• Home
  • »
  • News
  • »
  • entertainment
  • »
  • Niranj Maniyanpilla Raju: ಖ್ಯಾತ ನಟನ ಪುತ್ರನ ಕಲ್ಯಾಣ; ಸ್ಪುರದ್ರೂಪಿ ಚೆಲುವನ ಕೈ ಹಿಡಿಯುತ್ತಿರೋರು ಯಾರು?

Niranj Maniyanpilla Raju: ಖ್ಯಾತ ನಟನ ಪುತ್ರನ ಕಲ್ಯಾಣ; ಸ್ಪುರದ್ರೂಪಿ ಚೆಲುವನ ಕೈ ಹಿಡಿಯುತ್ತಿರೋರು ಯಾರು?

ಮಲಯಾಳಂ ಚಿತ್ರೋದ್ಯಮದ ಸ್ಪುರದ್ರೂಪಿ ನಟ ನಿರಂಜ್ ಮಣಿಯನ್ಪಿಳ್ಳ ರಾಜು ಅವರು ಫ್ಯಾಷನ್ ಡಿಸೈನರ್ ಆಗಿರುವ ನಿರಂಜನಾ ಅವರನ್ನು ಮದುವೆಯಾಗಲು ಸಜ್ಜಾಗಿದ್ದಾರೆ.

ಮಲಯಾಳಂ ಚಿತ್ರೋದ್ಯಮದ ಸ್ಪುರದ್ರೂಪಿ ನಟ ನಿರಂಜ್ ಮಣಿಯನ್ಪಿಳ್ಳ ರಾಜು ಅವರು ಫ್ಯಾಷನ್ ಡಿಸೈನರ್ ಆಗಿರುವ ನಿರಂಜನಾ ಅವರನ್ನು ಮದುವೆಯಾಗಲು ಸಜ್ಜಾಗಿದ್ದಾರೆ.

ಮಲಯಾಳಂ ಚಿತ್ರೋದ್ಯಮದ ಸ್ಪುರದ್ರೂಪಿ ನಟ ನಿರಂಜ್ ಮಣಿಯನ್ಪಿಳ್ಳ ರಾಜು ಅವರು ಫ್ಯಾಷನ್ ಡಿಸೈನರ್ ಆಗಿರುವ ನಿರಂಜನಾ ಅವರನ್ನು ಮದುವೆಯಾಗಲು ಸಜ್ಜಾಗಿದ್ದಾರೆ.

  • Trending Desk
  • 5-MIN READ
  • Last Updated :
  • Share this:

ಸಾಮಾನ್ಯವಾಗಿ ಚಲನಚಿತ್ರೋದ್ಯಮದಲ್ಲಿರುವ ನಟರ (Cinema Actors) ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅವರ ಅಭಿಮಾನಿಗಳಿಗೆ (Fans) ತುಂಬಾನೇ ಕುತೂಹಲವಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು, ಅದರಲ್ಲೂ ಈ ಮದುವೆಯಾಗದ ಬ್ಯಾಚುಲರ್ ನಾಯಕ ನಟರಿಗೆ (Unmarried Actors) ಬೇರೆ ನಟರಿಗಿಂತಲೂ ಸ್ವಲ್ಪ ಜಾಸ್ತಿಯೇ ಮಹಿಳಾ ಅಭಿಮಾನಿಗಳಿರುತ್ತಾರೆ (Woman Fans) ಅಂತ ಹೇಳಬಹುದು. ಇನ್ನೂ ಮದುವೆಯಾಗದೇ (Marriage) ಇರುವ ನಟ ಮತ್ತು ನಟಿಯರಿಗೆ ಯಾವುದೇ ಶೋಗೆ ಹೋದರೂ ಸಹ ಕೇಳುವಂತಹ ಒಂದು ಸಾಮಾನ್ಯವಾದ ಪ್ರಶ್ನೆಯೆಂದರೆ ‘ನೀವು ಯಾವಾಗ ಮದುವೆಯಾಗುತ್ತೀರಿ? ನೀವು ಮದುವೆಯಾಗೋ ಹುಡುಗ ಅಥವಾ ಹುಡುಗಿ ಹೇಗಿರಬೇಕು? ಅವರಲ್ಲಿ ಏನೆಲ್ಲಾ ಗುಣಗಳನ್ನ ನೀವು ನಿರೀಕ್ಷಿಸುತ್ತೀರಿ’ ಅಂತೆಲ್ಲಾ ಕೇಳುವುದನ್ನು ನಾವು ಅನೇಕ ಬಾರಿ ಟಿವಿ ಶೋ ಗಳಲ್ಲಿ ನೋಡಿರುತ್ತೇವೆ.


ಕೆಲವೊಮ್ಮೆ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ ಮದುವೆಯಾಗುತ್ತಿದ್ದಾರೆ ಅಂತ ಗೊತ್ತಾದಾಗ ತುಂಬಾನೇ ಖುಷಿಯಾಗುತ್ತದೆ ಮತ್ತು ಯಾರನ್ನು ಮದುವೆ ಆಗುತ್ತಿದ್ದಾರೆ ಅನ್ನೋ ಕುತೂಹಲ ಸಹ ತುಂಬಾನೇ ಅಭಿಮಾನಿಗಳಿಗೆ ಇರುತ್ತದೆ ಅಂತ ಹೇಳಬಹುದು.


ನಟ ಮತ್ತು ನಟಿಯರ ಮದುವೆಯ ವಿಚಾರದ ಬಗ್ಗೆ ಈಗ ಇಷ್ಟೆಲ್ಲಾ ಏಕೆ ಹೇಳುತ್ತಿದ್ದೇವೆ ಅಂತ ನಿಮಗೆ ಪ್ರಶ್ನೆಯೊಂದು ಕಾಡುತ್ತಿರಬೇಕಲ್ಲವೇ? ಇಲ್ಲಿ ನಾವು ಹೇಳಲು ಹೊರಟಿರುವ ಸುದ್ದಿ ಸಹ ಅಂತಹದ್ದೆ ಆಗಿದೆ ನೋಡಿ.


ಈ ನಟನ ಮದುವೆ ಇದೇ ಡಿಸೆಂಬರ್ ತಿಂಗಳಿನಲ್ಲಿ ಅಂತೆ!


ಮಲಯಾಳಂ ಚಿತ್ರೋದ್ಯಮದ ಸ್ಪುರದ್ರೂಪಿ ನಟ ನಿರಂಜ್ ಮಣಿಯನ್ಪಿಳ್ಳ ರಾಜು ಅವರು ಫ್ಯಾಷನ್ ಡಿಸೈನರ್ ಆಗಿರುವ ನಿರಂಜನಾ ಅವರನ್ನು ಮದುವೆಯಾಗಲು ಸಜ್ಜಾಗಿದ್ದಾರೆ.


ನಿರಂಜ್


ಈ ವರ್ಷದ ಡಿಸೆಂಬರ್ ಮೊದಲ ವಾರದಲ್ಲಿ ಮದುವೆ ಸಮಾರಂಭ ನಡೆಯಲಿದ್ದು, ಕೇರಳದ ತಿರುವನಂತಪುರಂನಲ್ಲಿ ಆರತಕ್ಷತೆ ನಡೆಯಲಿದೆ.


ನಿರಂಜನಾ ಅವರು ಪಲಿಯತ್ ವಿನೋದ್ ಜಿ ಪಿಳ್ಳೈ ಮತ್ತು ಸಿಂಧು ವಿನೋದ್ ಅವರ ಪುತ್ರಿಯಾಗಿದ್ದು, ದೆಹಲಿಯ ಜನಪ್ರಿಯ ಸಂಸ್ಥೆಯೊಂದರಲ್ಲಿ ತಮ್ಮ ವೃತ್ತಿಪರ ಕೋರ್ಸ್ ಪೂರ್ಣಗೊಳಿಸಿದ್ದಾರೆ.


ಮಲಯಾಳಂ ನಟ ನಿರಂಜ್ ಯಾರು ಗೊತ್ತೇ?


ಈ ಮಲಯಾಳಂ ನಟ ‘ಬ್ಲ್ಯಾಕ್ ಬಟರ್ ಫ್ಲೈ’ ಚಿತ್ರದ ಮೂಲಕ ಮಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ ಅವರು ಕೇರಳ ರಾಜ್ಯ ಚಲನಚಿತ್ರ ವಿಮರ್ಶಕರ ಪ್ರಶಸ್ತಿಯನ್ನು ಅತ್ಯುತ್ತಮ ಚೊಚ್ಚಲ ಚಿತ್ರಕ್ಕಾಗಿ ಗೆದ್ದರು.


ಅವರು ‘ಬಾಬಿ’ ಮತ್ತು ‘ಫೈನಲ್ಸ್’ ಚಿತ್ರಗಳಿಂದ ತುಂಬಾನೇ ಜನಪ್ರಿಯರಾದರು ಅಂತ ಹೇಳಬಹುದು. ಬಾಬಿ ಚಿತ್ರದಲ್ಲಿ ಅವರು ಶೀರ್ಷಿಕೆ ಪಾತ್ರ ಮತ್ತು ಮಿಯಾಗೆ ವಿರುದ್ಧವಾಗಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು.


2019 ರಲ್ಲಿ ಬಿಡುಗಡೆಯಾದ ‘ಫೈನಲ್ಸ್’ ಎಂಬ ಚಿತ್ರದಲ್ಲಿ ರಜಿಶಾ ವಿಜಯನ್ ಎದುರು ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರವನ್ನು ಅರುಣ್ ಪಿ.ಆರ್ ಅವರು ನಿರ್ದೇಶಿಸಿದ್ದಾರೆ ಮತ್ತು ನಟರಾದ ಸೂರಜ್ ವೆಂಜರಾಮುಡು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ನಿರಂಜ್ ಮಲಯಾಳಂ ಚಿತ್ರರಂಗದ ಹಿರಿಯ ನಟ ಮತ್ತು ನಿರ್ಮಾಪಕ ಮಣಿಯನ್ಪಿಳ್ಳ ರಾಜು ಅವರ ಕಿರಿಯ ಮಗ.


ನಿರಂಜ್ ಮದುವೆ


ಇದಷ್ಟೇ ಅಲ್ಲದೆ, ನಂತರ ಅವರು 'ಡ್ರಾಮಾ', 'ಸಕಾಲಕಲಾಶಾಲೆ', ಮತ್ತು 'ಸೂತ್ರಾಕ್ಕರನ್' ನಂತಹ ಹಲವಾರು ಮಲಯಾಳಂ ಚಲನಚಿತ್ರಗಳಲ್ಲಿ ಜನಪ್ರಿಯ ಪಾತ್ರಗಳನ್ನು ನಿರ್ವಹಿಸಿದರು. ಅಖಿಲ್ ಮರಾರ್ ನಿರ್ದೇಶನದ 'ಒರು ಥತ್ವಿಕಾ ಅವಲೋಕನಂ' ಚಿತ್ರದಲ್ಲೂ ಸಹ ನಿರಂಜ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.


ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ ನಿರಂಜ್ ಅವರ ಹೊಸ ಚಿತ್ರ


ಮತ್ತೊಂದೆಡೆ, ನಿರಂಜ್ ಅವರ ಹೊಸ ಚಿತ್ರ 'ವಿವಾಹ ಅವಹಾನಂ' ಈಗಾಗಲೇ ನವೆಂಬರ್ 18 ಕ್ಕೆ ಸಿನೆಮಾ ಮಂದಿರಗಳಲ್ಲಿ ಬಿಡುಗಡೆಯಾಗಿದೆ ಮತ್ತು ಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ.


ಈ ಚಿತ್ರವನ್ನು ಸಜನ್ ಅಲುಮ್ಮುಟ್ಟಿಲ್ ನಿರ್ದೇಶಿಸಿದ್ದಾರೆ ಮತ್ತು ನಟರಾದ ಅಜು ವರ್ಗೀಸ್, ನಿರಂಜ್ ಮಣಿಯನ್ಪಿಳ್ಳ ರಾಜು, ಸಬುಮೋನ್ ಅಬ್ದುಸಮದ್, ಸುಧಿ ಕೊಪ್ಪ ಮತ್ತು ಸಂತೋಷ್ ಕೀಜತ್ತೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Published by:Mahmadrafik K
First published: