• Home
  • »
  • News
  • »
  • entertainment
  • »
  • Nikhil Kumaraswamy: ಫಿಟ್ನೆಸ್​​ಗಾಗಿ ಹೊಸ ಪ್ರಯತ್ನಕ್ಕೆ ಕೈಹಾಕಿದ ನಿಖಿಲ್​ ಕುಮಾರಸ್ವಾಮಿ

Nikhil Kumaraswamy: ಫಿಟ್ನೆಸ್​​ಗಾಗಿ ಹೊಸ ಪ್ರಯತ್ನಕ್ಕೆ ಕೈಹಾಕಿದ ನಿಖಿಲ್​ ಕುಮಾರಸ್ವಾಮಿ

ನಿಖಿಲ್ ಕುಮಾರಸ್ವಾಮಿ

ನಿಖಿಲ್ ಕುಮಾರಸ್ವಾಮಿ

ಇನ್ನು ಲಾಕ್​ಡೌನ್​ನಲ್ಲಿ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ತಮ್ಮ ಫಿಟ್ನೆಸ್​ ವಿಡಿಯೋ ಹಂಚಿಕೊಳ್ಳುವುದನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ನಿಖಿಲ್​ ಕುಮಾರಸ್ವಾಮಿ ಸಹ ತಮ್ಮ ಸಾಕಷ್ಟು ಫಿಟ್ನೆಸ್​ ವಿಡಿಯೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.

  • Share this:

ಸ್ಟಾರ್​ ಹಾಗೂ ಸೆಲೆಬ್ರಿಟಿಗಳು ಫಿಟ್ನೆಸ್​ ಬಗ್ಗೆ ತುಂಬಾ ಗಮನ ಕೊಡ್ತಾರೆ. ತೆರೆ ಮೇಲೆ ಅವರು ಎಷ್ಟು ಫಿಟ್ ಹಾಗೂ ಆಕರ್ಷಕವಾಗಿ ಕಾಣ್ತಾರೆ ಅನ್ನೋದು ಬಹಳ ಮುಖ್ಯವಾಗುತ್ತೆ. ಇದೇ ಕಾರಣದಿಂದ ಅವರ ಜೀವನದ ಬಹುಪಾಲು ಸಮಯ ಫಿಟ್ನೆಸ್​ ಕಾಯ್ದುಕೊಳ್ಳುವುದರಲ್ಲೇ ಕಳೆದು ಹೋಗುತ್ತದೆ. ಹೀಗಿರುವಾಗ ನಿಖಿಲ್​ ಕುಮಾರಸ್ವಾಮಿ ಸಹ ಇದಕ್ಕೆ ಹೊರತಾಗಿಲ್ಲ. ಅವರೂ ಸಹ ಫಿಟ್ನೆಸ್​ಗಾಗಿ ಸಾಕಷ್ಟು ಶ್ರಮಪಡುತ್ತಾರೆ. 


ಇನ್ನು ಲಾಕ್​ಡೌನ್​ನಲ್ಲಿ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ತಮ್ಮ ಫಿಟ್ನೆಸ್​ ವಿಡಿಯೋ ಹಂಚಿಕೊಳ್ಳುವುದನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ನಿಖಿಲ್​ ಕುಮಾರಸ್ವಾಮಿ ಸಹ ತಮ್ಮ ಸಾಕಷ್ಟು ಫಿಟ್ನೆಸ್​ ವಿಡಿಯೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.
ಈಗ ನಿಖಿಲ್​ ಅವರ ಫಿಟ್ನೆಸ್​ ರುಟೀನ್​ಗೆ ಸೈಕಲ್ ಸಹ ಸೇರಿಕೊಂಡಿದೆ. ನಿಖಿಲ್​ ಹೊಸದಾಗಿ ಸೈಕಲ್​ ಖರೀದಿಸಿದ್ದು, ಸೈಕಲ್​ ಸಹ ಮಾಡಲಿದ್ದಾರಂತೆ.

View this post on Instagram


A post shared by Nikhil Kumar (@nikhilgowda_jaguar) on

ನಿಖಿಲ್​ ಸಕೈಲ್ ಖರೀದಿಸಿದ್ದು, ತಮ್ಮ ಹೊಸ ಸೈಕಲ್​ ಜೊತೆ ತೆಗೆಸಿಕೊಂಡ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ. ಇನ್ನು ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ಮಂದಿ ನಟ-ನಟಿಯರು ಸೈಕ್ಲಿಂಗ್​ ಮಾಡುತ್ತಾರೆ. ಪುನೀತ್​ ರಾಜ್​ಕುಮಾರ್​, ದಿಗಂತ್​, ಗಣೇಶ್​, ಐಂದ್ರಿತಾ ರೇ, ಹರಿಪ್ರಿಯಾ ಹೀಗೆ ಸಾಕಷ್ಟು ಮಂದಿ ಫಿಟ್ನೆಸ್​ಗಾಗಿ ಸೈಕ್ಲಿಂಗ್​ ಮಾಡುತ್ತಾರೆ. ಅವರ ವಿಡಿಯೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು.


ಹಂತ ಹಂತವಾಗಿ ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದು, ಈಗಾಗಲೇ ಸಿನಿಮಾ ಚಿತ್ರೀಕರಣಕ್ಕೂ ಅವಕಾಶ ಕಲ್ಪಿಸಲಾಗಿದೆ. ಆದರೆ ನಿಖಿಲ್ ಅಭಿನಯಿಸುತ್ತಿರುವ ಚಿತ್ರಗಳ ಚಿತ್ರೀಕರಣ ಇನ್ನೂ ಆರಂಭವಾಗದ ಕಾರಣ ಅವರು ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ.

Published by:Anitha E
First published: