್​ಲಕ್ಕಿನಾ?


ಹೊಸ ನಿರ್ಮಾಪಕರನ್ನು ಹಾಕಿಕೊಂಡ ಸಿನಿಮಾ ಶೂಟಿಂಗ್?
ಸೂಪರ್ ಸ್ಟಾರ್ ಚಿತ್ರಕ್ಕೆ ಹೊಸ ನಿರ್ಮಾಪಕರಾಗಿ ರಮಾದೇವಿ ಹಾಗು ಸತ್ಯನಾರಾಯಣ ಅವರನ್ನ ಹಾಕಿಕೊಂಡ ನಿರ್ದೇಶಕ ವೆಂಕಟೇಶ್ ಬಾಬು ಸಿನಿಮಾ ಚಿತ್ರೀಕರಿಸಿದ್ದಾರೆ.  ಮೊದಲು ಹೂಡಿದ್ದ ಬಂಡವಾಳವನ್ನು ವಾಪಾಸ್ ಕೇಳಲು ಹೋದಾಗ ಪ್ರಾಣಬೆದರಿಕೆ ಮತ್ತು ಧಮ್ಕಿ ಹಾಕಲಾಗಿದೆ ಎಂದು ನಿರ್ಮಾಪಕ ಮೈಲಾರಿ ಆರೋಪಿಸಿದ್ದಾರೆ.


ಇದನ್ನೂ ಓದಿ: Kantara Look Test Pics Viral: ಕಾಂತಾರ ಸಿನಿಮಾದ ನಾಯಕಿ ಸಪ್ತಮಿ ಗೌಡ ಲುಕ್ ಟೆಸ್ಟ್ ಪೋಟೋ ವೈರಲ್


ಸದ್ಯ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ನಿರ್ದೇಶಕ ವೆಂಕಟೇಶ್ ಬಾಬು, ಹೊಸ ನಿರ್ಮಾಪಕರಾದ ಸತ್ಯನಾರಾಯಣ , ರಮಾದೇವಿ ವಿರುದ್ಧ ದೂರು ದಾಖಲಿಸಿದ್ದಾರೆ.


ಮಠ ಚಿತ್ರದ ಸುತ್ತ ವಿವಾದದ ಹುತ್ತ! ಟ್ರೈಲರ್ ನೋಡಿ ಫುಲ್ ಗರಂ ಆಗಿದ್ಯಾಕೆ ಕಾಳಿ ಸ್ವಾಮಿ?


ಕನ್ನಡದಲ್ಲಿ ಮಠ 2016 ಮಠ ಅಂತ ಸಿನಿಮಾ ಬಂದಿತ್ತು. ಇದು ರಿಲೀಸ್ ಆದಾಗ ಕೆಂಗಣ್ಣಿ ಗುರಿ ಆಗಿತ್ತು. ಮಠದಲ್ಲಿ ನಡೆಯೋ ಅನಾಚಾರಗಳ ಸತ್ಯ ದರ್ಶನದಂತೆನೇ ಇತ್ತು ಈ ಸಿನಿಮಾ. ನವರಸ ನಾಯಕ ಜಗ್ಗೇಶ್ ಅದ್ಭುತವಾಗಿಯೇ ಇಲ್ಲಿ ಕಾಣಿಸಿಕೊಂಡಿದ್ದರು. ಡೈರೆಕ್ಟರ್ ಗುರು (Guru Prasad) ಪ್ರಸಾದ್ ಅಂತೂ ಎಲ್ಲ ಮಠದ ಅಸಲಿ ಸತ್ಯವನ್ನ ತೆರೆ ಮೇಲೆ ತಂದಿದ್ದರು. ಈ ಸಿನಿಮಾ ಬಂದು ಈಗ 16 ವರ್ಷಗಳೇ ಉರುಳಿ ಹೋಗಿವೆ. ಆದರೆ ಈಗ ಮಠ ಹೆಸರಿನ ಇನ್ನೂ ಒಂದು ಸಿನಿಮಾ ಕನ್ನಡದಲ್ಲಿ ರೆಡಿ ಆಗಿದೆ. ಇದೇ ನವೆಂಬರ್​ 18 ರಂದು ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಆದರೆ ಇದೇ ಮಠದ (Mata Film Trailer) ಟ್ರೈಲರ್ ನೋಡಿದ ಕಾಳಿಮಠದ ರಿಷಿಕುಮಾರ್​ ಸ್ವಾಮಿ ಪುಲ್​ ಗರಂ ಆಗಿದ್ದಾರೆ. ಫಿಲ್ಮಂ ಚೇಂಬರ್ ಮೆಟ್ಟಿಲೂ ಏರಿದ್ದಾರೆ.


ಕನ್ನಡದ ಮಠ ಸಿನಿಮಾ ಟ್ರೈಲರ್ ನೋಡಿ ಗರಂ ಆದ ಕಾಳಿ ಸ್ವಾಮಿ
ಕಾಳಿಮಠದ ರಿಷಿಕುಮಾರ್ ಸ್ವಾಮಿ ಈಗ ಫುಲ್ ಸಿಟ್ಟಿಗೆದ್ದಿದ್ದಾರೆ. ಮಠ ಚಿತ್ರದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಮಠ ಚಿತ್ರದ ಟ್ರೈಲರ್ ನೋಡಿಯೇ ರೊಚ್ಚಿಗೆದ್ದಿದ್ದಾರೆ. ಇಡೀ ಸಿನಿಮಾ ನೋಡಿ ಏನಂತಾರೋ ಏನೋ.


ಆದರೆ ಮಠ ಚಿತ್ರದ ವಿರುದ್ಧ ಕೆಂಡಾಮಂಡಲವಾಗಿಯೇ ನ್ಯೂಸ್​-18 ಕನ್ನಡ ಡಿಜಿಟಲ್​​ ಜೊತೆಗೆ ಮಾತನಾಡಿದ್ದಾರೆ. ನಾನು ಯಾಕೆ ಮಠ ಚಿತ್ರವನ್ನ ವಿರೋಧಿಸುತ್ತಿದ್ದೇನೆ ಅಂತಲೂ ಹೇಳಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: