ಡಬ್ಬಿಂಗ್ ಮುಗಿಸಿದ Rider: ಸಿನಿಮಾ ರಿಲೀಸ್​ ದಿನಾಂಕದ ಬಗ್ಗೆ ಅಪ್ಡೇಟ್​ ಕೊಟ್ಟ Nikhil Kumaraswamy

ಚಿತ್ರೀಕರಣ ಮುಗಿಸಿದ ನಂತರ ನಿಖಿಲ್ ಕುಮಾರಸ್ವಾಮಿ ಅವರು ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ನಿನ್ನೆಯಷ್ಟೆ ಚಿತ್ರತಂಡ ಡಬ್ಬಿಂಗ್​ ಮುಗಿಸಿದೆ. ಈ ವಿಷಯವನ್ನು ನಿಖಿಲ್​ ಒಂದು ಪುಟ್ಟ ವಿಡಿಯೋ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ರೈಡರ್ ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ

ರೈಡರ್ ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ

  • Share this:
ಒಂದು ಕಡೆ ರಾಜಕೀಯ, ಮತ್ತೊಂದು ಕಡೆ ಸಿನಿಮಾ... ಎರಡನ್ನೂ ಸಮದೂಗಿಸಿಕೊಂಡು ಹೋಗುತ್ತಿರುವ ಸ್ಯಾಂಡಲ್​ವುಡ್​ ಯುವರಾಜ್ ಸಿನಿಪ್ರಿಯರಿಗೆ ಸಿಹಿ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ನಿಖಿಲ್​ ಕುಮಾರಸ್ವಾಮಿ (Nikhil Kumaraswamy) ಅವರು ಮೂರು ಸಿನಿಮಾಗಳನ್ನು ಮಾಡಿದ್ದು, ಅವರ ನಾಲ್ಕನೇ ಚಿತ್ರವೇ ಈ ರೈಡರ್​. ಈ ಚಿತ್ರವನ್ನು ಟಾಲಿವುಡ್​ ನಿರ್ದೇಶಕ ವಿಜಯ್​ ಕುಮಾರ್​ ಕೊಂಡ (Vijay Kumar Konda) ಅವರು ನಿರ್ದೇಶನ ಮಾಡುತ್ತಿದ್ದಾರೆ. ಹೌದು, 'ಜಾಗ್ವಾರ್', 'ಕುರುಕ್ಷೇತ್ರ', 'ಸೀತಾರಾಮ ಕಲ್ಯಾಣ ' (Seetharama Kalyana) ನಂತರ ನಿಖಿಲ್ ಕುಮಾರಸ್ವಾಮಿ ಅಭಿನಯದ ಹೊಸ ಸಿನಿಮಾ ಅನೌನ್ಸ್ ಆಗಿತ್ತು. ಕೊರೋನಾ ಆತಂಕ ಶುರುವಾಗುವ ಮುನ್ನವೇ ಆ ಸಿನಿಮಾದ ಮುಹೂರ್ತ ನೆರವೇರಿತ್ತು. ಆದರೆ, ಲಹರಿ ಪ್ರೊಡಕ್ಷನ್ ಸಿನಿಮಾಗೆ ಟೈಟಲ್ ಏನು ಎಂಬುದು ಫಿಕ್ಸ್ ಆಗಿರಲಿಲ್ಲ. ಹಾಗಾಗಿ N4 ವರ್ಕಿಂಗ್ ಟೈಟಲ್ ನಲ್ಲೇ ಚಿತ್ರದ ಪ್ರೀ ಪ್ರೊಡಕ್ಷನ್ಸ್ ಕೆಲಸಗಳು ಆರಂಭವಾಗಿದ್ದವು. ನಂತರದಲ್ಲಿ ನಿಖಿಲ್ ಕುಮಾರ್ ನಟನೆಯ ಹೊಸ ಚಿತ್ರಕ್ಕೆ 'ರೈಡರ್' (Rider)ಎಂಬ ಟೈಟಲ್​ ಫಿಕ್ಸ್​ ಮಾಡಲಾಯಿತು. 

ಬಹಳ ಹಿಂದೆಯೇ ಟೈಟಲ್ ಟೀಸರ್ ರಿಲೀಸ್ ಹಾಗೂ ಪೋಸ್ಟರ್​ಗಳನ್ನು ರಿಲೀಸ್​ ಮಾಡಿತ್ತು ಚಿತ್ರತಂಡ. ಇನ್ನು ನಿಖಿಲ್ ಹುಟ್ಟುಹಬ್ಬದ ಸಮಯದಲ್ಲಿ ಅಂದರೆ ಜ.22ರಂದು ರೈಡರ್​ ಸಿನಿಮಾದ ಟೀಸರ್ ಬಿಡುಗಡೆಯಾಯಿತು. ಈ ಟೀಸರ್ ನೋಡಿದ ಮೇಲಂತೂ ಇದೊಂದು ಪಕ್ಕಾ ಆ್ಯಕ್ಷನ್ ಸಿನಿಮಾ ಅನ್ನೋದು ಸ್ಪಷ್ಟವಾಗಿತ್ತು. ಎಂದಿನಂತೆ ನಿಖಿಲ್ ಫೈಟಿಂಗ್​ ದೃಶ್ಯಗಳಲ್ಲಿ ಸಖತ್ತಾಗಿ ಕಾಣಿಸಿಕೊಂಡಿದ್ದರು.ಇನ್ನು ಎರನಡೇ ಅಲೆ ಆರಂಭವಾಗುವ ಮೊದಲೂ ಈ ಸಿನಿಮಾ ಚಿತ್ರೀಕರಣ ಆರಂಭವಾಗಿತ್ತು. ನಂತರ ಮತ್ತೆ ಲಾಕ್​ಡೌನ್​ ಆಗಿ, ಚಿತ್ರೀಕರಣಕ್ಕೆ ಬ್ರೇಕ್​ ಬಿದ್ದಿತ್ತು. 2ನೇ ಅಲೆ ನಂತರದಲ್ಲಿ ಮತ್ತೆ ಶೂಟಿಂಗ್ ಆರಂಭಿಸಿದ್ದ ಚಿತ್ರತಂಡ ಚಿತ್ರೀಕರಣವನ್ನು ಪೂರ್ಣಗೊಳಿಸಿತು. ಬೆಂಗಳೂರು, ಲಡಾಖ್​ ಸೇರಿದಂತೆ ನಾನಾ ಕಡೆಗಳಲ್ಲಿ ಶೂಟಿಂಗ್ ಮಾಡಲಾಗಿದೆ.

ಇದನ್ನೂ ಓದಿ: ಸೀಮಂತಕ್ಕೂ ಮೊದಲು ಫೋಟೋಶೂಟ್​ಗೆ ಪೋಸ್​ ಕೊಟ್ಟ Nikhil Kumaraswamy-Revathi

ಇನ್ನು ಚಿತ್ರೀಕರಣ ಮುಗಿಸಿದ ನಂತರ ನಿಖಿಲ್ ಕುಮಾರಸ್ವಾಮಿ ಅವರು ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ನಿನ್ನೆಯಷ್ಟೆ ಚಿತ್ರತಂಡ ಡಬ್ಬಿಂಗ್​ ಮುಗಿಸಿದೆ. ಈ ವಿಷಯವನ್ನು ನಿಖಿಲ್​ ಒಂದು ಪುಟ್ಟ ವಿಡಿಯೋ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ರೈಡರ್​ ಸಿನಿಮಾದಲ್ಲಿ ಕಶ್ಮೀರಾ ಪರದೇಶಿ ನಾಯಕಿಯಾಗಿ ನಿಖಿಲ್​ ಕುಮಾರಸ್ವಾಮಿ ಜತೆ ತೆರೆ ಹಂಚಿಕೊಳ್ಳಲಿದ್ದಾರೆ.

ಈಗಾಗಲೇ ಸಿನಿಮಾದ ಡಬ್ಬಿಂಗ್ ಮುಗಿದಿದೆ. ಸಿನಿಮಾ ನೋಡಿದ್ದೇವೆ. ತುಂಬಾ ಚೆನ್ನಾಗಿ ಬಂದಿದೆ. ದಯವಿಟ್ಟು ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಎಂದು ಮನವಿ ಮಾಡಿರುವ ನಿಖಿಲ್​ ಕುಮಾರಸ್ವಾಮಿ, ಸದ್ಯದಲ್ಲೇ ರಿಲೀಸ್​ ದಿನಾಂಕದ ಕುರಿತಾಗಿ ಅಪ್ಡೇಟ್​ ಕೊಟುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Nikhil-Revathi: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಿಖಿಲ್-ರೇವತಿ: ಗೌಡರ ಮನೆಯ ಸೊಸೆಗೆ ಈಗ 5 ತಿಂಗಳು..!

ಯುವರಾಜ ನಿಖಿಲ್​ಗೆ 'ರೈಡರ್' ಕಮರ್ಷಿಯಲ್ ಸಕ್ಸಸ್ ನೀಡುವ ಎಲ್ಲಾ ಸೂಚನೆಯನ್ನ ಸಹ ಟೈಟಲ್ ಟೀಸರ್ ನೀಡುತ್ತಿದೆ.ಯುವರಾಜ ನಿಖಿಲ್ ಕುಮಾರಸ್ವಾಮಿ ರಾಜಕೀಯ ಹಾಗೂ ಚಿತ್ರರಂಗ ಎರಡೂ ಕಡೆ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ನಟನಾಗಿ ವೃತ್ತಿಜೀವನ ಆರಂಭಿಸಿದ ನಿಖಿಲ್ ಕುಮಾರ್ ಜೆ.ಡಿ.ಎಸ್ ಯುವ ಘಟಕದ ಅಧ್ಯಕ್ಷ ಸಹ ಹೌದು. ಆದರೂ ನಟನಾಗಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುವ ಉತ್ಸಾಹದಲ್ಲಿದ್ದು, ಅವರ ಕೈಯಲ್ಲೀಗ ರೈಡರ್ ಸೇರಿ ನಾಲ್ಕು ಚಿತ್ರಗಳಿರೋದು ವಿಶೇಷ. ಸದ್ಯಕ್ಕೆ ರೈಡರ್​ ಸಿನಿಮಾ ಬಿಟ್ಟರೆ ಮತ್ತಾವ ಚಿತ್ರದ ಬಗ್ಗೆಯೂ ಯಾವ ಅಪ್ಡೇಟ್​ ಹೊರ ಬಿದ್ದಿಲ್ಲ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಿಖಿಲ್​ ಕುಮಾರಸ್ವಾಮಿ ದಂಪತಿ

ಕಳೆದ ವರ್ಷ ಏಪ್ರಿಲ್‌ನಲ್ಲಿ ರೇವತಿ ಅವರ ಜೊತೆ ಸಪ್ತಪದಿ ತುಳಿದಿದ್ದ ನಿಖಿಲ್ ಕುಮಾರಸ್ವಾಮಿ ಇದೀಗ ತಂದೆಯಾಗುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಬೆಂಗಳೂರಿನ ಕಲ್ಯಾಣ ಮಂಟಪ ಒಂದರಲ್ಲಿ ಅದ್ಧೂರಿಯಾಗಿ ರೇವತಿ ಅವರ ಸೀಮಂತ ಕಾರ್ಯಕ್ರಮ ನಡೆಯಿತು.
Published by:Anitha E
First published: