HOME » NEWS » Entertainment » NIKHIL KUMARASWAMY DOING WORKOUT WITH HIS WIFE REVATHI HERE IS THE VIDEO AE

Nikhil : ಬೆಳಗೆದ್ದು ವ್ಯಾಯಾಮ ಮಾಡಲು ನಿಖಿಲ್​ಗೆ ಇವರೇ ಸ್ಫೂರ್ತಿಯಂತೆ: ಇಲ್ಲಿದೆ ವಿಡಿಯೋ..!

Nikhil-Revathi: ಇಷ್ಟು ದಿನ ಒಂಟಿಯಾಗಿ ವ್ಯಾಯಾಮ ಮಾಡುತ್ತಿದ್ದ ನಿಖಿಲ್​ಗೆ ಸ್ಫೂರ್ತಿ ನೀಡುವ ಜತೆಗಾರ್ತಿಯೊಬ್ಬರು ಸಿಕ್ಕಿದ್ದಾರಂತೆ. ಆ ಸ್ಫೂರ್ತಿ ಯಾರೆಂದು ನಿಖಿಲ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Anitha E | news18-kannada
Updated:July 6, 2020, 9:27 AM IST
Nikhil : ಬೆಳಗೆದ್ದು ವ್ಯಾಯಾಮ ಮಾಡಲು ನಿಖಿಲ್​ಗೆ ಇವರೇ ಸ್ಫೂರ್ತಿಯಂತೆ: ಇಲ್ಲಿದೆ ವಿಡಿಯೋ..!
ನಿಖಿಲ್​ -ರೇವತಿ
  • Share this:
ನಿಖಿಲ್​ ಕುಮಾರಸ್ವಾಮಿ ಫಿಟ್ನೆಸ್​ ಬಗ್ಗೆ ಕಾಳಜಿವಹಿಸುವ ವಿಷಯ ಗೊತ್ತೇ ಇದೆ. ಎಲ್ಲೇ ಇರಲಿ ಅವರು ನಿತ್ಯ ವ್ಯಾಯಾಮ ಮಾಡೋದನ್ನ ಮಾತ್ರ ಬಿಡುವುದಿಲ್ಲ. ನಿಖಿಲ್​ ಇತ್ತೀಚೆಗೆ ಕೊಂಚ ಹೆಚ್ಚಾಗಿಯೇ ಸಾಮಾಜಿಕ ಜಾಲತಾಣದಲ್ಲಿ ವ್ಯಾಯಮ ಮಾಡುವ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 

ಇಷ್ಟು ದಿನ ಒಂಟಿಯಾಗಿ ವ್ಯಾಯಾಮ ಮಾಡುತ್ತಿದ್ದ ನಿಖಿಲ್​ಗೆ ಈಗ ಸ್ಫೂರ್ತಿ ನೀಡುವ ಜತೆಗಾರ್ತಿಯೊಬ್ಬರು ಸಿಕ್ಕಿದ್ದಾರಂತೆ. ಆ ಸ್ಫೂರ್ತಿ ಯಾರೆಂದು ನಿಖಿಲ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಯಾವಾಗಲು ವ್ಯಾಯಾಮ ಮಾಡಲು ಜಿಮ್ ಇರಬೇಕೆಂದಿಲ್ಲ. ಅದಕ್ಕೆ ನಮ್ಮೊಳಗೆ ಪ್ರೇರಣೆ ಬರಬೇಕು. ಪ್ರಕೃತಿಯ ಮಧ್ಯೆ ನನ್ನ ಬಾಳಸಂಗಾತಿ ಜೊತೆ ವ್ಯಾಯಾಮ ಮಾಡುತ್ತಿರುವುದಾಗಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ತನಗೆ ಪ್ರೇರಣೆ ಪತ್ನಿ ರೇವತಿ ಎಂದೂ ಬರೆದುಕೊಂಡಿದ್ದಾರೆ.

  
View this post on Instagram
 

ನಮ್ಮ ದೇಶ ಕೃಷಿ ಪ್ರಧಾನವಾದ ದೇಶವಾಗಿದ್ದು ರೈತ ಈ ದೇಶದ ಬೆನ್ನೆಲುಬು ಎಂದು ಗೌರವ ಸಲ್ಲಿಸುತ್ತೇವೆ. ಆದರೆ ರೈತರ ಮಕ್ಕಳು ರೈತರಾಗಿ ಅವರ ಕೃಷಿಭೂಮಿಯಲ್ಲಿ ದುಡಿಯಲು ಹಿಂಜರಿದು ನಗರದ ಕಡೆಗೆ ವಲಸೆ ಬಂದು ಬದುಕು ಕಟ್ಟಿಕೊಳ್ಳಲು ಹವಣಿಸುವವರ ಸಂಖ್ಯೆಯೇ ಹೆಚ್ಚು. ತಾವು ಕಲಿತ ವಿದ್ಯಾಭ್ಯಾಸದ ಆಧಾರದ ಮೇಲೆ ನಗರಗಳಲ್ಲಿ ಕೆಲಸವೊಂದನ್ನು ಸಂಪಾದಿಸಿ ಜೀವನ ನಡೆಸುವವರು ಒಂದು ಕಡೆಯಾದರೆ ಇನ್ನು ಕೆಲವರು ಸ್ವಂತ ಉದ್ಯೋಗ ಅಥವಾ ಕೂಲಿ ಕೆಲಸವನ್ನಾದರೂ ನಗರದಲ್ಲಿ ಮಾಡಿಕೊಂಡು ಜೀವನ ನಡೆಸಲು ನಗರಗಳ ಕಡೆಗೆ ಮುಖಮಾಡುವವರು ಇನ್ನೊಂದು ಕಡೆ. ಇದರ ಪರಿಣಾಮವಾಗಿ ಹಳ್ಳಿಗಳಲ್ಲಿರುವ ಕೃಷಿಭೂಮಿಗಳು ಪಾಲು ಬೀಳುತ್ತಿವೆ. ನಗರದಲ್ಲಿ ವೃತ್ತಿ ಸ್ಪರ್ಧೆ ತಾರಕಕ್ಕೇರಿದೆ. ಡಾಕ್ಟರ್ ತನ್ನ‌ ಮಗ ಡಾಕ್ಟರ್ ‌ಆಗಲಿ, ಪೊಲೀಸ್ ತನ್ನ ಮಗನೂ ತನ್ನಂತೆಯೇ ಪೊಲೀಸ್ ಆಗಲಿ ಸರ್ಕಾರಿ‌ ನೌಕರ ತನ್ನ ಮಗನೂ ಸರ್ಕಾರಿ ನೌಕರನಾಗಲಿ ಎಂದು ಆಸೆ ಪಡುತ್ತಾನೆ. ಆದರೆ ನಮ್ಮ ದೇಶದ ರೈತ ತನ್ನ ಮಗನೂ ರೈತನಾಗಲಿ ಎಂದು ಎಂದೂ ಬಯಸದ ಪರಿಸ್ಥಿತಿ ಇದೆ. ತಾನು ಪಟ್ಟ ಕಷ್ಟ ತನಗೇ ಕೊನೆಯಾಗಲಿ ನನ್ನ ಮಕ್ಕಳಿಗೆ ಈ ಕಷ್ಟ ಬೇಡ ಎಂದು ಸಾಲ ಮಾಡಿಯಾದರೂ ಮಕ್ಕಳನ್ನು ಓದಿಸಿ ಉದ್ಯೋಗಕ್ಕಾಗಿ ನಗರಗಳಿಗೆ ಕಳುಹಿಸುತ್ತಾರೆ. ರೈತರಿಗೆ ತಾವು ಏನೇ ಬೆಳೆದರೂ ಅದಕ್ಕೆ ಬೆಲೆ ನಿಗದಿ ಮಾಡುವ ಅಧಿಕಾರವೂ ಆತನಿಗಿಲ್ಲ. ಜೀವಮಾನವಿಡೀ ದುಡಿದು ಬದುಕುವ ರೈತನಿಗೆ ಈ ದೇಶದ ಮೊದಲ ಗೌರವ ಸಿಗಬೇಕಿದ್ದು ಸರ್ಕಾರಿ ಅಧಿಕಾರಿಗಳು ಹಾಗೂ ಬ್ಯಾಂಕ್ ನೌಕರರು ರೈತರು ತಮ್ಮ ಕಚೇರಿಗೆ ಬಂದಾಗ ಗೌರವದಿಂದ ನಡೆಸಿಕೊಳ್ಳಬೇಕು. ಜಮೀನಿನಲ್ಲಿ ಮುಳ್ಳು ಚುಚ್ಚಿ ಮಣ್ಣಿಗೆ ರಕ್ತದ ಅಭಿಷೇಕವಾದರೂ ಮರುದಿನ ಅದೇ ಜಮೀನಿನಲ್ಲಿ ಕೆಲಸ ಮಾಡುವ ರೈತನಿಗೆ ಘನತೆಯ ಬದುಕನ್ನು ಕಟ್ಟಿ ಕೊಡಬೇಕಿದೆ. ರೈತರ ಮಕ್ಕಳು ಕೃಷಿಭೂಮಿಯಲ್ಲಿ ಕೆಲಸ ಮಾಡುವುದು ಒಂದು ಗೌರವ ಅನ್ನುವ ಪರಿಸ್ಥಿತಿ ನಿರ್ಮಾಣವಾಗಬೇಕು.ರೈತನಾಗಿ ಬದುಕುವುದು ದೌರ್ಭಾಗ್ಯವಲ್ಲ ಬದಲಾಗಿ ಅದೊಂದು ಸೌಭಾಗ್ಯ ಅನ್ನುವ ಪರಿಸ್ಥಿತಿ ನಿರ್ಮಾಣವಾಗಬೇಕು. ನಗರದಿಂದ ಮತ್ತೆ ಊರುಗಳಿಗೆ ಹಿಂದಿರುಗಿ ತಮ್ಮ ತಮ್ಮ ಕೃಷಿಭೂಮಿಗಳಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ನಿಮಗೆಲ್ಲರಿಗೂ ಯಶಸ್ಸು ಸಿಗಲಿ. ರೈತನ ಮಗನೆಂದು ಹೆಮ್ಮೆಯಿಂದ ಹೇಳಿ. ವಿದ್ಯಾಭ್ಯಾಸವಿರುವ ಯುವಕರು ವ್ಯವಸಾಯಕ್ಕಾಗಿ ಜಮೀನಿಗಿಳಿದರೆ ಮಧ್ಯವರ್ತಿಗಳ ಮೋಸವೂ ಕಡಿಮೆಯಾಗಲಿದೆ. ಆಧುನಿಕ ತಂತ್ರಜ್ಞಾನವನ್ನು ಕೃಷಿಯಲ್ಲಿ ಬಳಸಿಕೊಳ್ಳುವ ಅವಕಾಶವಿದೆ.‌ ಕೃಷಿಯಲ್ಲೆ ಉನ್ನತ ಪದವಿ ಪಡೆದ ರೈತರ ಮಕ್ಕಳೇ ದೇಶದ ಕೃಷಿನೀತಿಯನ್ನು ನಿರ್ಧರಿಸುವಂತಾಗಲಿ. ಇದರ ಜೊತೆಗೆ ಸರ್ಕಾರಗಳು ಸಹಾ ಕೃಷಿ ಚಟುವಟಿಕೆಗಳಿಗೆ ಸೂಕ್ತ ಪ್ರೋತ್ಸಾಹವನ್ನು ನೀಡಿದರೆ ದೇಶದಲ್ಲಿ ರೈತನೆಂದರೆ ಎದ್ದು ಕೈಮುಗಿಯುವ ದಿನಗಳು ದೂರವಿಲ್ಲ. ನಾನು ಸಹಾ ರೈತನ ಮಗನಾಗಿದ್ದು ನಮ್ಮ ಜಮೀನಿನಲ್ಲಿ ವ್ಯವಸಾಯ ನಡೆಸಬೇಕೆಂದು ನಿರ್ಧರಿಸಿ ನಮ್ಮ ತೋಟದಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದೇನೆ. ಇದೇ ರೀತಿ‌ ನಗರದಿಂದ ಹಳ್ಳಿಗಳಿಗೆ ಹಿಂತಿರುಗಿ ವ್ಯವಸಾಯದಲ್ಲಿ ತೊಡಗಿರುವ ಎಲ್ಲಾ ರೈತರ ಮಕ್ಕಳಿಗೂ ಯಶಸ್ಸು ಸಿಗಲಿ.


A post shared by Nikhil Kumar (@nikhilgowda_jaguar) on


ನಿಖಿಲ್​ ಇತ್ತೀಚೆಗೆ ಕೃಷಿಕರಾಗುವತ್ತಾ ಒಲವು ತೋರಿದ್ದಾರೆ. ಜೊತೆಗೆ ಕೃಷಿಕರಾಗಲು ಹಳ್ಳಿಗಳತ್ತ ಮರಳುತ್ತಿರುವವರಿಗೆ ಯಶಸ್ಸು ಸಿಗಲೆಂದು ಕೋರಿದ್ದಾರೆ. ರೈತನ ಮಗನಾಗಿರುವ ನಿಖಿಲ್​ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯನ್ನೂ ಆರಂಭಿಸಿದ್ದಾರಂತೆ.

Rashmika Mandanna: ಪೋಸ್​ ಕೊಡಲು ಹೆದರುವ ರಶ್ಮಿಕಾ ಫೋಟೋಶೂಟ್​ಗಳಲ್ಲಿ ಕ್ಯಾಮೆರಾವನ್ನೇ ತಿಂದು ಬಿಡುವಂತೆ ಇರುತ್ತಾರಂತೆ..!ಇದನ್ನೂ ಓದಿ: Mahesh Babu: ಅಭಿಮಾನಿಗಳ ಋಣ ತೀರಿಸಲಾಗದು ಎಂದ ಪ್ರಿನ್ಸ್​ ಮಹೇಶ್​ ಬಾಬು
Published by: Anitha E
First published: July 6, 2020, 9:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading