ninna sanihake Movie: ನಿನ್ನ ಸನಿಹಕೆ ಸಿನಿಮಾದ ಮೊದಲ ಟಿಕೆಟ್ ಸ್ವೀಕರಿಸಿದ ಸಿಎಂ: ಪ್ರೀಮಿಯರ್ ಶೋ ನೋಡಲಿದ್ದಾರೆ ಬಸವರಾಜ ಬೊಮ್ಮಾಯಿ

ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಚಿತ್ರತಂಡ ಗುರುವಾರ ಸಂಜೆ ನಡೆಯಲಿರುವ ಸಿನಿಮಾದ ಪ್ರೀಮಿಯರ್ ಶೋಗೆ ಚಿತ್ರದ ಮೊದಲ ಟಿಕೆಟ್ ನೀಡಿ ಆಮಂತ್ರಿಸಿದೆ.

ಸಿಎಂ ಭೇಟಿಯಾಗಿ ಸಿನಿಮಾದ ಮೊದಲ ಟಿಕೆಟ್ ನೀಡಿದ ನಿನ್ನ ಸನಿಹಕ್ಕೆ ಚಿತ್ರತಂಡ.

ಸಿಎಂ ಭೇಟಿಯಾಗಿ ಸಿನಿಮಾದ ಮೊದಲ ಟಿಕೆಟ್ ನೀಡಿದ ನಿನ್ನ ಸನಿಹಕ್ಕೆ ಚಿತ್ರತಂಡ.

  • Share this:
ಬೆಂಗಳೂರು: ರಾಜ್ಯಾದ್ಯಂತ ಮಹಾಮಾರಿ ಕೊರೋನಾ ಪ್ರಕರಣಗಳು (Corona Cases) ಕಡಿಮೆಯಾದ ಬೆನ್ನಲ್ಲೇ ಅಕ್ಟೋಬರ್ ಒಂದರಿಂದ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್‍ಗಳಲ್ಲಿ (Theatre Open)  ಶೇಕಡಾ ನೂರರಷ್ಟು ಹೌಸ್‍ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಲಾಗಿದೆ. ಅದಕ್ಕಾಗಿಯೇ ಕಾತರದಿಂದ ಎದುರು ನೋಡುತ್ತಿದ್ದ ಚಿತ್ರತಂಡಗಳು ಈಗಾಗಲೇ ತಮ್ಮ ಸಿನಿಮಾ ರಿಲೀಸ್ ಡೇಟ್‍ ಅನ್ನೂ ಅನೌನ್ಸ್ ಮಾಡಿವೆ. ಅಷ್ಟೇ ಯಾಕೆ ಕಾಗೆ ಮೊಟ್ಟೆ ಹಾಗೂ ಮೋಹನ್‍ ದಾಸ್ ಚಿತ್ರಗಳು ಅಕ್ಟೋಬರ್ 1ರಂದೇ ರಾಜ್ಯಾದ್ಯಂತ ರಿಲೀಸ್ ಆಗಿವೆ.

ಈಗ ಈ ವಾರವೂ ಸಿನಿಮಾಗಳು ತೆರೆಗೆ ಅಪ್ಪಳಿಸಲು ರೆಡಿಯಾಗಿವೆ. ಅವುಗಳಲ್ಲಿ ಪ್ರಮುಖವಾದುದು `ನಿನ್ನ ಸನಿಹಕೆ' ಚಿತ್ರ. (Ninna Sanihake Movie) ನಿನ್ನ ಸನಿಹಕೆ ಹಲವು ವಿಶೇಷತೆಗಳಿಂದ ಕೂಡಿರುವ ಸಿನಿಮಾ. ಕನ್ನಡ ಚಿತ್ರರಂಗದ ದೊಡ್ಡಮನೆಯಿಂದ ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್, ವಿನಯ್ ರಾಜ್‍ಕುಮಾರ್, ಯುವರಾಜ್‍ಕುಮಾರ್ ಹಾಗೂ ಧೀರೇನ್ ರಾಮ್‍ಕುಮಾರ್... ಹೀಗೆ ಹಲವು ಹೀರೋಗಳು ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ನಾಯಕಿಯಾಗಿ, ನಟಿಯಾಗಿ ಯಾರೊಬ್ಬರೂ ಇದುವರೆಗೂ ಪದಾರ್ಪಣೆ ಮಾಡಿರಲಿಲ್ಲ. ಈಗ ನಿನ್ನ ಸನಿಹಕೆ ಚಿತ್ರದ ಮೂಲಕ ನಟ ರಾಮ್‍ಕುಮಾರ್ ಹಾಗೂ ಪೂರ್ಣಿಮಾ ದಂಪತಿಯ ಪುತ್ರಿ ಧನ್ಯಾ ರಾಮ್‍ಕುಮಾರ್ (Dhanya Ramkumar) ಸ್ಯಾಂಡಲ್‍ವುಡ್ ಡೆಬ್ಯೂ ಮಾಡಿದ್ದಾರೆ. ಹಾಗೇ ಮದುವೆಯ ಮಮತೆಯ ಕರೆಯೋಲೆ ಹಾಗೂ ಸಿಲಿಕಾನ್ ಸಿಟಿ ಸಿನಿಮಾಗಳ ಖ್ಯಾತಿಯ ನಾಯಕ ನಟ ಸೂರಜ್ ಗೌಡ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಚಿತ್ರವಿದು.

ನಿನ್ನ ಸನಿಹಕೆ ಚಿತ್ರ ಇದೇ ಅಕ್ಟೋಬರ್ 8ರಂದು ರಿಲೀಸ್‍ಗೆ ರೆಡಿಯಾಗಿದ್ದು, ಚಿತ್ರತಂಡ ಸಾಕಷ್ಟು ಎಕ್ಸೈಟ್ ಆಗಿದೆ. ಇದೇ ಖುಷಿಯಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಚಿತ್ರತಂಡ ಗುರುವಾರ ಸಂಜೆ ನಡೆಯಲಿರುವ ಸಿನಿಮಾದ ಪ್ರೀಮಿಯರ್ ಶೋಗೆ ಚಿತ್ರದ ಮೊದಲ ಟಿಕೆಟ್ ನೀಡಿ ಆಮಂತ್ರಿಸಿದೆ. ನಾಯಕ, ನಿರ್ದೇಶಕ ಸೂರಜ್ ಗೌಡ, ನಾಯಕಿ ಧನ್ಯಾ ರಾಮ್‍ಕುಮಾರ್ ಹಾಗೂ ನಿರ್ಮಾಪಕರಾದ ಅಕ್ಷಯ್ ರಾಜಶೇಖರ್ ಹಾಗೂ ರಂಗನಾಥ್ ಕೂಡ್ಲಿ ಸಿಎಂಗೆ ವಿಶೇಷ ಆಹ್ವಾನ ನೀಡಿದ್ದಾರೆ. ವಿಶೇಷ ಅಂದರೆ ಡಾ. ರಾಜ್‍ಕುಮಾರ್ ಹಾಗೂ ಪಾರ್ವತಮ್ಮ ರಾಜ್‍ಕುಮಾರ್ ಕುಟುಂದ ಜೊತೆ ಅನ್ಯೋನ್ಯ ಸಂಬಂಧವಿದ್ದು, ವಿಶೇಷ ಗೌರವ ಇರುವ ಕಾರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸಹ ಸಿನಿಮಾ ವೀಕ್ಷಿಸಲು ಒಪ್ಪಿಕೊಂಡಿದ್ದಾರೆ.

ಇನ್ನು ನಿನ್ನ ಸನಿಹಕೆ ಚಿತ್ರದಲ್ಲಿ ಸೂರಜ್ ಗೌಡ, ಧನ್ಯಾ ರಾಮ್‍ಕುಮಾರ್ ಜೊತೆಗೆ ಮಂಜುನಾಥ್ ಹೆಗ್ಡೆ, ಅರುಣಾ ಬಾಲರಾಜ್, ಕರಿಸುಬ್ಬು, ಚಿತ್ಕಲಾ ಬಿರಾದಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ನೀಡಿದ್ದು, ನೀ ಪರಿಚಯ, ಮಳೆ ಮಳೆ ಮಳೆಯೇ ಹಾಗೂ ನಿನ್ನ ಸನಿಹಕೆ ಟೈಟಲ್ ಟ್ರ್ಯಾಕ್‍ಗಳು ವೈರಲ್ ಆಗಿವೆ. ವಾಸುಕಿ ವೈಭವ್ ಅವರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಚಿತ್ರಕ್ಕೆ ಅಭಿಲಾಷ್ ಕ್ಯಾಮರಾ ಕೈಚಳಕ, ವರದರಾಜ್ ಕಾಮತ್ ಕಲಾನಿರ್ದೇಶನ, ಸುರೇಶ್ ಅರ್ಮುಗಂ ಅವರ ಸಂಕಲನ, ಮೋಹನ್ ನೃತ್ಯ ನಿರ್ದೇಶನ, ರಾಷ್ಟ್ರಪ್ರಶಸ್ತಿ ವಿಜೇತ ವಿಕ್ರಮ್ ಮೋರ್ ಸಾಹಸ ನಿರ್ದೇಶನ, ಪ್ರವೀಣ್ ಕುಮಾರ್ ಹಾಗೂ ಸುಮನ್ ಜಾದೂಗರ್ ಸಂಭಾಷಣೆಯಿದೆ.

ಇದನ್ನು ಓದಿ: ಡಾಲಿ ಧನಂಜಯ ಅಭಿನಯದ Rathnan Prapancha ಸಿನಿಮಾ ಒಟಿಟಿಯಲ್ಲಿ ರಿಲೀಸ್​: ದಿನಾಂಕ ಪ್ರಕಟಿಸಿದ ಚಿತ್ರತಂಡ

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
Published by:HR Ramesh
First published: