‘ಗೋದ್ರಾ’ ಸತೀಶ್ ನೀನಾಸಂ ನಟನೆಯಲ್ಲಿ ತೆರೆಗೆ ಬರಲು ಸಿದ್ದವಾಗಿರೋ ಸಿನಿಮಾ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಎಲ್ಲಾ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಪೂರ್ಣ ಗೊಳಿಸಿ ರಿಲೀಸ್ ಗೆ ರೆಡಿಯಾಗ್ತಾ ಇತ್ತು. ಅದರಂತೆ ಸೆನ್ಸಾರ್ ಮಂಡಳಿಯ ಅನುಮತಿಗಾಗಿ ಚಿತ್ರವನ್ನು ಕಳಿಸಿಕೊಡಲಾಗಿತ್ತು.
ಆದರೆ ಚಿತ್ರದ ಟೈಟಲ್ ಗೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ. ಈ ಶೀರ್ಷಿಕೆ ಬದಲಿಸಿಕೊಂಡು ಬಂದರೆ ಮಾತ್ರ ಸೆನ್ಸಾರ್ ಸರ್ಟಿಫಿಕೇಟ್ ನೀಡೋದು ಅಂತ ಹೇಳಿದೆ. ಅಂದಹಾಗೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈ ಶೀರ್ಷಿಕೆಗೆ ಅನುಮತಿ ನೀಡಲಾಗಿದೆ.
ಗೋದ್ರಾದಲ್ಲಿ ನಡೆದ ಘಟನೆಗೂ ಈ ಸಿನಿಮಾಗೂ ಸಂಬಂಧವಿಲ್ಲ. ಇದು ಕಾಲ್ಪನಿಕ ಕಥೆ, ಯಾವುದೇ ವಿವಾದಿತ ಅಂಶಗಳು ಇಲ್ಲ ಅಂತ ಮನವರಿಕೆ ಮಾಡಿದ ಮೇಲೆಯೇ ಗೋದ್ರಾ ಟೈಟಲ್ ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅನುಮತಿ ನೀಡಿತ್ತು. ಈಗ ಫಿಲ್ಮ್ ಚೇಂಬರ್ ನಲ್ಲಿ ನೀಡಿರೋ ಟೈಟಲ್ ನೇ ಸೆನ್ಸಾರ್ ಮಂಡಳಿ ರಿಜೆಕ್ಟ್ ಮಾಡುತ್ತೆ ಅನ್ನೋದಾದ್ರೆ? ಫಿಲಂ ಚೇಂಬರ್ ನಲ್ಲಿ ನೊಂದಣಿ ಮಾಡಿಸಿದ್ದಕ್ಕೆ ಯಾವುದೇ ಬೆಲೆ ಇಲ್ವಾ ಅನ್ನೋ ಪ್ರಶ್ನೆಯನ್ನ ಚಿತ್ರತಂಡ ಎತ್ತಿತ್ತು.
ಆದರೀಗ ಯಾರ ಭಾವನೆಗಳಿಗೂ ನೋವುಂಟು ಮಾಡೋದು ಬೇಡ, ಸೆನ್ಸಾರ್ ಮಂಡಳಿ ಸೂಚನೆಯಂತೆ ಟೈಟಲ್ ಬದಲಿಸಿಬಿಡೋಣ ಎಂಬ ಒಮ್ಮತ್ತದ ನಿರ್ಧಾರಕ್ಕೆ ಚಿತ್ರತಂಡ ಬಂದಿದೆ. ಅದರಂತೆ ಚಿತ್ರದ ಕಥೆಗೆ ಹೊಂದುವಂತಹ ಸೂಕ್ತ ಶೀರ್ಷಿಕೆಯ ಹುಡುಕಾಟದಲ್ಲಿ ಚಿತ್ರತಂಡ ತೊಡಗಿದೆ. ಆ ರೀತಿಯ ಟೈಟಲ್ ಸಿಕ್ಕ ತಕ್ಷಣವೇ ಅನೌನ್ಸ್ ಮಾಡಲಿದೆ. ಅಂದಹಾಗೆ ಈ ಚಿತ್ರದಲ್ಲಿ ನಿನಾಸಂ ಸತೀಶ್ ಜೊತೆಯಾಗಿ ಶ್ರದ್ಧಾ ಶ್ರೀನಾಥ್ ಅಭಿನಯಿಸಿದ್ದಾರೆ.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ