ಬಿಡುಗಡೆಯಾಯಿತು ಸಿ.ಎಂ. ಸ್ವಕ್ಷೇತ್ರದಲ್ಲಿ ಮಗ ನಿಖಿಲ್ ಅಭಿನಯದ ಸಿನಿಮಾದ ಟೀಸರ್​!

news18
Updated:August 3, 2018, 5:14 PM IST
ಬಿಡುಗಡೆಯಾಯಿತು ಸಿ.ಎಂ. ಸ್ವಕ್ಷೇತ್ರದಲ್ಲಿ ಮಗ ನಿಖಿಲ್ ಅಭಿನಯದ ಸಿನಿಮಾದ ಟೀಸರ್​!
news18
Updated: August 3, 2018, 5:14 PM IST
ಹರೀಶ್ ನ್ಯೂಸ್18 ಕನ್ನಡ ಬೆಂಗಳೂರು

ಎಲ್ಲರಿಗೂ ಗೊತ್ತಿರುವಂತೆ ಸಿ.ಎಂ ಸ್ವಕ್ಷೇತ್ರ ರಾಮನಗರ. ಇಲ್ಲಿನ ಜನತೆಗೆ ದೊಡ್ಡಗೌಡರ ಕುಟುಂಬದ ಬಗ್ಗೆ ತುಂಬಾ ಪ್ರೀತಿ ಇದೆ. ಹಾಗಾಗಿ ಇಲ್ಲಿ ಚುನಾವಣೆಗಾಗಲಿ ಅಥವಾ ವೇದಿಕೆ ನಿರ್ಮಿಸಿ ಮಗನ ಸಿನಿಮಾ ಟೀಸರ್ ರಿಲೀಸ್‍ಗಾಗಲಿ ನಿಂತರೆ ಜನವೋ ಜನ. ಇಂಥ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿನಯದ ಎರಡನೇ ಸಿನಿಮಾ 'ಸೀತಾರಾಮ ಕಲ್ಯಾಣ'ದ ಟೀಸರ್ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು.ಸಾಧು ಕೋಕಿಲಾ ಕೇವಲ ಹಾಸ್ಯನಟ ಅಲ್ಲ. ಅವರಿಗೆ ಹಾಡುವ ಪ್ರತಿಭೆಯೂ ಇದೆ.  ಆದರೆ ಅವರಲ್ಲಿರೊ ಅಸಲಿ ಟ್ಯಾಲೆಂಟು ಅವರ ಸಂಗೀತ ಜ್ಞಾನ ಮತ್ತು ಹಾಡುಗಾರಿಕೆ. ಹಾಗಂತ ಸಾಧು ವೇದಿಕೆ ಮೇಲೆ ಬರೀ ಒಂದು ಹಾಡು ಹಾಡಿ ಹೋಗಲಿಲ್ಲ, ಒಂದು ಸಖತ್ ಸ್ಟೆಪ್ ಹಾಕಿ ಎಲ್ಲರನ್ನ ನಗಿಸಿಯೂ ಹೋದರು.

ಈ ಎಲ್ಲದರ ಮಧ್ಯೆ 'ಸೀತಾರಾಮ ಕಲ್ಯಾಣ' ಕಾರ್ಯಕ್ರಮವನ್ನು ಕಣ್ಣು ತುಂಬಿಕೊಳ್ಳಲು  ಬಂದಿದ್ದ ಅರ್ಜುನ್ ಜನ್ಯ ಸಹ ನೆರೆದವರಿಗೆ ಫುಲ್ ಮೀಲ್ಸ್ ಕೊಟ್ಟರು. ಖ್ಯಾತ ಗಾಯಕರಿಂದ ಅರ್ಜುನ್ ಜನ್ಯ ಹಲವಾರು ಸೂಪರ್ ಹಿಟ್ ಗೀತೆಗಳನ್ನ ಹಾಡಿಸಿದರು ಅರ್ಜುನ್​ ಜನ್ಯ.

ಒಟ್ಟಿನಲ್ಲಿ ಶ್ರಮ ಮತ್ತು ನಿಷ್ಠಾವಂತ ಪ್ರಯತ್ನ ಇದ್ದರೆ ಎಂಥದನ್ನೂ ಗೆಲ್ಲಬಹುದು ಅನ್ನೋದಕ್ಕೆ'ಸೀತಾರಾಮ ಕಲ್ಯಾಣ' ಸಾಕ್ಷಿಯಾಗಿ ನಿಲ್ಲುತ್ತಿದೆ. ಜನರ ಮುಂದೆ ವಿವಿಧ ಕಾರ್ಯಕ್ರಮ ನೀಡಿ, ಮನರಂಜನೆ ನೀಡಿ ಸೈ ಅನ್ನಿಸಿಕೊಂಡ ತಂಡ ಥಿಯೇಟರ್​ನಲ್ಲಿ ಜೈ ಅನ್ನಿಸಿಕೊಳ್ಳೋಕೆ ತುದಿಗಾಲಲ್ಲಿ ನಿಂತಿದೆ.

 
First published:August 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ