ಅಂಬಿ ಹುಟ್ಟುಹಬ್ಬಕ್ಕೆ ವಿಶೇಷ ಗೀತೆ: ನಿಂತಿಲ್ಲ ಕನ್ವರ್​ಲಾಲ್ ಕನವರಿಕೆ...ನೀನಾಸಂ ಸತೀಶ್ ಹಾಡುಗಾರಿಕೆ..!

ಸತೀಶ್ ಈ ಹಿಂದೆ ಅಯೋಗ್ಯ ಚಿತ್ರದಲ್ಲಿ ಅಂಬಿ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದರು. ಅದರಲ್ಲೂ ಮಂಡ್ಯದವರೇ ಆಗಿರುವ ಅಭಿನಯ ಚತುರ ಪ್ರತಿಬಾರಿ ಕೂಡ ರೆಬೆಲ್ ಸ್ಟಾರ್ ಹುಟ್ಟುಹಬ್ಬದಂದು ವಿಶೇಷ ಅಭಿಮಾನ ಮೆರೆಯುತ್ತಾರೆ.

ambreesh

ambreesh

  • Share this:
ನಾಳೆ ರೆಬೆಲ್ ಸ್ಟಾರ್ ಅಂಬರೀಶ್​ ಅವರ 68ನೇ ಹುಟ್ಟುಹಬ್ಬ. ಪ್ರತಿ ವರ್ಷದಂತೆ ಈ ಬಾರಿ ಅಂಬಿ ಹುಟ್ಟುಹಬ್ಬದ ಸಡಗರ ಸಂಭ್ರಮವಿಲ್ಲ. ಕಾರಣ ಕೊರೋನಾ ಲಾಕ್​ಡೌನ್. ಆದರೂ ರೆಬೆಲ್ ಸ್ಟಾರ್ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬಕ್ಕಾಗಿ ವಿಭಿನ್ನ ಯೋಜನೆಗಳನ್ನು ರೂಪಿಸಿಕೊಂಡಿದ್ದಾರೆ.

ಅದರಲ್ಲೂ ಅಭಿನಯ ಚತುರ ನೀನಾಸಂ ಸತೀಶ್ 'ನಮ್ಮೂರ ಹಮ್ಮಿರ'ನ ಹುಟ್ಟುಹಬ್ಬವನ್ನು ಮತ್ತಷ್ಟು ಡಿಫರೆಂಟ್ ಆಗಿ ಆಚರಿಸಲು ನಿರ್ಧರಿಸಿದ್ದಾರೆ. ಅದು ಕೂಡ ಸ್ಪೆಷಲ್ ಸಾಂಗ್ ಮೂಲಕ ಎಂಬುದು ವಿಶೇಷ. ಹೌದು, ನಟ ಸತೀಶ್ ಮತ್ತು ತಂಡ ಲಾಕ್​ಡೌನ್ ನಡುವೆಯೇ ಮಂಡ್ಯ ಗಂಡಿಗಾಗಿ ವಿಶೇಷ ಗೀತೆಯೊಂದನ್ನು ರಚಿಸಿದ್ದಾರೆ.ನಿಂತಿಲ್ಲ ಕನ್ವರ್​ಲಾಲ್ ಕನವರಿಕೆ..ಎಂಬ ಈ ಗೀತೆಗೆ ಸಾಹಿತ್ಯ ಒದಗಿಸಿರುವುದು ಭರ್ಜರಿ ಚೇತನ್. ಹಾಗೆಯೇ  ಹಾಡಿ ಹೊಗಳಿರುವುದು ಮತ್ಯಾರೂ ಅಲ್ಲ ನೀನಾಸಂ ಸತೀಶ್.

ಸತೀಶ್ ಈ ಹಿಂದೆ ಅಯೋಗ್ಯ ಚಿತ್ರದಲ್ಲಿ ಅಂಬಿ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದರು. ಅದರಲ್ಲೂ ಮಂಡ್ಯದವರೇ ಆಗಿರುವ ಅಭಿನಯ ಚತುರ ಪ್ರತಿಬಾರಿ ಕೂಡ ರೆಬೆಲ್ ಸ್ಟಾರ್ ಹುಟ್ಟುಹಬ್ಬದಂದು ವಿಶೇಷ ಅಭಿಮಾನ ಮೆರೆಯುತ್ತಾರೆ. ಈ ಬಾರಿ ಲಾಕ್​ಡೌನ್ ಹಿನ್ನೆಲೆಯಲ್ಲಿ ಅದು ಹಾಡಿನ ರೂಪದಲ್ಲಿ ಹೊರ ಬರುತ್ತಿದೆ ಅಷ್ಟೇ.

ಈ ಗೀತೆಯು ನಾಳೆ ಬೆಳಗ್ಗೆ 9 ಗಂಟೆಗೆ ಯೂಟ್ಯೂಬ್​ನಲ್ಲಿ ರಿಲೀಸ್ ಆಗಲಿದ್ದು, ಸತೀಶ್ ಕಂಠದಲ್ಲಿ ಅಂಬಿಯ ಗುಣಗಾನ ಹೇಗಿರಲಿದೆ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಅಂಬಿ ಅಭಿಮಾನಿಗಳನ್ನು ಅಗಲಿ ಒಂದೂವರೆ ವರ್ಷ ಕಳೆದರೂ...ಕೊರೋನಾ ಲಾಕ್​ಡೌನ್ ಇದ್ದರೂ ಅಭಿಮಾನಿಗಳ ಅಭಿಮಾನ ಸ್ವಲ್ಪವೂ ಕಮ್ಮಿಯಾಗಿಲ್ಲ ಎಂಬುದಕ್ಕೆ ಇದುವೇ ಸಾಕ್ಷಿ.
First published: