Nikhil-Revathi Wedding Video: ನಿಖಿಲ್​-ರೇವತಿ ವಿವಾಹದ ವಿಡಿಯೋ: ನವ ಜೋಡಿಗೆ ಶುಭ ಕೋರಿದ ಜಗ್ಗೇಶ್​..!

Nikhil-Revathi Wedding: ನಿಖಿಲ್​-ರೇವತಿಯ ವಿವಾಹದ ಅಪ್ಡೇಟ್​ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಈ ವಿವಾಹಕ್ಕೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೂ ಎಂಟ್ರಿ ಇರಲಿಲ್ಲ. ಇದರಿಂದಾಗಿ ನಿಖಿಲ್​ ವಿವಾಹದ ಫೋಟೋಗಳನ್ನು ಜೆಡಿಎಸ್​ ಹಾಗೂ ನಿಖಿಲ್​ ಅವರ ಫೇಸ್​ಬುಕ್​ ಪುಟಗಳಲ್ಲಿ ಆಗೊಂದು ಈಗೊಂದು ಪೋಸ್ಟ್​ ಮಾಡಲಾಗುತ್ತಿತ್ತು. 

ನವ ಜೀವನಕ್ಕೆ ಕಾಲಿಟ್ಟ ನಿಖಿಲ್​- ರೇವತಿ

ನವ ಜೀವನಕ್ಕೆ ಕಾಲಿಟ್ಟ ನಿಖಿಲ್​- ರೇವತಿ

  • Share this:
ಕೊರೋನಾ ಭೀತಿಯಿಂದಾಗಿ ಹೆಚ್ಚಾಗಿ ಜನರು ಗುಂಪು ಸೇರುವಂತಿಲ್ಲ. ಇದರಿಂದಾಗಿ ನಟ ನಿಖಿಲ್​ ಕುಮಾರಸ್ವಾಮಿ ಹಾಗೂ ರೇವತಿ ವಿವಾಹ ಇಂದು ಸರಳವಾಗಿ ಅವರ ತೋಟದ ಮನೆಯಲ್ಲಿ ನೆರವೇರಿತು. ಬಿಡದಿ ಬಳಿ ಇರುವ ಕೇತಗನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ನವ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

ನಿಖಿಲ್​-ರೇವತಿಯ ವಿವಾಹದ ಅಪ್ಡೇಟ್​ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಈ ವಿವಾಹಕ್ಕೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೂ ಎಂಟ್ರಿ ಇರಲಿಲ್ಲ. ಇದರಿಂದಾಗಿ ನಿಖಿಲ್​ ವಿವಾಹದ ಫೋಟೋಗಳನ್ನು ಜೆಡಿಎಸ್​ ಹಾಗೂ ನಿಖಿಲ್​ ಅವರ ಫೇಸ್​ಬುಕ್​ ಪುಟಗಳಲ್ಲಿ ಆಗೊಂದು ಈಗೊಂದು ಪೋಸ್ಟ್​ ಮಾಡಲಾಗುತ್ತಿತ್ತು.



ತೋಟದ ಮನೆಯಲ್ಲಿ ನಡೆದ ವಿವಾಹದಲ್ಲಿ ಕೆಲವೇ ಕೆಲವು ಮಂದಿ ಸಂಬಂಧಿಕರಿಗೆ ಭಾಗವಹಿಸಲು ಅನುಮತಿ ನೀಡಲಾಗಿತ್ತು. ರೇವತಿ ಅಪ್ಪ-ಅಮ್ಮ ಸೇರಿದಂತೆ ನೂರು 20 ಮಂದಿ ಅವರ ಕಡೆಯಿಂದ ಹಾಗೂ ನಿಖಿಲ್​ ಮನೆ ಕಡೆಯಿಂದ 50 ಮಂದಿಗೆ ಅವಕಾಶ ನೀಡಲಾಗಿತ್ತು.

Nikhil Kumaraswamy and Revathi got married in a simple function
ನಿಖಿಲ್​-ರೇವತಿ ವಿವಾಹ ನಂತರ ಧಾರೆ ಎರೆದ ದೇವೇಗೌಡ ದಂಪತಿ


Nikhil Kumaraswamy and Revathi Marriage photos
ನಿಖಿಲ್​ ರೇವತಿ ವಿವಾಹದ ಮಂಟಪ


ನಿಖಿಲ್​ ಹಾಗೂ ರೇವತಿ ಅಪ್ಪ-ಅಮ್ಮ ಹಾಗೂ ಸಂಬಂಧಿಕರೊಂದಿಗೆ ನಿನ್ನೆ ರಾತ್ರಿಯೇ ತೋಟದ ಮನೆಗೆ ಬಂದರೆ, ದೇವೇಗೌಡ ಹಾಗೂ ಚೆನ್ನಮ್ಮ ಅವರು ಇಂದು ಬೆಳಿಗ್ಗೆ ತೋಟದ ಮನೆ ಸೇರಿಕೊಂಡರು. ಅದ್ಧೂರಿಯಾಗಿ ನಡೆಯಬೇಕಿದ್ದ ಮದುವೆ ಇಂದು ತುಂಬಾ ಸರಳವಾಗಿ ನೆರವೇರಿತು. ಅಲ್ಲದೆ ನಿಖಿಲ್​ -ರೇವತಿ ವಿವಾಹಕ್ಕೆ ಬಂದಿದ್ದವರೆಲ್ಲರೂ ಮಾಸ್ಕ್​ ತೊಟ್ಟಿದ್ದು ವಿಶೇಷ.

ಇದನ್ನೂ ಓದಿ: Nikhil-Revathi Wedding: ನಿಖಿಲ್​ - ರೇವತಿ ವಿವಾಹ: ಸರಳವಾದರೂ ಶಾಸ್ತ್ರೋಕ್ತವಾಗಿ ನಡೆಯಿತು ಯುವರಾಜನ ಮದುವೆ..!

ನಿಖಿಲ್​ ಹಾಗೂ ರೇವತಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭ ಕೋರುತ್ತಿದ್ದಾರೆ. ನವರಸನಾಯಕ ಜಗ್ಗೇಶ್​  ಹಾಗೂ ಕಾರ್ತಿಕ್​ ಗೌಡ ಸಹ ಶುಭಕೋರಿದ್ದಾರೆ. ಅಜ್ಜಿ ತಾತನ ಆರ್ಶೀವಾದ ಪಡೆದು ಮದುವೆ ಆಗುವುದಕ್ಕೆ ವಿಶೇಷ ಯೋಗ ಬೇಕು. ಅದು ಪಡೆದ ನಿಖಿಲ್​ ಅದೃಷ್ಟವಂತ ಎಂದು ಟ್ವೀಟ್​ ಮಾಡಿದ್ದಾರೆ ಜಗ್ಗೇಶ್​.



 



Nikhil-Revathi Wedding Photos: ನಿಖಿಲ್ ಕುಮಾರಸ್ವಾಮಿ​-ರೇವತಿ ಮದುವೆ ಕಾರ್ಯಕ್ರಮದ ಚಿತ್ರಗಳು..!

First published: