Happy Birthday Abhishek Ambareesh: ಗೆಳೆಯ ಅಭಿಷೇಕ್​ ಹುಟ್ಟುಹಬ್ಬಕ್ಕೆ ಶುಭ ಕೋರಿದ ನಿಖಿಲ್​ ಕುಮಾರಸ್ವಾಮಿ

Happy Birthday Abhishek Ambareesh: ಬಾಲ್ಯದ ಗೆಳೆಯ ಅಭಿ ಹುಟ್ಟುಹಬ್ಬಕ್ಕೆ ದೋಸ್ತಿ ನಿಖಿಲ್ ಕುಮಾರಸ್ವಾಮಿ ಶುಭಕೋರಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ನಿಖಿಲ್ ಹುಟ್ಟುಹಬ್ಬದ ಶುಭಾಶಯ ತಿಳಿಸೋ ಮೂಲಕ ನಮ್ಮಿಬ್ಬರ ನಡುವೆ ಹಳೆಯ ಆತ್ಮೀಯತೆ ಹಾಗೆಯೇ ಇದೆ ಅನ್ನೋದನ್ನ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

Anitha E | news18-kannada
Updated:October 3, 2019, 5:08 PM IST
Happy Birthday Abhishek Ambareesh: ಗೆಳೆಯ ಅಭಿಷೇಕ್​ ಹುಟ್ಟುಹಬ್ಬಕ್ಕೆ ಶುಭ ಕೋರಿದ ನಿಖಿಲ್​ ಕುಮಾರಸ್ವಾಮಿ
ಅಭಿಷೇಕ್​ ಹುಟ್ಟುಹಬ್ಬಕ್ಕೆ ಶೂಭಕೋರಿದ ನಿಖಿಲ್​ ಕುಮಾರಸ್ವಾಮಿ
  • Share this:
ಯಂಗ್ ರೆಬೆಲ್‍ಸ್ಟಾರ್ ಅಭಿಷೇಕ್ ಅಂಬರೀಷ್‍ ಅವರ ಜನುಮದಿನ. ಅಂಬರೀಷ್​ ಅವರ ಮಗ ಇಂದು 26ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ ತಮ್ಮ ತಂದೆ ಇಲ್ಲದ ಈ ಹುಟ್ಟುಹಬ್ಬವನ್ನು ಅಭಿಷೇಕ್ ಆಚರಿಸಿಕೊಳ್ಳುತ್ತಿಲ್ಲ.

ಆದರೆ ಬಾಲ್ಯದ ಗೆಳೆಯ ಅಭಿ ಹುಟ್ಟುಹಬ್ಬಕ್ಕೆ ದೋಸ್ತಿ ನಿಖಿಲ್ ಕುಮಾರಸ್ವಾಮಿ ಶುಭಕೋರಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ನಿಖಿಲ್ ಹುಟ್ಟುಹಬ್ಬದ ಶುಭಾಶಯ ತಿಳಿಸೋ ಮೂಲಕ ನಮ್ಮಿಬ್ಬರ ನಡುವೆ ಹಳೆಯ ಆತ್ಮೀಯತೆ ಹಾಗೆಯೇ ಇದೆ ಅನ್ನೋದನ್ನ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

Nikhil Kumaraswamy wished Abhishek Ambareesh on his birth day
ಅಭಿಷೇಕ್​ ಹುಟ್ಟುಹಬ್ಬಕ್ಕೆ ಶೂಭಕೋರಿದ ನಿಖಿಲ್​ ಕುಮಾರಸ್ವಾಮಿ


ಅಂದಹಾಗೆ ಅಭಿಷೇಕ್ ಅಂಬರೀಷ್ 'ಅಮರ್' ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿಕೊಟ್ಟು, ಮೊದಲ ಚಿತ್ರದಲ್ಲೇ ಚಿತ್ರರಸಿಕರ ಗಮನ ಸೆಳೆದರು. ಈಗ ಎರಡನೇ ಚಿತ್ರಕ್ಕೆ ಅಭಿ ಸಜ್ಜಾಗುತ್ತಿದ್ದಾರೆ. ಅದರ ಲುಕ್ ಅನ್ನು ಕೆಲ ದಿನಗಳ ಹಿಂದೆ ಇನ್‍ಸ್ಟಾಗ್ರಾಂನಲ್ಲಿ ಅಭಿ ಪೋಸ್ಟ್ ಮಾಡಿದ್ದರು. ಆಗಲೂ ನಿಖಿಲ್​ ಮೊದಲು ಅಭಿಯ ಪೋಸ್ಟ್​ಗೆ ಶುಭ ಕೋರಿ ಕಮೆಂಟ್​ ಮಾಡಿದ್ದರು.

nikhil commnt on abhishek ambareesh's photo
ಅಭಿ ಚಿತ್ರಕ್ಕೆ ನಿಖಿಲ್​ ಕಮೆಂಟ್​ ಮಾಡಿದ್ದು ಹೀಗೆ...


ಲೋಕಸಭಾ ಚುನಾವಣೆಯ ಸಮಯದಲ್ಲಿ ನಿಖಿಲ್​ ಹಾಗೂ ಅಭಿಷೇಕ್​ ನಡುವೆ ಡೈಲಾಗ್​ ವಾರ್ ನಡೆದಿತ್ತು. ಆದರೆ ಅದನ್ನು ಈ ಇಬ್ಬರೂ ನಟರು ಮುಂದುವರೆಸಲಿಲ್ಲ. ಚುನಾವಣೆ ಮುಗಿದ ನಂತರ ಮತ್ತೆ ದೋಸ್ತಿಗಳು ಒಂದಾಗಿದ್ದಾರೆ. ಇವರಿಬ್ಬರ ಸ್ನೇಹ ಹೀಗೆ ಇರಲೆಂದು ಹಾರೈಸೋಣ.

ಈ ಸ್ಯಾಂಡಲ್​ವುಡ್​​ ನಟಿಯನ್ನ ಮದುವೆಯಾಗಬೇಕಾದರೆ ಈರುಳ್ಳಿಯಿಂದ ದೂರವಿರಿ..!
First published: October 3, 2019, 4:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading