ಮಾಜಿ ಪ್ರಧಾನ ಮಂತ್ರಿ (Ex- Prime Minister) ಎಚ್.ಡಿ.ದೇವೇಗೌಡ(H.D. Devegowda)ರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ(H.D.Kumaraswamy) ಅವರ ಮಗ ನಿಖಿಲ್ ಕುಮಾರಸ್ವಾಮಿ(Nikhil Kumaraswamy). ಜಾಗ್ವಾರ್(Jaguar) ಸಿನಿಮಾ ಮೂಲಕ ಚಿತ್ರರಂಗಕ್ಕೆ ನಿಖಿಲ್ ಎಂಟ್ರಿಯಾಗಿದ್ದರು. ಬಳಿಕ ಸೀತರಾಮ ಕಲ್ಯಾಣ(Seetharama Kalyana) ಸಿನಿಮಾ ಮೂಲಕ ಫ್ಯಾಮಿಲಿ ಪ್ರೇಕ್ಷಕರ ಗಮನ ಸೆಳೆದು, ಪೌರಾಣಿಕ ಪಾತ್ರಗಳಲ್ಲೂ ನಟಿಸಬಲ್ಲೇ ಎಂದು ಕುರುಕ್ಷೇತ್ರ(Kurukshethra) ಸಿನಿಮಾದ ಮೂಲಕ ಪ್ರೋವ್ ಮಾಡಿಕೊಂಡ ನಟ ನಿಖಿಲ್ ಕುಮಾರಸ್ವಾಮಿ. ಇದಾದ ಬಳಿಕ ಯಾವ ಸಿನಿಮಾದಲ್ಲಿ ನಿಖಿಲ್ ನಟಿಸುತ್ತಾರೆ ಅಂತ ಎಲ್ಲರಿಗೂ ಕ್ಯೂರಿಯಾಸಿಟಿ ಇತ್ತು. ಅದಕ್ಕೆ ವಿಜಯ್ ಕುಮಾರ್ ಕೊಂಡ ಉತ್ತರ ನೀಡಿದ್ದರು. ತಮ್ಮ ನಿರ್ದೇಶನದಲ್ಲಿ ನಿಖಿಲ್ ಜತೆ ರೈಡರ್(Rider) ಸಿನಿಮಾ ಅನೌನ್ಸ್ ಆಗಿತ್ತು. ಪೋಸ್ಟರ್, ಟೀಸರ್ ಸಖತ್ ಕಮಾಲ್ ಮಾಡಿತ್ತು.
ಈಗ ಸಿನಿಮಾದ ರೊಮ್ಯಾಂಟಿಕ್ ಸಾಂಗ್(Song)ವೊಂದು ರಿಲೀಸ್ ಆಗಿದೆ. ನಿಖಿಲ್ ಕುಮಾರಸ್ವಾಮಿ ನಟನೆಯ ವಿಜಯ್ ಕುಮಾರ್ ಕೊಂಡ ನಿರ್ದೇಶನದ ಬಹುನಿರೀಕ್ಷೆಯ ‘ರೈಡರ್’(Rider) ಸಿನಿಮಾದ ‘ಡವ್ವ ಡವ್ವ’ ಹಾಡು ರಿಲೀಸ್ ಆಗಿದೆ.
ಇದನ್ನೂ ಓದಿ: Meghana Raj Photoshoot- ಚಿರು ಪಟಗಳೊಂದಿಗೆ ಯುವರಾಣಿಯಂತೆ ಮಿಂಚುತ್ತಿರುವ ಮೇಘನಾ ರಾಜ್
ಸ್ಟೈಲಿಶ್ ಲುಕ್ನಲ್ಲಿ ‘ಅಭಿಮನ್ಯು’ ಮಿಂಚಿಂಗ್
ರಿಲೀಸ್ ಆಗಿರುವ ಈ ವಿಡಿಯೋ ಸಾಂಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿ ಹಾಗೂ ಯುವ ನಟಿ ಕಾಶ್ಮೀರಿ ಪರ್ದೇಸಿ ಅವರ ಮುದ್ದಾದ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಲಹರಿ ಮ್ಯೂಸಿಕ್ ಹಾಗೂ ಟಿ - ಸಿರೀಸ್ ಸಿನಿಮಾ ನಿಮಾರ್ಣದ ಜವಾಬ್ದಾರಿ ಹೊತ್ತುಕೊಂಡಿದೆ. ಲಹರಿ ಸಂಸ್ಥೆಯ ಯೂಟ್ಯೂಬ್ ಚಾನೆಲ್ನಲ್ಲಿ ರೈಡರ್ ಸಿನಿಮಾದ ಡವ್ವ ಡವ್ವ ಹಾಡು ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ರೈಡರ್ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಡವ್ವ ಡವ್ವ ಹಾಡಿಗೆ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಇನ್ನೂ ಈ ಹಾಡು ಇಷ್ಟು ಅದ್ಭುತವಾಗಿ ಕಾರಣ ಅಂದರೆ ಅದು ಅರ್ಮಾನ್ ಮಲಿಕ್ ಅವರ ಕಂಠ. ಈ ಹಾಡನ್ನು ಅರ್ಮಾನ್ ಮಲಿಕ್ ಹಾಡಿದ್ದಾರೆ. ಬಿಡುಯಾಗಿರು ಮೊದಲನೇ ವಿಡಿಯೋ ಸಾಂಗ್ನಲ್ಲಿ ನಿಖಿಲ್ ಕುಮಾರಸ್ವಾಮಿ ಸಖತ್ ಸ್ಟೆಪ್ ಹಾಕಿದ್ದಾರೆ.
ಬಾಸ್ಕೆಟ್ ಬಾಲ್ ಪ್ಲೇಯರ್ ಪಾತ್ರದಲ್ಲಿ ನಿಖಿಲ್
ಸೀತಾರಾಮ ಕಲ್ಯಾಣ ಚಿತ್ರದ ಮೂಲಕ ಲವರ್ ಬಾಯ್ ಆಗಿ ಸ್ಯಾಂಡಲ್ವುಡ್ ಪ್ರೇಕ್ಷಕರನ್ನು ರಂಜಿಸಿದ್ದ ನಿಖಿಲ್ ಕುಮಾರಸ್ವಾಮಿ ಈಗ ಮತ್ತೆ ಅಂತಹದ್ದೇ ಪಾತ್ರದಲ್ಲಿ ರೈಡರ್ ಸಿನಿಮಾದಲ್ಲಿ ಕಾಣಿಸಿಕಳ್ಳುತ್ತಿದ್ದಾರೆ. ಕಾಲೇಜ್ ಸ್ಟೂಡೆಂಟ್ ಜೊತೆಗೆ ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿ ನಿಖಿಲ್ ಮಿಂಚಲಿದ್ದಾರೆ. ರೈಡರ್ ಚಿತ್ರದ ಟೀಸರ್ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡುತ್ತಿದೆ. ಈಗ ಬಿಡುಗಡೆಯಾಗಿರುವ ವಿಡಿಯೋ ಸಾಂಗ್ ಕೂಡ ಸಿನಿಮಾದ ಮೇಲಿರುವ ನಿರೀಕ್ಷೆಯನ್ನ ಡಬಲ್ ಮಾಡಿದೆ.
ಬಹುತಾರಾಗಣದ ಸಿನಿಮಾ ರೈಡರ್
ಈ ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಇಬ್ಬರು ನಾಯಕಿಯರು ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿರುವ ನಟಿ ಕಾಶ್ಮೀರಿ ಪರ್ದೇಸಿ ರೈಡರ್ ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಜೊತೆಗೆ ಇನ್ನೋರ್ವ ನಾಯಕಿಯಾಗಿ ಅನುಷಾ ರೈ ನಟಿಸಿದ್ದಾರೆ.
ಇದನ್ನೂ ಓದಿ: Mahesh Babuಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಈ ಖ್ಯಾತ ಡೈರೆಕ್ಟರ್? ಯಾರು ಗೊತ್ತಾ?
ಇನ್ನೂ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ, ಶಿವರಾಜ್ ಕೆ.ಆರ್.ಪೇಟೆ, ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಿನ್ನೆ ನಡೆದು ರೈಡರ್ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ರೈಡರ್ ಚಿತ್ರದ ಬಗ್ಗೆ ಎಲ್ಲರೂ ತಮ್ಮ ಅಭಿಪ್ರಾಯ ಹಂಚಿಕೊಂಡರು. ರೈಡರ್ ಒಂದು ಪಕ್ಕಾ ಆ್ಯಕ್ಷನ್ ಚಿತ್ರವಾಗಿದ್ದು, ಅಭಿಮಾನಿಗಳು ಸಿನಿಮಾ ಬಿಡುಗಡೆಯಾಗಲು ಕಾತುರದಿಂದ ಕಾಯುತ್ತಿದ್ದಾರೆ.
ವರದಿ - ವಾಸುದೇವ್.ಎಂ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ