ಸ್ಯಾಂಡಲ್ವುಡ್ ಜಾಗ್ವಾರ್ ನಿಖಿಲ್ ಕುಮಾರಸ್ವಾಮಿ ಈಗ ಸಿಂಗಲ್ ಅಲ್ಲ. ನಿಶ್ಚಿತಾರ್ಥದಲ್ಲಿ ರೇವತಿಯೊಂದಿಗೆ ಉಂಗುರ ಬದಲಿಸಿಕೊಂಡಾಗಿನಿಂತ ಅವರಲ್ಲಿರುವ ಲವರ್ ಬಾಯ್ಗೆ ಜೀವ ಬಂದಿದೆ.
ರೇವತಿ ಜೊತೆ ಮದುವೆ ನಿಶ್ಚಯವಾದಾಗಿನಿಂದ ನಿಖಿಲ್ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರೇವತಿಯೊಂದಿಗೆ ತೆಗೆಸಿಕೊಂಡ ಫೋಟೋಗಳ ಜೊತೆಗೆ ಪ್ರೀತಿ ತುಂಬಿದ ಸಂದೇಶಗಳನ್ನೂ ಹಂಚಿಕೊಳ್ಳುತ್ತಿದ್ದಾರೆ.
ಈಗಲೂ ಸಹ ನಿಖಿಲ್, ತಮ್ಮ ಹಾಗೂ ರೇವತಿಯ ಒಂದು ರೊಮ್ಯಾಂಟಿಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅದಕ್ಕೊಂದಿಷ್ಟು ಪ್ರೀತಿಯ ಸಂದೇಶವನ್ನೂ ಬರೆದಿದ್ದಾರೆ. ಇದನ್ನು ಓದಿದ ಮೇಲಂತೂ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಇದನ್ನೂ ಓದಿ: ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದೇಶನದಲ್ಲಿ ಒಂದಾಗಲಿದ್ದಾರೆ ಪ್ರಭಾಸ್-ಮಹೇಶ್ ಬಾಬು..!
ಇಷ್ಟೇ ಅಲ್ಲ 'ಕಾಲ ಕಳೆದಂತೆ ಸೌಂದರ್ಯ ಮಾಸುತ್ತದೆ.... ಆದರೆ ನಮ್ಮ ಗುಣ ಮಾತ್ರ ಸದಾ ನಮ್ಮೊಂದಿಗಿರುತ್ತದೆ. ನಾನು ನಿನ್ನ ವ್ಯಕ್ತಿತ್ವವನ್ನು ಪ್ರೀತಿಸುತ್ತಿದ್ದೇನೆ. ನಿನ್ನೊಂದಿಗೆ ಕಳೆಯುವ ಕ್ಷಣಗಳು ಬೆಲೆ ಕಟ್ಟಲಾಗದಷ್ಟು ಅಮೂಲ್ಯವಾದದ್ದು. ನಿನ್ನೊಂದಿಗೆ ಕೊನೆಯವರೆಗೂ ಜೀವನ ಸಾಗಿಸುವ ಕನಸು ಕಂಡಿದ್ದೇನೆ. ಸಾವು ನಮ್ಮನ್ನು ದೂರ ಮಾಡುವವರೆಗೂ ನಿನ್ನ ಕೈ ಬಿಡುವುದಿಲ್ಲ' ಎಂದೆಲ್ಲ ಸಖತ್ ರೊಮ್ಯಾಂಟಿಕ್ ಆಗಿ ರೇವತಿಗೆ ತಮ್ಮ ಪ್ರೀತಿಯ ಸಂದೇಶ ನೀಡಿದ್ದಾರೆ ನಿಖಿಲ್.
Rashmika Mandanna: ಪ್ರೇಮಿಗಳ ದಿನದಂದು ರಶ್ಮಿಕಾ ಮಂದಣ್ಣ ಪ್ರೀತಿಗೆ ಕೊಟ್ಟ ವ್ಯಾಖ್ಯಾನ ಹೀಗಿದೆ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ