Anitha EAnitha E
|
news18-kannada Updated:February 23, 2021, 10:18 AM IST
ಜಾಲಿ ಬೈಕ್ ರೈಡ್ನಲ್ಲಿ ನಿಖಿಲ್-ರೇವತಿ
ನಿಖಿಲ್ ಕುಮಾರಸ್ವಾಮಿ ಹಾಗೂ ಅವರ ಮಡದಿ ರೇವತಿ ವಿವಾಹಕ್ಕೂ ಮೊದಲು ತಮ್ಮ ಸೆಲ್ಫಿ ಫೋಟೋಗಳಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಲ್ಲಿರುತ್ತಿದ್ದರು. ನಿಖಿಲ್-ರೇವತಿ ಮದುವೆ ಫಿಕ್ಸ್ ಆಗುತ್ತಿದ್ದಂತೆಯೇ ಇವರು ಜೊತೆಗೆ ತೆಗೆಸಿಕೊಂಡ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು. ಆದರೆ ಈಗ ನಿಖಿಲ್ ರೇವತಿ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುವುದನ್ನು ತೀರಾ ಕಡಿಮೆ ಮಾಡಿದ್ದಾರೆ. ಆದರೂ ಈಗಲೂ ಸಹ ಈ ಸೆಲೆಬ್ರಿಟಿ ಕಪಲ್ ಕುರಿತಾದ ಯಾವುದೇ ಫೋಟೋ ಅಥವಾ ವಿಡಿಯೋಗಳು ಸಿಕ್ಕರೆ ಸಾಕು ಅದು ವೈರಲ್ ಆಗುತ್ತವೆ. ಇನ್ನು ಲಾಕ್ಡೌನ್ ಅನ್ಲಾಕ್ ಆದ ನಂತರ ರೈಡರ್ ಸಿನಿಮಾದಲ್ಲಿ ವ್ಯಸ್ತವಾಗಿದ್ದಾರೆ ನಿಖಿಲ್. ರಾಜಕೀಯ ಹಾಗೂ ಸಿನಿಮಾಗಳೆರಡಲ್ಲೂ ಸಕ್ರಿಯವಾಗಿದ್ದಾರೆ.
ಬಹಳ ಸಮುಯದ ನಂತರ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸದ್ದು ಮಾಡುತ್ತಿದ್ದಾರೆ. ಈ ಜೋಡಿಯ ವಿಡಿಯೋ ಒಂದು ಮತ್ತೆ ವೈರಲ್ ಆಗುತ್ತಿದೆ.
ನಿಖಿಲ್ ಹಾಗೂ ರೇವತಿ ಆರ್ ಎಕ್ಸ್ 100 ಬೈಕ್ ಏರಿ ಜಾಲಿ ರೈಡ್ ಎಂಜಾಯ್ ಮಾಡಿದ್ದಾರೆ. ಅದು ಬಿಡದಿಯಲ್ಲಿರುವ ತೋಟದ ಮನೆಯ ಬಳಿ ನಿಖಿಲ್-ರೇವತಿ ಬೈಕ್ ರೈಡ್ ಎಂಜಾಯ್ ಮಾಡಿದ್ದಾರೆ. ಅದರ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಐಷಾರಾಮಿ ಕಾರುಗಳು ಹಾಗೂ ಬೈಕ್ಗಳ ಕಲೆಕ್ಷನ್ ಹೊಂದಿರುವ ನಿಖಿಲ್ಗೆ ಫೆವರಿಟ್ ಬೈಕ್ ಎಂದರೆ ಇದೇ ಆರ್ ಎಕ್ಸ್ 100 ಅಂತೆ. ಹೀಗೆಂದು ಖುದ್ದು ಅವರೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಜಾಲಿ ಬೈಕ್ ರೈಡ್ನಲ್ಲಿ ನಿಖಿಲ್-ರೇವತಿ
ಲಾಕ್ಡೌನ್ ಸಮಯದಲ್ಲಿ ಅಂದರೆ ಕಳೆದ ವರ್ಷ ಈ ಜೋಡಿಯ ಮದುವೆಯಾಗಿತ್ತು. ಇದೇ ಬಿಡದಿಯ ತೋಡದ ಮನೆಯಲ್ಲಿ ಅದ್ಧೂರಿಯಾಗಿ ಮದುವೆಯಾಗಿತ್ತು. ಕುಟುಂಬದವರು ಹಾಗೂ ಕೆಲವೇ ಕೆಲವು ಆತ್ಮೀಯರು ಮಾತ್ರ ಭಾಗಿಯಾಗಿದ್ದರು.
ಇದನ್ನೂ ಓದಿ: ನಟಿ ಸಾರಾ ಅಲಿ ಖಾನ್ಗೆ ಕೋರೋನಾ ಲಾಕ್ಡೌನ್ ಕಲಿಸಿದ ಆ ಒಂದು ಪಾಠ..!
ಇನ್ನು ಲಹರಿ ಮ್ಯೂಸಿಕ್ ಸಂಸ್ಥೆ ನಿರ್ಮಾಣದ ರೈಡರ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ನಿಖಿಲ್ ಕುಮಾರಸ್ವಾಮಿ. ಅರ್ಜುನ್ಯ ಜನ್ಯ ಸಂಗೀತ ನೀಡಿರುವ ಈ ಸಿನಿಮಾದ ಚಿತ್ರೀಕರಣ ಶೇ 50ರಷ್ಟು ಮುಗಿದಿದೆ. ಬೆಂಗಳೂರಿನ ಯುಬಿ ಸಿಟಿಯಲ್ಲಿ ಈ ಸಿನಿಮಾದ ಶೂಟಿಂಗ್ ಇತ್ತೀಚೆಗಷ್ಟೆ ಶುರುವಾಗಿದೆ.
ರೈಡರ್ ಸಿನಿಮಾ ನಿಜ ಜೀವನ ಆಧರಿಸಿ ನಿರ್ಮಾಣವಾಗುತ್ತಿರುವ ಸಿನಿಮಾ ಎನ್ನಲಾಗುತ್ತಿದೆ. ನಿರ್ದೇಶಕ ವಿಜಯ್ ಕುಮಾರ್ ಕೊಂಡ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ದತ್ತಣ್ಣ, ಚಿಕ್ಕಣ್ಣ, ಗರುಡ ರಾಮ್, ಶಿವರಾಜ್ ಕೆಆರ್ ಪೇಟೆ ಹಾಗೂ ಇತರರು ನಟಿಸುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಅಭಿಮಾನಿಗಳಲ್ಲಿ ಸಿನಿಮಾದ ಬಗ್ಗೆ ಇರುವ ನಿರೀಕ್ಷೆಯನ್ನು ಹೆಚ್ಚಾಗಿಸಿದೆ. ಕೆಜಿಎಫ್ ಸಿನಿಮಾದಲ್ಲಿ ವಿಲನ್ ಆಗಿದ್ದ ರಾಮ ಚಂದ್ರರಾಜು ಎಂಟ್ರಿ ಸಹ ಸಿನಿಮಾಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ.
Published by:
Anitha E
First published:
February 23, 2021, 10:18 AM IST