Bengaluru Acid Attack: ಸಂತ್ರಸ್ತ ಯುವತಿಗೆ ನಿಖಿಲ್ ಕುಮಾರಸ್ವಾಮಿ ನೆರವು! 1 ಲಕ್ಷ ರೂಪಾಯಿ ಧನ ಸಹಾಯ

ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಸಂತ್ರಸ್ತ ಯುವತಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೆರವಾಗಿದ್ದಾರೆ. ಆ್ಯಸಿಡ್ ದಾಳಿ ವಿಚಾರ ತಿಳಿದಾಗ ನೆರವು ನೀಡುವುದಾಗಿ ಈ ಹಿಂದೆ ಘೋಷಿಸಿದ್ದರು.

ನಿಖಿಲ್​ ಕುಮಾರಸ್ವಾಮಿ

ನಿಖಿಲ್​ ಕುಮಾರಸ್ವಾಮಿ

  • Share this:
ಬೆಂಗಳೂರಿನಲ್ಲಿ ನಡೆದ ಆಸಿಡ್ ದಾಳಿಯ (Bengaluru Acid Case)  ಆರೋಪಿ ನಾಗೇಶ್ ಬಾಬು ಫೋಟೋಗಳನ್ನು (Accused Photos) ಪೊಲೀಸರು ಬಿಡುಗಡೆ ಮಾಡಿದ್ದು, ಆತನ ಬಂಧನಕ್ಕಾಗಿ ಸಾರ್ವಜನಿಕರ ಸಹಾಯ ಕೇಳಿದ್ದಾರೆ. ಆರೋಪಿಯ ವಿವಿಧ ವೇಷದಲ್ಲಿರುವ ಫೋಟೋವನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಪ್ರಿಲ್ 28ರಂದು ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಯುವತಿ ಮೇಲೆ ನಾಗೇಶ್ ಬಾಬು ಆಸಿಡ್ (Acid Attack) ದಾಳಿ ನಡೆಸಿದ್ದನು. ಆದ್ರೆ ಘಟನೆ ನಡೆದು ವಾರ ಕಳೆದರೂ ಆರೋಪಿ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಆ್ಯಸಿಡ್​ ನಾಗನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ನೋವಿನಿಂದ ಪ್ರತಿದಿನ ನರಳುತ್ತಿದ್ದಾಳೆ. ಶೀಘ್ರವೇ ಪೊಲೀಸರು ಆರೋಪಿಯನ್ನು ಬಂಧಿಸಲಿದ್ದಾರೆ.

ಸಂತ್ರಸ್ತ ಯುವತಿಗೆ ನಿಖಿಲ್​ ಕುಮಾರಸ್ವಾಮಿ ನೆರವು!

ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಸಂತ್ರಸ್ತ ಯುವತಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೆರವಾಗಿದ್ದಾರೆ. ಆ್ಯಸಿಡ್ ದಾಳಿ ವಿಚಾರ ತಿಳಿದಾಗ ನೆರವು ನೀಡುವುದಾಗಿ ಈ ಹಿಂದೆ ಘೋಷಿಸಿದ್ದರು. ಅದರಂತೆ ಇಂದು ವೈಯಕ್ತಿಕವಾಗಿ 1 ಲಕ್ಷ ರೂಪಾಯಿ ನೀಡುವ ಮೂಲಕ ನೆರವಾಗಿದ್ದಾರೆ.
ತಮ್ಮ ಸಿಬ್ಬಂದಿ ವರ್ಗದವರ ಮುಖಾಂತರ ಕುಟುಂಬದ ಸದಸ್ಯರಿಗೆ ಇಂದು ಚೆಕ್ ಹಸ್ತಾಂತರ ಮಾಡಲಾಗಿದೆ. ಚೆಕ್ ಪಡೆದ ಸಂತ್ರಸ್ತೆಯ ಕುಟುಂಬದವರು ನಿಖಿಲ್ ಕುಮಾರಸ್ವಾಮಿ ಅವರಿಗೆ ಧನ್ಯವಾದ ತಿಳಿಸಿದರು.

ಆರೋಪಿ ಈಗ ಎಲ್ಲಿದ್ದಾನೆ?

ಬೈಕ್ ನಲ್ಲಿ ಮೆಜಿಸ್ಟಿಕ್ ಗೆ ಬಂದ ಆರೋಪಿ ನಾಗೇಶ್, ಸದ್ಯ ಎಲ್ಲಿದ್ದಾನೆ ಎಂಬುದರ ನಿಖರ ಮಾಹಿತಿ ಲಭ್ಯವಾಗಿಲ್ಲ. ಆರೋಪಿಯ ಫೋಟೋಗಳು ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಗೂ ಕಳುಹಿಸಲಾಗಿದೆ. ಶೀಘ್ರದಲ್ಲಿಯೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 6 ದಿನ ಕಳೆದ್ರೂ ಸಿಗ್ತಿಲ್ಲ ಆ್ಯಸಿಡ್ ನಾಗ; ಆರೋಪಿ ಪತ್ತೆಗೆ ಪೊಲೀಸರಿಂದ ಹಳೆ ಸ್ಟೈಲ್​ನಲ್ಲಿ ಹೊಸ ಪ್ಲಾನ್

ಆರೋಪಿಯ ಸೋದರ ಮತ್ತು ಸೋದರಿಯ ವಿಚಾರಣೆ

ಆರೋಪಿಯ ಸೋದರ ಮತ್ತು ಸೋದರಿಯನ್ನು ವಶಕ್ಕೆ ವಿಚಾರಣೆ ನಡೆಸಿದರೂ ಪೊಲೀಸರಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಘಟನೆಯ ಬಳಿಕ ಆರೋಪಿ ಎಲ್ಲಿಯೂ ಡೆಬಿಟ್ ಕಾರ್ಡ್ ಬಳಸಿಲ್ಲ. ಆಸಿಡ್ ದಾಳಿಗೂ ಮುನ್ನ ತನ್ನ ಗಾರ್ಮೆಂಟ್ಸ್ ನಲ್ಲಿರುವ ಯಂತ್ರೋಪಕರಣಗಳನ್ನ ಮಾರಾಟ ಮಾಡಿದ್ದಾನೆ ಎಂದು ವರದಿಯಾಗಿದೆ. ತಲೆಮರೆಸಿಕೊಂಡಿರುವ ಆರೋಪಿ ತನ್ನ ವೇಷ ಬದಲಾಯಿಸಿಕೊಂಡಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಬಾಬು ಏಳು ವರ್ಷಗಳಿಂದ ಮಹಿಳೆಯ ಚಿಕ್ಕಪ್ಪನ ಮನೆಯಲ್ಲಿ ಬಾಡಿಗೆದಾರನಾಗಿ ವಾಸಿಸುತ್ತಿದ್ದನು. ಕಳೆದ ಏಳು ವರ್ಷಗಳಿಂದ ಯುವತಿಯ ಹಿಂದೆ ಸುತ್ತುತ್ತಿದ್ದನು. ಆದ್ರೆ ಯುವತಿ ಈತನ ಪ್ರಸ್ತಾಪವನ್ನು ನಿರಾಕರಿಸಿದ್ದಳು.

ಇದನ್ನೂ ಓದಿ: ಅಲ್ಲಿ ಯುವತಿ ಮೇಲೆ ಅತ್ಯಾಚಾರ, ಇಲ್ಲಿ ಹುಡುಗಿ ಮೇಲೆ ಆ್ಯಸಿಡ್ ಅಟ್ಯಾಕ್! ಬೆಚ್ಚಿಬಿದ್ದ ರಾಜ್ಯದ ಜನ

ಯುವತಿ ಸಹೋದ್ಯೋಗಿಗಳ ಮುಂದೆ ಗಲಾಟೆ

ನಾಗೇಶ್ ತನ್ನ ಹಿಂದೆ ಬಂದು ಕಿರುಕುಳ ನೀಡುತ್ತಿರುವ ಬಗ್ಗೆ ತನ್ನ ಚಿಕ್ಕಪ್ಪ ಮತ್ತು ಚಿಕ್ಕಮನ ಬಳಿ ಹೇಳಿಕೊಂಡಿದ್ದಳು. ಈ ಸಂಬಂಧ ಆರೋಪಿಯ ಸೋದರನನ್ನು ಕರೆಸಿ ವಿಚಾರ ತಿಳಿಸಿ ತಮ್ಮನಿಗೆ ಬುದ್ಧಿ ಹೇಳುವಂತೆ ಹೇಳಿದ್ದರು. ಆದ್ರೂ ನಾಗೇಶ್ ಯುವತಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ಆಕೆಯ ಸಹೋದ್ಯೋಗಿಗಳ ಮುಂದೆ ಗಲಾಟೆ ಸಹ ಮಾಡಿದ್ದನು.

ಸರ್ಕಾರದಿಂದ ಚಿಕಿತ್ಸಾ ವೆಚ್ಚ

ಯುವತಿ ದೇಹ ಶೇ.35ರಷ್ಟು ಬರ್ನ್ ಆಗಿದ್ದು, ಪರಿಸ್ಥಿತಿ ಸ್ವಲ್ಪ ಕ್ಲಿಷ್ಟವಾಗಿದೆ. ಆದರೂ ವೈದ್ಯರು ಭರವಸೆ ನೀಡಿದ್ದಾರೆ . ಆಕೆ‌ ಸಂಪೂರ್ಣ ಗುಣಮುಖರಾಗಲಿ ಅಂತ ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಳ್ಳೋಣ ಎಂದರು. ಯುವತಿಯ ಭವಿಷ್ಯ ರೂಪಿಸೋ ನಿಟ್ಟಿನಲ್ಲಿ ಆಕೆಗೆ ಸರ್ಕಾರಿ ಉದ್ಯೋಗ ಕೊಡುವಂತಹದ್ದು ಆಗಬೇಕು. ಆ ಬಗ್ಗೆ ನಾನು ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ. ಬರ್ನ್ಸ್ ವಿಚಾರವಾಗಿ ನಾವು ಒಂದೆರಡು ದಿನದಲ್ಲಿ ರಿಕವರಿ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
Published by:Vasudeva M
First published: