Anitha EAnitha E
|
news18-kannada Updated:September 22, 2020, 11:32 AM IST
ವಿಶೇಷ ಅಭಿಮಾನಿಯೊಂದಿಗೆ ನಿಖಿಲ್
- ಅನಿತಾ ಈ,
ನಿಖಿಲ್ ಕುಮಾರಸ್ವಾಮಿ ಲಾಕ್ಡೌನ್ನಲ್ಲಿ ತಮ್ಮ ತೋಟದ ಮನೆಯಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದರು. ವಿವಾಹವಾದಾಗಿನಿಂದ ರೇವತಿ ಅವರೊಂದಿಗೆ ಅವರು ಹೆಚ್ಚಾಗಿ ತೋಟದ ಮನೆಯಲ್ಲೇ ಇರುತ್ತಿದ್ದಾರೆ. ನಿಖಿಲ್ ಹೆಂಡತಿ ರೇವತಿ ಜೊತೆ ಪೋಸ್ಟ್ ಮಾಡುವ ಫೋಟೋಗಳನ್ನು ನೋಡಿದರೆ, ಅವರು ಹೆಚ್ಚಾಗಿ ತೋಟದ ಮನೆಯಲ್ಲೇ ಇರುತ್ತಾರೆ ಅನ್ನೋದು ತಿಳಿಯುತ್ತದೆ. ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಮಾತ್ರ ಪತ್ನಿ ಜೊತೆಗೆ ಬೆಂಗಳೂರಿನಲ್ಲಿರುವ ತಮ್ಮ ಮನೆಗೆ ಹೋಗುವ ನಿಖಿಲ್, ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿರುವ ನಿಖಿಲ್, ಪ್ರಸಕ್ತ ವಿಷಯಗಳ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ನಿಖಿಲ್, ಹಿಂದಿ ಹೇರಿಕೆ ಹಾಗೂ ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ತರುವ ಕುರಿತಾಗಿ ಸಾಲು ಸಾಲು ಟ್ವೀಟ್ ಮಾಡಿದ್ದರು. ಇನ್ನು ಬೆಳಗಾವಿಯಲ್ಲಿ ಸಂಗೊಳ್ಳಿರಾಯಣ್ಣ ಅವರ ಪ್ರತಿಮೆ ಸ್ಥಾಪನೆ ಕುರಿತಂತೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಸರಿಯಾದ ಸಮಯಕ್ಕೆ ನಿರ್ಧಾರ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದರು. ಈಗ ನಿಖಿಲ್ ನಿನ್ನೆ ನಡೆದ ಐಪಿಲ್ ಮ್ಯಾಚ್ ಬಗ್ಗೆಯೂ ಟ್ವೀಟ್ ಮಾಡಿದ್ದಾರೆ. ಗೆಲ್ಲಲಿ, ಸೋಲಲಿ ಎಂದೆಂದಿಗೂ ಆರ್ಸಿಬಿ. ಈ ಸಲ ಕಪ್ ನಮ್ದೆ ಅಂತ ಟ್ವೀಟ್ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ದಿನೇ ದಿನೇ ಅಭಿಮಾನಿ ಬಳಗ ದೊಡ್ಡದಾಗುತ್ತಿದೆ.
ನಿಖಿಲ್ ಕುಮಾರಸ್ವಾಮಿ ತಮ್ಮ ವೈಯಕ್ತಿಕ ವಿಡಿಯೋಗಳ ಜೊತೆ ಈಗ ಅಭಿಮಾನಿಯೊಬ್ಬರ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. ನಿಖಿಲ್ ತಮ್ಮ ಮನೆಗೆ ವಿಶೇಷ ಅಭಿಮಾನಿಯೊಬ್ಬರನ್ನು ಕರೆಸಿಕೊಂಡು ಅವರೊಂದಿಗೆ ಸಮಯ ಕಳೆದಿದ್ದಾರೆ. ಜೊತೆಗೆ ಅವರ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.
'ಕಣ್ಣಿಲ್ಲದಿದ್ದರೂ ಅದ್ಭುತವಾದ ಪ್ರತಿಭೆಯಾಗಿರುವ ವಿಶ್ವನಾಥ್ ಅವರು ಹಾಸನದ ಈಜಿಪುರದವರಂತೆ. ಇಂದು ಆಕಸ್ಮಿಕವಾಗಿ ಇವರ ಭೇಟಿಯಾಯಿತು. ಇವರು ಇಂಪಾಗಿ ಪಿಯಾನೋ ನುಡಿಸುವುದನ್ನು ಕೇಳಿ ಸಂತೋಷವಾಯಿತು. ದೈಹಿಕ ನ್ಯೂನತೆಗಳಿದ್ದರೂ ಸಾಧಿಸುವ ಛಲವಿರುವವರಿಗೆ ಯಾವುದು ಅಡ್ಡಿಯಾಗುವುದಿಲ್ಲ. ಇವರ ಸಾಧನೆ ವಿಕಲಚೇತನರಿಗೆ ಮಾತ್ರ ಅಲ್ಲ ಎಲ್ಲರಿಗೂ ಸ್ಫೂರ್ತಿಯಾಗುವಂತದ್ದು' ಎಂದು ಅವರು ಪಿಯಾನೋ ನುಡಿಸಿರುವ ವಿಡಿಯೋ ಹಂಚಿಕೊಂಡಿದ್ದಾರೆ ನಿಖಿಲ್.
ನೆಚ್ಚಿನ ನಟ ನಿಖಿಲ್ ಅವರನ್ನು ಭೇಟಿ ಮಾಡಿದ ಅಭಿಮಾನಿ ವಿಶ್ವನಾಥ್ ಅವರು, ಯುವರಾಜ ಅಭಿನಯದ ಸಿನಿಮಾದ ಫೇಮಸ್ ಹಾಡು ನಿನ್ನ ರಾಜ ನಾನು... ಹಾಡನ್ನು ಪಿಯಾನೋದಲ್ಲಿ ನುಡಿಸಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ ಸಡಿಲಗೊಂಡ ನಂತರ ಹೊಸ ಲುಕ್ನಲ್ಲಿ ಕಾಣಿಸಿಕೊಂಡ ದರ್ಶನ್..!
ಇನ್ನು ನಿಖಿಲ್ ಅವರು ಅಭಿನಯಿಸುತ್ತಿರುವ ಸಿನಿಮಾಗಳ ವಿಷಯಕ್ಕೆ ಬಂದರೆ, ಟಾಲಿವುಡ್ ನಿರ್ದೇಶಕರ ಜೊತೆ ಮಾಡುತ್ತಿರುವ ಸಿನಿಮಾ ರೈಡರ್ ಪೋಸ್ಟರ್ ಇತ್ತೀಚೆಗಷ್ಟೆ ರಿಲೀಸ್ ಆಗಿದೆ. ವಿಜಯ್ ಕುಮಾರ್ ಕೊಂಡ ನಿರ್ದೇಶನದ ಈ ಚಿತ್ರ ನಿಖಿಲ್ ಅವರ ನಾಲ್ಕನೇ ಸಿನಿಮಾ ಆಗಿದೆ. ಈ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಇದಲ್ಲದೆ ಇನ್ನೂ ನಾಲ್ಕು ಹೊಸ ಸಿನಿಮಾಗಳು ನಿಖಿಲ್ ಕೈಯಲ್ಲಿವೆ. ಲಾಕ್ಡೌನ್ ಸಡಿಲಗೊಂಡ ನಂತರ ಮೆಲ್ಲನೆ ಸಿನಿಮಾ ಚಿತ್ರೀಕರಣದ ಕೆಲಸಗಳು ಆರಂಭವಾಗುತ್ತಿದ್ದು, ನಿಖಿಲ್ ಅವರ ಹೊಸ ಚಿತ್ರಗಳ ಶೂಟಿಂಗ್ ಸಹ ಆರಂಭವಾಗುವ ಹಂತದಲ್ಲಿವೆ
Published by:
Anitha E
First published:
September 22, 2020, 11:24 AM IST