Nikhil Kumaraswamy: ನಿಖಿಲ್ ಪುತ್ರನಿಗೆ ನಾಮಕರಣ, ಇದೇ ನೋಡಿ ದೇವೇಗೌಡರ ಮರಿ ಮೊಮ್ಮಗನ ಹೆಸರು

Naming ceremony: ಇನ್ನು ಈ ಕಾರ್ಯಕ್ರಮದ ಜೊತೆ ಪ್ರಪೌತ್ರ ಜನನ ಶಾಂತಿ,ನಾಮಕರಣ,ಕನಕಾಭಿಷೇಕ ಕಾರ್ಯಕ್ರಮಗಳನ್ನು ಗೌಡರ ಕುಟುಂಬ ಹಮ್ಮಿಕೊಂಡಿದ್ದು, ಬಹಳ ಸರಳವಾಗಿ ಸಮಾರಂಭವನ್ನು ಮಾಡಲಾಗುತ್ತಿದೆ.  

ನಿಖಿಲ್ ಕುಮಾರಸ್ವಾಮಿ ದಂಪತಿ

ನಿಖಿಲ್ ಕುಮಾರಸ್ವಾಮಿ ದಂಪತಿ

  • Share this:
ರಾಜಕೀಯ (Politics)_ಧುರೀಣ ದೇವೇಗೌಡರ (H D Deve gowda) ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಗೌಡರ ಮರಿ ಮೊಮ್ಮಗನಿಗೆ ನಾಮಕರಣ ಮಾಡಲಾಗಿದೆ. ಹೌದು, ಮಾಜಿ ಸಿಎಂ ಕುಮಾರಸ್ವಾಮಿ (Kumarswamy) ಅವರ ಮಗ, ರಾಜಕೀಯ ಹಾಗೂ ಚಿತ್ರರಂಗ ಎರಡಲ್ಲೂ ಬ್ಯುಸಿ ಇರುವ ನಿಖಿಲ್ ಕುಮಾರಸ್ವಾಮಿ (Nikhil Kumarswamy) ಮುದ್ದು ಮಗನ ನಾಮಕರಣ ಶಾಸ್ತ್ರವಾಗಿದ್ದು, ಆವ್ಯನ್ ದೇವ್ ಎಂದ ಹೆಸರಿಡಲಾಗಿದೆ.  

ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಶಾಸ್ತ್ರ ಮಾಡಲಾಗಿದ್ದು, ಬೆಳಗ್ಗೆ 10:30 ರಿಂದ 12:20 ರವರೆಗೂ ನಡೆಯುವ ಶುಭ ಲಗ್ನದಲ್ಲಿ  ನಾಮಕರಣ ಶಾಸ್ತ್ರ ನಡೆಯುತ್ತಿದೆ. ಇನ್ನು ಈ ಕಾರ್ಯಕ್ರಮದ ಜೊತೆ ಪ್ರಪೌತ್ರ ಜನನ ಶಾಂತಿ  ,ನಾಮಕರಣ,ಕನಕಾಭಿಷೇಕ ಕಾರ್ಯಕ್ರಮಗಳನ್ನು ಗೌಡರ ಕುಟುಂಬ ಹಮ್ಮಿಕೊಂಡಿದ್ದು, ಬಹಳ ಸರಳವಾಗಿ ಸಮಾರಂಭವನ್ನು ಮಾಡಲಾಗುತ್ತಿದೆ.

ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಕಾರ್ಯಕ್ರಮ

ಇನ್ನು ನಿಖಿಲ್ ಕುಮಾರಸ್ವಾಮಿ ಅವರ ಮಗನಿಗೆ ಸದ್ಯ 9 ತಿಂಗಳು ತುಂಬಿದ್ದು, ಈಗ ಆವ್ಯನ್ ದೇವ್ ಎಂದು ನಾಮಕರಣ ಮಾಡಲಾಗಿದೆ. ಅಲ್ಲದೇ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಜನರನ್ನು ಸಹ ಆಹ್ವಾನಿಸಲಾಗಿಲ್ಲ, ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ನಾಮಕರಣ ಮಾಡಲಾಗುತ್ತಿದೆ.

2020ರ ಏಪ್ರಿಲ್​ನಲ್ಲಿ ಬಿಡದಿಯ ತೋಟದ ಮನೆಯಲ್ಲಿ ಅದ್ಧೂರಿಯಾಗಿ ನಿಖಿಲ್​-ರೇವತಿ ಮದುವೆಯಾಗಿತ್ತು , 2021ರ ಸೆಪ್ಟೆಂಬರ್​ನಲ್ಲಿ ರೇವತಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮಗುವಿನ ನಾಮಕರಣ ಮಾಡಲಾಗಿದೆ. ಮಗುವಿಗೆ ಒಂಬತ್ತು ತಿಂಗಳು ತುಂಬಿದ್ದು, ಕುಟುಂಬಸ್ಥರು ಸೇರಿ ಈ ಕಾರ್ಯಕ್ರಮ ಮಾಡಿದ್ದಾರೆ. ಈ ನಾಮಕರಣ ಸಮಾರಂಭದಲ್ಲಿ ಗೌಡರ ಕುಟುಂಬ ಹಾಗೂ ಕೆಲ ಆಪ್ತರು ಮಾತ್ರ ಭಾಗವಹಿಸಿದ್ದಾರೆ.

ಇನ್ನು ಮಗು ಹುಟ್ಟಿದ ಸಂದರ್ಭದಲ್ಲಿ ನಿಖಿಲ್ ಹಾಗೂ ಮಗುವಿನ ಫೋಟೋ ಸಾಮಾಜಿಕಾ ಜಾಲಾತಾಣದಲ್ಲಿ ಫುಲ್ ವೈರಲ್ ಆಗಿತ್ತು. ಅಭಿಮಾನಿಗಳು ನಿಖಿಲ್ ಅವರಿಗೆ ಶುಭಾಶಯಗಳ ಸುರಿಮಳೆ ಸುರಿಸಿದ್ದರು.

ಇದನ್ನೂ ಓದಿ: ರಜನಿಕಾಂತ್​ ಜೊತೆ ಸಿನಿಮಾ ಮಾಡಲು ಐಶ್ವರ್ಯಾ ರೈ ರೆಡಿ, ಮತ್ತೆ ದಕ್ಷಿಣದತ್ತ ಮುಖ ಮಾಡಿದ ಮಾಜಿ ವಿಶ್ವ ಸುಂದರಿ

ಫುಲ್ ಬ್ಯುಸಿ ಇದ್ದಾರೆ ನಿಖಿಲ್ 

ನಿಖಿಲ್ ಮತ್ತು ರೇವತಿ ಫೋಟೋ ಸಾಮಾಜಿಕ ಜಾಲಾತಾಣದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತದೆ. ಮದುವೆಗೆ ಮೊದಲು ಸಹ ಅವರಿಬ್ಬರು ಜೊತೆ ಇರುವ ಫೋಟೋಗಳು ಸುದ್ದಿ ಮಾಡಿದ್ದವು. ಅಲ್ಲದೇ ರೇವತಿ ಅವರ ಸೀಮಂತಾ ಕಾರ್ಯಕ್ರಮ ಬಹಳ ಸದ್ದು ಮಾಡಿತ್ತು. ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದ್ದ ಸೀಮಂತಾ ಕಾರ್ಯಕ್ರಮಕ್ಕೆ ಗಣ್ಯಾತಿ ಗಣ್ಯರು ಭಾಗವಹಿಸಿದ್ದರು. ಹಾಗೆಯೇ ಆ ಸಮಯದಲ್ಲಿ ಸಹ ನಿಖಿಲ್ ಹಾಗೂ ರೇವತಿ ಅವರ ಫೋಟೋಗಳು ಬಹಳ ವೈರಲ್ ಆಗಿತ್ತು.


Published by:Sandhya M
First published: